vijaya times advertisements
Visit Channel

`ಲಾಲ್ ಸಿಂಗ್ ಚಡ್ಡಾʼ ಹೊಗಳಿದ ಹೃತಿಕ್ ; `ಕಾಶ್ಮೀರ ಫೈಲ್ಸ್ʼ ಬಗ್ಗೆ ಯಾಕೆ ಮಾತನಾಡಲಿಲ್ಲ? : ಸಿಡಿದೆದ್ದ ನೆಟ್ಟಿಗರು!

Lal singh Chadda

ಮುಂಬೈ : ಬಾಲಿವುಡ್ ನಟ(Bollywood Actor) ಹೃತಿಕ್ ರೋಷನ್(Hrithik Roshan) ಮಾಡಿರುವ ಟ್ವೀಟ್(Tweet) ಇದೀಗ ಎಲ್ಲೆಡೆ ಭಾರೀ ಸದ್ದು ಮಾಡುತ್ತಿದೆ. ಈಗಾಗಲೇ ಅಮೀರ್ ಖಾನ್ ಅಭಿನಯದ ʼಲಾಲ್ ಸಿಂಗ್ ಚಡ್ಡಾʼ ಚಿತ್ರವನ್ನು ಬಹಿಷ್ಕರಿಸುವಂತೆ(Boycott) ಅಭಿಯಾನ ನಡೆಯುತ್ತಿರುವ ಮಧ್ಯೆ, ಹೃತಿಕ್ ರೋಷನ್ ʼಲಾಲ್ ಸಿಂಗ್ ಚಡ್ಡಾʼ(Lal Singh Chadda) ಚಿತ್ರವನ್ನು ನೋಡುವಂತೆ ಕರೆ ನೀಡಿರುವುದು ನೆಟ್ಟಿಗರ(Netizens) ಆಕ್ರೋಶಕ್ಕೆ ಕಾರಣವಾಗಿದೆ.

Amir Khan

ಈ ಮಧ್ಯೆ ಅನೇಕ ಟ್ವಿಟ್ಟರ್(Twitter) ಬಳಕೆದಾರರು ಹೃತಿಕ್ ರೋಷನ್ ಅಭಿನಯದ ʼವಿಕ್ರಮ ವೇದಾʼ(Vikram Vedha) ಚಿತ್ರವನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದಾರೆ. #BoycottVikramVedha ಎಂಬ ಹ್ಯಾಶ್ಟ್ಯಾಗ್(HashTag) ಅನ್ನು ಟ್ವೀಟ್ರನಲ್ಲಿ ಟ್ರೆಂಡ್ ಮಾಡಲು ಪ್ರಾರಂಭಿಸಿದ್ದಾರೆ. ಕೆಲವರು ಹೃತಿಕ್ ರೋಷನ್, ಅಮೀರ್ ಖಾನ್ ಅವರನ್ನು ಬೆಂಬಲಿಸಿದ್ದಕ್ಕಾಗಿ ಟೀಕಿಸಿದರೆ, ಮತ್ತೆ ಕೆಲವರು “ದಿ ಕಾಶ್ಮೀರ್ ಫೈಲ್ಸ್”(The Kashmir Files) ಚಿತ್ರದ ಬಗ್ಗೆ ಯಾಕೆ ಏನನ್ನೂ ಮಾತನಾಡಲಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಇನ್ನು ಹೃತಿಕ್ ರೋಷನ್ ಟ್ವೀಟ್ ಮೂಲಕ ಅಮೀರ್ ಖಾನ್ ಅಭಿನಯದ ಚಲನಚಿತ್ರ “ಲಾಲ್ ಸಿಂಗ್ ಚಡ್ಡಾ”ವನ್ನು ಹೊಗಳಿ “ಲಾಲ್ ಸಿಂಗ್ ಚಡ್ಡಾವನ್ನು ವೀಕ್ಷಿಸಿದ್ದೇನೆ. ನಾನು ಈ ಚಲನಚಿತ್ರದ ಹೃದಯವನ್ನು ಅನುಭವಿಸಿದೆ. ಪ್ಲಸಸ್ ಮತ್ತು ಮೈನಸಸ್ಗಳನ್ನು ಹೊರತುಪಡಿಸಿ, ಈ ಚಲನಚಿತ್ರವು ಕೇವಲ ಅದ್ಭುತವಾಗಿದೆ ಎಂದು ಟ್ವೀಟ್ ಮಾಡಿದ್ದರು.

Actor


ಇನ್ನು ಹೃತಿಕ್ ರೋಷನ್ ಮತ್ತು ಸೈಫ್ ಅಲಿ ಖಾನ್ ಅಭಿನಯದ ವಿಕ್ರಮ್ ವೇದʼ ಚಿತ್ರವು ತಮಿಳಿನ ಸೂಪರ್ ಹಿಟ್ `ವಿಕ್ರಮ್ ವೇದʼದ ಹಿಂದಿ ರೀಮೇಕ್ ಆಗಿದೆ. ಇದನ್ನು ನಿಪುಷ್ಕರ್ ಗಾಯತ್ರಿ ಅವರು ನಿರ್ದೇಶಿಸಿದ್ದಾರೆ.

Latest News

ರಾಜಕೀಯ

ಬೆಳಗಾವಿಯಲ್ಲಿ ಭಾರೀ ಬಿಗಿ ಭದ್ರತೆ ಮಹಾರಾಷ್ಟ್ರ ಸಚಿವರ ಪ್ರವೇಶಕ್ಕೆ ನಿಷೇಧ

ಸರ್ಕಾರದ ಇಬ್ಬರು ಸಚಿವರು ಇಂದು ಬೆಳಗಾವಿಗೆ ಭೇಟಿ ನೀಡುವುದಾಗಿ ಹೇಳಿಕೆ ನೀಡಿರುವ ಕಾರಣ, ಮಹಾರಾಷ್ಟ್ರದ ಇಬ್ಬರು ಸಚಿವರು ಮತ್ತು ಒರ್ವ ಸಂಸದನಿಗೆ ಬೆಳಗಾವಿ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.

ದೇಶ-ವಿದೇಶ

ಕಿಡ್ನಿ ಕಸಿ ನಂತರ ಲಾಲು ಪುತ್ರಿಗೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಪ್ರಶಂಸೆ

“ನನ್ನ ತಂದೆಯ ಮೂತ್ರಪಿಂಡ ಕಸಿ ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ಅವರನ್ನು ಆಪರೇಷನ್ ಥಿಯೇಟರ್‌ನಿಂದ ಐಸಿಯುಗೆ(ICU) ಸ್ಥಳಾಂತರಿಸಲಾಗಿದೆ

ರಾಜಕೀಯ

“ಸಿದ್ರಾಮುಲ್ಲಾಖಾನ್” ಸಿಟಿ ರವಿ ಟೀಕೆಯಿಂದ ಮುಸ್ಲಿಂ ಮುಲ್ಲಾಗಳಿಗೆ ಅವಮಾನವಾಗಿದೆ ಎಂದು ಆರೋಪ

ಈ ಹೇಳಿಕೆಯನ್ನು ಹಿಂಪಡೆಯಬೇಕೆಂದು ಕಾಂಗ್ರೆಸ್ಕಾರ್ಯಕರ್ತರು ಸಿಟಿ ರವಿ ಅವರ ನಿವಾಸಕ್ಕೂ ಮುತ್ತಿಗೆ ಹಾಕಿದ್ದರು, ಆದರೆ “ಸಿದ್ರಾಮುಲ್ಲಾ ಖಾನ್  ಎಂಬುದು ಜನರೇ ನೀಡಿರುವ ಬಿರುದು,