- ಇನ್ನು ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ ಎಲ್ಲ ತಾಲೂಕು ಆಸ್ಪತ್ರೆಗಳಿಗೆ(hrudaya jyoti scheme) ವಿಸ್ತರಣೆ
- ಇನ್ಮುಂದೆ 15 ವರ್ಷದ ಎಲ್ಲ ಶಾಲಾ ಮಕ್ಕಳನ್ನು ಹೃದಯ ತಪಾಸಣೆಗೆ ಒಳಪಡಿಸಲು ಪ್ಲಾನ್
- ಬಸ್ ಸ್ಟಾಂಡ್, ರೈಲ್ವೇ ನಿಲ್ದಾಣಗಳಲ್ಲಿ ಸ್ವಯಂ ಚಾಲಿತ AED ಯಂತ್ರಗಳನ್ನ ಇಡಲು ನಿರ್ಧಾರ
Bengaluru: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೃದಯಾಘಾತ (heart attack) ಪ್ರಕರಣಗಳು ಹೆಚ್ಚಾಗುತ್ತಿರುವುದು ಜನರಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ.
ಕೋವಿಡ್ ಬಳಿಕ ಶೇ 4 ರಿಂದ 5 ರಷ್ಟು ಹೃದಯಾಘಾತಗಳ ಸಂಖ್ಯೆ ಹೆಚ್ಚಾಗಿವೆ. ಆದರೆ ಇದಕ್ಕೆ ಕೋವಿಡ್ ಲಸಿಕೆ ನೇರ ಕಾರಣವಲ್ಲ ಎಂಬುದು ತಜ್ಞರ ವರದಿಯಲ್ಲಿ ಹೇಳಲಾಗಿದೆ ಎಂದು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ (Dinesh Gundu Rao) ಅವರು ಹೇಳಿದ್ದಾರೆ.
ಇನ್ನೂ ಹಾಸನ, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿದ್ದು,
ಹಠಾತ್ ಹೃದಯಘಾತಗಳ ಸಂದರ್ಭದಲ್ಲಿ ಸಂಜೀವಿನಿಯಂತೆ ಕಾರ್ಯನಿರ್ವಹಿಸುತ್ತಿರುವ ಪುನೀತ್ ರಾಜಕುಮಾರ್ (Puneeth Rajkumar) ಹೃದಯ ಜ್ಯೋತಿ ಯೋಜನೆ ಎಲ್ಲ ತಾಲೂಕು ಆಸ್ಪತ್ರೆಗಳಿಗೆ ವಿಸ್ತರಣೆ ಮಾಡಲಾಗುವುದು ಎಂದು ಆರೋಗ್ಯ ಸಚಿವರಾದ (Health Minister) ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ.

ಇನ್ನೂ 15 ವರ್ಷದ ಎಲ್ಲ ಶಾಲಾ ಮಕ್ಕಳನ್ನು ಹೃದಯ ತಪಾಸಣೆಗೆ ಒಳಪಡಿಸಲು ಪ್ಲಾನ್ ಮಾಡಲಾಗಿದೆ. ಪಠ್ಯ ಪುಸ್ತಕದಲ್ಲಿ ಶಾಲಾ ಮಕ್ಕಳಿಗೆ ಅಸಾಂಕ್ರಾಮಿಕ ರೋಗ, ಹೃದಯ (circular) ಅಳವಡಿಸಲು ಶಿಕ್ಷಣ ಇಲಾಖೆಗೆ ಮಾಹಿತಿ ಕಳುಹಿಸಲಾಗಿದೆ.
ಬಸ್ ಸ್ಟಾಂಡ್, ರೈಲ್ವೇ ನಿಲ್ದಾಣಗಳಲ್ಲಿ ಸ್ವಯಂ ಚಾಲಿತ (AED) ಯಂತ್ರಗಳನ್ನ ಇಡಲು ನಿರ್ಧಾರ. ಸಾರ್ವಜನಿಕರಿಗೆ ಸಿಪಿಆರ್ (CPR) ತರಬೇತಿ ನೀಡಲು ಯೋಜನೆಯನ್ನ ರೂಪಿಸಲಾಗುವುದು ಎಂದು ತಿಳಿಸಿದ್ದಾರೆ.
ಸರ್ಕಾರ ಮಟ್ಟದಲ್ಲಿ ಸರ್ಕಾರಿ ನೌಕಕರಿಗೆ, ಗುತ್ತಿಗೆ ನೌಕರರಿಗೆ ಹೃದಯ ತಪಾಸಣೆ ಹಾಗೂ ಸ್ಕ್ರೀನಿಂಗ್ (Screening) ಮಾಡಲು ನಿರ್ಧರಿಸಿದ್ದೇವೆ.
ಖಾಸಗಿ ಕಂಪನಿಗಳು, (Private companies) ಉದ್ದಿಮೆದಾರರು ತಮ್ಮ ಕಂಪನಿಗಳಲ್ಲಿ ಕಾರ್ಮಿಕರಿಗೆ ವಾರ್ಷಿಕ ಆರೋಗ್ಯ ತಪಾಸಣೆ ನಡೆಸಲು ಸಲಹೆ ನೀಡಲಾಗುವುದು ಎಂದು ಹೇಳಿದ್ದಾರೆ.
ಸರ್ಕಾರಿ ಆಸ್ಪತ್ರೆಯ ಹೊರಗೆ ನಡೆಯುವ ಎಲ್ಲ ಹಠಾತ್ ಸಾವುಗಳನ್ನು ಅಧಿಸೂಚಿತ ಖಾಯಿಲೆ (Notifiable disease) ಎಂದು ಪರಿಗಣಿಸಲು ನಿರ್ಧಾರ.
ಆಸ್ಪತ್ರೆಯ ಹೊರಗೆ ನಡೆಯುವ ಎಲ್ಲ ಹಠಾತ್ ಸಾವುಗಳ ಡೆತ್ ಸರ್ಟಿಫಿಕೇಟ್ ಪಡೆಯಲು ಮರಣೋತ್ತರ ಪರೀಕ್ಷೆ (Postmortem examination) ಕಡ್ಡಾಯಗೊಳಿಸಲಾಗಿದೆ.
ಆಸ್ಪತ್ರೆಯ ಹೊರೆಗೆ ನಡೆಯುವ ಎಲ್ಲ ಹಠಾತ್ ಸಾವುಗಳು ಇನ್ಮುಂದೆ ನೋಟಿಫೈಯಾಗಲಿದ್ದು, ಹೃದಯಾಘಾತಗಳ ಬಗ್ಗೆ ಸಂಶೋಧನೆಗೆ (research) ಹೆಚ್ಚಿನ ಅಂಕಿ ಅಂಶಗಳು ದೊರೆಯಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಹೃದಯಾಘಾತಗಳು ಹೆಚ್ಚಾಗಲು ಶೇ 50 ರಷ್ಟು ಪ್ರಕರಣಗಳಲ್ಲಿ ತಂಬಾಕು ಸೇವನೆಯೇ ಪ್ರಮುಖ ಕಾರಣ ಎಂಬುದು ತಜ್ಞರ (experts) ವರದಿಯಲ್ಲಿ ಹೇಳಲಾಗಿದೆ.
ಇದರ ಹೊರತಾಗಿ ಮಧುಮೇಹ, ರಕ್ತದೊತ್ತಡ, ಒಬೆಸಿಟಿ ಹೆಚ್ಚಾಗಿದೆ. ಸ್ಟೀರಾಯ್ಡ್ (steroid) ಹೆಚ್ಚಿನ ಬಳಕೆಯೂ ಕೂಡ ಕಾರಣವಾಗಿದೆ.
ಇದನ್ನು ಓದಿ :ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ಹೃದಯ ತಪಾಸಣೆ ಯೋಜನೆ ಜಾರಿ ; ಸರ್ಕಾರದ ಮಹತ್ವದ ನಿರ್ಣಯ
ಕೋವಿಡ್ ಪೂರ್ವದಲ್ಲಿ ಜಯದೇವ ಆಸ್ಪತ್ರೆ ಮೆಡಿಕಲ್ ರೆಕಾರ್ಡ್ಸ್ (Medical Records) ಗೆ ಹೊಲಿಕೆ ಮಾಡಿ ಕೂಡಾ ವರದಿ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದ್ದಾರೆ.(hrudaya jyoti scheme)