There is a Remedy for The Pain of Burns at Home!
ನೋಡ ನೋಡುತ್ತಿದ್ದಂತೆ ದೀಪಾವಳಿ ಹಬ್ಬ (Deepavali Festival) ಬಂದೇ ಬಿಟ್ಟಿತು. ದೀಪಗಳ ಹಬ್ಬ ಎಂದು ದೀಪಹಚ್ಚುವ ಭರದಲ್ಲಿ ಇಲ್ಲವೇ ಹಬ್ಬಕ್ಕೆಂದು ವಿಶೇಷ ಅಡುಗೆ ತಯಾರಿಸುವ ಸಂದರ್ಭದಲ್ಲಿ ಯಾವುದೋ ಧಾವಂತದಲ್ಲಿ ಬಿಸಿ ಪಾತ್ರೆ ಮೈ ಕೈಗಳಿಗೆ ತಾಕಿ ಚರ್ಮ ಸುಟ್ಟಿರುವ ಅನುಭವವೂ ಆಗಬಹುದು. ಇಲ್ಲವೇ ಕೆಲವೊಮ್ಮೆ ಬಿಸಿ ನೀರು, ಬಿಸಿ ಚಹಾ ಬಿದ್ದು ಸಹಾ ಸುಟ್ಟ ಗಾಯಗಳಾಗಬಹುದು. ಯಾವುದೇ ಸುಟ್ಟ ಗಾಯಕ್ಕೆ ಮೊತ್ತ ಮೊದಲಾಗಿ ಮಾಡಬೇಕಾದ ಪ್ರಥಮ ಚಿಕಿತ್ಸೆ ಎಂದರೆ ಸಾಧ್ಯವಾದಷ್ಟು ತಣ್ಣೀರು ಸುರಿಯುವುದಾಗಿದೆ. ಅದರ ಹೊರತಾಗಿ ಕೂಡ ಒಂದಿಷ್ಟು ಮನೆ ಮದ್ದುಗಳಿವೆ.
ಭಾರತದ ಪ್ರತಿ ಮನೆಯಲ್ಲಿಯೂ ಕೊಬ್ಬರಿ ಎಣ್ಣೆಯನ್ನು ಸುಟ್ಟ ಗಾಯಗಳಿಗೆ ಹಚ್ಚಲು ನೂರಾರು ವರ್ಷಗಳಿಂದಲೂ ಬಳಸಲಾಗುತ್ತಿದೆ. ಇದರಲ್ಲಿರುವ ವಿಟಮಿನ್ ಇ (Vitamin E) ಸುಟ್ಟ ಗಾಯಗಳನ್ನು ಶಮನಗೊಳಿಸುವ ಜೊತೆಗೇ ಶೀಘ್ರ ಹೊಸ ಚರ್ಮ ಬೆಳೆಯಲೂ ನೆರವಾಗುತ್ತದೆ. ಗಾಯ ಒಣಗಿದ ಬಳಿಕವೂ ಕೊಬ್ಬರಿ ಎಣ್ಣೆಯನ್ನು ಹಚ್ಚುವುದನ್ನು ಮುಂದುವರೆಸಬಹುದು. ಕೊಬ್ಬರಿ ಎಣ್ಣೆಯ ಶಿಲೀಂಧ್ರ ನಿವಾರಕ ಗುಣ ಈ ಗಾಯ ಇನ್ನಷ್ಟು ಸೋಂಕಿಗೆ ಒಳಗಾಗದಂತೆ ತಡೆಯುತ್ತದೆ. ಕೊಬ್ಬರಿ ಎಣ್ಣೆಯನ್ನು (Coconut Oil) ಸುಟ್ಟ ಗಾಯ ಎದುರಾದ ತಕ್ಷಣವೇ ಹಚ್ಚಬಹುದು.
ಉತ್ತಮ ಪರಿಣಾಮಕ್ಕಾಗಿ ಸುಟ್ಟ ಗಾಯ (Burn Injury) ವನ್ನು ಮೊದಲ ಐದರಿಂದ ಹತ್ತು ನಿಮಿಷ ತಣ್ಣೀರಿನ ಧಾರೆಯಲ್ಲಿ ಇರುವಂತೆ ಮಾಡಿ ಬಳಿಕ ದಪ್ಪ ಟವೆಲ್ಲಿನಲ್ಲಿ ಒತ್ತಿ ಒರೆಸಿ ಕೊಬ್ಬರಿ ಎಣ್ಣೆಯನ್ನು ಸವರಬೇಕು. ದಿನವಿಡೀ ಕೆಲವಾರು ಬಾರಿ ಕೊಬ್ಬರಿ ಎಣ್ಣೆಯನ್ನು ಹಚ್ಚುತ್ತಲೇ ಇರಬೇಕು. ಈ ಮೂಲಕ ಶೀಘ್ರವಾಗಿ ಗಾಯ ಗುಣವಾಗುತ್ತದೆ. ಇಲ್ಲವಾದರೆ ಮನೆಯ ಹಿತ್ತಲಲ್ಲಿಯೋ ಮನೆಯ ಮುಂದೆ ಬೆಳೆಸಿರುವ ಲೋಳೆಸರ ಅಥವಾ ಆಲೋವೆರಾ ಕೂಡ ಬ್ಯಾಕ್ಟೀರಿಯಾ ನಿವಾರಕ ಮತ್ತು ಉರಿಯೂತ ನಿವಾರಕ ಗುಣಗಳು ಚಿಕ್ಕ ಪುಟ್ಟ ಸುಟ್ಟ ಗಾಯಗಳನ್ನು ಶೀಘ್ರವಾಗಿ ಮಾಗಿಸಲು ನೆರವಾಗುತ್ತವೆ. ಲೋಳೆಸರ ಸುಟ್ಟ ಚರ್ಮದ ಭಾಗದ ಸುತ್ತ ರಕ್ತದ ಪರಿಚಲನೆಯನ್ನು ಪ್ರಚೋದಿಸುತ್ತದೆ. ತನ್ಮೂಲಕ ಶೀಘ್ರವಾಗಿ ಗಾಯ ಗುಣವಾಗಲು ನೆರವಾಗುತ್ತದೆ ಮತ್ತು ಆ ಭಾಗದಲ್ಲಿ ಯಾವುದೇ ಬ್ಯಾಕ್ಟೀರಿಯಾಗಳ (Bacteria) ಬೆಳವಣಿಗೆ ಉಂಟಾಗುವುದನ್ನು ತಡೆಯುತ್ತದೆ.
ಇದಕ್ಕಾಗಿ ನೀವು ನೇರವಾಗಿ ಲೋಳೆಸರದ ಗಿಡದಿಂದ ತಾಜಾ ಕೋಡನ್ನು ಮುರಿದು ಸಿಪ್ಪೆ ತೆರೆದು ಒಳಗಿನ ತಾಜಾ ಅಲೋವೆರಾದ (Aloevera Gel)ತಿರುಳು ಅಥವಾ ಜೆಲ್ ಅನ್ನು ಬಳಸಬಹುದು ಅಥವಾ ಮಾರುಕಟ್ಟೆಯಲ್ಲಿ ಲಭ್ಯವಿರುವ ಸಿದ್ಧ ರೂಪದ ಪ್ರಸಾದನವನ್ನೂ ಹಚ್ಚಬಹುದು. ಲೋಳೆಸರದ ತಿರುಳನ್ನು ನಿತ್ಯವೂ ಹಚ್ಚುವ ಮೂಲಕ ಉರಿ ಹಾಗೂ ನೋವು ಕಡಿಮೆಯಾಗುತ್ತದೆ ಮತ್ತು ಗುಳ್ಳೆಗಳು ಅಥವಾ ಶಾಶ್ವತ ಗುರುತು ಉಂಟಾಗುವುದನ್ನು ತಡೆಯುತ್ತದೆ.
ಇನ್ನು ಅಡುಗೆ ಮನೆಯಲ್ಲಿರುವ ಆಲೂಗಡ್ಡೆಯಲ್ಲಿಯೂ ಪ್ರಬಲ ಬ್ಯಾಕ್ಟೀರಿಯಾ ನಿವಾರಕ ಗುಣಗಳಿವೆ. ಇವುಗಳನ್ನು ಹಸಿಯಾಗಿಯೂ ಬೇಯಿಸಿಯೂ ಅಥವಾ ಚೆನ್ನಾಗಿ ಜಜ್ಜಿ ಸುಟ್ಟ ಗಾಯದ ಮೇಲೆ ಹಚ್ಚಬಹುದು. ಆಲೂಗಡ್ಡೆಯ ಸಿಪ್ಪೆ ಸುಲಿದು ಹಸಿಭಾಗ ಸುಟ್ಟ ಗಾಯದ ಮೇಲೆ ತಾಕುವಂತೆ ಆವರಿಸಿ ಇರಿಸುವ ಮೂಲಕ ಶೀಘ್ರ ಗುಣವಾಗಲು ಹಾಗೂ ಉರಿ ಕಡಿಮೆಯಾಗಲು ನೆರವಾಗುತ್ತದೆ. ಸುಟ್ಟ ಗಾಯವನ್ನು ಆದಷ್ಟೂ ತೇವವಾಗಿಯೇ ಇರಿಸಬೇಕು. ಒಣಗಿದ್ದರೆ ಉರಿ ಹೆಚ್ಚುತ್ತದೆ. ಆಲೂಗಡ್ಡೆಯ ಸಿಪ್ಪೆ ಈ ಕೆಲಸವನ್ನು ಸಮರ್ಥವಾಗಿ ನಿಭಾಯಿಸುತ್ತದೆ. ಇದಕ್ಕಾಗಿ ಕೊಂಚ ದಪ್ಪಗೆ ಸಿಪ್ಪೆಯನ್ನು ಸುಲಿಯಬೇಕು. ಗಾಯ ಸುಟ್ಟ ಬಳಿಕ ಆದಷ್ಟೂ ಬೇಗನೇ ಆಲುಗಡ್ಡೆಯ ಸಿಪ್ಪೆಯನ್ನು ಗಾಯ ಪೂರ್ಣವಾಗಿ ಆವರಿಸುವಂತೆ ಇರಿಸಬೇಕು. ಬಳಿಕ ಕನಿಷ್ಟ ಒಂದು ಘಂಟೆಯಾದರೂ ಹಾಗೇ ಇರುವಂತೆ ಮಾಡುವ ಮೂಲಕ ಉರಿ ಕಡಿಮೆಯಾಗುವ ಜೊತೆಗೇ ಉರಿಯೂ ಶೀಘ್ರವಾಗಿ ಕಡಿಮೆಯಾಗುತ್ತದೆ ಹಾಗೂ ಕಲೆ ಉಳಿಯದಂತೆ ಗಾಯ ಮಾಗುತ್ತದೆ.
How To Treat a Burn Injuries at Home Health News
The Deepavali Festival came and went. In the rush of lighting the festival of lights or during the preparation of special food for the festival, the skin may be burnt by a hot pot touching my hands in a hurry. Or sometimes hot water, hot tea Burns may also occur. The first aid for any burn is to pour as much cold water as possible. Apart from that there are some home remedies.
Coconut oil has been used in every household in India for hundreds of years to apply on burns. The vitamin E in it helps to heal burns and also helps to grow new skin quickly. Coconut oil can be continued to be applied even after the wound is dry. The antifungal properties of coconut oil prevent the wound from becoming further infected. Coconut oil can be applied immediately after a burn.
Immerse the burn injury in cold water for the first five to ten minutes for best results After making it in a stream, press it in a thick towel and apply coconut oil. Coconut oil should be applied a few times throughout the day. By this the wound heals quickly. Otherwise, it is grown in the backyard or in front of the house Aloe vera or aloe vera also has antibacterial and anti-inflammatory properties that help heal minor burns quickly. Mucous circulation around the burned skin area provokes Thus it helps to heal the wound quickly and prevents the growth of any bacteria in that part.
For this, you can directly break a fresh pod from the aloe vera plant and open the peel and use the pulp or gel of fresh aloe vera inside or you can also apply ready-made prasad available in the market. Inflame the mucous pulp by applying it regularly It also reduces pain and prevents blisters or permanent scarring.
Potatoes in the kitchen also have powerful antibacterial properties. These can be eaten raw or cooked Or it can be crushed well and applied on the burn. By peeling the skin of the potato and keeping the raw part on the burn, it helps in quick healing and reducing the inflammation. Keep the burn as moist as possible. Dryness increases inflammation. A potato peeler can handle this task efficiently. For this the peel should be peeled a little thick. After burning the wound, the potato peel should be kept as soon as possible to cover the wound completely. Then by keeping it for at least one hour, the inflammation will reduce quickly and the scar will not remain.