Mumbai : ಇತ್ತೀಚಿಗಷ್ಟೇ ಕಾಂತಾರ (Hrithik Roshan tweet kantara) ಸಿನಿಮಾವನ್ನು ನೋಡಿದ ಬಾಲಿವುಡ್ ನಟ ಹೃತಿಕ್ ರೋಷನ್ , ನಾನು ಕಾಂತಾರ ಚಿತ್ರವನ್ನು ವೀಕ್ಷಿಸಿದೆ.
ಚಿತ್ರದ ಕ್ಲೈಮ್ಯಾಕ್ಸ್ ನೋಡಿ ರೋಮಾಂಚನಕ್ಕೆ ಒಳಗಾದೆ ಮತ್ತು ಈ ಸಿನಿಮಾ ನೋಡಿ (Hrithik Roshan tweet kantara) ಸಾಕಷ್ಟು ಕಲಿತಿದ್ದೇನೆ ಎಂದು ಟ್ವೀಟ್ ಮಾಡಿ ತಿಳಿಸಿದ್ದಾರೆ.

ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿರುವ ಸಿನಿಮಾ ಅಂದ್ರೆ ಅದು ನಮ್ಮ ಕನ್ನಡದ ಮಣ್ಣಿನ ಕಥೆಯುಳ್ಳ ಕಾಂತಾರ ಚಿತ್ರ.
ಈ ಸಿನಿಮಾವನ್ನು ವೀಕ್ಷಿಸಿರುವ ಸಿನಿ ಪ್ರೇಕ್ಷಕರು ಹಾಗೂ ಪರಭಾಷೆಯ ಅನೇಕ ನಟ-ನಟಿಯರು ಕಾಂತಾರವನ್ನು ಹಾಡಿಹೊಗಳಿರುವುದಕ್ಕೆ ಸಾಮಾಜಿಕ ಜಾಲತಾಣಗಳೇ ಜ್ವಲಂತ ಸಾಕ್ಷಿ!
ಹೌದು, ಕಾಂತಾರ ಬಿಡುಗಡೆಗೊಂಡ ಮೊದಲ ದಿನದಿಂದ ಇಂದಿನವರೆಗೂ ಪ್ರತಿದಿನ ಒಂದಲ್ಲ ಒಂದು ರೀತಿಯ ಮೆಚ್ಚುಗೆಗಳನ್ನು ಪಡೆದುಕೊಳ್ಳುತ್ತಿದೆ.
ಕಾಂತಾರ ಚಿತ್ರದ ಕಥೆ, ನಟನೆ ಬಗ್ಗೆ ರಿಷಬ್ ಶೆಟ್ಟಿ (Rishab shetty) ಹಾಗೂ ಚಿತ್ರತಂಡಕ್ಕೆ ಹಲವು ಗಣ್ಯರಿಂದ ಮೆಚ್ಚುಗೆಗಳ ಮಹಾಪೂರವೇ ಹರಿದುಬರುತ್ತಿದೆ.
ಇದನ್ನೂ ನೋಡಿ : https://fb.watch/hpbH2Gn5F6/ “ನಾವು ಬುದ್ದಿವಂತರಾದರೇ ಈ ಸರ್ಕಾರ ತರಬಾರದು” : ಜನಾಭಿಪ್ರಾಯ
ಸದ್ಯ ಈ ಪಟ್ಟಿಗೆ ಇದೀಗ ಬಾಲಿವುಡ್ ಚಿತ್ರರಂಗದ ಖ್ಯಾತ ನಟ, ಸೂಪರ್ ಸ್ಟಾರ್ (Super star) ಹೃತಿಕ್ ರೋಷನ್ ಕೂಡ ಸೇರಿಕೊಂಡಿದ್ದು, ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಾನುವಾರ ತಮ್ಮ ಸಾಮಾಜಿಕ ಜಾಲತಾಣದ ಅಧಿಕೃತ ಖಾತೆಯಲ್ಲಿ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಪ್ರತ್ಯೇಕವಾಗಿ ತಿಳಿಸಿದ್ದಾರೆ.
ಹೃತಿಕ್ ರೋಷನ್ ಅವರು ಮಾಡಿದ ಟ್ವೀಟ್ (Tweet) ನಲ್ಲಿ ಏನಿದೆ? ಹೇಳಿದ ಸಂಗತಿಗಳೇನು? ಎಂದು ನೋಡುವುದಾದರೆ ಹೀಗಿದೆ, “ಕಾಂತಾರ ಸಿನಿಮಾ ನೋಡಿ ನಾನು ತುಂಬಾ ಕಲಿತಿದ್ದೇನೆ.
ರಿಷಬ್ ಶೆಟ್ಟಿ ಅವರ ಈ ಸಿನಿಮಾ ನಿಜಕ್ಕೂ ಅದ್ಭುತವಾಗಿದೆ. ನಿರೂಪಣೆ, ನಿರ್ದೇಶನ, ಉನ್ನತ ದರ್ಜೆಯ ನಟನೆ ಹಾಗೂ ಕಥೆ ಹೇಳಿರುವ ರೀತಿ ಬಹಳ ಅತ್ಯುತ್ತಮವಾಗಿದೆ.
ಇದನ್ನೂ ಓದಿ : https://vijayatimes.com/tawang-border-dispute/
ಕ್ಲೈಮ್ಯಾಕ್ಸ್ ನಲ್ಲಿ (Climax) ಕಂಡ ಬದಲಾವಣೆಯಿಂದ ನನಗೆ ರೋಮಾಂಚನ ಉಂಟಾಯಿತು, ಕಾಂತಾರ ಚಿತ್ರದ ಇಡೀ ತಂಡಕ್ಕೆ ನನ್ನ ಗೌರವ ಹಾಗೂ ಅಭಿನಂದನೆಗಳು” ಎಂದು ಹೃತಿಕ್ ರೋಷನ್ ಟ್ವೀಟ್ ಮೂಲಕ ರಿಷಬ್ ಶೆಟ್ಟಿಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಕಾಂತಾರ ಚಿತ್ರದಲ್ಲಿ ನಟಿ ಸಪ್ತಮಿ ಗೌಡ (Saptami Gowda) ಹಾಗೂ ನಟ ರಿಷಬ್ ಶೆಟ್ಟಿ ಜೋಡಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾದ ಪೂರ ಅಭಿನಯದಲ್ಲಿ ಮೋಡಿ ಮಾಡಿದ್ದಾರೆ.
ಈ ಚಿತ್ರವು ಕರಾವಳಿ ಭಾಗದ ನಂಬಿಕೆಗಳಲ್ಲಿ ಬೇರೂರಿದ್ದು, ಅಲ್ಲಿಯ ಸ್ಥಳೀಯರ ನಂಬಿಕೆಗೆ ಪಾತ್ರವಾಗಿರುವ ಹಾಗೂ ಮನುಷ್ಯ ಮತ್ತು ಪ್ರಕೃತಿ ನಡುವಿನ ಒಲವಿನ ಸಂಬಂಧದ ಕಥೆಗಳೊಂದಿಗೆ ವಿಲೀನಗೊಂಡಿದೆ.

ಕಾಂತಾರ ಮೂಲತಃ ಕನ್ನಡದಲ್ಲಿ ಮೊದಲು ಬಿಡುಗಡೆಯಾಗಿ ಬಳಿಕ ಹಿಂದಿ, ಮಲಯಾಳಂ, ತೆಲುಗು ಮತ್ತು ತಮಿಳಿನ ಡಬ್ಬಿಂಗ್ ಆವೃತ್ತಿಗಳೊಂದಿಗೆ ಎರಡು ವಾರಗಳ ನಂತರ ಬಿಡುಗಡೆಯಾಯಿತು.
ಈ ಚಿತ್ರವು ವಿಶ್ವಾದ್ಯಂತ 400 ಕೋಟಿ ರೂ. ಗಳಿಸಿ, ಇದೀಗ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಯಶಸ್ಸನ್ನು ಕಂಡಿದೆ.
ಅಕ್ಟೋಬರ್ 16ರ ಭಾನುವಾರದಂದು ಹಿಂದಿ ಭಾಷೆಯಲ್ಲಿ ಬಿಡುಗಡೆಯಾದ ನಂತರ ಬಾಕ್ಸ್ ಆಫೀಸ್ (Box Office) ನಲ್ಲಿ ದುಪ್ಪಟ್ಟು ಲಾಭ ಗಳಿಸಿ ದಾಖಲೆ ಸೃಷ್ಟಿಸಿದೆ.
ಇದರೊಟ್ಟಿಗೆ ಇದೇ ತಿಂಗಳ ಆರಂಭದಲ್ಲಿ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ (Amazon Prime Video) ಕಾಂತಾರ ಪ್ರಮುಖ ಭಾಷೆಗಳಲ್ಲಿ ಬಿಡುಗಡೆಗೊಂಡಿತು ಮತ್ತು ನೆಟ್‌ಫ್ಲಿಕ್ಸ್ ನಲ್ಲಿ ಹಿಂದಿ, ಇಂಗ್ಲೀಷ್ ಭಾಷೆಯಲ್ಲಿ ಕಾಂತಾರ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ : https://vijayatimes.com/messi-speaks-about-retirement/
ಕಾಂತಾರವನ್ನು ಟಾಲಿವುಡ್ ನಟ ರಜನಿಕಾಂತ್ (Rajinikanth), ಪ್ರಭಾಸ್ ಅವರಿಂದ ಹಿಡಿದು ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut), ವರುಣ್ ಧವನ್, ಹೃತಿಕ್ ರೋಷನ್ ಅವರಂತ ಅನೇಕ ಕಲಾವಿದರು,
ಗಣ್ಯರು ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ರಿಷಬ್ ಶೆಟ್ಟಿ ಕಾಂತಾರ 2 ಚಿತ್ರಕ್ಕೆ ಸಜ್ಜಾಗಿದ್ದು, ಚಿತ್ರದ ಅಗತ್ಯ ಕೆಲಸಗಳಲ್ಲಿ ನಿರತರಾಗಿದ್ದಾರೆ ಎನ್ನಲಾಗಿದೆ.