ಹೋಟೆಲ್, ಆಹಾರ ಉದ್ದಿಮೆಗಳಿಗೆ (hotel kitchen cleaning mandatory) ಸರ್ಕಾರದ ಸೂಚನೆ: ಈ ನಿಯಮ ಪಾಲನೆ ಕಡ್ಡಾಯ
ಗ್ರಾಹಕರ ಆರೋಗ್ಯದ ಜೊತೆ ಆಟವಾಡಿದ್ರೆ ಹುಷಾರ್
ಆಹಾರ ಸುರಕ್ಷತಾ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ; FSSAI ಲೈಸೆನ್ಸ್ ಕಡ್ಡಾಯ
Bengaluru : ರಾಜ್ಯಾದ್ಯಂತ ಆಹಾರ ಸುರಕ್ಷತೆ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದಂತೆ (hotel kitchen cleaning mandatory) ವಿಶೇಷ ತಪಾಸಣಾ ಅಭಿಯಾನ ನಡೆಸಲಾಗಿದ್ದು, ಹಲವು ಹೋಟೆಲ್‌ಗಳು ಹಾಗೂ ಆಹಾರ ಉದ್ದಿಮೆಗಳಲ್ಲಿ ಸ್ವಚ್ಛತೆ ಮತ್ತು ಆಹಾರ ಸುರಕ್ಷತಾ ನಿಯಮಗಳ ಪಾಲನೆಯಲ್ಲಿ ಲೋಪಗಳು ಕಂಡುಬಂದಿವೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಆಯುಕ್ತಾಲಯವು ರಾಜ್ಯದ ಎಲ್ಲ ಆಹಾರ ಉದ್ದಿಮೆದಾರರಿಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ನೀಡಿದೆ.
ತಪಾಸಣೆ ವೇಳೆ ಪತ್ತೆಯಾದ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಉದ್ದಿಮೆದಾರರಿಗೆ ನಿಗದಿತ ಕಾಲಾವಕಾಶ ನೀಡಲಾಗಿದ್ದು, ಈ ಅವಧಿಯೊಳಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಮೊದಲನೆಯದಾಗಿ, ಪ್ರತಿಯೊಂದು ಆಹಾರ ಉದ್ದಿಮೆಯೂ ಅನ್ವಯವಾಗುವ ಮಾನ್ಯ FSSAI ಪರವಾನಗಿ ಅಥವಾ ನೋಂದಣಿಯನ್ನು ಹೊಂದಿರುವುದು
ಕಡ್ಡಾಯವಾಗಿದೆ. ಪರವಾನಗಿಗೆ ಸಂಬಂಧಿಸಿದ ಷರತ್ತುಗಳು ಹಾಗೂ ಆಹಾರ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ಆಹಾರ ತಯಾರಿಕೆ ಮತ್ತು ಮಾರಾಟದಲ್ಲಿ ಸುರಕ್ಷಿತ, ಗುಣಮಟ್ಟದ ಹಾಗೂ ಮಾನವ (hotel kitchen cleaning mandatory) ಸೇವನೆಗೆ ಯೋಗ್ಯವಾದ ಪದಾರ್ಥಗಳನ್ನೇ
ಬಳಸಬೇಕು. ಅವಧಿ ಮೀರಿದ, ಹಾಳಾದ, ಕೊಳೆತ ಅಥವಾ ಅನುಮಾನಾಸ್ಪದ ಗುಣಮಟ್ಟದ ಆಹಾರ ಪದಾರ್ಥಗಳನ್ನು ಬಳಸಬಾರದು.
ಕಚ್ಚಾ ವಸ್ತುಗಳನ್ನು ವಿಶ್ವಾಸಾರ್ಹ ಮೂಲಗಳಿಂದ ಖರೀದಿಸಿ, ಅವುಗಳ ಬ್ಯಾಚ್ ಸಂಖ್ಯೆ, ತಯಾರಿಕಾ ದಿನಾಂಕ ಮತ್ತು ಅವಧಿ ಮುಕ್ತಾಯ ದಿನಾಂಕಗಳನ್ನು ಪರಿಶೀಲಿಸಿ ಸೂಕ್ತ ತಾಪಮಾನದಲ್ಲಿ ಸಂಗ್ರಹಿಸಬೇಕು.
ಅಡುಗೆಮನೆ, ಆಹಾರ ತಯಾರಿಕಾ ಸ್ಥಳ, ಸಂಗ್ರಹಣಾ ಕೊಠಡಿ, ನೆಲ, ಗೋಡೆ, ಕಿಟಕಿ ಮತ್ತು ಮೇಲ್ಛಾವಣಿ ಸೇರಿದಂತೆ ಉದ್ದಿಮೆಯ ಸಂಪೂರ್ಣ ಆವರಣವನ್ನು
ಸ್ವಚ್ಛವಾಗಿ ಹಾಗೂ ಶುಷ್ಕವಾಗಿ ಇಟ್ಟುಕೊಳ್ಳಬೇಕು. ಹಾನಿಗೊಳಗಾದ ಟೈಲ್ಸ್, ಗೋಡೆ ಅಥವಾ ಇತರೆ ಮೂಲಸೌಕರ್ಯಗಳನ್ನು ತಕ್ಷಣ ದುರಸ್ತಿ ಮಾಡಬೇಕು.
ಆಹಾರದೊಂದಿಗೆ ನೇರ ಸಂಪರ್ಕಕ್ಕೆ ಬರುವ ಪಾತ್ರೆಗಳು, ಚಾಕುಗಳು, ಕತ್ತರಿಸುವ ಬೋರ್ಡ್‌ಗಳು ಮತ್ತು ಕೌಂಟರ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ ಅಗತ್ಯವಿದ್ದರೆ
ಸ್ಯಾನಿಟೈಸ್ (Sanitize) ಮಾಡಬೇಕು. ಕೀಟ, ಇಲಿ, ಜಿರಳೆ ಸೇರಿದಂತೆ ಹಾನಿಕಾರಕ ಜೀವಿಗಳ ಪ್ರವೇಶ ತಡೆಯಲು ಪರಿಣಾಮಕಾರಿ Pest Control ಕ್ರಮಗಳನ್ನು ಕೈಗೊಳ್ಳಬೇಕು.
ಇದೇ ವೇಳೆ ಹಾಲು, ಮಾಂಸ, ಮೊಟ್ಟೆ ಮತ್ತು ಸಿದ್ಧ ಆಹಾರದಂತಹ ಶೀಘ್ರವಾಗಿ ಹಾಳಾಗುವ ಪದಾರ್ಥಗಳನ್ನು ನಿಗದಿತ ಸುರಕ್ಷಿತ ತಾಪಮಾನದಲ್ಲಿ ಸಂಗ್ರಹಿಸಬೇಕು.
ರೆಫ್ರಿಜರೇಟರ್ (Refrigerator) , ಡೀಪ್ ಫ್ರೀಜರ್ ಹಾಗೂ ಇತರೆ ಶೀತಲೀಕರಣ ಸಾಧನಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು.
ಆಹಾರ ನಿರ್ವಹಿಸುವ ಸಿಬ್ಬಂದಿ ಸ್ವಚ್ಛವಾದ ಉಡುಪು, ಹೆಡ್‌ಕವರ್ ಮತ್ತು ಏಪ್ರನ್ ಬಳಸಬೇಕು. ಆಹಾರ ಮುಟ್ಟುವ ಮೊದಲು ಹಾಗೂ ಅಗತ್ಯ ಸಂದರ್ಭಗಳಲ್ಲಿ ಕೈಗಳನ್ನು ಸರಿಯಾದ ರೀತಿಯಲ್ಲಿ ತೊಳೆಯಬೇಕು.
ಆಹಾರ ತಯಾರಿಕೆ ಮತ್ತು ಕುಡಿಯಲು ಬಳಸುವ ನೀರು ಸುರಕ್ಷಿತವಾಗಿರಬೇಕು. ಆಹಾರ ಹಾಗೂ ಪಾನೀಯಗಳಿಗೆ ಬಳಸುವ ಐಸ್ ಕೂಡ ಗುಣಮಟ್ಟದ ನೀರಿನಿಂದ ತಯಾರಾಗಿರಬೇಕು.
ಪ್ಯಾಕೇಜ್ ಮಾಡಿದ ಆಹಾರ ಪದಾರ್ಥಗಳಲ್ಲಿ FSSAI ನಿಯಮಗಳ ಪ್ರಕಾರ ಕಡ್ಡಾಯ ಲೇಬಲಿಂಗ್ ವಿವರಗಳನ್ನು ನಮೂದಿಸಬೇಕು. ಗ್ರಾಹಕರನ್ನು ತಪ್ಪುದಾರಿಗೆಳೆಯುವ ಯಾವುದೇ ಮಾಹಿತಿ ಅಥವಾ ಪ್ರದರ್ಶನ ಇರಬಾರದು.
ಆಹಾರ ತ್ಯಾಜ್ಯವನ್ನು ಮುಚ್ಚಳ ಹೊಂದಿರುವ ಕಸದ ಬುಟ್ಟಿಗಳಲ್ಲಿ ಸಂಗ್ರಹಿಸಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು.
ನಿಗದಿತ ಅವಧಿ ಮುಗಿದ ಬಳಿಕ ಆಹಾರ ಸುರಕ್ಷತಾ ಅಧಿಕಾರಿಗಳು ಮರುತಪಾಸಣೆ ನಡೆಸಲಿದ್ದು, ಆಗಲೂ ನಿಯಮ ಉಲ್ಲಂಘನೆ ಮುಂದುವರಿದಿರುವುದು ಕಂಡುಬಂದರೆ
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006ರ ಅಡಿಯಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತಾಲಯ ಎಚ್ಚರಿಸಿದೆ.
ಸಾರ್ವಜನಿಕರಿಗೆ ಸುರಕ್ಷಿತ ಹಾಗೂ ಗುಣಮಟ್ಟದ ಆಹಾರ ಒದಗಿಸುವುದು ಪ್ರತಿಯೊಬ್ಬ ಆಹಾರ ಉದ್ದಿಮೆದಾರರ ಜವಾಬ್ದಾರಿಯಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಇದನ್ನು ಓದಿ : https://vijayatimes.com/us-break-iran-oil-trade/