ಆಧುನಿಕ ಜೀವನ ಶೈಲಿಯ(Lifestyle) ಪರಿಣಾಮ ಇಂದು ಅನೇಕರಿಗೆ ಕಿಡ್ನಿ(Kidney) ಅಥವಾ ಮೂತ್ರಕೋಶದಲ್ಲಿ ಕಲ್ಲು ಕಾಣಿಸಿಕೊಳ್ಳುತ್ತಿವೆ. ಇದೊಂದು ಗಂಭೀರವಾದ ರೋಗವಲ್ಲದಿದ್ದರೂ, ಆರಂಭದಲ್ಲೇ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು. ಅದರ ಜೊತೆಗೆ ಜೀವನ ಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಈ ರೋಗವನ್ನು ಆರಂಭದಲ್ಲೇ ನಿಯಂತ್ರಿಸಬಹುದು.

ಕಿಡ್ನಿ ಸ್ಟೋನ್ ಹೇಗೆ ಉಂಟಾಗುತ್ತದೆ? : ಮೂತ್ರಕೋಶ(Excretory System) ಅಥವಾ ಕಿಡ್ನಿಯಲ್ಲಿ ಹೆಚ್ಚು ಲವಣಾಂಶಗಳು ಸಂಗ್ರಹಣೆಯಾಗಿ ಘನರೂಪಕ್ಕೆ ಮಾರ್ಪಟ್ಟು, ಕಲ್ಲುಗಳು ಉಂಟಾಗುತ್ತವೆ. ಈ ಲವಣಾಂಶಯುಕ್ತ ಕಲ್ಲುಗಳು ಮೂತ್ರ ಹರಿವಿಗೆ ತಡೆಯೊಡ್ಡುತ್ತವೆ. ಆಗ ಮೂತ್ರ ಮಾಡುವಾಗ ನೋವು ಕಾಣಿಸಿಕೊಳ್ಳುತ್ತದೆ. ಇದನ್ನೇ ಕಿಡ್ನಿ ಸ್ಟೋನ್‌ಎನ್ನುತ್ತಾರೆ.
ಕಿಡ್ನಿ ಸ್ಟೋನ್ ಲಕ್ಷಣಗಳೇನು?
• ಬೆನ್ನು, ಕಿಬ್ಬೊಟ್ಟೆ ಮತ್ತು ಹೊಟ್ಟೆಯ ಭಾಗದಲ್ಲಿ ನೋವು.
• ಹೊಟ್ಟೆಯ ಭಾಗ ಊದಿಕೊಳ್ಳುತ್ತದೆ.
• ಕೆಲವೊಮ್ಮೆ ಮೂತ್ರದಿಂದ ದುರ್ವಾಸನೆ ಬರುತ್ತದೆ.
• ವಾಂತಿ/ವಾಕರಿಕೆಯೂ ಉಂಟಾಗಬಹುದು.
• ಮೂತ್ರ ವಿಸರ್ಜಿಸುವಾಗ ನೋವು.
• ಮೂತ್ರಚೀಲ ಸಂಪೂರ್ಣ ಖಾಲಿಯಾಗಿಲ್ಲ ಎಂಬ ಅನುಭವವಾಗುತ್ತದೆ.

ಕಿಡ್ನಿ ಸ್ಟೋನ್ ಗೆ ಕಾರಣಗಳು :
• ನೀರನ್ನು ಬೇಕಾದಷ್ಟು ಕುಡಿಯದೇ ಇರುವುದು.
• ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ, ಲವಣಾಂಶಗಳ ಶೇಖರಣೆ ಹೆಚ್ಚಾಗುವುದು.
• ಮಸಾಲೆಯುಕ್ತ ಆಹಾರ ಸೇವಿಸುವುದು.
• ಕಾಫಿ/ಟೀ ಮತ್ತು ಕೂಲ್ ಡ್ರಿಂಕ್ಸ್ ಹೆಚ್ಚಾಗಿ ಸೇವಿಸುವುದು.
• ಅತಿಯಾದ ಉಪ್ಪಿನ ಬಳಕೆ.
ಪರಿಹಾರ :
• ದಿನನಿತ್ಯ ಕನಿಷ್ಠ ಮೂರು ಲೀಟರ್ ನೀರು ಸೇವನೆ.
• ಮಸಾಲೆಯುಕ್ತ ಆಹಾರಗಳಿಗೆ ಕಡಿವಾಣ.
• ನಿಯಮಿತವಾಗಿ ಕಾಫಿ/ಟೀ ಸೇವನೆ.
• ಸೋಡಿಯಂ ಕ್ಲೋರೈಡ್ ಯುಕ್ತ ಉಪ್ಪಿಗೆ ಕಡಿವಾಣ.
• ಸಂಸ್ಕರಿಸಿದ ಆಹಾರವನ್ನು ಹೆಚ್ಚಾಗಿ ಸೇವಿಸಬಾರದು.
• ಸಿಟ್ರಿಕ್ ಆಮ್ಲ ಇರುವ ಆಹಾರವನ್ನು ಹೇರಳವಾಗಿ ಸೇವಿಸಬೇಕು.
• ಪಪ್ಪಾಯ, ದ್ರಾಕ್ಷಿ, ಮತ್ತು ಬೂದುಗುಂಬಳಕಾಯಿಯನ್ನು ಹೆಚ್ಚಾಗಿ ಬಳಸಬೇಕು.
• ಕಾಯಿಸಿದ ನೀರನ್ನು ಸೇವಿಸುವುದು ಒಳ್ಳೆಯದು.