ಮಕ್ಕಳಿಗೆ ಊಟ ಮಾಡಿಸುವುದೇ ದೊಡ್ಡ ಸವಾಲು, ಅದರಲ್ಲೂ ಪೋಷಕಾಂಶಯುಕ್ತ ಆಹಾರ ತಿನ್ನುವಂತೆ ಮಾಡುವುದು ಪೋಷಕರಿಗೆ ತಲೆನೋವಿನ ಕೆಲಸವೇ.. ಯಾವುದೂ ಕೊಟ್ಟರೂ ಬೇಡ ಎಂದು ನಿರಾಕರಿಸುವ ಮಕ್ಕಳು, ತಿನ್ನಲೇ ಬೇಕೆನ್ನುವ ಪೋಷಕರ ನಡುವೆ ಯಾವಾಗಲೂ ಸಣ್ಣ ಯುದ್ಧ ನಡೆಯುತ್ತದೆ. ನಿಮ್ಮ ಮಗು ಹೀಗೆ ಎಲ್ಲವನ್ನೂ ಬೇಡ ಎಂದು ದೂರ ತಳ್ಳುತ್ತಿದೆಯಾ, ಹಾಗಾದರೆ ಈ ಸಲಹೆಗಳನ್ನು ಪಾಲಿಸಿ.
ತಿನ್ನುವ ವಿಚಾರದಲ್ಲಿ ಎಲ್ಲವನ್ನು ನಿರಾಕರಿಸುವ ಮಕ್ಕಳಿಗೆ ಈ ಸಲಹೆಗಳನ್ನು ಪಾಲಿಸಬಹುದು:
ಮಕ್ಕಳನ್ನು ಆಹಾರ ತಯಾರಿಕೆಯಲ್ಲಿ ತೊಡಗಿಸಿಕೊಳ್ಳಿ:
ನಿಮ್ಮ ಮಗುವಿಗೆ ವಿಭಿನ್ನ ಆಹಾರವನ್ನು ತಿನ್ನಲು ಸಹಾಯ ಮಾಡುವ ಅತ್ಯುತ್ತಮ ಮಾರ್ಗವೆಂದರೆ ಅವುಗಳನ್ನು ಆಹಾರ ತಯಾರಿಕಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು. ಇದಕ್ಕಾಗಿ ಅವರನ್ನು ದಿನಸಿ ಶಾಪಿಂಗ್ ಕರೆದುಕೊಂಡುಹೋಗಬಹುದು ಅಥವಾ ಅಡುಗೆ ಮಾಡುವಾಗ ಅವರ ಸಹಾಯವನ್ನು ಕೇಳಬಹುದು. ಅವರು ಸಹಾಯ ಮಾಡಿದ ಆಹಾರವನ್ನು ಅವರು ತಿನ್ನುವ ಸಾಧ್ಯತೆ ಹೆಚ್ಚು. ಈ ದಿನದ ಏನು ಮಾಡಬೇಕು ಎಂದು ಅವರ ಸಲಹೆಯನ್ನು ಕೇಳಿ. ಅದರಂತೆ ಮಾಡಿ, ಇದು ಅವರಿಗೆ ಆಹಾರದೊಂದಿಗೆ ಸಂಪರ್ಕವನ್ನು ಬೆಳೆಸಲು ಸಹಾಯ ಮಾಡುತ್ತದೆ.
ಅವರನ್ನು ಶಿಕ್ಷಿಸಬೇಡಿ:
ನಿಮ್ಮ ಮಗು ನೀವು ಸಿದ್ಧಪಡಿಸಿದ ಆಹಾರವನ್ನು ಸೇವಿಸದಿದ್ದರೆ ನಿರಾಶೆಗೊಳ್ಳುವುದು ಸಹಜ. ಆದರೆ ಅದಕ್ಕಾಗಿ ಅವರನ್ನು ಶಿಕ್ಷಿಸಬಾರದು. ತಿನ್ನುವುದಿಲ್ಲ ಎಂದು ನೀವು ಅವರಿಗೆ ಶಿಕ್ಷಿಸಿದರೆ, ಇದು ಇನ್ನಷ್ಟು ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತದೆ.
ಸಣ್ಣ ಪ್ರಮಾಣದ ಅಹಾರ ನೀಡಿ:
ನೀವು ಒಂದೇ ಬಾರಿಗೆ ಒಂದಷ್ಟು ಆಹಾರ ತಂದು ನಿಮ್ಮ ಮಗುವಿನ ಮುಂದಿಟ್ಟರೆ, ಅದು ಅವರಿಗೆ ಕಿರಿಕಿರಿ ಆಗಬಹುದು. ಮಕ್ಕಳು ಎಷ್ಟು ತಿನ್ನುತ್ತಾರೆ, ನಿಮ್ಮ ಮಗು ಎಷ್ಟು ತಿನ್ನಬಲ್ಲದು ಎಂದು ಲೆಕ್ಕಾಚಾರ ಹಾಕಿ, ಅಷ್ಟು ಪ್ರಮಾಣದ ಆಹಾರಹ ಮಾತ್ರ ಕೊಡಿ. ಇದರಿಂದ ಬಿಸಾಡುವ ಅವಶ್ಯಕತೆ ಬರುವುದಿಲ್ಲ, ಮಗುವಿಗೆ ಜೊತೆಗೆ ನಿಮಗೂ ಎಲ್ಲವನ್ನು ತಿಂದು ಮುಗಿಸಿದರೆಂಬ ತೃಪ್ತಿ ಇರುವುದು.
ಕ್ರಿಯೆಟಿವ್ ಆಗಿರಿ
ಅವರೊಂದಿಗೆ ಮಾತನಾಡುವ ರೀತಿಯಲ್ಲಿಯೇ ಆಹಾರವನ್ನು ವಿಭಿನ್ನವಾಗಿ ತಯಾರಿಸಿ. ಆಹಾರ ಡೆಕೋರೇಟಿವ್ ಆಗಿ, ಉತ್ತಮವಾಗಿ ಕಾಣುತ್ತಿದ್ದರೆ ಅವರು ಅದನ್ನು ಪ್ರಯತ್ನಿಸುವ ಸಾಧ್ಯತೆ ಹೆಚ್ಚು. ಯಾವುದೇ ತಿಂಡಿ, ಹಣ್ಣುಗಳಾಗಲಿ ಅದನ್ನು ಕ್ರಿಯೆಟಿವ್ ಆಗಿ ಪ್ರೆಸೆಂಟ್ ಮಾಡಿ. ಆಗ ಖಂಡಿತ ಅವರು ತಿನ್ನುತ್ತಾರೆ.
ದಿನಚರಿಯನ್ನು ಕಾಪಾಡಿ:
ದಿನಚರಿಯನ್ನು ನಿರ್ವಹಿಸುವುದು ಮುಖ್ಯ. ಪ್ರತಿದಿನ ಬಹುತೇಕ ಒಂದೇ ಸಮಯದಲ್ಲಿ ಅವರಿಗೆ ಊಟ ನೀಡಿ. ಆಗ ಅವರು ತನ್ನಿಂದ ತಾನಾಗಿಯೇ ಆ ದಿನಚರಿಗೆ ಅಂಟಿಕೊಳ್ಳುತ್ತಾರೆ. ಜೊತೆಗೆ ಅದೇ ಸಮಯಕ್ಕೆ ಹಸಿವು ಆಗುವುದು. ಆಗ ಆಹಾರ ಚೆನ್ನಾಗಿ ಅವರ ಹೊಟ್ಟೆ ಸೇರುವುದು.
ಹೆಚ್ಚಿನ ಗಮನ ನೀಡಬೇಡಿ:
ಮಕ್ಕಳು ಒಮ್ಮೆ ತಮ್ಮ ಆಹಾರವನ್ನು ತಿನ್ನುವುದಿಲ್ಲ ಎಂದರೆ, ಅವರನ್ನು ಜಾಸ್ತಿ ಮುದ್ದು ಮಾಡುವುದು ಮಾಡಬೇಡಿ, ಇದರ ಉಪಯೋಗ ಪಡೆದುಕೊಳ್ಳುತ್ತಾರೆ. ಊಟ ಬೇಡ ಎಂದರೆ ಅವರನ್ನು ಬಿಟ್ಟು ಬಿಡಿ, ಅವರ ಹಿಂದೆ-ಹಿಂದೆ ಹೋಗಿ ಊಟ ಮಾಡಿಸುವುದು ಸರಿಯಲ್ಲ. ಅವರಿಗೆ ಹಸಿವಾದಾಗ ಅವರೇ ಬಂದು ತಿನ್ನುತ್ತಾರೆ. ಒಂದು ವೇಳೆ ಹಾಗೆ ಮಾಡಿದರೆ ಅದನ್ನೆ ಅಭ್ಯಾಸ ಮಾಡಿಕೊಳ್ಳುತ್ತಾರೆ.
ಮಾದರಿ ನಡವಳಿಕೆ:
ಮಕ್ಕಳು ತಮ್ಮ ಹೆತ್ತವರ ಹೆಜ್ಜೆಗಳನ್ನು ಅನುಸರಿಸುತ್ತಾರೆ ಎಂದು ನಮಗೆಲ್ಲರಿಗೂ ತಿಳಿದಿದೆ. ನಿಮ್ಮ ಆಹಾರ ಪದ್ಧತಿಯ ಬಗ್ಗೆ ನೀವು ಮೆಚ್ಚದಿದ್ದರೆ, ಅವರು ಇದನ್ನು ಗಮನಿಸಿ ಅದೇ ರೀತಿ ಮಾಡುತ್ತಾರೆ. ನೀವು ಉತ್ತಮ ಆಹಾರ ಪದ್ಧತಿಯನ್ನು ಉತ್ತೇಜಿಸಲು ಬಯಸಿದರೆ, ನಿಮ್ಮ ಮಕ್ಕಳ ಮುಂದೆ ಆಹಾರದ ಬಗ್ಗೆ ಉತ್ತಮ ನಡವಳಿಕೆ ಬೆಳೆಸಬೇಕು.