Visit Channel

ಮಳೆಗಾಲದಲ್ಲಿ ಜಾರಿ ಬೀಳುವುದು, ಗಾಯಗಳಾಗುವುದರಿ೦ದ ಹೇಗೆ ಮು೦ಜಾಗ್ರತ ಕ್ರಮಗಳನ್ನು ಕೈಗೊಳ್ಳಬಹುದು?

vijaya-karnataka

ಮಳೆಗಾಲದಲ್ಲಿ ವಾತಾವರಣವು ತು೦ಬಾ ತ೦ಪಾಗಿರುತ್ತದೆ ಹಾಗು ಮನೆಯ ಒಳಗೆ ಹಾಗೂ ಒಳಗೆ ಕೂಡ ತೇವಾ೦ಶವಿರುತ್ತದೆ. ಇ೦ತಹ ಸಮಯದಲ್ಲಿ ಜಾರುವುದು, ಬೀಳುವುದು, ಗಾಯಗಳಾಗುವುದು ಮತ್ತು ಅತಿಯಾದ ತೇವಾಂಶದಿಂದ ಕೆಲವು ಚರ್ಮ ಸಂಬಂಧಿ ಸೋಂಕು ಉಂಟಾಗಬಹುದು. ಅಂತಹ ಸಮಯದಲ್ಲಿ ಕೈಗೊಳ್ಳಬಹುದಾದ ಆರೈಕೆಯ ಕ್ರಮ ಹಾಗೂ ಮುನ್ನೆಚ್ಚರಿಕಾ ವಿಧಾನಗಳನ್ನು ತಿಳಿಯೋಣ.

​ಮುನ್ನೆಚ್ಚರಿಕೆ ಅಗತ್ಯ:

ಮಳೆಗಾಲದಲ್ಲಿ ನೆಲ ಒದ್ದೆಯಾಗುವುದು ಮತ್ತು ಪಾಚಿ ಕಟ್ಟಿಕೊಳ್ಳುವುದು ಸಾಮಾನ್ಯವಾಗಿರುತ್ತದೆ. ಅಂತಹ ಸಮಯದಲ್ಲಿ ಮಕ್ಕಳಿಗೆ ಆದಷ್ಟು ತಿಳಿಹೇಳಬೇಕು ಹಾಗೂ ನಿಧಾನವಾಗಿ ಓಡಾಡಬೇಕು, ಕಾಳಜಿಯಿಂದ ಇರಬೇಕು ಎ೦ದೆಲ್ಲ ಸೂಕ್ತ ತಿಳಿವಳಿಕೆಯನ್ನು ಮೂಡಿಸಬೇಕು.ಇಲ್ಲವಾದಲ್ಲಿ ಆಗಾಗ ಬೀಳುವುದು, ಗಾಯ ಮಾಡಿಕೊಳ್ಳುವುದು ಸಾಮಾನ್ಯವಾಗಿರುತ್ತದೆ. ಮಕ್ಕಳ ಜೊತೆಗೆ ಹಿರಿಯರು ಹಾಗೂ ವೃದರು ಕೂಡ ಜಾರುವ೦ತಹ  ಸ್ಥಳದಲ್ಲಿ ನಡೆಯುವಾಗ ತು೦ಬಾ ಜಾಗರೂಕತೆಯಿ೦ದ ಇರಬೇಕು

ಸ೦ಭವಿಸಬಹುದಾದ ತೊ೦ದರೆಗಳು:

ಮಳೆಗಾಲದಲ್ಲಿಎಷ್ಟು ಜಾಗರೂಕತೆಯಿ೦ದ ಇದ್ದರೂ ಸಾಕಾಗದು. ಜಾರಿ ಬೀಳುವುದರಿ೦ದ ಬಿದ್ದಾಗ ಸಾಮಾನ್ಯವಾಗಿ ಕೈ, ಮಣಿಕಟ್ಟು, ಸೊಂಟ ಮುರಿತ, ಉಳುಕುವುದು, ಮೊಣಕಾಲು ಹಾನಿ, ಭುಜದ ನೋವು, ಸ್ನಾಯು ಉಳುಕುವುದು, ನರಗಳಿಗೆ ಹಾನಿ ಸಂಭವಿಸುತ್ತದೆ. ಹಾಗಾಗಿ ಆದಷ್ಟು ಎಚ್ಚರಿಕೆಯಿಂದ ಇರುವುದು ಅತ್ಯಗತ್ಯ.

​ಜಾಗರೂಕತೆಯಿ೦ದಿರಿ:

ಮಳೆಗಾಲದಲ್ಲಿ ವಾಹನವನ್ನು ಚಲಾಯಿಸುವಾಗ ಕೂಡ ಆದಷ್ಟು ಜಾಗರೂಕತೆಯಿ೦ದ ಇರಬೇಕು ಹಾಗೂ ಕತ್ತಲಿನಲ್ಲಿ ಓಡಾಡಬೇಕಾದಂತಹ ರಸ್ತೆ ಮಾರ್ಗವನ್ನು ತಪ್ಪಿಸಬೇಕು   ಮೆಟ್ಟಿಲನ್ನು ಹತ್ತುವಾಗ ಇಳಿಯುವಾಗ ಆದಷ್ಟು ಆಧಾರ ಕಂಬಗಳನ್ನು ಹಿಡಿದುಕೊಂಡೇ ಹತ್ತುವುದು ಮತ್ತು ಇಳಿಯುವುದು ಮಾಡಬೇಕು.ಮನೆಯಲ್ಲಿ ಸಣ್ಣ ವಯಸ್ಸಿನ ಮಕ್ಕಳಿದ್ದರೆ ಮನೆಯ ಒಳಗಡೆ ಆಟವಾಡುವಾಗ ಆದಷ್ಟು ಜಾಗರೂಕತೆಯಿ೦ದ ಇರುವ೦ತೆ ನೋಡಿಕೊಳ್ಳಬೇಕು.

ಸುರಕ್ಷಿತ ವಸ್ತುಗಳನ್ನು ಉಪಯೋಗಿಸಿ

ನೀರಲ್ಲಿ ಜಾರದ ಪಾದರಕ್ಷೆಗಳನ್ನು ಧರಿಸುವುದು, ರೇನ್ ಕೋಟ್ ಬಳಕೆ ಮಾಡುವುದು, ಆದಷ್ಟು ಪಾದಾಚಾರಿಗಳ ಮಾರ್ಗದಲ್ಲಿಯೇ ನಡೆದು ಹೋಗುವುದು ಸೂಕ್ತ. ಆಗ ಉಂಟಾಗುವ ಅನಿರೀಕ್ಷಿತ ಅಪಾಯಗಳನ್ನು ಸುಲಭವಾಗಿ ತಡೆಯಬಹುದು.

ವೈದ್ಯರ ಸಲಹೆ

ಮಳೆಗಾಲದಲ್ಲಿಆದಷ್ಟು ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ತು೦ಬಾನೆ ಮುಖ್ಯ. ಆದಷ್ಟು  ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಆಹಾರಗಳನ್ನೇ ಸೇವಿಸಿ. ವೈದ್ಯರ ಸಲಹೆಯನ್ನು ಪಡೆಯಿರಿ ಹಾಗೂ ಯಾವ ರೀತಿಯ ಆರೋಗ್ಯಕರ ಜೀವನ ಶೈಲಿಯನ್ನು ಹೊಂದಬೇಕು ಎನ್ನುವುದರ ಬಗ್ಗೆ ಸೂಕ್ತ ಸಲಹೆಯನ್ನು ಪಡೆಯುವುದನ್ನು ಮರೆಯಬಾರದು.

Latest News

Pakistan
ದೇಶ-ವಿದೇಶ

ಪಾಕಿಸ್ತಾನ : ಗರ್ಭಿಣಿ ಮಹಿಳೆ ಮೇಲೆ ಭದ್ರತಾ ಸಿಬ್ಬಂದಿ ಹಲ್ಲೆ ; ಭಾರೀ ಆಕ್ರೋಶ

ನೋಮನ್ ಗ್ರ್ಯಾಂಡ್ ಸಿಟಿ ಅಪಾರ್ಟ್ಮೆಂಟ್ ಕಟ್ಟಡದ ಹೊರಗೆ ಭದ್ರತಾ ಸಿಬ್ಬಂದಿ ಗರ್ಭಿಣಿ ಮಹಿಳೆಯನ್ನು ಥಳಿಸಿದ್ದಾರೆ ಎಂದು ಪಾಕ್ ಮೂಲದ ಜಿಯೋ ನ್ಯೂಸ್ ವರದಿ ಮಾಡಿದೆ.

Culprits
ಪ್ರಮುಖ ಸುದ್ದಿ

ಹಾಲಿನ ವ್ಯಾಪಾರದ ಸೋಗಿನಲ್ಲಿ ಖೋಟಾ ನೋಟು ದಂಧೆ ; ಬಿಜೆಪಿ ಮುಖಂಡ ಸೇರಿ ಮೂವರ ಬಂಧನ

ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದು, ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

rss
ರಾಜಕೀಯ

RSS ಭಾರತದಲ್ಲಿನ ತಾಲಿಬಾನ್ ಇದ್ದಂತೆ : ಕಾಂಗ್ರೆಸ್‌

ಆರ್‌ಎಸ್‌ಎಸ್‌ ಎಂದಿಗೂ ಭಾರತೀಯತೆಯನ್ನು ಒಪ್ಪಿಲ್ಲ, ಮುಂದೆಯೂ ಒಪ್ಪುವುದಿಲ್ಲ. ಪ್ರತ್ಯೇಕ ಐಡೆಂಟಿಟಿಯಲ್ಲಿ ಇರಲು ಭಯಸುವ ಆರ್‌ಎಸ್‌ಎಸ್‌, ಭಾರತದಲ್ಲಿನ ತಾಲಿಬಾನ್ ಇದ್ದಂತೆ.