• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜ್ಯ

ಧರ್ಮ**ದ ಬಂಗ್ಲಗುಡ್ಡದ ಮೂಳೆ ರಹಸ್ಯ? ದಟ್ಟ ಅರಣ್ಯದಲ್ಲಿ SIT ತಂಡಕ್ಕೆ ಸಿಕ್ತು ಸ್ಫೋಟಕ ಸಾಕ್ಷಿ

Shwetha Mohan by Shwetha Mohan
in ರಾಜ್ಯ, ವಿಜಯ ಟೈಮ್ಸ್‌
ಧರ್ಮ**ದ ಬಂಗ್ಲಗುಡ್ಡದ ಮೂಳೆ ರಹಸ್ಯ? ದಟ್ಟ ಅರಣ್ಯದಲ್ಲಿ SIT ತಂಡಕ್ಕೆ ಸಿಕ್ತು ಸ್ಫೋಟಕ ಸಾಕ್ಷಿ
0
SHARES
25
VIEWS
Share on FacebookShare on Twitter
  • ಬಂಗ್ಲಗುಡ್ಡದಲ್ಲಿ SIT ತಂಡಕ್ಕೆ ಸಿಕ್ತು ಸ್ಫೋಟಕ ಸಾಕ್ಷಿ
  • ದಟ್ಟ ಅರಣ್ಯದಲ್ಲಿ ರಾಶಿ ರಾಶಿ ಮೂಳೆ ಪತ್ತೆ
  • ದೂರುದಾರ ಗುರುತಿಸದ ಜಾಗದಲ್ಲಿ ಮಾನವನ ಅಸ್ಥಿಪಂಜರ ಪತ್ತೆ
  • ನೂರಕ್ಕೂ ಹೆಚ್ಚು ಮೂಳೆಗಳ ಪೀಸ್ ಪತ್ತೆ, SIT ಮುಂದಿನ ಹೆಜ್ಜೆ ಏನು?

Dharmasthala: ಧರ್ಮ**ದಲ್ಲಿ ಶ* ಹೂತಿಟ್ಟ ಪ್ರಕರಣದಲ್ಲಿ SIT ತಂಡ ಇಂದು 7 ನೇ ದಿನದ ಉತ್ಖನನ ಕಾರ್ಯ ಮುಂದುವರೆಸಿದೆ.

ನಿನ್ನೆ ಬಂಗ್ಲಗುಡ್ಡದಲ್ಲಿ SIT ಗೆ ಸ್ಫೋಟಕ ಸಾಕ್ಷಿ ಲಭ್ಯವಾಗಿದೆ. ದಟ್ಟ ಅರಣ್ಯದಲ್ಲಿ ಮಾನವನ ಅಸ್ಥಿಪಂಜರ, ರಾಶಿ ರಾಶಿ ಮೂಳೆಗಳು ಪತ್ತೆಯಾಗಿದೆ.

ಧರ್ಮ** ದಲ್ಲಿ ಶ*ಕ್ಕಾಗಿ ಉತ್ಖನನ ಪ್ರಾರಂಭ ಆಗಿ ಇವತ್ತು ಏಳನೇ ದಿನ. ನಿನ್ನೆ SIT ತಂಡಕ್ಕೆ ಸ್ಪೋಟಕ ಸಾಕ್ಷಿಯೇ ಸಿಕ್ಕಿದೆ.

SIT ಗೆ ದೂರುದಾರ ಗುರುತಿಸಿದ 6 ನೇ ಪಾಯಿಂಟ್‌ನಲ್ಲಿ ಒಂದಷ್ಟು ಮಾನವ ಅವಶೇಷಗಳು ಸಿಕ್ರೆ, ನಿನ್ನೆ ದೂರುದಾರ ಗುರುತಿಸದೆ ಇರುವ ಜಾಗದಲ್ಲಿ

ಅಂದ್ರೆ ಬಂಗ್ಲಗುಡ್ಡದ ಅರಣ್ಯಭಾಗದಲ್ಲಿ ಒಂದಷ್ಟು ಪುಡಿ ಪುಡಿ ಮೂಳೆಗಳು, ಅಸ್ಥಿಪಂಜರ ಪತ್ತೆಯಾಗಿದೆ. ಇಂದು SIT ಕಾರ್ಯಾಚರಣೆ 7 ದಿನಕ್ಕೆ ಕಾಲಿಟ್ಟಿದ್ದು, ಇಂದು ಯಾವುದೇ ಅವಶೇಷ ಲಭ್ಯವಾಗಿಲ್ಲ.

ಹೌದು ನಿನ್ನೆ 11 ನೇ ಸ್ಥಳ ಬಿಟ್ಟು ಬಂಗ್ಲ ಗುಡ್ಡದ ಬಳಿ SIT ತಂಡವನ್ನ ಕರೆದುಕೊಂಡು ಹೋಗಿದ್ದ. ಆದ್ರೆ ಅತ್ತ ಸಾಗುವ ಅರಣ್ಯದ ಮಧ್ಯಭಾಗದಲ್ಲಿಯೇ ಪುರುಷನ ಇಡೀ ದೇಹದ ಅಸ್ಥಿಪಂಜರ ಪತ್ತೆಯಾಗಿದೆ.

ಇದು 1.5 ವರ್ಷದ ಹಿಂದೆ ಪುರುಷ ಆತ್ಮಹ* ಮಾಡಿಕೊಂಡಿರುವ ವ್ಯಕ್ತಿಯ ಅಸ್ಥಿಪಂಜರ ಎಂದು ಶಂಸಿಸಲಾಗಿದೆ.

Human skeleton found at a location
The mystery of the Banglagudda bone
ಈ ಅಸ್ಥಿಪಂಜರ ಸಿಕ್ಕ ಆಸುಪಾಸಿನಲ್ಲಿಯೇ SIT ತಂಡಕ್ಕೆ ಆತ ಆತ್ಮಹ*ಗೆ ಬಳಸಿದ್ದ ಕೆಂಪು ಸೀರೆ ಹಾಗೂ ಮಣ್ಣಿನಡಿಯಲ್ಲಿ ಆತನ ಬಟ್ಟೆ ಪತ್ತೆಯಾಗಿದೆ.

ಇನ್ನು ಇಂದು SIT ತಂಡ 11 ನೇ ಸ್ಥಳದಲ್ಲಿ ಉತ್ಖನನ ಸಂಪೂರ್ಣವಾಗಿದೆ. 3 ಅಡಿ ಅಗೆದರೂ ಕೂಡ ಯಾವುದೇ ಅವಶೇಷ ಪತ್ತೆಯಾಗಿಲ್ಲ.

ಬಂಗ್ಲಗುಡ್ಡದಲ್ಲಿ ಮತ್ತಷ್ಟು ಸಾಕ್ಷಿಯ ಜಾಡು ಹಿಡಿದು ಹೊರಟ SIT ತಂಡಕ್ಕೆ ಸ್ಫೋಟಕ ಸಾಕ್ಷಿಯೇ ಲಭ್ಯವಾಗಿದೆ. ಬಂಗ್ಲಗುಡ್ಡದಲ್ಲಿ ಹಾನಿಯಾಗದ ತಲೆಬುರುಡೆ,

1 ಬೆನ್ನುಮೂಳೆ, ನೂರಕ್ಕೂ ಹೆಚ್ಚು ಮೂಳೆಗಳ ಪೀಸ್‌ಗಳು ಪತ್ತೆಯಾಗಿದೆ.

ಈ ಅವಶೇಷಗಳನ್ನೆಲ್ಲಾ SIT ತಂಡ ಮಣಿಪಾಲ ಕೆಎಂಸಿ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ. ಇನ್ನೂ ದೂರುದಾರ ಗುರುತಿಸದೆ ಸಿಕ್ಕ ಈ ಅವಶೇಷಗಳ ಸ್ಥಳವನ್ನ SIT ತಂಡ ಪಾಯಿಂಟ್‌ ನಂಬರ್‌ 14 ಎಂದು ಗುರುತಿಸಿದೆ.

ಈ ಎಲ್ಲಾ ಅವಶೇಷಗಳನ್ನ ಸದ್ಯ ಉಡುಪಿಯ KMC ಆಸ್ಪತ್ರೆಯ ಪ್ರಯೋಗಾಲಯಕ್ಕೆ ರವಾನಿಸಲಾಗಿದ್ದು, FSL ತಜ್ಞರು ಪರೀಕ್ಷೆ ನಡೆಸುತ್ತಿದ್ದಾರೆ. ಇನ್ನೂ ನಿನ್ನೆ 3 ಅಸ್ಥಿಪಂಜರ ಸಿಕ್ಕಿದೆ, ಅದ್ರಲ್ಲಿ ಒಂದು ಮಹಿಳೆಯದ್ದು ಎನ್ನುವ ಚರ್ಚೆ ಕೂಡ ಕೇಳಿ ಬರ್ತಿದೆ.

ದೂರುದಾರ ಗುರುತಿಸಿದ ಸ್ಥಳಗಳಲ್ಲಿ 6ನೆ ಪಾಯಿಂಟ್‌ನಲ್ಲಿ ಮಾತ್ರ ಅವಶೇಷ, ಅಸ್ಥಿಪಂಜರ ಪತ್ತೆಯಾಗಿತ್ತು. ಪರಿಸರ ಬದಲಾವಣೆಯಿಂದ ಅಸ್ಥಿಪಂಜರಗಳು ಭೂಮಿಯಲ್ಲಿ ಬೇರೆಡೆಗೆ ಹೋಗಿರಬಹುದು.

ಇದೇ ಕಾರಣದಿಂದ ಬಹುಶಃ ದೂರುದಾರ ತಾನು ಗುರುತಿಸಿದ ಸ್ಥಳ ಹೊರತು ಪಡಿಸಿ ಬೇರೆಡೆಗೆ SITಯನ್ನ ಕರೆದೊಯ್ದಿರಬಹುದು.

ದೂರುದಾರನಿಗೆ ಸಂಪೂರ್ಣ ಬೆಂಬಲ ನೀಡುತ್ತಿರುವ SIT ತಂಡ ಇದೀಗ ತಗ್ಗು ಪ್ರದೇಶಗಳನ್ನ ಹೊರತುಪಡಿಸಿ ಎತ್ತರದ ಪ್ರದೇಶಗಳಲ್ಲೇ ಉತ್ಖನನ ನಡೆಸಲು ಮುಂದಾಗಿದೆ.

ಮತ್ತೊಂದು ಕಡೆ ಎಸಿ ಸ್ಟೆಲ್ಲಾ ಹಾಗೂ SIT ನಡುವೆ ಏನೂ ಸರಿ ಇಲ್ವಾ ಎನ್ನುವ ಅನುಮಾನ ಶುರುವಾಗಿದೆ. ಯಾಕಂದರೆ SIT ತಂಡಕ್ಕೆ ಅವಕಾಶ ಇದ್ದಿದ್ದು 13 ಪಾಯಿಂಟ್‌ನಲ್ಲಿ ಮಾತ್ರ ಸ್ಥಳ ಮಹಜರು ಮಾಡಲು,

ಆದ್ರೆ ದಿಢೀರ್‌ ಅಂತಾ SIT ತಂಡ ಯಾರದ್ದೂ ಪರ್ಮಿಶನ್‌ ಪಡೆಯದೆ ದೂರುದಾರನ ಜೊತೆ ಬೇರೆ ಸ್ಥಳಕ್ಕೆ ತೆರಳಿದ್ದಾರೆ.

ಇವರಿಗೆ ಅವಕಾಶ ಕೊಟ್ಟಿದ್ದು ಯಾರು, ಪರ್ಮಿಶನ್‌ ಇಲ್ಲದೆ ಹಾಗೆ ಹೋಗಬಹುದಾ ಅಂತಾ ಅನೇಕರು ಪ್ರಶ್ನಿಸಿದ್ದಾರೆ.

ಇಲ್ಲಿ ಕಾಡುತ್ತಿರುವ ಮತ್ತೊಂದು ಪ್ರಶ್ನೆ ಏನಂದ್ರೆ ದೂರುದಾರ ತೋರಿಸಿದ ಪಾಯಿಂಟ್‌ನಲ್ಲಿ ಅಸ್ಥಿಪಂಜರ ಮೂಳೆಗಳ ರಾಶಿ ಸಿಕ್ರೆ ಅದನ್ನ ಭೀಮ ಹೂತುಹಾಕಿದ್ದ ಎಂದು ಹೇಳಬಹುದು.

ಇದನ್ನು ಓದಿ : ಧರ್ಮ**ದಲ್ಲಿ ನೂರಾರು ಶ* ಹೂತಿಟ್ಟ ಪ್ರಕರಣ, ದಾಖಲೆಗಳು ಭಸ್ಮ, ಅಸ್ಥಿಪಂಜರ ಕೊಟ್ರೂ ನೋ ಯೂಸ್‌.

ಆದ್ರೆ ದೂರುದಾರ ತೋರಿಸದ ಜಾಗದಲ್ಲೂ ಅಸ್ಥಿಪಂಜರ, ಅವಶೇಷಗಳು ಪತ್ತೆಯಾಗಿದೆ. ಹಾಗಾದ್ರೆ ಈ ಅವಶೇಷಗಳ ಕಥೆ ಏನು? ಇದು ಯಾರದ್ದು? ಇದು ಆತ್ಮಹ*ಯೋ ಅಥವಾ ಕೊ*ಯೋ ಸದ್ಯ ಈ ಎಲ್ಲಾ ಪ್ರಶ್ನೆಗಳು ಕೂಡ ಕಾಡತೊಡಗಿದೆ.

Tags: afghansithanBanglaguddacrimedharmastalainvestigationvijaya times

Related News

ಹೋಟೆಲ್‌ ಕಿಚನ್‌ಗಳಿಗೆ ಹೊಸ ರೂಲ್ಸ್‌; CCTV ಕ್ಯಾಮೆರಾ ಕಡ್ಡಾಯ, ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ
ಪ್ರಮುಖ ಸುದ್ದಿ

ಹೋಟೆಲ್‌ ಕಿಚನ್‌ಗಳಿಗೆ ಹೊಸ ರೂಲ್ಸ್‌; CCTV ಕ್ಯಾಮೆರಾ ಕಡ್ಡಾಯ, ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ

August 11, 2026
ಬಿಡದಿ ಪಾದಯಾತ್ರೆ ಅರ್ಧಕ್ಕೆ ಅಂತ್ಯ: ರೈತರಿಗಾಗಿ ಹೋರಾಟ ಮುಂದುವರಿಸುವುದಾಗಿ ದೇವೇಗೌಡ, ಆ.18ಕ್ಕೆ ವಿಧಾನಸೌಧ ಮುತ್ತಿಗೆ ಹಾಕುವುದಾಗಿ ಘೋಷಣೆ
ಪ್ರಮುಖ ಸುದ್ದಿ

ಬಿಡದಿ ಪಾದಯಾತ್ರೆ ಅರ್ಧಕ್ಕೆ ಅಂತ್ಯ: ರೈತರಿಗಾಗಿ ಹೋರಾಟ ಮುಂದುವರಿಸುವುದಾಗಿ ದೇವೇಗೌಡ, ಆ.18ಕ್ಕೆ ವಿಧಾನಸೌಧ ಮುತ್ತಿಗೆ ಹಾಕುವುದಾಗಿ ಘೋಷಣೆ

August 11, 2026
ಕೊಲಂಬಿಯಾದಲ್ಲಿ 7.4 ತೀವ್ರತೆಯ ಭೀಕರ ಭೂಕಂಪ: ಸಾವಿನ ಸಂಖ್ಯೆ 111ಕ್ಕೆ ಏರಿಕೆ, ನೂರಾರು ಕಟ್ಟಡಗಳಿಗೆ ಹಾನಿ
ದೇಶ-ವಿದೇಶ

ಕೊಲಂಬಿಯಾದಲ್ಲಿ 7.4 ತೀವ್ರತೆಯ ಭೀಕರ ಭೂಕಂಪ: ಸಾವಿನ ಸಂಖ್ಯೆ 111ಕ್ಕೆ ಏರಿಕೆ, ನೂರಾರು ಕಟ್ಟಡಗಳಿಗೆ ಹಾನಿ

August 11, 2026
ಸೆಪ್ಟೆಂಬರ್ 1ರಿಂದ SEBI ಹೊಸ ನಾಮಿನೇಷನ್ ನಿಯಮ ಜಾರಿ: ಡಿಮ್ಯಾಟ್, ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ಬಿಗ್ ಅಪ್‌ಡೇಟ್
ಪ್ರಮುಖ ಸುದ್ದಿ

ಸೆಪ್ಟೆಂಬರ್ 1ರಿಂದ SEBI ಹೊಸ ನಾಮಿನೇಷನ್ ನಿಯಮ ಜಾರಿ: ಡಿಮ್ಯಾಟ್, ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ಬಿಗ್ ಅಪ್‌ಡೇಟ್

August 10, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.