- ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿ ಮೇಲೆ ಅ*ಚಾರ ಯತ್ನ, ಕೊ*
- ಅ*ಚಾರ ಮತ್ತು ಕೊ*ಆರೋಪಿ ರಿತೇಶ್ ಕುಮಾರ್ ಎನ್ಕೌಂಟರ್ (Hubli horrific case)
- ಆರೋಪಿ ಎನ್ಕೌಂಟರ್ ಮಾಡಿದ ಮಹಿಳಾ ಪೊಲೀಸ್ ಅಧಿಕಾರಿ ಅನ್ನಪೂರ್ಣ
Hubballi : ರಾಜ್ಯದಲ್ಲಿ ಹೆಣ್ಣುಮಕ್ಕಳ (Girls in the state) ಮೇಲಿನ ಪೈಶಾಚಿಕ ಕೃತ್ಯಗಳು ನಿಲ್ಲುತ್ತಿಲ್ಲ. ಹುಬ್ಬಳ್ಳಿಯಲ್ಲಿ (Hubballi) ನಾಗರಿಕ ಸಮಾಜ ತಲೆತಗ್ಗಿಸುವಂತಹ ಭೀಕರ ಘಟನೆ (Terrible incident) ನಡೆದಿದೆ. ಹುಬ್ಬಳ್ಳಿಯ ಅಧ್ಯಾಪಕ್ ನಗರದಲ್ಲಿ ಐದು ವರ್ಷದ ಬಾಲಕಿಯ (Five-year-old girl) ಶವ ಶೌಚಾಲಯದೊಳಗೆ ಪತ್ತೆಯಾಗಿರುವ ಆಘಾತಕಾರಿ ಘಟನೆ (Shocking incident) ನಡೆದಿದೆ.5 ವರ್ಷದ ಬಾಲಕಿಯ ಮೇಲೆ ಅ*ಚಾರ ಯತ್ನ ಮತ್ತು ಕೊ* ಮಾಡಲಾಗಿದೆ.
ಇನ್ನು ಕೊ* ಮಾಡಿದ ಕೆಲವೇ ಕೆಲವು ಗಂಟೆಗಳಲ್ಲಿ ಆರೋಪಿ (Accused) ಪೊಲೀಸ್ ಗುಂಡೇಟಿಗೆ (Gun Short) ಬ*ಯಾಗಿದ್ದಾನೆ. ಆರೋಪಿ ಬಿಹಾರ (Bihar) ಮೂಲದ ರಿತೇಶ್ ಕುಮಾರ್ ಪೊಲೀಸ್ ಗುಂಡೇಟಿಗೆ ಸಾ*ನ್ನಪ್ಪಿದ್ದಾನೆ. ಬಾಲಕಿ ಕೊ* ಪ್ರಕರಣದಲ್ಲಿ ಎಸ್ಕೇಪ್ ಆಗಿದ್ದ ಬಿಹಾರಿಯನ್ನು ಹಿಡಿಯಲು ಹೋದಾಗ ಪೊಲೀಸರ ಮೇಲೆನೇ ಆರೋಪಿ ಹ* ಮಾಡಿದ್ದಾನೆ. ಘಟನೆಯಲ್ಲಿ ಓರ್ವ ಪಿಎಸ್ಐ (PSI) , ಇಬ್ಬರೂ ಸಿಬ್ಬಂದಿಗಳಿಗೆ ಗಾಯಗಳಾಗಿವೆ.
ಆರೋಪಿಯನ್ನು ಹಿಡಿಯಲು ಹೋದಾಗ ಪೊಲೀಸರ ಮೇಲೆನೆ (Police) ಹ* ಮಾಡಿ ಎಸ್ಕೇಪ್ (Escape) ಆಗಲು ಪ್ರಯತ್ನ ನಡೆದಿದೆ. ಹೀಗಾಗಿ ಆತ್ಮರಕ್ಷಣೆಗಾಗಿ ಬಾಲಕಿ ಹಂತಕನ (Girl killer) ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಬಳಿಕ ಆತ ಸಾವನ್ನಪ್ಪಿದ್ದಾನೆಂದು ತಿಳಿದು ಬಂದಿದೆ. ಹಲ್ಲೆಗೊಳಗಾದ ಪೊಲೀಸರನ್ನು ಕೀಮ್ಸ್ ಆಸ್ಪತ್ರೆಗೆ (Kim’s Hospital) ರವಾನೆ ಮಾಡಿ ಚಿಕಿತ್ಸೆ (Treatment) ಕೊಡಿಸಲಾಗುತ್ತಿದೆ.ವ್ಯಕ್ತಿಯೋರ್ವ ಬಾಲಕಿಯನ್ನು ಶೆಡ್ಗೆ ಕರೆದುಕೊಂಡು ಹೋಗಿ ಅ*ಚಾರಕ್ಕೆ ಯತ್ನಿಸಿದಾಗ ಬಾಲಕಿ (Girl) ಕೂಗಾಡಿದ್ದಾಳೆ.

ಆಗ ಸ್ಥಳೀಯರು ಶೆಡ್ನತ್ತ ಧಾವಿಸಿದ್ದಾರೆ. ಸ್ಥಳೀಯರು ಧಾವಿಸುತ್ತಿದ್ದಂತೆ ಭಯಬಿದ್ದ ಆರೋಪಿ ಬಾಲಕಿ ಕತ್ತು ಹಿಸುಕಿ ಕೊ* ಮಾಡಿ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಅಶೋಕನಗರ ಠಾಣೆ ಪೊಲೀಸರು (Station Police) ಆರೋಪಿ ಪತ್ತೆಗೆ ಬಲೆ ಬೀಸಿದ್ದರು.
ಅಲ್ಲದೆ ಆರೋಪಿ (Accused) ಬಂಧನಕ್ಕಾಗಿ ಆಗ್ರಹಿಸಿ ಪೊಲೀಸ್ ಠಾಣೆಯ ಮುಂದೆ ಸ್ಥಳೀಯರು ಪ್ರತಿಭಟನೆ (Locals protest) ನಡೆಸಿದ್ದರು. ಕೊಲೆಗಡುಕನ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಕೊ*ಗಡುಕನಿಗೆ ಗಲ್ಲು ಶಿಕ್ಷೆ ವಿಧಿಸಿ (Punish) , ಎನ್ಕೌಂಟರ್ (Encounter) ಮಾಡಿ ಅಥವಾ ನಮ್ಮ ಕೈಗೆ ನೀಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಮನೆ ಮುಂದೆ ಆಟ ಆಡುತ್ತಿದ್ದ ಪುಟ್ಟ ಬಾಲಕಿಯನ್ನು ಕಾಮುಕ ಎತ್ತಿಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲೂ (CCTV) ಸೆರೆಯಾಗಿದೆ. ಇನ್ನು ಘಟನೆಯ ಬಗ್ಗೆ ಇಂಚಿಂಚೂ ಮಾಹಿತಿ ನೀಡಿರುವ ಹುಬ್ಬಳ್ಳಿ-ಧಾರವಾಡ ಪೊಲೀಸ್ (Hubbali-Dharwad Police) ಆಯುಕ್ತ ಎನ್. ಶಶಿಕುಮಾರ್ (N. Shashikumar) , ಬಾಲಕಿ ಅತ್ಯಾಚಾರ ಯತ್ನ ಮತ್ತು ಕೊ* (Hubli horrific case) ಆರೋಪಿ ರಿತೇಶ್ ಕುಮಾರ್ (Ritesh Kumar) ಎನ್ಕೌಂಟರ್ ಹೇಗಾಯಿತು ಎಂಬುದನ್ನು ವಿವರಿಸಿದ್ದಾರೆ.