• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಹೊಸನಗರ-ಬೆಂಗಳೂರು ಸ್ಲೀಪರ್‌ ಬಸ್‌ಗೆ ಬೆಂಕಿ; ಚಾಲಕನ ಸಮಯಪ್ರಜ್ಞೆಯಿಂದ ಪಾರಾದ ಪ್ರಯಾಣಿಕರು

Teju Srinivas by Teju Srinivas
in ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ಹೊಸನಗರ-ಬೆಂಗಳೂರು ಸ್ಲೀಪರ್‌ ಬಸ್‌ಗೆ ಬೆಂಕಿ; ಚಾಲಕನ ಸಮಯಪ್ರಜ್ಞೆಯಿಂದ ಪಾರಾದ ಪ್ರಯಾಣಿಕರು
0
SHARES
12
VIEWS
Share on FacebookShare on Twitter
  • ಶಿವಮೊಗ್ಗ–ಬೆಂಗಳೂರು ಮಾರ್ಗದ (Hosanagara-Bengaluru sleeper bus fire) ಬಸ್‌ನಲ್ಲಿ ಬೆಂಕಿ
  • 36 ಪ್ರಯಾಣಿಕರಿಗೆ ಗಾಯ, ಚಾಲಕನ ಸಮಯಪ್ರಜ್ಞೆಯಿಂದ ಪ್ರಾಣಾಪಾಯದಿಂದ ಪಾರು
  • 12 ಮಂದಿಗೆ ಗಂಭೀರ ಗಾಯ – ಮೆಗ್ಗಾನ್ ಆಸ್ಪತ್ರೆಗೆ ದಾಖಲು

Shivamogga: ಇತ್ತೀಚೆಗೆ ಚಿತ್ರದುರ್ಗದಲ್ಲಿ ಖಾಸಗಿ ಬಸ್‌ಗೆ ಬೆಂಕಿ (Hosanagara-Bengaluru sleeper bus fire) ತಗುಲಿ ಹಲವು ಪ್ರಯಾಣಿಕರು ಪ್ರಾಣ ಕಳೆದುಕೊಂಡ ಘಟನೆ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು.

ಆ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ಭಾರಿ ಬಸ್ ದುರಂತ ತಪ್ಪಿದ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯಲ್ಲಿ ನಡೆದಿದೆ.

ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಬಸ್‌ನಲ್ಲಿದ್ದ 36 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.

Hosanagara-Bengaluru sleeper bus fire

ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸದೆ ಎಲ್ಲರೂ ಬಚಾವ್ ಆಗಿದ್ದಾರೆ.ಈ ಘಟನೆ ಹೊಸನಗರ ತಾಲೂಕಿನ ಅರಸಾಳು ಗ್ರಾಮದ ಸಮೀಪದ 9ನೇ ಮೈಲಿಗಲ್ಲು ಬಳಿ ನಡೆದಿದೆ.

ಬಸ್‌ನಲ್ಲಿ ಒಟ್ಟು ಸುಮಾರು 36 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು (Hosanagara-Bengaluru sleeper bus fire) ಎಂದು ತಿಳಿದುಬಂದಿದೆ.

ಬೆಳಗಿನ ವೇಳೆ ಪ್ರಯಾಣ ಆರಂಭಿಸಿದ್ದ ಬಸ್‌ನಲ್ಲಿ ಇದ್ದವರು ಹೆಚ್ಚಿನವರು ನಿದ್ರಾವಸ್ಥೆಗೆ ಹೋಗಿರದ ಕಾರಣ, ಹೊಗೆ ಕಾಣಿಸಿಕೊಂಡ ತಕ್ಷಣವೇ ಎಚ್ಚೆತ್ತುಕೊಂಡಿದ್ದಾರೆ.

ಕೆಲವೇ ಕ್ಷಣಗಳಲ್ಲಿ ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಪರಿಸ್ಥಿತಿ ಗಂಭೀರವಾಗಿತ್ತು. ತಕ್ಷಣ ಚಾಲಕ ಎಚ್ಚರಿಕೆ ವಹಿಸಿ ಬಸ್ ಅನ್ನು ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆಸಿ ನಿಲ್ಲಿಸಿದ್ದಾನೆ. ಇದರಿಂದ ದೊಡ್ಡ ಅನಾಹುತ ತಪ್ಪಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ಘಟನೆಯ ವೇಳೆ ಬೆಂಕಿ ಹಾಗೂ ಹೊಗೆಯಿಂದ ಗಾಬರಿಗೊಂಡ ಪ್ರಯಾಣಿಕರು ಬಸ್‌ನಿಂದ ಹೊರಗೆ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ.

ಬೆಂಕಿಯ ತೀವ್ರತೆಯಿಂದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, 12 ಮಂದಿಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ (Meggan Hospital) ದಾಖಲಿಸಲಾಗಿದೆ. ಉಳಿದ ಪ್ರಯಾಣಿಕರನ್ನು ರಿಪ್ಪನ್‌ಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಯಾವುದೇ ಪ್ರಯಾಣಿಕರ ಸ್ಥಿತಿ ಗಂಭೀರವಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಬಸ್‌ನಲ್ಲಿ ಬೆಂಕಿ ಹೊತ್ತಿಕೊಂಡ ಕ್ಷಣಗಳಲ್ಲಿ ಚಾಲಕ ತೋರಿದ ಸಮಯಪ್ರಜ್ಞೆ ಹಲವು ಜೀವಗಳನ್ನು ಉಳಿಸಿದೆ ಎಂಬುದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.

ಘಟನೆ ನಡೆದ ತಕ್ಷಣ ರಿಪ್ಪನ್‌ಪೇಟೆ ಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.

ಬಸ್‌ಗೆ ಹೇಗೆ ಬೆಂಕಿ ತಗುಲಿತು ಎಂಬುದರ ಕುರಿತು ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ತಾಂತ್ರಿಕ ದೋಷವೇ ಅಥವಾ ಇತರ ಕಾರಣವೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ರಿಪ್ಪನ್‌ಪೇಟೆ ಠಾಣೆಯ ಪಿಎಸ್ಐ ಮಾಹಿತಿ ನೀಡಿದ್ದಾರೆ.

ಬಸ್ ಪ್ರಯಾಣ ಆರಂಭಿಸಿ ಕೇವಲ 30 ನಿಮಿಷಗಳಷ್ಟೇ ಆಗಿದ್ದ ಕಾರಣ, ದೊಡ್ಡ ಅಪಾಯ ತಪ್ಪಿದೆ. ಒಂದು ವೇಳೆ ಬಸ್ ಮುಂದಕ್ಕೆ ಸಾಗಿದ್ದರೆ ಅಥವಾ ಚಾಲಕ ತಕ್ಷಣ ನಿರ್ಧಾರ ತೆಗೆದುಕೊಳ್ಳದೆ ಇದ್ದಿದ್ದರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆ ಖಾಸಗಿ ಬಸ್‌ಗಳ ಸುರಕ್ಷತೆ ಕುರಿತು ಮತ್ತೊಮ್ಮೆ ಗಂಭೀರ ಚರ್ಚೆಗೆ ಕಾರಣವಾಗಿದೆ.

ಇದನ್ನು ಓದಿ : https://vijayatimes.com/dcm-ajit-pawar-died/

Tags: bengaluruPassengerpassengerbusshivamoggasleeper bus

Related News

ಬಂಡೀಪುರ ಸಫಾರಿಗೆ ಹೊಸ ನಿಯಮ: ಮೊಬೈಲ್ ನಿಷೇಧ, ನಿಯಮ ಉಲ್ಲಂಘಿಸಿದ್ರೆ ದಂಡ
ಪ್ರಮುಖ ಸುದ್ದಿ

ಬಂಡೀಪುರ ಸಫಾರಿಗೆ ಹೊಸ ನಿಯಮ: ಮೊಬೈಲ್ ನಿಷೇಧ, ನಿಯಮ ಉಲ್ಲಂಘಿಸಿದ್ರೆ ದಂಡ

March 14, 2026
ನೌಕಾಪಡೆಯ ಬೆಂಗಾವಲಿನಲ್ಲಿ ಎಲ್‌ಪಿಜಿ ಸಾಗಣೆ:ಹಾರ್ಮುಜ್ ಜಲಸಂಧಿ ದಾಟಿ ಭಾರತದತ್ತ ಬರುತ್ತಿರುವ ಶಿವಾಲಿಕ್ ಹಡಗು
ದೇಶ-ವಿದೇಶ

ನೌಕಾಪಡೆಯ ಬೆಂಗಾವಲಿನಲ್ಲಿ ಎಲ್‌ಪಿಜಿ ಸಾಗಣೆ:ಹಾರ್ಮುಜ್ ಜಲಸಂಧಿ ದಾಟಿ ಭಾರತದತ್ತ ಬರುತ್ತಿರುವ ಶಿವಾಲಿಕ್ ಹಡಗು

March 14, 2026
ಷೇರು ಮಾರುಕಟ್ಟೆ ಕುಸಿತ: ಹೂಡಿಕೆದಾರರು ಹಣವನ್ನು ಸುರಕ್ಷಿತವಾಗಿಡಲು ಸರಳ ಹೂಡಿಕೆ ತಂತ್ರಗಳು
ಪ್ರಮುಖ ಸುದ್ದಿ

ಷೇರು ಮಾರುಕಟ್ಟೆ ಕುಸಿತ: ಹೂಡಿಕೆದಾರರು ಹಣವನ್ನು ಸುರಕ್ಷಿತವಾಗಿಡಲು ಸರಳ ಹೂಡಿಕೆ ತಂತ್ರಗಳು

March 14, 2026
ಆನ್‌ಲೈನ್ ಗ್ಯಾಸ್ ಬುಕ್ಕಿಂಗ್‌ಗೂ ಮುನ್ನ ಎಚ್ಚರ! ಏಜೆನ್ಸಿಗಳ ಹೆಸರಿನಲ್ಲಿ ಸೈಬರ್ ವಂಚನೆ
ಪ್ರಮುಖ ಸುದ್ದಿ

ಆನ್‌ಲೈನ್ ಗ್ಯಾಸ್ ಬುಕ್ಕಿಂಗ್‌ಗೂ ಮುನ್ನ ಎಚ್ಚರ! ಏಜೆನ್ಸಿಗಳ ಹೆಸರಿನಲ್ಲಿ ಸೈಬರ್ ವಂಚನೆ

March 14, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.