ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಲ್ಲಿ ಮೂಲವ್ಯಾಧಿ (Constipation) ಅಥವಾ ಪೈಲ್ಸ್ (Piles) ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಸಾಮಾನ್ಯ ಭಾಷೆಯಲ್ಲಿ ಮೂಲವ್ಯಾಧಿಗೆ ಹೆಮೆರಾಯ್ಡ್ ಅಥವಾ ಮೊಳೆರೋಗ ಎಂದೂ ಹೆಸರಿದೆ.
ಈ ಸಮಸ್ಯೆಯಿಂದ ಬಳಲುತ್ತಿರುವವರು ಮುಜುಗರದ ಕಾರಣದಿಂದ ಚಿಕಿತ್ಸೆ ಪಡೆಯಲು ಹಿಂಜರಿಯುತ್ತಾರೆ.

ಹೀಗಾಗಿ ಅನೇಕರು ಈ ರೋಗಕ್ಕೆ ತುತ್ತಾದರು, ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳದೇ, ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇನ್ನು ಈ ಸಮಸ್ಯೆಯಿಂದ ಮುಕ್ತ ಪಡೆಯಲು ಆಹಾರ ಕ್ರಮ ಅತಿಮುಖ್ಯ.
ಸರಿಯಾದ ಆಹಾರ ಕ್ರಮದಿಂದ ಈ ಸಮಸ್ಯೆಯಿಂದ ಮುಕ್ತಿ ಪಡೆದುಕೊಳ್ಳಬಹುದು. ಮೂಲವ್ಯಾಧಿ ಅಥವಾ ಪೈಲ್ಸ್ ಸಮಸ್ಯೆಗೆ ತುತ್ತಾದವರ ಆಹಾರ ಕ್ರಮ (HomeRemedies for Piles) ಹೇಗಿರಬೇಕು? ಎಂಬುದರ ವಿವರ ಇಲ್ಲಿದೆ ನೋಡಿ.
- ಲೋಳೆಸರದ (Aloevera) ರಸವನ್ನು ಪ್ರತಿದಿನ ಸೇವಿಸಬೇಕು. ಈರುಳ್ಳಿ ರಸ ಮತ್ತು ಮಜ್ಜಿಗೆಯನ್ನು ಬೆರೆಸಿ ಊಟದ ನಂತರ ಕುಡಿಯಬೇಕು.
- ಸುವರ್ಣಗೆಡ್ಡೆಯ ಹೋಳುಗಳನ್ನು ಒಣಗಿಸಿ ಕುಟ್ಟಿ ಪುಡಿ ಮಾಡಿ, ತುಪ್ಪ, ಜೇನುತುಪ್ಪ, ಬೆಲ್ಲ ಹಾಕಿ ಸೇವಿಸಬೇಕು.
- ಸಾಕಷ್ಟು ನಾರಿನಂಶವಿರುವ ಮತ್ತು ಮೃದುವಾಗಿರುವ ಆಹಾರವನ್ನು ಸೇವಿಸಬೇಕು. ಪ್ರತಿದಿನ ಕನಿಷ್ಠ 30ಗ್ರಾಂನಷ್ಟು ನಾರಿನಂಶವನ್ನು ಸೇವಿಸಬೇಕು.
- ಗೆಣಸು, ಬೀಟ್ರೂಟ್ ಮತ್ತು ಕ್ಯಾರೆಟ್ಟುಗಳನ್ನು ಬೇಯಿಸಿ ತಿನ್ನುವುದು ಒಳ್ಳೆಯದು.

- ಬೂದು ಕುಂಬಳಕಾಯಿ, ಸಿಹಿ ಕುಂಬಳಕಾಯಿ, (HomeRemedies for Piles) ಸೋರೆಕಾಯಿ ಕೂಡ ಮೂಲವ್ಯಾಧಿ ಸಮಸ್ಯೆಗೆ ಸಹಕಾರಿಯಾಗಿದೆ. ಕಾಫಿ ಮತ್ತು ಟೀಗಳನ್ನು ಹೆಚ್ಚು ಕುಡಿಯಬಾರದು. ಇದರಲ್ಲಿರುವ ಕೇಫಿನ್ ಅಂಶ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ.
- ಪ್ರತಿದಿನ 3-4 ಲೀಟರ್ ನೀರು ಕುಡಿಯಬೇಕು. ನೀರು ಕರುಳನ್ನು ಬಿಸಿಯಾಗದಂತೆ ತಡೆಯುತ್ತದೆ. ಹೀಗಾಗಿ ಮೂಲವ್ಯಾಧಿ ಸಮಸ್ಯೆ ಇರುವವರು ಹೆಚ್ಚು ನೀರನ್ನು ಕುಡಿಯಬೇಕು.
- ಗುಲ್ಕಂದನ್ನು ಹೆಚ್ಚು ಸೇವಿಸಬೇಕು. ಇದರಿಂದ ಮಲವಿಸರ್ಜನೆ ಸಮಯದಲ್ಲಿ ರಕ್ತ ಹೊರಹೋಗುವುದು ನಿಲ್ಲುತ್ತದೆ.
- ಎಲ್ಲ ಬಗೆಯ ಸೊಪ್ಪು, ಹಣ್ಣು ಮತ್ತು ತರಕಾರಿಗಳನ್ನು ಸೇವಿಸಬೇಕು. ಮೂಲಂಗಿಯನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುವುದು ಉತ್ತಮ.
ಇದನ್ನೂ ಓದಿ : https://vijayatimes.com/our-yatra-is-for-farmers-says-rahul/
- ಆಹಾರದಲ್ಲಿ ಹೆಚ್ಚು ಉಪ್ಪನ್ನು ಹಾಕಿಕೊಳ್ಳಬಾರದು. ಹೆಚ್ಚು ಉಪ್ಪು ಸೇವನೆಯಿಂದ ರಕ್ತದಲ್ಲಿ ನೀರಿನಂಶ ಹೆಚ್ಚಾಗಿ ಇದರಿಂದ ಗುದದ್ವಾರದ ರಕ್ತನಾಳಗಳು ಉಬ್ಬಿಕೊಂಡು ಮಲವಿಸರ್ಜನೆ ವೇಳೆ ನೋವುಂಟಾಗುತ್ತದೆ.
- ಸ್ವಲ್ಪ ನೆಲ್ಲಿಕಾಯಿ ಪುಡಿಯನ್ನು ಮೊಸರಿನಲ್ಲಿ ಬೆರೆಸಿ ಸೇವನೆ ಮಾಡಬೇಕು. ಅದೇ ರೀತಿ ಸೌತೇಕಾಯಿ ರಸವನ್ನು ಮಜ್ಜಿಗೆಯೊಂದಿಗೆ ಕುಡಿಯಬೇಕು.
- ಸಮತೋಲನ ಆಹಾರ ಸೇವನೆಯು ಮೂಲವ್ಯಾಧಿಯನ್ನು ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
- ಮಹೇಶ್.ಪಿ.ಎಚ್