ಮರದ ಕೊಂಬೆಯೊಂದು ಶಾಲೆಗೆ ನಡೆದುಕೊಂಡು ಹೋಗುತ್ತಿದ್ದ ಪುಟ್ಟ ಕಂದಮ್ಮನ ಮೇಲೆ ದಿಢೀರ್ ಬಿದ್ದ ಪರಿಣಾಮ, ತೀವ್ರ ಪೆಟ್ಟು ಬಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಪುಟ್ಟ ಕಂದಮ್ಮನ ಜೀವ ಇಂದು ಉಳಿದಿಲ್ಲ! ಬೆಂಗಳೂರಿನ ರಾಮಮೂರ್ತಿ ನಗರದಲ್ಲಿರುವ ತನ್ನ ಮನೆಯಿಂದ ಶಾಲೆಗೆ ತೆರಳಲು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ, ಮರದ ರೆಂಬೆ ಮಗುವಿನ ಮೇಲೆ ಕುಸಿದು ಬಿದ್ದಿದೆ.

2020 ರ ಮಾರ್ಚ್ 11 ರಂದು ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಏಳು ವಯಸ್ಸಿನ ಕಂದಮ್ಮ ಪ್ರಿಶಾ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಮಗುವಿನ ತಲೆಯ ಭಾಗಕ್ಕೆ ತೀವ್ರವಾಗಿ ಪೆಟ್ಟು ಬಿದ್ದ ಪರಿಣಾಮ ಬಾಲಕಿ ಪ್ರಿಶಾ ಕೋಮಾ ಹಂತಕ್ಕೆ ಹೋಗಿದ್ದಳು! ಕಳೆದ ಒಂದು ವರ್ಷಕ್ಕೂ ಹೆಚ್ಚು ಸಮಯ ಮಗುವಿಗೆ ಆಸ್ಪತ್ರೆಯಲ್ಲಿಯೇ ನಿರಂತರವಾಗಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ದುರ್ವಿಧಿ ಇಂದು ಮಗುವಿನ ಜೀವವನ್ನು ಕಿತ್ತುಕೊಂಡಿದೆ.

ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗದಿರುವುದು ತೀವ್ರ ದುಃಖಕರ ಸಂಗತಿಯಾಗಿದೆ. ನಿಮ್ಮ ಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗಬೇಕಾದರೆ ಬಹಳ ಜಾಗೃತರಾಗಿ ಕರೆದುಕೊಂಡು ಹೋಗುವುದು ಒಳಿತು, ಹೆಚ್ಚು ಹುಷಾರಾಗಿ ಚಲಿಸಿ ಎಂದು ಈ ಮೂಲಕ ಎಲ್ಲರಲ್ಲೂ ವಿನಂತಿಸಿಕೊಳ್ಳುತ್ತೇವೆ.