ಇಂದಿನ ಆಧುನಿಕ ದಿನಗಳಲ್ಲಿ ಜನರು ಒತ್ತಡ ,ಮಾನಸಿಖ ಖಿನ್ನತೆ, ಹಾಗೂ ಆಹಾರದ ಕ್ರಮದಿಂದಾಗಿ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಸರಿಯಾದ ಆಹಾರ ಕ್ರಮವನ್ನು ಪಾಲಿಸಿದರೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ಆಹಾರ ಪದ್ಧತಿ ಸಂಪೂರ್ಣವಾಗಿ ಬದಲಾಗಿದೆ,ಏಕೆಂದರೆ ಪ್ರಸ್ತುತ ಬದಲಾಗುತ್ತಿರುವ ಜೀವನ ಶೈಲಿ. ಹಣ್ಣು ಹಾಗೂ ತರಕಾರಿಗಳು ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಬೇರೆ ಬೇರೆ ರೀತಿಯ ತರಕಾರಿಗಳಲ್ಲಿ ಬೇರೆ ಬೇರೆ ರೀತಿಯ ಪೋಷಕಾಂಶಗಳು ಸಿಗುವುದು , ಕೆಲವು ತರಕಾರಿಗಳಲ್ಲಿ ವಿಟಮಿನ್‌ಗಳು ಹೆಚ್ಚಾಗಿದ್ಧರೆ, ಇನ್ನು ಕೆಲವು ತರಕಾರಿಗಳಲ್ಲಿ ಕ್ಯಾಲ್ಸಿಯಂ, ಕಬ್ಬಿನಾಂಶ,ಖನಿಜಾಂಶಗಳು ಹೇರಳವಾಗಿರುತ್ತವೆ.ಇಂತಹ ತರಕಾರಿಗಳಲ್ಲಿ ಬೀಟ್‌ರೂಟ್ ಕೂಡ ಒಂದು.
ಬೀಟ್‌ರೂಟ್ ಅನೇಕ ಪ್ರಯೋಜನಗಳನ್ನು ಹೊಂದಿದೆ. ಬೀಟ್‌ರೂಟ್ ತಿನ್ನಲು ಇಷ್ಟಪಡದವರು ಅದನ್ನು ಜ್ಯೂಸ್ ರೂಪದಲ್ಲಿ ಕುಡಿಯಬಹುದು.ಇದರಲ್ಲಿ ವಿಟಮಿನ್ ಸಿ , ಮ್ಯಾಂಗನೀಸ್ , ಪೊಟ್ಯಾಷಿಯಂ , ಕಬ್ಬಿನಾಂಶ, ಕ್ಯಾಲ್ಸಿಯಂ , ವಿಟಮಿನ್ ಬಿ6 ಕೂಡ ಇದೆ.ಭಾರತದಲ್ಲಿ ಬೀಟ್‌ರೂಟ್ ಅನ್ನು ಕೇವಲ ತರಕಾರಿಯಾಗಿ ಅಲ್ಲದೆ ಹಸಿಯಾದ ಸಲಾಡ್ ರೂಪದಲ್ಲಿ, ಜ್ಯೂಸ್ ರೂಪದಲ್ಲಿ, ಹಲ್ವಾ ಮೊದಲಾದ ಸಿಹಿ ತಿಂಡಿ ರೂಪದಲ್ಲಿ ಕೂಡ ಬಳಕೆಯಾಗುತ್ತಿದೆ.ಬೀಟ್‌ರೂಟ್‌ನಿಂದ ಅನೇಕ ಆರೋಗ್ಯಕರ ಉಪಯೋಗಗಳನ್ನು ಪಡೆದುಕೊಳ್ಳಬಹುದು.ಹಾಗದರೆ ಆ ಉಪಯೋಗಗಳು ಯಾವುವು ಎಂದು ತಿಳಿಯೋಣ.
ರಕ್ತಹೀನತೆಯನ್ನುಮತ್ತು ಕಬ್ಭಿನಾಂಶದ ಕೊರತೆಯನ್ನು ತಪ್ಪಿಸುವುದು
ರಕ್ತಹೀನತೆಯಿಂದ ಬಳಲುತ್ತಿರುವವರು ಬೀಟ್‌ರೂಟ್ ಜ್ಯೂಸ್ ಕುಡಿಯುವುದರಿಂದ ದೇಹಕ್ಕೆ ಬೇಕಾಗುವಂತಹ ಉತ್ತಮ ಕಬ್ಬಿಣಾಂಶವು ದೊರೆಯುತ್ತದೆ ,ಇದರಿಂದ ರಕ್ತವನ್ನು ವೇಗವಾಗಿ ಉತ್ಪತ್ತಿ ಮಾಡಲು ನೆರವಾಗುತ್ತದೆ ಹಾಗೂ ಕೆಂಪು ರಕ್ತ ಕಣಗಳು ಹೆಚ್ಚಾಗುತ್ತವೆ.ಮಹಿಳೆಯರಿಗೆ ಕಾಡುವ ಋತುಚಕ್ರ ತೊಂದರೆಗಳಿಗೆ ಕೂಡ ಉತ್ತಮ ಪರಿಹಾರವಾಗಿದೆ.
ಅಧಿಕ ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಕಾಯಿಲೆಗೆ ರಾಮಬಾಣ
ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರಿಗೆ ಬೀಟ್‌ರೂಟ್ ಜ್ಯೂಸ್ ಉತ್ತಮ ಪರಿಹಾರವಾಗಿದೆ.ಬೀಟ್‌ರೂಟ್‌ನಲ್ಲಿ ಪೊಟ್ಯಾಷಿಯಂ ಇರುವುದರಿಂದ ಅದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ, ಹಾಗೂ ಇದು ಹೃದಯ ಸಂಬಂಧಿ ಕಾಯಿಲೆಯಿಂದಲೂ ರಕ್ಷಿಸುತ್ತದೆ. ಕೊಲೆಸ್ಟ್ರಾಲ್ ಇರುವವರು ಈ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿರುವ ಅಧಿಕ ಕೊಲೆಸ್ಟ್ರಾಲ್ ಕರಗುತ್ತದೆ ಹಾಗೂ ದೇಹದ ತೂಕವೂ ಕಡಿಮೆಯಾಗುತ್ತದೆ.
ದೇಹಕ್ಕೆ ಶಕ್ತಿಯನ್ನು ಹೆಚ್ಚಿಸುವುದು
ಬೀಟ್‌ರೂಟ್‌ನಲ್ಲಿ ಕ್ಯಾಲ್ಸಿಯಂ ಹಾಗೂ ಮೆಗ್ನೇಷಿಯಂ ಅಧಿಕವಾಗಿರುವುದರಿಂದ ಸ್ನಾಯುಗಳ ಶಕ್ತಿ ಹೆಚ್ಚಾಗುತ್ತದೆ ಇದರಿಂದ ದೇಹದಲ್ಲಿ ಶಕ್ತಿ ಹಾಗೂ ಸಾಮಾರ್ಥ್ಯ ಹೆಚ್ಚುತ್ತದೆ. ದೇಹಕ್ಕೆ ಹೆಚ್ಚಿನ ಪೋಷಕಾಂಶ ದೊರೆಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ
ಬೀಟ್‌ರೂಟ್‌ನಲ್ಲಿ ನಾರಿನ ಅಂಶ ಹೇರಳವಾಗಿ ಇರುವುದರಿಂದ ಇದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಜೀರ್ಣಾಂಗವ್ಯೂಹ ಸರಿಯಾದ ಕ್ರಮದಲ್ಲಿ ಕಾರ್ಯ ನಿರ್ವಹಿಸಲು ಇದು ಸಹಾಯಕವಾಗಿದೆ.ಜೊತೆಗೆ ದೇಹವನ್ನು ಸಧೃಢವಾಗಿರಸಲು ಸಹಕಾರಿಯಾಗಿದೆ.