Do this if you have frequent pimples on your face
ಸಾಮಾನ್ಯವಾಗಿ ಹದಿಹರೆಯದ ವಯಸ್ಸಿನಲ್ಲಿ ಮೊಡವೆಗಳಾಗುತ್ತದೆ (Pimples). ಇದರಿಂದ ಯುವಕ ಯುವತಿಯರು ತುಂಬಾ ಮುಜುಗರಕ್ಕೆ ಒಳಗಾಗುತ್ತಾರೆ. ಮೊಡವೆಗಳನ್ನು ಕಡಿಮೆ ಮಾಡಿಕೊಳ್ಳಲು ಸಾಕಷ್ಟು ವಿಧಾನಗಳನ್ನು ಅನುಸರಿಸುತ್ತಾರೆ. ಅದರಿಂದಲೂ ಪರಿಹಾರ ಸಿಗದಿದ್ದಾಗ ಒತ್ತಡಕ್ಕೂ ಒಳಗಾಗುವ ಸಾಧ್ಯತೆ ಇದೆ. ಹಾಗಾದ್ರೆ ಯಾವೆಲ್ಲಾ ಕಾರಣಕ್ಕೆ ಮುಖದ (Face) ಮೇಲೆ ಮೊಡವೆ ಕಾಣಿಸಿಕೊಳ್ಳುತ್ತವೆ ಇದರಿಂದ ಹೇಗೆ? ಪರಿಹಾರ ಪಡೆದುಕೊಳ್ಳೋದು ಅನ್ನೋದನ್ನ ತಿಳಿಯೋಣ ಬನ್ನಿ…
ಹಾರ್ಮೋನ್ ಅಸಮತೋಲನದಿಂದಾಗಿ (Harmone Imbalance) ಮುಖದ ಮೇಲೆ ಮೊಡವೆಗಳಾಗುತ್ತವೆ ಯುವತಿಯರಲ್ಲಿ ಈ ಮೊಡವೆ ಸಮಸ್ಯೆ ಹೆಚ್ಚಾಗಿ ಋತುಚಕ್ರದ ನಂತರ ಪ್ರಾರಂಭವಾಗುತ್ತದೆ.ಈ ಮೊಡವೆಗಳು ಸಾಮಾನ್ಯವಾಗಿ ಒಂದು ಸಮಯದಲ್ಲಿ ಬಂದು ಹೋಗುತ್ತವೆ ಆದರೆ ಕೆಲವರಿಗೆ ಇದು ತುಂಬಾ ಸಮಯದವರೆಗೆ ಉಳಿದು ಅವರು ಮಾನಸಿಕ ಒತ್ತಡಕ್ಕೆ ಒಳಗಾಗಬಹುದು.
ಮುಖದ ಮೇಲೆ ಮೊಡವೆ ಕಾಣಿಸಿಕೊಳ್ಳಲು ಕಾರಣಗಳೇನು?
ತಜ್ಞರ ಪ್ರಕಾರ ಮುಖದ ಮೇಲೆ ಮೊಡವೆ ಕಾಣಿಸಿಕೊಳ್ಳಲು ಅನೇಕ ಕಾರಣಗಳಿವೆ. ಯಾವ ವ್ಯಕ್ತಿ ಹೆಚ್ಚಾಗಿ ಮಾನಸಿಕ ಒತ್ತಡ ಅನುಭವಿಸುತ್ತಾನೋ ಅವರ ದೇಹದಲ್ಲಿ ಕಾರ್ಟಿಸೋಲ್ ಹಾರ್ಮೋನಿನ (Cortisol Hormone) ಸಮತೋಲನಕ್ಕೆ ಅಡ್ಡಿಯಾಗಿ ಮೊಡವೆ ಬರಲು ಕಾರಣವಾಗುತ್ತದೆ. ಇನ್ನೊಂದು ಪ್ರಮುಖ ಕಾರಣವೆಂದರೆ ನಾವು ದಿನನಿತ್ಯ ಸೇವಿಸುವ ಕಳಪೆ ಆಹಾರ ಕೂಡ ಮೊಡವೆಗೆ ಕಾರಣವಾಗುತ್ತದೆ.
ಆಹಾರದಲ್ಲಿ ಜಂಕ್ ಫುಡ್, ಡೈರಿ ಪದಾರ್ಥ (Junk Food, Dairy Product) ಮತ್ತು ಸಿಹಿ ತಿಂಡಿಗಳನ್ನು ಹೆಚ್ಚಾಗಿ ಸೇವಿಸಿದ್ರೆ ಅದು ಮುಖದ ಮೇಲಿನ ಮೊಡವೆಗಳಿಗೆ ಕಾರಣವಾಗಬಹುದು. ನಿದ್ರೆಯ ಕೊರತೆ ಹಾಗೂ ಹೆಚ್ಚುವರಿ ಧೂಮಪಾನ ಕೂಡ ಮೊಡವೆ ಸಮಸ್ಯೆಯನ್ನು ಉಂಟು ಮಾಡಬಹುದು. ಇನ್ನು ಹೆಚ್ಚು ರಾಸಾಯನಿಕ ಹೊಂದಿರುವ ಕ್ರೀಮ್ ಗಳನ್ನೂ ಮುಖಕ್ಕೆ ಹಚ್ಚುವುದರಿಂದ ಮೊಡವೆ ಉಂಟಾಗುತ್ತದೆ.
ಮೊಡವೆಗಳನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ?
ವೈದ್ಯರು ಹೇಳುವ ಪ್ರಕಾರ ಸುಲಭವಾಗಿ ಮೊಡವೆಗಳನ್ನು ಕಡಿಮೆ ಮಾಡಿಕೊಳ್ಳಬಹುದು ಆದರೆ ಜೊತೆಗೆ ಕೆಲವೊಂದು ಸಲಹೆಗಳನ್ನು ಪಾಲಿಸಬೇಕಾಗುತ್ತದೆ. ಮೊದನೆಯದಾಗಿ ಮುಖವನ್ನು ದಿನಕ್ಕೆ ಎರಡು ಭಾರಿ ತೊಳೆಯುವುದು. ರಾಸಾಯನಿಕ ಕ್ರೀಮ್ (Chemical Cream) ಬಳಕೆಯನ್ನು ಕಡಿಮೆ ಮಾಡುವುದು. ಬೆಳಿಗ್ಗೆ ಮತ್ತು ಸಂಜೆ ಮುಖ ತೊಳೆಯುವುದು ಉತ್ತಮ. ಅತಿಯಾದ ಜಂಕ್ ಫುಡ್ ಸೇವನೆಯನ್ನು ತ್ಯಜಿಸುವುದು, ಆಹಾರ ಕ್ರಮದ ಬಗ್ಗೆ ಗಮನವಹಿಸುವುದು, ಅತಿ ಹೆಚ್ಚು ಹಸಿರು ತರಕಾರಿ ಹಾಗು ಹಣ್ಣುಗಳನ್ನು ಸೇವಿಸುದು, ದಿನಕ್ಕೆ 3 ರಿಂದ 4ಲೀಟರ್ ನೀರು ಕುಡಿಯುವುದರ ಜೊತೆಗೆ 7ರಿಂದ 8ಗಂಟೆ ನಿದ್ರೆ ಮಾಡಿ ಈ ವಿಧಾನಗಳನ್ನು ಪಾಲಿಸಿದರೆ ನಿಮ್ಮ ಮೊಡವೆ ಸಮಸ್ಯೆ ದೂರವಾಗುತ್ತದೆ. ಇಷ್ಟೆಲ್ಲ ಪ್ರಯತ್ನಿಸಿದರೂ ಕಡಿಮೆ ಆಗದಿದ್ದರೆ ವೈದ್ಯರನ್ನು ಸಂಪರ್ಕಿಸಿ.
How To Avoid Pimples On Face Vijayatimes Kannada
Pimples usually occur during adolescence. This makes young men and women very embarrassed. Many methods are followed to reduce acne. Even if there is no solution, there is a possibility of stress. So, why do pimples appear on the face? Let’s know about the solution…
Due to hormone imbalance (hormone imbalance) pimples on the face occur in young women, this acne problem mostly starts after the menstrual cycle. These pimples usually come and go at a time but for some it stays for a long time and they may be under mental stress.
What are the causes of acne on the face?
According to experts there are many reasons for the appearance of acne on the face. A person who experiences mental stress more often has cortisol hormone in their body Disruption of balance leads to acne breakouts. Another important reason is the poor diet that we eat daily which also leads to acne.
Eating junk food, dairy products and sweets can lead to acne on the face. Lack of sleep and excess smoking can also cause acne problems. Applying creams with more chemicals on the face also causes acne. How to reduce acne?
Doctors say that acne can be easily reduced but some tips should be followed. First, wash your face twice a day. Reducing the use of chemical cream. It is better to wash the face in the morning and in the evening. Avoiding excessive junk food consumption, paying attention to the diet, eating a lot of green vegetables and fruits, drinking 3 to 4 liters of water a day and sleeping for 7 to 8 hours if you follow these methods. Your acne problem will go away. Consult a doctor if it doesn’t reduce after all these efforts.