- ಕೋಲಾಹಲ ಸೃಷ್ಟಿಸಿದ ಹನಿಟ್ರ್ಯಾಪ್ ಕಹಾನಿ (Honeytrap stir in state politics)
- ಗಮನ ಸೆಳೆಯುತ್ತಿರುವ 48 ಸಚಿವರ ಹನಿಟ್ರ್ಯಾಪ್ ಪ್ರಕರಣ
- ಉನ್ನತ ಮಟ್ಟದ ತನಿಖೆಗೆ ಆದೇಶ
Bengaluru: ಕರ್ನಾಟಕದಲ್ಲಿ ಹನಿಟ್ರ್ಯಾಪ್ (Honeytrap) ವಿಚಾರವು ಭಾರೀ ಅಲ್ಲೋಲ ಕಲ್ಲೋಲವನ್ನೇ ಎಬ್ಬಿಸಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 48 ಜನರ ಸಿಡಿಗಳು ಇವೆ ಎನ್ನುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಕರ್ನಾಟಕ ಸರ್ಕಾರವು (Government of Karnataka) ಈ ವಿಚಾರವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವುದಾಗಿ ಹೇಳಿದೆ.
ಈ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡುವುದಕ್ಕೆ ನಿರ್ಧರಿಸಲಾಗಿದ್ದು. ಹನಿಟ್ರ್ಯಾಪ್ ನಿರ್ದೇಶಕರಿಗೆ (Honeytrap for directors) ಗಢಗಢ ಶುರುವಾಗಿದೆ ಅಂತಲೇ ಹೇಳಲಾಗುತ್ತಿದೆ.ರಾಜ್ಯದ ರಾಜಕಾರಣಿಗಳನ್ನು (Politicians) ಹಾಗೂ ಸಚಿವರನ್ನು ಹನಿಟ್ರ್ಯಾಪ್ ಮಾಡಲಾಗಿದೆ. ರಾಜಕಾರಣಿಗಳ ವಿಡಿಯೋ ಇದೆ ಎನ್ನುವ ವಿಷಯವು ವಿಧಾನಸಭೆಯಲ್ಲಿ ಇಂದು ಭಾರೀ ಚರ್ಚೆಗೆ ಕಾರಣವಾಯಿತು.
ಈ ವಿಷಯದ ಬಗ್ಗೆ ಪಕ್ಷಾತೀತವಾಗಿ ಶಾಸಕರು (Legislators) ಒಂದಾದರು.ಪಕ್ಷಾತೀತವಾಗಿ ಎಲ್ಲರೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು. ಹೀಗಾಗಿ, ಈ ವಿಚಾರವಾಗಿ ರಾಜ್ಯ ಸರ್ಕಾರವು (State Govt) ಉನ್ನತ ಮಟ್ಟದ ಸಭೆಯನ್ನು ನಡೆಸುವುದಾಗಿ ಹೇಳಿದೆ.

ಈ ವಿಚಾರವಾಗಿ ಮಾತನಾಡಿರುವ ಗೃಹ ಸಚಿವ ಜಿ. ಪರಮೇಶ್ವರ್ (Home Minister G. Parameshwar) ಅವರು, ಈ ವಿಷಯವನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದ್ದು. ಈ ವಿಚಾರವಾಗಿ ಉನ್ನತ ಮಟ್ಟದ ತನಿಖೆಯನ್ನು ನಡೆಸುವುದಾಗಿ ಹೇಳಿದ್ದಾರೆ.ಹನಿಟ್ರ್ಯಾಪ್ ವಿಚಾರವನ್ನು ಮೊದಲು ವಿಧಾನಸಭೆಯಲ್ಲಿ ಸಚಿವ ರಾಜಣ್ಣ (Minister Rajanna) ಅವರು ಪ್ರಸ್ತಾಪಿಸಿದರು.
ಕರ್ನಾಟಕವು ಹನಿಟ್ರ್ಯಾಪ್ ಕಾರ್ಖಾನೆಯಾಗಿದೆ. ಕರ್ನಾಟಕದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 48 ಜನರ ಪೆನ್ಡ್ರೈವ್ಗಳು (Pendrives) ಇವೆ ಎಂದು ಹೇಳಿದರು. ಇದು ಭಾರೀ ಚರ್ಚೆಗೆ ಕಾರಣವಾಯಿತು. ಸಹಕಾರ ಸಚಿವರಿಗೆ ಹನಿಟ್ರ್ಯಾಪ್ ಎಂದು ಕಾಲೆಳೆದಿದ್ದಾರೆ. ಇದಕ್ಕೆ ರಾಜಣ್ಣ ಅವರು ಸ್ಪಷ್ಟನೆ ನೀಡಿದ್ದಾರೆ. ಕರ್ನಾಟಕ ಸಿಡಿ ಫ್ಯಾಕ್ಟರಿ (CD Factory) ಆಗಿದೆ. ಇದರ ಹಿಂದಿರುವ ನಿರ್ದೇಶಕರು ಯಾರು ಅಂತ ಪತ್ತೆ ಮಾಡಬೇಕು ಎಂದು ಸದನದಲ್ಲಿ ಚರ್ಚೆಯಾಗಿದೆ.
ಇದನ್ನೂ ಓದಿ: 2028ರ ಸಾರ್ವತ್ರಿಕ ಚುನಾವಣೆ: ಯುವ ನಾಯಕರಿಗೆ ವಿಶೇಷ ಟಾಸ್ಕ್ ನೀಡಿದ ಡಿಕೆಶಿ
ವಿಧಾನಸಭೆಯಲ್ಲಿ ಹನಿಟ್ರ್ಯಾಪ್ ವಿಚಾರ ಪ್ರಸ್ತಾಪವಾದ ಮೇಲೆ ಇದು ಭಾರೀ ಚರ್ಚೆಗೆ ಕಾರಣವಾಗಿದೆ. (Honeytrap stir in state politics) ಈ ವಿಷಯವಾಗಿ ಸಚಿವರಾದ ಕೆ.ಎನ್ ರಾಜಣ್ಣ ಹಾಗೂ ಗೃಹ ಸಚಿವ ಜಿ ಪರಮೇಶ್ವರ್ ಅವರು ಗಂಭೀರವಾದ ಚರ್ಚೆ ನಡೆಸಿದ್ದಾರೆ. ಸದನದಲ್ಲಿ ಈ ವಿಚಾರವಾಗಿ ಮಾತನಾಡಿದ್ದ ರಾಜಣ್ಣ ಅವರು ನನ್ನ ಮೇಲೆ ಹನಿಟ್ರ್ಯಾಪ್ಗೆ ಪ್ರಯತ್ನ ನಡೆದಿದೆ ಎಂದು ಗಂಭೀರ ವಿಷಯವನ್ನು ಪ್ರಸ್ತಾಪಿಸಿದ್ದರು.
ಇನ್ನು ಈ ವಿಚಾರವಾಗಿ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (B.Y. Vijayendra) ಅವರು, ಸದಸ್ಯರು ಹಾಗೂ ಸಚಿವ ರಾಜಣ್ಣ ಅವರು ಗಂಭೀರವಾದ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಈ ಸಂಬಂಧ ಸಿಬಿಐ ತನಿಖೆ (CBI investigation) ನಡೆಸಬೇಕು ಎಂದು ಆಗ್ರಹಿಸಿದ್ದಾರೆ