• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಸ್ವಯಂ ಗಣತಿ ಅಂತ್ಯ; ಇಂದಿನಿಂದ ಮನೆಗಣತಿ ಆರಂಭ – 33 ಪ್ರಶ್ನೆಗಳ ಮೂಲಕ ಮಾಹಿತಿ ಸಂಗ್ರಹ

Teju Srinivas by Teju Srinivas
in ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ಸ್ವಯಂ ಗಣತಿ ಅಂತ್ಯ; ಇಂದಿನಿಂದ ಮನೆಗಣತಿ ಆರಂಭ – 33 ಪ್ರಶ್ನೆಗಳ ಮೂಲಕ ಮಾಹಿತಿ ಸಂಗ್ರಹ
0
SHARES
3
VIEWS
Share on FacebookShare on Twitter

ಇಂದಿನಿಂದ ರಾಜ್ಯಾದ್ಯಂತ (household census begins today) ಮನೆಗಣತಿ ಆರಂಭ

ಸಿಬ್ಬಂದಿ ಕೊರತೆ, ತರಬೇತಿ ಗೊಂದಲದ ನಡುವೆ ಆರಂಭವಾದ ಮನೆಗಣತಿ ಪ್ರಕ್ರಿಯೆ

ಮನೆಗಳ ಸ್ಥಿತಿ, ಸೌಲಭ್ಯಗಳ ಬಗ್ಗೆ 33 ಪ್ರಶ್ನೆಗಳಿಗೆ ವಿವರ ಸಂಗ್ರಹಿಸಲಿರುವ ಗಣತಿದಾರರು

Bengaluru : ಕೇಂದ್ರ ಸರ್ಕಾರದ ‘ಜನಗಣತಿ–2027’ ಪ್ರಕ್ರಿಯೆಯ ಭಾಗವಾಗಿ ಕರ್ನಾಟಕದಲ್ಲಿ (household census begins today) ಏಪ್ರಿಲ್ 1ರಿಂದ ಆರಂಭವಾಗಿದ್ದ ಸ್ವಯಂ ಗಣತಿ ನಿನ್ನೆಗೆ (ಏಪ್ರಿಲ್ 15)ಅಂತ್ಯಗೊಂಡಿದೆ.

ಇದರ ಮುಂದುವರಿದ ಹಂತವಾಗಿ ಇಂದಿನಿಂದ (ಏಪ್ರಿಲ್ 16)ರಿಂದ ರಾಜ್ಯದಾದ್ಯಂತ ಮನೆಗಣತಿ ಹಾಗೂ ಮನೆಗಳ ಪಟ್ಟಿಯ ತಯಾರಿಕೆ ಕಾರ್ಯ ಪ್ರಾರಂಭವಾಗುತ್ತಿದೆ.

ಒಂದು ತಿಂಗಳ ಕಾಲ ನಡೆಯಲಿರುವ ಈ ಪ್ರಕ್ರಿಯೆಯಲ್ಲಿ ಗಣತಿದಾರರು ಮನೆಮನೆಗೆ ತೆರಳಿ ವಾಸಸ್ಥಳದ ಸ್ಥಿತಿ, ಮೂಲಸೌಕರ್ಯ, ಆಸ್ತಿ ವಿವರಗಳು ಸೇರಿದಂತೆ ಹಲವು

household census begins today

ಮಾಹಿತಿಗಳನ್ನು ಸಂಗ್ರಹಿಸಲಿದ್ದಾರೆ. ಇದು ದೇಶದ ಅಭಿವೃದ್ಧಿ ಯೋಜನೆಗಳಿಗೆ ಆಧಾರವಾಗುವ ಮಹತ್ವದ ಅಂಕಿಅಂಶಗಳನ್ನು ಒದಗಿಸುವ ಉದ್ದೇಶ ಹೊಂದಿದೆ.

ಈ ಬಾರಿ ಜನಗಣತಿಯ ಮೊದಲ ಹಂತವಾಗಿ “ಮನೆಗಳ ಪಟ್ಟಿ ಮತ್ತು ವಸತಿ ಗಣತಿ”ಗೆ ವಿಶೇಷ ಮಹತ್ವ (household census begins today) ನೀಡಲಾಗಿದೆ.

ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲೂ ಜಿಲ್ಲಾಡಳಿತಗಳ ಮೂಲಕ ಈ ಕಾರ್ಯ ನಡೆಯಲಿದ್ದು, ಸುಮಾರು 2 ಲಕ್ಷಕ್ಕೂ ಅಧಿಕ ಗಣತಿದಾರರನ್ನು ನಿಯೋಜಿಸಲಾಗಿದೆ.

ಏಪ್ರಿಲ್ 16ರಿಂದ ಮೇ 15ರವರೆಗೆ ನಡೆಯುವ ಈ ಕಾರ್ಯದಲ್ಲಿ ಮನೆಗಳ ಸಂಖ್ಯೆ, ಕಟ್ಟಡದ ಸ್ವರೂಪ, ಕುಡಿಯುವ ನೀರು, ವಿದ್ಯುತ್‌ ಸಂಪರ್ಕ, ಶೌಚಾಲಯ ಸೌಲಭ್ಯ ಸೇರಿದಂತೆ ವಿವಿಧ ಮೂಲಭೂತ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತದೆ.

ಮೊದಲ ಹಂತದಲ್ಲಿ ಒಟ್ಟು 33 ಪ್ರಶ್ನೆಗಳ ಮೂಲಕ ಮಾಹಿತಿಯನ್ನು ಪಡೆಯಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜನಗಣತಿಯ ವೇಳೆ ಸಂಗ್ರಹಿಸಲಾಗುವ ಎಲ್ಲಾ ವೈಯಕ್ತಿಕ ಮಾಹಿತಿಗೆ ಸಂಪೂರ್ಣ ಗೌಪ್ಯತೆ ನೀಡಲಾಗುತ್ತದೆ ಎಂಬ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ.

ಈ ಮಾಹಿತಿಯನ್ನು ಯಾವುದೇ ಕಾನೂನು ಪ್ರಕ್ರಿಯೆಗಳಲ್ಲಿ ಅಥವಾ ಮಾಹಿತಿ ಹಕ್ಕು ಕಾಯ್ದೆಯಡಿ ಹಂಚಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಹೀಗಾಗಿ ನಾಗರಿಕರು ಯಾವುದೇ ಭಯವಿಲ್ಲದೆ ಸರಿಯಾದ ಮತ್ತು ನಿಖರ ಮಾಹಿತಿಯನ್ನು ನೀಡಬೇಕು ಎಂದು ಮನವಿ ಮಾಡಲಾಗಿದೆ.

ಜನರ ಸಹಕಾರವೇ ಯಶಸ್ವಿ ಗಣತಿಗೆ ಮುಖ್ಯವಾದ ಅಂಶವಾಗಿರುವುದರಿಂದ ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ಪಾಲ್ಗೊಳ್ಳುವುದು ಅಗತ್ಯವಾಗಿದೆ.

ಇದರ ಮಧ್ಯೆ ಗಣತಿ ಕಾರ್ಯದ ಸಿದ್ಧತೆಗಳ ಬಗ್ಗೆ ಕೆಲವು ಅಸಮಾಧಾನಗಳೂ ವ್ಯಕ್ತವಾಗಿವೆ. ಗಣತಿದಾರರಿಗೆ ತರಬೇತಿ ನೀಡುವಲ್ಲಿ ಗೊಂದಲ ಉಂಟಾಗಿದೆ ಎಂದು

ಶಿಕ್ಷಕರು ಮತ್ತು ಸಿಬ್ಬಂದಿ ಆರೋಪಿಸಿದ್ದಾರೆ. ಅಲ್ಲದೆ, 58 ವರ್ಷ ಮೀರಿದವರನ್ನೂ ಈ ಕಾರ್ಯಕ್ಕೆ ನಿಯೋಜಿಸಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.

ತರಬೇತಿ ಸಭೆಗಳಿಗೆ ಹಾಜರಾದರೂ ಗೈರುಹಾಜರಿ ಎಂದು ದಾಖಲಿಸಿ ನೋಟಿಸ್‌ ನೀಡುತ್ತಿರುವ ಬಗ್ಗೆ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರು ವೇತನ ವಿಲೇವಾರಿ ವಿಳಂಬವಾಗಿರುವುದರಿಂದ ಆರ್ಥಿಕ ತೊಂದರೆ ಎದುರಿಸುತ್ತಿದ್ದಾರೆ ಎಂದು ದೂರಿದ್ದಾರೆ.

ಇನ್ನೊಂದೆಡೆ, ಗಣತಿದಾರರನ್ನು ತಮ್ಮ ವಾಸಸ್ಥಳದ ಹತ್ತಿರ ನಿಯೋಜಿಸುವ ಬದಲು 25ರಿಂದ 50 ಕಿಲೋಮೀಟರ್ ದೂರದ ಪ್ರದೇಶಗಳಿಗೆ ಕಳುಹಿಸಲಾಗುತ್ತಿದೆ ಎಂಬ

ಆರೋಪವೂ ಕೇಳಿಬಂದಿದೆ. ಇದರಿಂದ ಕಾರ್ಯ ನಿರ್ವಹಣೆಯಲ್ಲಿ ಅನಾವಶ್ಯಕ ಅಡಚಣೆಗಳು ಎದುರಾಗುತ್ತಿವೆ ಎಂದು ಶಿಕ್ಷಕರು ತಿಳಿಸಿದ್ದಾರೆ.

ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಮುಂದೆ ಪ್ರತಿಭಟನೆ ನಡೆಸಿದರೂ ತಕ್ಷಣದ ಪರಿಹಾರ ಸಿಗದಿರುವುದು ಬೇಸರಕಾರಿಯಾಗಿದೆ.

ಆದಾಗ್ಯೂ, ಸರ್ಕಾರದ ಈ ಮಹತ್ವದ ಕಾರ್ಯ ಯಶಸ್ವಿಯಾಗಲು ಎಲ್ಲರೂ ಒಗ್ಗೂಡಿ ಸಹಕರಿಸಬೇಕೆಂಬ ನಿರೀಕ್ಷೆ ವ್ಯಕ್ತವಾಗಿದೆ.

Tags: CENSUSSelf-enumerationSurvey

Related News

ಇಂದು ದೇಶಾದ್ಯಂತ ಮೆಡಿಕಲ್ ಶಾಪ್ ಬಂದ್‌ : ಅಗತ್ಯ ಔಷಧಿಗಾಗಿ ವಿಶೇಷ ವ್ಯವಸ್ಥೆ
ದೇಶ-ವಿದೇಶ

ಇಂದು ದೇಶಾದ್ಯಂತ ಮೆಡಿಕಲ್ ಶಾಪ್ ಬಂದ್‌ : ಅಗತ್ಯ ಔಷಧಿಗಾಗಿ ವಿಶೇಷ ವ್ಯವಸ್ಥೆ

May 20, 2026
ಅಮೆರಿಕದ ‘ಆಪರೇಶನ್ ಎಪಿಕ್ ಫ್ಯೂರಿ’ಗೆ ಭಾರೀ ಹೊಡೆತ: F-35 ಸೇರಿ 42 ಯುದ್ಧ ವಿಮಾನ, ಡ್ರೋನ್‌ಗಳಿಗೆ ಹಾನಿ
ದೇಶ-ವಿದೇಶ

ಅಮೆರಿಕದ ‘ಆಪರೇಶನ್ ಎಪಿಕ್ ಫ್ಯೂರಿ’ಗೆ ಭಾರೀ ಹೊಡೆತ: F-35 ಸೇರಿ 42 ಯುದ್ಧ ವಿಮಾನ, ಡ್ರೋನ್‌ಗಳಿಗೆ ಹಾನಿ

May 20, 2026
ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ವಾಹನ ಸವಾರರಿಗೆ ಶಾಕ್
ಪ್ರಮುಖ ಸುದ್ದಿ

ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ವಾಹನ ಸವಾರರಿಗೆ ಶಾಕ್

May 19, 2026
ರಾಜ್ಯ ಸರ್ಕಾರದ ಮೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಾಧನ ಸಮಾವೇಶ: ಗಿನ್ನೆಸ್ ದಾಖಲೆ ಬರೆಯಲು ಸಜ್ಜಾದ ತುಮಕೂರು
ಪ್ರಮುಖ ಸುದ್ದಿ

ರಾಜ್ಯ ಸರ್ಕಾರದ ಮೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಾಧನ ಸಮಾವೇಶ: ಗಿನ್ನೆಸ್ ದಾಖಲೆ ಬರೆಯಲು ಸಜ್ಜಾದ ತುಮಕೂರು

May 19, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.