ನವದೆಹಲಿ : 75 ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಜನತೆಗೆಗಾಗಿ ಬೃಹತ್ ಗಾತ್ರದ ಗತಿ ಶಕ್ತಿ ಎಂಬ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆಯು ಸಾಕಷ್ಟು ಜನರಿಗೆ ಅನುಕೂಲವಾಗುವಂತಹ ಯೋಜನೆಯಾಗಿದೆ.
ಸ್ವಾತಂತ್ರೋತ್ಸವದ ಆಂಗವಾಗಿ ನರೇಂದ್ರ ಮೋದಿ ದೇಶದ ಆರ್ಥಿಕ ಬೆಳವಣಿಗೆಗೆ ಮುಂದಿನ ದಿನಗಳಲ್ಲಿ 100 ಲಕ್ಷ ಕೋಟಿಯ ಗತಿಶಕ್ತಿ ಯೋಜನೆಯನ್ನು ಪ್ರಧಾನ ಮಂತ್ರಿ ಆರಂಭಿಸವುದಾಗಿ ಈ ಸಂದರ್ಭದಲ್ಲಿ ಘೋಷಣೆ ಮಾಡಿದ್ದಾರೆ. 100 ಲಕ್ಷ ಕೋಟಿ ರಾಷ್ಟ್ರೀಯ ಮೂಲಸೌಕರ್ಯವನ್ನು ಕಲ್ಪಿಸುವ ಯೋಜನೆಯಾಗಿದ್ದು ಈ ಯೋಜನೆ ಸಮಗ್ರ ಮೂಲಸೌಕರ್ಯಕ್ಕೆ ಒತ್ತುಕೊಡುವುದರ ಜೊತೆಗೆ ದೇಶದ ಆರ್ಥಿಕ ಪ್ರಗತಿಗೆ ಕೂಡ ಇದು ಸಹಕಾರಿ ಎಂದು ಪ್ರಧಾನಿಗಳು ತಿಳಿಸಿದ್ದಾರೆ.
75 ನೇ ಸ್ವಾತಂತ್ರೋತ್ಸವದ ಹಿನ್ನಲೆಯಲ್ಲಿ ಪ್ರಧಾನಿ ಘೋಷಿಸಿರುವ ಗತಿ ಶಕ್ತಿ ಯೋಜನೆಯು ಸ್ಥಳೀಯ ಉತ್ಪಾದಕರಿಗೆ ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆ ಒದಗಿಸಿ ಕೊಡುವುದಲ್ಲದೆ ರಫ್ತಿಗೂ ಕೂಡ ಸ್ಪರ್ಧಾತ್ಮಕ ಹಾದಿ ಮಾಡಿಕೊಡುತ್ತದೆ. ಆರ್ಥಿಕ ವಲಯಕ್ಕೊಂದು ಹೊಸ ಭವಿಷ್ಯ ರೂಪಿಸಿಕೊಡುತ್ತದೆ ಎಂದು ಅವರು ಹೇಳಿದ್ದಾರೆ. ಉತ್ಪಾದನೆ ಮತ್ತು ರಫ್ತು ಎರಡೂ ವಲಯದಲ್ಲಿ ಭಾರತದ ವ್ಯಾಪ್ತಿ ಹೆಚ್ಚಬೇಕಿದೆ. ಭಾರತದಿಂದ ಜಾಗತಿಕವಾಗಿ ಉತ್ಪಾದನೆಯಾಗುವ ಪ್ರತಿ ವಸ್ತುವೂ ಭಾರತದ ಬ್ರ್ಯಾಂಡ್ ಅಂಬಾಸಿಡರ್ ಆಗಲಿದೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ನಮ್ಮ ವ್ಯಾಪ್ತಿ ಹೆಚ್ಚಗಾಲಿದೆ. ಭಾರತ ಸರ್ಕಾರವು ಇ-ಕಾಮರ್ಸ್ ಪ್ಲಾಟ್ಫಾರ್ಮ್ ಶುರು ಮಾಡಲಿದ್ದು, ಹಳ್ಳಿಯ ಕರಕುಶಲಗಾರರಿಗೆ ಜಗತ್ತಿನೊಂದಿಗೆ ಸಂಪರ್ಕ ಕಲ್ಪಿಸಲು ಸಹಕಾರಿಯಾಗಲಿದೆ. ಮತ್ತು 100 ಲಕ್ಷ ಕೋಟಿ ಗತಿಶಕ್ತಿ ಉಪಕ್ರಮವು ಯುವಕರಿಗೆ ಉದ್ಯೋಗ ಅವಕಾಶಗಳನ್ನು ತರಲಿದೆ, ಸಮಗ್ರ ಮೂಲಸೌಕರ್ಯ ಬೆಳವಣಿಗೆಗೆ ಇದು ಸಹಾಯ ಮಾಡುತ್ತದೆ ಜೊತೆಗೆ ಸಬ್ಕಾ ಸಾತ್ ಸಬ್ಕಾ ವಿಕಾಸ್- ಸಬ್ಕಾ ವಿಶ್ವಾಸ್ ಇದರಲ್ಲಿ ನಾವೆಲ್ಲರೂ ಕೂಡ ನಂಬಿಕೆ ಇಟ್ಟಿದ್ದೇವೆ. ನಮ್ಮ ಎಲ್ಲರ ಗುರಿಯನ್ನು ಸಾಧಿಸಲು ಸಬ್ಕಾ ಸಾತ್ ಸಬ್ಕಾ ವಿಕಾಸ್-ಸಬ್ಕಾ ವಿಶ್ವಾಸ್ ಹಾಗೂ ಸಬ್ಕಾ ಪ್ರಯಾಸ್ ಇದು ಎಲ್ಲರ ಜೊತೆ, ಎಲ್ಲರ ಏಳ್ಗೆ- ಎಲ್ಲರ ಪ್ರಯತ್ನ ಇದಕ್ಲೆ ಈ ಗತಿ ಶಕ್ತಿ ಯೋಜನೆ ಸಾಕಷ್ಟು ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.