ಕರ್ನಾಟಕದ(Karnataka) ಕರಾವಳಿ(Coastal) ಮತ್ತು ಮಲೆನಾಡ ಭಾಗದಲ್ಲಿ ಇಲಿ ಜ್ವರ(Rat Virus) ಕಾಣಿಸಿಕೊಳ್ಳುತ್ತಿದೆ. ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ, ಇಲ್ಲಿಯವರೆಗೆ 173 ಇಲಿ ಜ್ವರ ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿದೆ. ಅದರಲ್ಲಿ 55 ಪ್ರಕರಣಗಳು ಕುಂದಾಪುರ, 88 ಪ್ರಕರಣಗಳು ಉಡುಪಿಯಲ್ಲಿ ಹಾಗೂ 34 ಪ್ರಕರಣಗಳು ಕಾರ್ಕಳ ತಾಲೂಕಿನಲ್ಲಿ ಪತ್ತೆಯಾಗಿದೆ. ಇದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ. ಹೀಗಾಗಿ ಇಲಿ ಜ್ವರದ ಆರಂಭಿಕ ಲಕ್ಷಣಗಳೇನು? ಮತ್ತು ಅದನ್ನು ತಡೆಗಟ್ಟುವುದು ಹೇಗೆ? ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಇಲಿ ಜ್ವರ ಹೇಗೆ ಬರುತ್ತದೆ? :
ಸ್ಟ್ರೆಪ್ಟೋಬಾಸಿಲಸ್ ಮೊನಿಲಿಫಾರ್ಮಿಸ್ ಹಾಗೂ ಸ್ಪಿರಿಲಮ್ ಮೈನಸ್ ಎಂಬ ಬ್ಯಾಕ್ಟಿರಿಯಾಗಳು ಇಲಿ ಜ್ವರಕ್ಕೆ ಕಾರಣವಾಗಿದೆ. ಈ ಎರಡು ಬ್ಯಾಕ್ಟಿರಿಯಾಗಳು ಇಲಿಗಳಲ್ಲಿ ಕಂಡು ಬರುತ್ತವೆ. ಇಲಿ ಕಚ್ಚಿದ ಆಹಾರ , ಹಣ್ಣುಗಳನ್ನು ಸೇವಿಸಿದಾಗ ಈ ಎರಡು ಬ್ಯಾಕ್ಟಿರಿಯಾಗಳು ಮನುಷ್ಯನ ದೇಹಕ್ಕೆ ಸೇರಿ ಇಲಿ ಜ್ವರ ಬರುತ್ತದೆ.
ಇಲಿ ಜ್ವರದ ಲಕ್ಷಣಗಳೇನು? :
• ವಾಂತಿ- ಮೈಕೈ ನೋವು
• ಸಂಧಿಗಳಲ್ಲಿ ಊತ
• ತಲೆನೋವು
• ಜ್ವರ
• ಗುಳ್ಳೆಗಳು ಏಳುವುದು
ತಡೆಗಟ್ಟುವುದುದು ಹೇಗೆ?
• ಇಲಿಗಳು ಮನೆಯೊಳಗಡೆ ಬಾರದಂತೆ ವ್ಯವಸ್ಥೆ ಮಾಡಿ
• ಮನೆ ಸುತ್ತಮುತ್ತ ಸ್ವಚ್ಚತೆಯನ್ನು ಕಾಪಾಡಿಕೊಳ್ಳಿ.
• ಆ್ಯಂಟಿ-ಬಯೋಟಿಕ್ ಇದಕ್ಕೆ ಪರಿಣಾಮಕಾರಿಯಾಗಿದೆ.
• ಜ್ವರ ಕಾಣಿಸಿಕೊಂಡ ಕೂಡಲೇ ಚಿಕಿತ್ಸೆ ಪಡೆಯಬೇಕು.
• ಜ್ವರವನ್ನು ನಿರ್ಲಕ್ಷ್ಯ ಮಾಡಿದರೆ ಸಾವು ಸಂಭವಿಸಬಹುದು.
• ಇಲಿ ಕಚ್ಚಿದರೆ ಆ ಭಾಗವನ್ನು ಸೋಪು ಹಚ್ಚಿ ತೊಳೆಯಿರಿ. ವೈದ್ಯರನ್ನು ಭೇಟಿಯಾಗಿ.
• ಇಲಿ ಅಥವಾ ಪ್ರಾಣಿ-ಪಕ್ಷಿಗಳು ಕಚ್ಚಿದ ಆಹಾರಗಳನ್ನು ಸೇವಿಸಬೇಡಿ.
• ಹಣ್ಣು, ತರಕಾರಿಗಳನ್ನು ಇಲಿ ಓಡಾಡುವ ಕಡೆ ಇಡಬೇಡಿ.