ಮೂತ್ರನಾಳದಲ್ಲಿ ಸೋಂಕು ಉಂಟಾದರೆ, ಆ ನೋವು (Homeremedies For UTI) ಅನುಭವಿಸಿದವರಿಗಷ್ಟೇ ಗೊತ್ತು.
ಜೀರ್ಣಾಂಗವ್ಯೂಹದಲ್ಲಿ ವಾಸಿಸುವ ಎಸ್ಚೆರಿಚಿಯಾ ಕೋಲಿ ಬ್ಯಾಕ್ಟೀರಿಯಾದಿಂದ ಈ ಸೋಂಕು ಉಂಟಾಗುತ್ತದೆ. ಸೋಂಕು ಭಾದಿತರಲ್ಲಿ, ಪದೇ ಪದೇ ಮೂತ್ರ ವಿಸರ್ಜಿಸುವಾಗ (Urine Pass) ಪ್ರಾಣ ಹಿಂಡುವಂತಹ ನೋವುಂಟಾಗುತ್ತದೆ.

ಮೂತ್ರನಾಳದ ಸೋಂಕನ್ನು ಹಗುರವಾಗಿ ಪರಿಗಣಿಸಿದರೆ ಮೂತ್ರಪಿಂಡ, (Homeremedies For UTI) ಮೂತ್ರಕೋಶದ ಮೇಲೆಯೇ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ.
ಈ ಸಮಸ್ಯೆಗೆ ಅತ್ಯುತ್ತಮವಾದ ಪರಿಹಾರವೆಂದರೆ ಎಂದು ದಾಳಿಂಬೆ ಜ್ಯೂಸ್ (Pomegranate Juice). ಮೂತ್ರ ಉರಿ ಕಂಡು ಬಂದರೆ ಸಾಕಷ್ಟು ನೀರು ಕುಡಿಯಬೇಕು,
ನೀರು ಜಾಸ್ತಿ ತೆಗೆದುಕೊಳ್ಳುವುದರಿಂದ ದೇಹದಲ್ಲಿರುವ ಮೂತ್ರ ಸೋಂಕಿಗೆ ಕಾರಣವಾದ ಬ್ಯಾಕ್ಟಿರಿಯಾವನ್ನು ಹೊರ ಹಾಕಿ ಕಿಡ್ನಿಯನ್ನು ಸಂರಕ್ಷಣೆ ಮಾಡುತ್ತದೆ.
ಇನ್ನು, ಉರಿಮೂತ್ರ ಸಮಸ್ಯೆ ಬಂದಾಗ ದಾಳಿಂಬೆ ಜ್ಯೂಸ್ ಕುಡಿಯಿರಿ. ಇದರಲ್ಲಿರುವ ಆ್ಯಂಟಿ-ಆಕ್ಸಿಡೆಂಟ್ ಉರಿಮೂತ್ರ ಸಮಸ್ಯೆ ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.
ದಾಳಿಂಬೆ ಜ್ಯೂಸ್ ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿ ಕಾಯಿಲೆಯನ್ನು ತಡೆಯುವ ಸಾಮರ್ಥ್ಯ ಹೊಂದಿದೆ ಎಂದು ಆರೋಗ್ಯ ಮ್ಯಾಗ್‌ಜಿನ್‌ವೊಂದರಲ್ಲಿ ಪ್ರಕಟವಾದ UCLA ವರದಿ ಹೇಳಿದೆ.
ಇದನ್ನೂ ಓದಿ : https://vijayatimes.com/health-benefits-of-cardamom/
ದಾಳಿಂಬೆಯಲ್ಲಿ ವಿಟಮಿನ್ ಸಿ (Vitamin C) ಇದ್ದು ಇದು ಮೂತ್ರ ಉರಿ ಕಡಿಮೆ ಮಾಡಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುವುದು.
ವಿಟಮಿನ್ ಸಿ ಭರಿತ ಇತರ ಆಹಾರಗಳು ಕಿತ್ತಳೆ, ದ್ರಾಕ್ಷಿ, ಕಿವಿ ಹಣ್ಣು ಕೂಡ ಪರಿಹಾರ ನೀಡುತ್ತವೆ. ದಾಳಿಂಬೆಯನ್ನು ಜ್ಯೂಸ್ ಮಾಡಿ ಕುಡಿಯಬಹುದು. ಹಾಗೆ ತಿನ್ನುವುದಾದರೆ ಒಂದು ಬೌಲ್‌ನಷ್ಟು ದಾಳಿಂಬೆ ತಿನ್ನಿ.
ಕ್ರ್ಯಾನ್ ಬೆರ್ರಿ ಜ್ಯೂಸ್ : ಸಿಹಿಗೊಳಿಸದ ಕ್ರ್ಯಾನ್ಬೆರಿ ರಸವನ್ನು (Cranberry Juice) ಕುಡಿಯುವುದು ಮೂತ್ರನಾಳದ ಸೋಂಕುಗಳಿಗೆ ಅತ್ಯಂತ ಪ್ರಸಿದ್ಧವಾದ ನೈಸರ್ಗಿಕ ಪರಿಹಾರಗಳಲ್ಲಿ ಒಂದಾಗಿದೆ.
ಸಿಹಿಯಿಲ್ಲದ ಕ್ರ್ಯಾನ್ಬೆರಿ ರಸವನ್ನು ಕುಡಿಯುವುದು ಇಷ್ಟವಿಲ್ಲದಿದ್ದರೆ, ಇದನ್ನು ಕ್ಯಾಪ್ಸುಲ್ ರೂಪದಲ್ಲಿ ತೆಗೆದುಕೊಳ್ಳಬಹುದು.
ಕ್ರ್ಯಾನ್‌ಬೆರಿಗಳು ಮೂತ್ರ ಮಾಡುವ ಜಾಗದಲ್ಲಿ ಅಂಟಿಕೊಳ್ಳುವ ಬ್ಯಾಕ್ಟೀರಿಯಾವನ್ನು ತಡೆಗಟ್ಟುವ ಮೂಲಕ ಕಾರ್ಯ ನಿರ್ವಹಿಸುತ್ತವೆ, ಹೀಗಾಗಿ ಸೋಂಕನ್ನು ತಡೆಯುತ್ತದೆ.

ಆಹಾರ ಸೇವಿಸಿದ ಬಳಿಕ ಸೋರೆಕಾಯಿ ರಸ: ಆಹಾರ ಸೇವಿಸಿದ ಬಳಿಕ ಸೋರೆಕಾಯಿ ರಸಕ್ಕೆ ನಿಂಬೆಹಣ್ಣಿನ ರಸ ಸೇರಿಸಿ ಕುಡಿಯುವುದರಿಂದ ಸಹ ಉರಿ ಮೂತ್ರ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಿಕೊಳ್ಳಬಹುದು.
ತಿಳಿ ಮಜ್ಜಿಗೆಗೆ ನಿಂಬೆ ರಸ ಹಾಗೂ ಕಲ್ಲು ಸಕ್ಕರೆ ಮಿಕ್ಸ್ ಮಾಡಿ ಪ್ರತಿನಿತ್ಯ ಕುಡಿಯುವುದರಿಂದಲೂ ಉರಿಮೂತ್ರ ಸಮಸ್ಯೆಯನ್ನು ಹೋಗಲಾಡಿಸಬಹುದು.
ಇನ್ನು, ಯುಟಿಐ (UTI Treatment) ಚಿಕಿತ್ಸೆಯ ಕುರಿತು ಪರಿಹಾರಗಳ ಬಗ್ಗೆ ಮಾತನಾಡುವಾಗ ನೆನಪಿಗೆ ಬರುವ ಒಂದು ಅಂಶವೆಂದರೆ ಕೊತ್ತಂಬರಿ ಬೀಜ.
ಹೌದು, ಆಯುರ್ವೇದದ ಪ್ರಕಾರ, ಕೊತ್ತಂಬರಿ ದೇಹವನ್ನು ತಂಪಾಗಿರಿಸುತ್ತದೆ. ಕೊತ್ತಂಬರಿ ಬೀಜವನ್ನು ಅರ್ಧ ಗಂಟೆಯವರೆಗೆ ನೀರಿನಲ್ಲಿ ಕುದಿಸಿ. ನೀರು ಕಡಿಮೆಯಾದಂತೆ ರುಚಿಗೆ ಅನುಗುಣವಾಗಿ ಮೇಕೆ ಹಾಲು ಮತ್ತು ಸಕ್ಕರೆ ಸೇರಿಸಿ.
ಇದನ್ನೂ ಓದಿ : https://vijayatimes.com/a-question-of-every-women/
ದಿನಕ್ಕೆ ಎರಡು ಬಾರಿ 3 ದಿನಗಳವರೆಗೆ ಕುಡಿಯಿರಿ. ಯುಟಿಐಗೆ ಚಿಕಿತ್ಸೆಗೆ ಈ ಪರಿಹಾರಗಳು ಬಹಳ ಪರಿಣಾಮಕಾರಿಯಾಗಿದ್ದರೂ, ನೀವು ಈ ತೊಂದರೆಯನ್ನು ಸಂಪೂರ್ಣವಾಗಿ ತಡೆಯುವ ಕೆಲವು ವಿಧಾನಗಳು ಇಲ್ಲಿವೆ ನೋಡಿ,
- – ಹೆಚ್ಚು ನೀರನ್ನು ಕುಡಿಯಿರಿ.
- – ಸುರಕ್ಷಿತ ಲೈಂಗಿಕತೆ ಅಭ್ಯಾಸ ಮಾಡಿಕೊಳ್ಳಿ.
- – ಸಂಭೋಗದ ನಂತರ ಮೂತ್ರ ವಿಸರ್ಜಿಸಲು ಎಂದಿಗೂ ಮರೆಯಬೇಡಿ.
- – ಮಲ ವಿಸರ್ಜನೆಯ ನಂತರ ಹಿಂದಿನಿಂದ ಮುಂಭಾಗಕ್ಕೆ ಒರೆಸುವುದು, ಸ್ವಚ್ಛ ಮಾಡುವುದು ಮರೆಯಬೇಡಿ.
- – ಗುಪ್ತಾಂಗಗಳನ್ನು ಸ್ವಚ್ಛ ಗೊಳಿಸಲು ಒರಟು ಉತ್ಪನ್ನಗಳನ್ನು ಬಳಸಬೇಡಿ. ಮೃದುವಾದ ಹತ್ತಿ ಬಟ್ಟೆ ಬಳಸಿ.
- ಪವಿತ್ರ