ಬೆಂಗಳೂರಿನಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿರುವ ಬೆನ್ನಲ್ಲೇ ಬೆಂಗಳೂರಿನ ಹೋಟೆಲ್ಗಳಲ್ಲಿ ಟೊಮೆಟೊ ಬಳಸಿ ಮಾಡುವ ಎಲ್ಲಾ ಅಡುಗೆ (hotel prices hike) ಹಾಗೂ ತಿನಿಸುಗಳ ಪದಾರ್ಥಗಳ ಬೆಲೆಗಳನ್ನು

ಶೇ. 10ರಷ್ಟು ಹೆಚ್ಚಿಸಲಾಗಿದೆ. ಟೊಮೆಟೊ ಬಳಸಿ ತಯಾರಿಸುವ ಸಾಂಬಾರ್, ಉಪ್ಪಿಟ್ಟು, ಚಿತ್ರನ್ನ, ಬಿಸಿಬೇಳೆ ಬಾತ್, ಪಲಾವ್ ಇತ್ಯಾದಿಗಳ ಬೆಲೆಗಳನ್ನು ಹೆಚ್ಚಿಸಲಾಗಿದೆ. ಟೊಮೆಟೊ ಬಾತ್ ಮಾಡುವದನ್ನು
ನಿಲ್ಲಿಸಿದ್ದು, ಕೆಲ ಖಾದ್ಯಗಳಿಗೆ ನೀಡಲಾಗುವ ಟೊಮೆಟೊ ಸಾಸ್ ಕೊಡುವುದನ್ನು ನಿಲ್ಲಿಸಲಾಗಿದೆ ಹೋಟೆಲ್ ಉದ್ಯಮದವರು ತಮ್ಮ ಈ ನಡೆಯನ್ನು ಸಮರ್ಥಿಸಿಕೊಂಡಿದ್ದು, ಟೊಮೆಟೊ ಬೆಲೆ ಏರಿರುವ ತಾವು ಬೆಲೆ
ಏರಿಸುವುದು ಅನಿವಾರ್ಯ (hotel prices hike) ಎಂದಿದ್ದಾರೆ.
ಒಂದು ಕೆ.ಜಿ ಟೊಮೆಟೊ ಬೆಲೆ 100ರೂ ಗಳಿಂದ 120ರೂ ಗಳಾಗಿವೆ ಈ ಹಿನ್ನೆಲೆಯಲ್ಲಿ ಟೊಮೆಟೊ ಬಳಸುವ ತಿಂಡಿ ಹಾಗೂ ತಿನಿಸುಗಳ ಬೆಲೆ ಯನ್ನು ಏರಿಸಲಾಗಿದೆ. ಟೊಮೆಟೊ ಬೆಲೆ ಏರಿಕೆಯಾದ್ದರಿಂದ
ಬೆಂಗಳೂರಿನಲ್ಲಿ ಟೊಮೆಟೊ ಬಳಸಿ ಮಾಡುವಂತ ಊಟ-ತಿನಿಸುಗಳ ಬೆಲೆಯಲ್ಲಿ ಶೇ. 10ರಷ್ಟು ಹೆಚ್ಚಿಸಲಾಗಿದೆ ಹೋಟೆಲ್ ನಲಿ ಸಾಂಬಾರ್, ಬಿಸಿಬೇಳೆ ಬಾತ್,ಪಲ್ಯಗಳು, ಉಪ್ಪಿಟ್ಟು ಇತ್ಯಾದಿಗಳಿಗೆ ಟೊಮೆಟೊ
ಬಳಸಲಾಗುತ್ತದೆ. ಇನ್ನು ಇಡ್ಲಿ, ಮಸಾಲೆ ದೋಸೆಯಂತಹ ಕೆಲವು ತಿಂಡಿಗಳ ಜೊತೆಗೆ ಸಾಂಬಾರ್ ಕೊಡಲಾಗುತ್ತದೆ. ಅಂತಹ ತಿಂಡಿಗಳ ಮೇಲಿನ ದರವನ್ನು ಸುಮಾರು 5ರೂ ಗಳಷ್ಟು ಏರಿಕೆ ಮಾಡಲಾಗಿದೆ.

ಅದಷ್ಟೇ ಅಲ್ಲದೆ ಟೊಮೆಟೊ ಬಾತ್ ತಯಾರಿಕೆಯನ್ನು ನಿಲ್ಲಿಸಲಾಗಿದೆ ಮತ್ತು ಗೋಬಿ ಮಂಚೂರಿ, ಫ್ರೆಂಚ್ ಫ್ರೈಸ್, ವೇಜ್ ಫ್ರೈಡ್ ರೈಸ್ ಗಳ ಜೊತೆಗೆ ನೀಡಲಾಗುವ ಟೊಮೆಟೊ ದುಬಾರಿಯಾಗಿರುವುದರಿಂದ
ಟೊಮೆಟೊ ಕೆಚಪ್ ಗಳು ದುಬಾರಿಯಾಗಿದ್ದು ಅವುಗಳ ದರವನ್ನು ಈ ತಿನಿಸುಗಳ ಜೊತೆಗೆ ಸೇರಿಸಿದರೆ ಗ್ರಾಹಕರು ಬೇಸರಗೊಳ್ಳುತ್ತಾರೆ ಎಂಬ ಕಾರಣದಿಂದ ಕೆಚಪ್ ಅನ್ನು ಕೊಡಲಾಗುತ್ತಿಲ್ಲ.
ಎಂದು ಪಾಕಶಾಲೆ ಹೋಟೆಲ್ ನ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ಪಿ.ಸಿ ರಾವ್ ಇದರ ಕುರಿತಂತೆ ಪ್ರತಿಕ್ರಿಯೆ ನೀಡಿದ್ದು ಅವರು ಹೋಟೆಲ್ ಮಾಲೀಕರ ನಿರ್ಧಾರವನ್ನು ಒಪ್ಪಿಕೊಂಡಿದ್ದಾರೆ. ಯಾವ ಅಡುಗೆಗಳಿಗೆ ಟೊಮೆಟೊಗಳನ್ನು
ಬಳಸಲಾಗುತ್ತದೋ ಆ ಅಡುಗೆಗಳ ಬೆಲೆಗಳನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಹಾಲಿನ ದರವನ್ನು ಸರ್ಕಾರ ಸದ್ಯದಲ್ಲೇ ಲೀಟರ್ಗೆ 5 ರೂ ನಷ್ಟು ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸಿದೆ. ಅದಾದ ನಂತರ ಕಾಫಿ, ಟೀ, ಬಾದಾಮಿ ಹಾಲು ಹಾಗೂ ಹಾಲಿನ ಉತ್ಪನ್ನಗಳ ಬೆಲೆಗಳನ್ನು ಹೆಚ್ಚಿಸಬೇಕಾಗುತ್ತದೆ.
ಆಹಾರ ತಯಾರಿಸುವ ಕಚ್ಚಾ ಪದಾರ್ಥಗಳ ಬೆಲೆಗಳು ಹೆಚ್ಚಳವಾದಾಗ ತಿನಿಸುಗಳ ಬೆಲೆಗಳನ್ನು ಹೆಚ್ಚಿಸುವುದು ಹೋಟೆಲ್ ಉದ್ಯಮಕ್ಕೆ ಅನಿವಾರ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
- ಭವ್ಯಶ್ರೀ ಆರ್.ಜೆ