HSRP mandatory from September 16 – Penalty for not Installing Number Plates
Bengaluru: ವಾಹನಗಳಿಗೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ (HSRP Number Plate) ಅಳವಡಿಸದಿದ್ದರೆ 500 ರೂ.ಗಳ ದಂಡ ವಿಧಿಸಲು ಸರ್ಕಾರ ಸಿದ್ದತೆ ನಡೆಸಿದೆ. ಈ ಹಿಂದೆ ಸರ್ಕಾರ ಮತ್ತು ನ್ಯಾಯಾಲಯ ನಂಬರ್ ಪ್ಲೇಟ್ ಅಳವಡಿಕೆಗೆ ವಿಧಿಸಿದ್ದ ಗಡುವು ವಿಸ್ತರಿಸುತ್ತಾ ಬಂದಿದ್ದವು. ಇದೀಗ ಸೆಪ್ಟೆಂಬರ್ 16ರ ವರೆಗೆ ಅಂತಿಮ ಗಡುವು ನೀಡಲಾಗಿದೆ. ಸರ್ಕಾರ ನೀಡಿರುವ ಡೆಡ್ ಲೈನ್ಗೆ (Dead Line) ಕೇವಲ ಒಂದು ವಾರ ಮಾತ್ರ ಬಾಕಿ ಇದೆ.
ಸೆಪ್ಟೆಂಬರ್ (September) 15ಕ್ಕೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಸರ್ಕಾರ ನೀಡಿರುವ ಗಡುವು ಮುಗಿಯಲಿದೆ. ರಾಜ್ಯದಲ್ಲಿ 2 ಕೋಟಿ ವಾಹನಗಳಿದ್ದು, ಇದುವರೆಗೆ ಕೇವಲ 51 ಲಕ್ಷ ವಾಹನಗಳು ಮಾತ್ರ ಹೆಚ್ಎಸ್ಆರ್ಪಿ ನಂಬರ್ ಅಳವಡಿಸಲಾಗಿದೆ. ಇನ್ನೂ 1.49 ಕೋಟಿ ವಾಹನಗಳಿಗೆ ಹೆಚ್ಎಸ್ಆರ್ಪಿ ಅಳವಡಿಸಿಲ್ಲ. ಹೀಗಾಗಿಯೇ ಸರ್ಕಾರ ಇದೀಗ ದಂಡ ವಿಧಿಸುವ ಮೂಲಕ ನಂಬರ್ ಪ್ಲೇಟ್ ಅಳವಡಿಕೆಗೆ ವೇಗ ನೀಡಲು ಮುಂದಾಗಿದೆ. ಮೊದಲ ಬಾರಿಗೆ 500 ರೂಪಾಯಿ ದಂಡ ಮತ್ತು ಎರಡನೇ ಬಾರಿಗೆ 1,000 ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ಸಾರಿಗೆ ಇಲಾಖೆ ಹೇಳಿದೆ.
ಇನ್ನು ಕೇಂದ್ರ ಸರ್ಕಾರ ದೇಶಾದ್ಯಂತ ಏಕ ಮಾದರಿಯ ನಂಬರ್ ಪ್ಲೇಟ್ ಇದ್ದರೆ ಅಪರಾಧ ಕೃತ್ಯಗಳ ಬಗ್ಗೆ ನಿಖರ ಮಾಹಿತಿ ಸಿಗಲಿದೆ ಎಂಬ ಉದ್ದೇಶದಿಂದ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅನ್ನು ಜಾರಿಗೆ ತಂದಿದೆ. ಈಗಾಗಲೇ ಈ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಲಾಗಿದೆ. ಮಾಹಿತಿಯನ್ನೂ ನೀಡಲಾಗಿದೆ. ಆದರೂ ಸಾರ್ವಜನಿಕರು ನಂಬರ್ ಪ್ಲೇಟ್ ಅಳವಡಿಕೆಗೆ ನಿರಾಸಕ್ತಿ ತೋರುತ್ತಿದ್ದಾರೆ. ಹೀಗಾಗಿ ದಂಡ ವಿಧಿಸಲು ಸರ್ಕಾರ ಮುಂದಾಗಿದೆ. ನಾವು ಕೂಡಾ ದಂಡ ಹಾಕುತ್ತೇವೆ. ಜೊತೆಗೆ ಟ್ರಾಫಿಕ್ ಪೊಲೀಸರೂ ಸಹ ಇದಕ್ಕೆ ದಂಡ ಹಾಕುತ್ತಾರೆ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
HSRP Mandatory In Karnataka Kannada Today
Bengaluru: The government has prepared to impose a fine of Rs 500 on vehicles not fitted with HSRP number plates. In the past, the government and the court had been extending the deadline for number plate installation. Now the deadline is September 16. There is only one week remaining for the dead line given by the government.
The deadline given by the government for implementation of HSRP number plates will end on September 15. There are 2 crore vehicles in the state, so far only 51 lakh vehicles have been fitted with HSRP numbers. Still 1.49 crore vehicles have not been fitted with HSRP. That is why the government has now decided to speed up the implementation of number plates by imposing fines. A fine of Rs 500 will be imposed for the first time and Rs 1,000 for the second time, the transport department said.
The central government has implemented the HSRP number plate with the intention that if there is a single type of number plate across the country, accurate information about criminal acts will be available. A lot of awareness has already been created about this. Information is also provided. However, the public seems apathetic towards the introduction of number plates. Therefore, the government has decided to impose fines. We also impose fines. The officials of the transport department said that the traffic police will also fine them.