ಒಡಿಶಾಕ್ಕೆ ಇಂದು ಮಧ್ಯಾಹ್ನ ಅಪ್ಪಳಿಸಲಿರುವ ʻಯಾಸ್ʼ ಚಂಡಮಾರುತ

ಭುವನೇಶ್ವರ, ಮೇ. 26: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ʼಯಾಸ್ ಚಂಡಮಾರುತವು ಒಡಿಶಾದ ಭದ್ರಕ್ ಜಿಲ್ಲೆಯ ಧಾಮ್ರ ಬಂದರು ಸಮೀಪದಲ್ಲಿ ಬುಧವಾರ ಮಧ್ಯಾಹ್ನ ಭೂಪ್ರದೇಶಕ್ಕೆ ಅಪ್ಪಳಿಸಬಹುದು ಎಂದು ಅಂದಾಜಿಸಲಾಗಿದ್ದು, ಈ ಕುರಿತು ಹವಾಮಾನ ಇಲಾಖೆಯ ಹಿರಿಯ ವಿಜ್ಞಾನಿ ಉಮಾಶಂಕರ್ ದಾಸ್ ಮಾಹಿತಿ ನೀಡಿದ್ದಾರೆ.

ಕಡಲ ತೀರದ ಅನೇಕ ಪ್ರದೇಶಗಳಲ್ಲಿ ಈಗಾಗಲೇ ಭಾರಿ ಮಳೆ ಸುರಿಯುತ್ತಿದೆ. ಸದ್ಯ ಗಂಟೆಗೆ 130 ರಿಂದ 140 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ. ಮಧ್ಯಾಹ್ನದ ಹೊತ್ತಿಗೆ ಗಾಳಿಯ ವೇಗ ಮತ್ತಷ್ಟು ತೀವ್ರವಾಗಲಿದೆ. 155 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ, ಪೂರ್ವ ಕರಾವಳಿಯಲ್ಲಿರುವ ಒಡಿಶಾ ಮತ್ತು ಪಶ್ಚಿಮ ಬಂಗಾಳದ 11 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಕ್ಕೆ ಕಳುಹಿಸಲಾಗಿದೆ. ನೆರೆಯ ಜಾರ್ಖಂಡ್ಗೂ ಮುನ್ನೆಚ್ಚರಿಕೆ ನೀಡಲಾಗಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್ಡಿಆರ್ಎಫ್) 112 ತುಕಡಿಗಳನ್ನು ನಿಯೋಜಿಸಲಾಗಿದೆ. ಇದರಲ್ಲಿ 52 ತಂಡಗಳನ್ನು ಒಡಿಶಾಕ್ಕೆ ಹಾಗೂ 45 ತಂಡಗಳನ್ನು ಪಶ್ಚಿಮ ಬಂಗಾಳಕ್ಕೆ ಕಳುಹಿಸಲಾಗಿದೆ. ಉಳಿದ ತಂಡಗಳು ಆಂಧ್ರಪ್ರದೇಶ, ತಮಿಳುನಾಡು, ಜಾರ್ಖಂಡ್ ಹಾಗೂ ಅಂಡಮಾನ್ ನಿಕೋಬಾರ್ನಲ್ಲಿ ನಿಯೋಜನೆಗೊಂಡಿವೆ.

Latest News

ದೇಶ-ವಿದೇಶ

ದೇಶದ ಹೆಮ್ಮೆ ತ್ರಿವರ್ಣ ಧ್ವಜವೂ ಕೂಡ ಬಿಜೆಪಿಗೆ ವ್ಯಾಪಾರದ ಸರಕಾಗಿದೆ : ಬಿ.ಕೆ.ಹರಿಪ್ರಸಾದ್

38×11,80,000=4.484 ಕೋಟಿ, ಹೇಗಿದೆ ಮೋದಿ ಸರ್ಕಾರದ ಲೂಟಿ? ಕೇಂದ್ರದ ಮೋದಿ ಸರ್ಕಾರ ವಸೂಲಿ ಬಾಜಿತನಕ್ಕೆ ರಾಷ್ಟ್ರಧ್ವಜವನ್ನ ಬಳಸಿಕೊಂಡಿರುವುದು ಅಕ್ಷಮ್ಯ ಅಪರಾಧ

ಕ್ರೀಡೆ

ಕಾಮನ್‌ವೆಲ್ತ್ ಗೇಮ್ಸ್‌ 2022 ; ಕಂಚಿನ ಪದಕ ಗೆದ್ದ ಪತ್ನಿಯನ್ನು ಅಭಿನಂದಿಸಿದ ದಿನೇಶ್ ಕಾರ್ತಿಕ್

ಭಾರತದ ಸ್ಕ್ವ್ಯಾಶ್ ಆಟಗಾರ್ತಿ ದೀಪಿಕಾ ಪಲ್ಲಿಕ್ಕಲ್(Deepika Pallikal) ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಕಂಚಿನ ಪದಕ(Bronze Medal) ಗೆದ್ದುಕೊಂಡಿದ್ದಾರೆ.

ಆರೋಗ್ಯ

ದೇಹ ನೀಡುವ `ಈ’ ಸೂಚನೆಗಳು ಕಿಡ್ನಿ ವೈಪಲ್ಯವನ್ನು ಸೂಚಿಸುತ್ತವೆ ; ಇಲ್ಲಿದೆ ಮಾಹಿತಿ ಓದಿ

ಕಿಡ್ನಿ(Kidney) ನಮ್ಮ ದೇಹದ ಪ್ರಮುಖ ಅಂಗವಾಗಿದೆ. ದೇಹದಲ್ಲಿ ಶುದ್ಧ ರಕ್ತವನ್ನು ಪರಿಚಲನೆ ಮಾಡುವಲ್ಲಿ ಮೂತ್ರಪಿಂಡಗಳು ಮುಖ್ಯ ಪಾತ್ರವಹಿಸುತ್ತವೆ.

ರಾಜಕೀಯ

1947ರ ಹಿಂದಿನ ಕಾಂಗ್ರೆಸ್ ಬೇರೆ, ಈಗಿನ ಸೋಗಲಾಡಿ ಸಿದ್ಧಹಸ್ತರು ಇರುವ ಕಾಂಗ್ರೆಸ್ಸೇ ಬೇರೆ : ಹೆಚ್‍ಡಿಕೆ

ಇದುವರೆಗೂ ಕಾಂಗ್ರೆಸ್ ನಡೆಸಿದ ಸ್ವಾತಂತ್ರ್ಯ ವಿರೋಧಿ ಕೃತ್ಯಗಳಿಗೆ ಉತ್ತರ ಕೊಡುವಿರಾ? ಕಾಂಗ್ರೆಸ್ ಕೋಳಿ ಕೂಗಿದರೆ ಭಾರತದಲ್ಲಿ ಬೆಳಕು ಹರಿಯುತ್ತದೆ ಎನ್ನುವ ಕಾಲ ಹೋಯಿತು.