Madhya Pradesh : ಮನುಷ್ಯರಾಗಲಿ ಅಥವಾ (Human face Goat) ಪ್ರಾಣಿಗಳಾಗಲಿ ರೋಗಗಳು ಬರುವುದು ಸರ್ವೇ ಸಾಮಾನ್ಯ. ಹಲವಾರು ಬಾರಿ, ಕೆಲವು ಗಂಭೀರ ಕಾಯಿಲೆ ಅಥವಾ ಸಮಸ್ಯೆಯಿಂದಾಗಿ ವಿಚಿತ್ರವಾದ ರೋಗಗಳು ಮಾನವರ ಅಥವಾ ಪ್ರಾಣಿಗಳನ್ನು ಬಾಧಿಸುತ್ತವೆ.

ಇಂತಹ ಕೆಲವು ಅಪರೂಪದ ಕಾಯಿಲೆಗಳು, ದೇಹದ ಆಕಾರವನ್ನೇ ಸಂಪೂರ್ಣವಾಗಿ (Human face Goat) ಬದಲಾಯಿಸುವುದೂ ಉಂಟು. ಅನೇಕರು ಇದನ್ನು ಪವಾಡವೆಂದೂ ಪರಿಗಣಿಸುತ್ತಾರೆ.
ಅದೇ ರೀತಿ, ಮಧ್ಯಪ್ರದೇಶದ ಹಳ್ಳಿಯೊಂದು ಇಂತಹ ವಿಚಿತ್ರ(weird) ಘಟನೆಗೆ ಸಾಕ್ಷಿಯಾಗಿದೆ. ಈ ಹಳ್ಳಿಯಲ್ಲಿ, ಮೇಕೆಯೊಂದು ಮಾನವನ ಮುಖವನ್ನು ಹೋಲುವ ಮರಿಗೆ ಜನ್ಮ ನೀಡಿದೆ.
ವರದಿಗಳ ಪ್ರಕಾರ, ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಸಿರೊಂಜ್ ತಹಸಿಲ್‌ನ ಸೆಮಲ್ ಖೇಡಿ ಎನ್ನುವ ಗ್ರಾಮದಲ್ಲಿ ಈ ಅಚ್ಚರಿಯ ಘಟನೆ ನಡೆದಿದೆ.
ಈ ಗ್ರಾಮದ ನಿವಾಸಿ ನವಾಬ್ ಖಾನ್ ಎನ್ನುವವರ ಮನೆಯಲ್ಲಿ, ಮುದ್ದಿನ ಮೇಕೆಯು ಮರಿಯೊಂದಕ್ಕೆ ಜನ್ಮ ನೀಡಿದ್ದು, ಅದರ ಮುಖ ಥೇಟ್ ಮನುಷ್ಯರಂತಿದೆ.
ಇದನ್ನೂ ಓದಿ : https://vijayatimes.com/2-marriage-law-in-africa/
ಈ ಘಟನೆಯಿಂದ, ಕೇವಲ ಗ್ರಾಮದ ಜನರಷ್ಟೇ ಅಲ್ಲದೇ ಇಡೀ ತಹಸೀಲ್‌ನ ನಾಗರೀಕರೇ ಅಚ್ಚರಿಗೊಂಡಿದ್ದಾರೆ.
ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ (Social media) ವೈರಲ್ (Viral) ಆಗಿರುವ ಫೋಟೋ ಮತ್ತು ವಿಡಿಯೋಗಳಲ್ಲಿ ಮೇಕೆಯ ಮುಖವು ಬಹಳನೇ ವಿಚಿತ್ರವಾಗಿದೆ.
ಇದರ ಎರಡು ಕಣ್ಣುಗಳು ಮನುಷ್ಯರ ರೀತಿ ಒಂದರ ಹತ್ತಿರ ಮತ್ತೊಂದಿದ್ದು, ಕಣ್ಣಿನ ಸುತ್ತಲೂ ಕಪ್ಪು ವೃತ್ತವಿದೆ. ಇದು ಒಂದು ರೀತಿ ಕನ್ನಡಕ ತೊಡಿಸಿದಂತೆ ಕಾಣುತ್ತದೆ.ಅಲ್ಲದೇ,
ಮೇಕೆಯ ಬಾಯಿಯೂ ಮಾನವರಂತೆಯೇ ಇದೆ, ಹಾಗೇ ತಲೆಯ ಮೇಲೆ ಸಾಕಷ್ಟು ಬಿಳಿ ಬಣ್ಣದ ಕೂದಲುಗಳಿವೆ.
ಮೇಕೆಯ ಈ ವಿಚಿತ್ರ ಆಕಾರದ ಕಾರಣದಿಂದಾಗಿ, ಇದಕ್ಕೆ ಸಿರಿಂಜ್‌ನಿಂದಲೇ ಹಾಲು ಕುಡಿಸಬೇಕಾಗಿದೆ. ಮೇಕೆಯ ಮುಖವು ಯಾವುದೋ ಅಸ್ವಸ್ಥತೆಯಿಂದಾಗಿ ಹೀಗಾಗಿರಬಹುದು ಎಂದು ಅಂದಾಜಿಸಲಾಗಿದೆ, ಆದರೆ ಜನ ಮಾತ್ರ ಇದನ್ನು ಪವಾಡ ಎಂದೇ ಪರಿಗಣಿಸುತ್ತಿದ್ದಾರೆ.
ಈ ಮೇಕೆಮರಿಯನ್ನು ನೋಡಲು ದೂರದ ಊರುಗಳಿಂದ ಬರುತ್ತಿದ್ದಾರೆ. ಆದರೆ ಮೇಕೆಗೆ ಇಂತಹ ಮುಖವಿರುವುದು ಏಕೆ ಎನ್ನುವುದಕ್ಕೆ ಕಾರಣ ಕೊಡುವ ವೈದ್ಯರು,
ಮೇಕೆಗೆ ಎದುರಾಗಿರುವ ಸಮಸ್ಯೆಯನ್ನು ‘ಹೆಡ್ ಡಿಸ್ಪೆಪ್ಸಿಯಾ’ ಎಂದು ಹೆಸರಿಸಿದ್ದಾರೆ. ಪಶುವೈದ್ಯ ಮಾನವ್ ಸಿಂಗ್ ಹೇಳುವ ಪ್ರಕಾರ,

50,000 ದಲ್ಲಿ ಕೇವಲ ಒಂದು ಪ್ರಾಣಿ ಮಾತ್ರ ಈ ರೋಗದಿಂದ ಬಳಲುತ್ತದೆ. ಇದು ಸಾಮಾನ್ಯವಾಗಿ ಹಸು ಹಾಗೂ ಎಮ್ಮೆಗಳಲ್ಲಿ ಕಂಡು ಬರುತ್ತದೆ, ಮೇಕೆಗಳಲ್ಲಿ ಕಂಡುಬರುವುದಿಲ್ಲ. ಅಪರೂಪದ ಈ ಸ್ಥಿತಿಯಲ್ಲಿ ಪ್ರಾಣಿಯ ತಲೆ ಊದಿಕೊಳ್ಳುವುದು ಸಾಮಾನ್ಯ ಎಂದು ವೈದ್ಯರು ಹೇಳಿದರು.
ಇದನ್ನೂ ಓದಿ : https://vijayatimes.com/5-years-rigorous-imprisonment/