ನಮ್ಮ ದೇಶದಲ್ಲಿ ದಿನೇ ದಿನೇ ಸೈಬರ್ ಕ್ರೈಮ್ (Cybercrime) ಹೆಚ್ಚುತ್ತಲೇ ಇದೆ. ಅದು ಹೊಸ ಹೊಸ ರೂಪದಲ್ಲಿ ಪ್ರತಿನಿತ್ಯ ಕೊಟ್ಯಾಂತರ ರೂಪಾಯಿ ( Crores of rupees) ದೋಚುತ್ತಿದೆ. ಈಗ ಈ ಭಯಾನಕ ಜಾಲದ ಮತ್ತೊಂದು ಕರಾಳ ರೂಪ ಬಯಲಾಗಿದೆ. ಅದೇನು ಗೊತ್ತಾ? ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಕೋಟಿಗಟ್ಟಲೆ ಲಾಭ ಮಾಡಿಕೊಡುತ್ತೇವೆ ಎಂದು ಫೇಸ್ ಬುಕ್ ಮೂಲಕ ಲಿಂಕ್ ಕಳುಹಿಸಿ ವಾಟ್ಸ್ಆ್ಯಪ್ ಗ್ರೂಪ್ಗಳ ಮೂಲಕ ತಮ್ಮ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಲು ಹೇಳಿ ಹಣ ಪೀಕುತ್ತಿರುವ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ.
ಷೇರು ಮಾರುಕಟ್ಟೆಯಲ್ಲಿ (stock market) ಹೂಡಿಕೆ ಮಾಡಿದರೆ ಉತ್ತಮ ರಿಟರ್ನ್ ನೀಡುವ ಭರವಸೆಯೊಂದಿಗೆ ವಾಟ್ಸ್ಆ್ಯಪ್ ಗ್ರೂಪ್ಗಳ ಮೂಲಕ ಸೈಬರ್ ವಂಚಕರು (Cyber fraudsters) ಈಗಾಗಲೇ ಹಲವಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದಾರೆ. ಐಸಿಐಸಿಐ ಬ್ಯಾಂಕ್ ಡೈರೆಕ್ಟ್ ಎಂದು ಹೇಳಿಕೊಂಡು ಡಿಮ್ಯಾಟ್ ಖಾತೆ ಇಲ್ಲದಿದ್ದರೂ ಮೊಬೈಲ್ ಬ್ಯಾಂಕಿಂಗ್ ಮೂಲಕವೇ ಹಣ ಹಾಕಲು ಹೇಳಿ ವಂಚಿಸುವ ಬಹು ದೊಡ್ದ ಜಾಲವಿದೆ.
ದೋಚುತ್ತಿದೆ. ಈಗ ಈ ಭಯಾನಕ ಜಾಲದ ಮತ್ತೊಂದು ಕರಾಳ ರೂಪ (dark form) ಬಯಲಾಗಿದೆ. ಅದೇನು ಗೊತ್ತಾ? ಷೇರು ಮಾರುಕಟ್ಟೆಯಲ್ಲಿ (Share Market) ಹೂಡಿಕೆ ಮಾಡಿ ಕೋಟಿಗಟ್ಟಲೆ ಲಾಭ ಮಾಡಿಕೊಡುತ್ತೇವೆ ಎಂದು ಫೇಸ್ ಬುಕ್ ಮೂಲಕ ಲಿಂಕ್ ಕಳುಹಿಸಿ ವಾಟ್ಸ್ಆ್ಯಪ್ ಗ್ರೂಪ್ಗಳ ಮೂಲಕ ತಮ್ಮ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಲು ಹೇಳಿ ಹಣ ಪೀಕುತ್ತಿರುವ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ.
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಉತ್ತಮ ರಿಟರ್ನ್(good return) ನೀಡುವ ಭರವಸೆಯೊಂದಿಗೆ ವಾಟ್ಸ್ಆ್ಯಪ್ ಗ್ರೂಪ್ಗಳ ಮೂಲಕ ಸೈಬರ್ ವಂಚಕರು ಈಗಾಗಲೇ ಹಲವಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದಾರೆ. ಐಸಿಐಸಿಐ ಬ್ಯಾಂಕ್ (ICICI Bank) ಡೈರೆಕ್ಟ್ ಎಂದು ಹೇಳಿಕೊಂಡು ಡಿಮ್ಯಾಟ್ ಖಾತೆ ಇಲ್ಲದಿದ್ದರೂ ಮೊಬೈಲ್ ಬ್ಯಾಂಕಿಂಗ್ ಮೂಲಕವೇ ಹಣ ಹಾಕಲು ಹೇಳಿ ವಂಚಿಸುವ ಬಹು ದೊಡ್ದ ಜಾಲವಿದೆ.
ಬೆಂಗಳೂರಿನ ನಿವಾಸಿ ಭಾಗ್ಯಲಕ್ಷ್ಮಿ ಹೆಸರು ಬದಲಿಸಲಾಗಿದೆ ಅವರಿಗೆ ಫೇಸ್ಬುಕ್ ಮೂಲಕ ಬಂದ ಒಂದು ಲಿಂಕ್ 5 ಲಕ್ಷ ರೂಪಾಯಿ ಹಣ ಕಳೆದುಕೊಳ್ಳುವಂತೆ ಮಾಡಿದೆ. ಹೌದು ಇತ್ತೀಚಿನ ದಿನಗಳಲ್ಲಿ ಅತಿ ಸುಲಭವಾಗಿ ಕಡಿಮೆ ಸಮಯದಲ್ಲಿ ಹಣಗಳಿಸುವ ಮಾರ್ಗಗಳಲ್ಲಿ ಟ್ರೇಡಿಂಗ್ (Trading) ಕೂಡಾ ಒಂದು. ಹಾಗಾಗಿ ಷೇರು ಮಾರುಕಟ್ಟೆಯಲ್ಲಿ ಕೋಟಿಗಟ್ಟಲೆ ಸಂಪಾದನೆ ಮಾಡಿರುವ ಬಗ್ಗೆ ಸುಳ್ಳು ಸಂದೇಶಗಳನ್ನು ಕಳುಹಿಸಿ ನಮ್ಮ ವಾಟ್ಸಾಪ್ ಗ್ರೂಪ್ಗೆ ಸೇರಲು ಹೇಳಿ ಹಣದ ಆಮಿಷ ಒಡ್ಡುತ್ತಾರೆ. ಆಸೆಗೆ ಬಿದ್ದು ಅಮಾಯಕರು ಅವರ ವಾಟ್ಸಾಪ್ ಗ್ರೂಪ್ ಗೆ ಸೇರಿ ಹಣವನ್ನು ಹೂಡಿಕೆ ಮಾಡುತ್ತಾರೆ.
ಅದರಂತೆ ಹೌಸ್ ವೈಫ್ ಆಗಿರುವ ಭಾಗ್ಯಲಕ್ಷ್ಮಿ ಅವರು ಕೂಡ ತಾವು ಕೂಡಿಟ್ಟ ಹಣವನ್ನು ಹೆಚ್ಚು ಮಾಡಿಕೊಳ್ಳುವ ಆಸೆಯಿಂದ ಅವರು ಹೇಳಿರುವ ICICI stock marketing app ಸೇರಿದ್ದಾರೆ. ನಂತರದಲ್ಲಿ ICICI Bank Manager ರಾಜೇಶ್ ಎಂದು ಹೇಳಿದ ವಂಚಕ ಅವರನ್ನು VIP service group ಎನ್ನುವ ಗ್ರೂಪ್ ಒಂದಕ್ಕೆ ಸೇರಿಸಿ ಹೆಚ್ಚು ಹಣ ಹೂಡಿಕೆ ಮಾಡಿದರೆ ಹೆಚ್ಚು ಹಣ ಸಿಗುತ್ತದೆ ಎಂದು ಆಸೆ ಹುಟ್ಟಿಸಿ ಏಪ್ರಿಲ್ 12 ರಿಂದ 30ನೆಯ ದಿನಾಂಕದ ಒಳಗೆ ಹಂತ ಹಂತವಾಗಿ ಒಟ್ಟೂ 5 ಲಕ್ಷ ರೂಪಾಯಿಯ ತನಕ ಹಣವನ್ನು ಟ್ರಾನ್ಸ್ಫರ್ ಮಾಡಿಸಿಕೊಂಡಿದ್ದಾನೆ. ಅದೂ ಬೇರೆ ಬೇರೆ ಹೆಸರಲ್ಲಿ ರಿಜಿಸ್ಟರ್ ಆಗಿರುವ ಖಾತೆಗಳಿಗೆ. ನಂತರದಲ್ಲಿ ಕರೀನಾ ಎನ್ನುವ ನಮ್ಮ ಅಸಿಸ್ಟೆಂಟ್ ನಿಮಗೆ ಗೈಡ್ ಮಾಡುತ್ತಾಳೆ ಎಂದು ಬಣ್ಣ ಬಣ್ಣದ ಮಾತನಾಡಿದ್ದಾನೆ. ಮೊದಮೊದಲು ಆವರ ಮಾತನ್ನು ನಂಬಿದ ಭಾಗ್ಯಲಕ್ಷ್ಮಿ ಹಣವನ್ನು ಹೂಡಿಕೆ ಮಾಡಿದ್ದಾರೆ. ಆದರೆ truecall ಅಲ್ಲಿ ಹೆಸರುಗಳ ಪರಿಶೀಲಿಸಿದಾಗ ಆ ನಂಬರ್ ಆಕ್ಟಿವ್ ಆಗಿಲ್ಲ ಎಂದು ತಿಳಿದಾಗ ತಾವು ಟ್ರಾನ್ಸ್ಫರ್ ಮಾಡಿದ್ದ ಖಾತೆಗಳನ್ನು ಪರಿಶೀಲಿಸಿದಾಗ ಸತ್ಯ ಬಯಲಾಗಿದೆ.
ಹಾಗಾಗಿ ತಮ್ಮ ಹಣವನ್ನು ವಿಥ್ ಡ್ರಾ (Withdraw) ಮಾಡಲು ನೋಡಿದ್ದಾರೆ ಆದರೆ ಅದು ಕೂಡ ಸಾಧ್ಯವಾಗಿಲ್ಲ. ಕೂಡಲೇ ಇನ್ನಷ್ಟು ಮಾಹಿತಿ ತಿಳಿಯಲು ಹುಡುಕಾಡಿದಾಗ ತಾವು ಈ stock marketing ಹೆಸರಲ್ಲಿ ಮೋಸಹೋದದ್ದು ತಿಳಿದುಬಂದಿದೆ. ಅದಾಗಲೇ ಅವರು ಹಣಕಳಿಸಿದ್ದ ಆ ವಾಟ್ಸಪ್ ಗ್ರೂಪ್ ಕೂಡಾ inactive ಆಗಿದ್ದ ಕಾರಣ ಅವರು ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ. ತಾವು ಬೇಗನೆ ಹೆಚ್ಚು ಹಣ ಸಂಪಾದಿಸಬಹುದು ಅದರಲ್ಲೂ ಈಗಾಗಲೇ ಹೆಸರು ಮಾಡಿರುವ ICICI Bank stock ಎಂದುಕೊಂಡಿದ್ದ ಅವರಿಗೆ ಬಹುದೊಡ್ಡ ಆಘಾತವಾಗಿದೆ.