• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜ್ಯ

ಹುರೂನ್ ವೆಲ್ತ್ ರಿಪೋರ್ಟ್ 2025: Self-made Entrepreneurs ಸಂಖ್ಯೆಯಲ್ಲಿ ಮುಂಬೈಯನ್ನು ಹಿಂದಿಕ್ಕಿದ ಬೆಂಗಳೂರು

Teju Srinivas by Teju Srinivas
in ರಾಜ್ಯ, ವಿಜಯ ಟೈಮ್ಸ್‌
ಹುರೂನ್ ವೆಲ್ತ್ ರಿಪೋರ್ಟ್ 2025: Self-made Entrepreneurs ಸಂಖ್ಯೆಯಲ್ಲಿ ಮುಂಬೈಯನ್ನು ಹಿಂದಿಕ್ಕಿದ ಬೆಂಗಳೂರು
0
SHARES
8
VIEWS
Share on FacebookShare on Twitter
  • 2000 ನಂತರ ಸ್ಥಾಪನೆಯಾದ ಟಾಪ್ ಕಂಪನಿಗಳಲ್ಲಿ (Hurun Wealth Report 2025) ಬೆಂಗಳೂರಿನ ಪ್ರಾಬಲ್ಯ
  • ಸ್ವಂತ ಶ್ರಮದಿಂದ ಯಶಸ್ಸು ಕಟ್ಟಿದ ಉದ್ಯಮಿಗಳಲ್ಲಿ ಸಿಲಿಕಾನ್ ಸಿಟಿಯ ಮೇಲುಗೈ
  • ಮುಂಬೈಯನ್ನು ಹಿಂದಿಕ್ಕಿ ಉದ್ಯಮಿಗಳ ನಗರ ಎಂದು ಕರೆಸಿಕೊಳ್ಳುವತ್ತ ಮುಖ ಮಾಡಿದ ಬೆಂಗಳೂರು

Bengaluru: ಭಾರತದ ಆರ್ಥಿಕ ಮಹತ್ವದ ಬದಲಾವಣೆಯನ್ನು (Hurun Wealth Report 2025) ತೋರಿಸುವ ಹುರೂನ್ ಇಂಡಿಯಾ ವೆಲ್ತ್ ರಿಪೋರ್ಟ್ (Hurun India Wealth Report) 2025 ಇದೀಗ ಪ್ರಕಟವಾಗಿದೆ.

ಟ್ರಾಫಿಕ್ ಜಾಮ್ (Traffic Jam) , ಮೂಲಸೌಕರ್ಯ ಸಮಸ್ಯೆಗಳ ನಡುವೆಯೂ ಬೆಂಗಳೂರು ತನ್ನ ಉದ್ಯಮಶೀಲ ಶಕ್ತಿಯಿಂದ ದೇಶದ ಅಗ್ರ ಸಂಪತ್ತಿನ ನಗರವಾಗಿ ಹೊರಹೊಮ್ಮಿದೆ.

Hurun Wealth Report 2025

ಐಡಿಎಫ್‌ಸಿ ಫಸ್ಟ್ ಪ್ರೈವೇಟ್ (IDFC First Private) ಮತ್ತು ಹುರೂನ್ ಇಂಡಿಯಾ ಸಂಯುಕ್ತವಾಗಿ ಬಿಡುಗಡೆ (Hurun Wealth Report 2025) ಮಾಡಿದ ಈ ವರದಿ ಪ್ರಕಾರ, ಸ್ವಂತ ಶ್ರಮದಿಂದ ಉದ್ಯಮ ಕಟ್ಟಿದ ಸೆಲ್ಫ್-ಮೇಡ್ ಆಂಟ್ರಪ್ರನ್ಯೂರ್‌ಗಳ (Self Made Entrepreneurs) ಸಂಖ್ಯೆಯಲ್ಲಿ ಬೆಂಗಳೂರು ಮುಂಬೈಯನ್ನೂ ಹಿಂದಿಕ್ಕಿ ಮೊದಲ ಸ್ಥಾನ ಪಡೆದುಕೊಂಡಿದೆ.

ಇದರಿಂದಾಗಿ “ಸಿಲಿಕಾನ್ ಸಿಟಿ” (Silicon City) ಎನ್ನುವ ಹೆಸರು ಇದೀಗ ಕೇವಲ ತಂತ್ರಜ್ಞಾನಕ್ಕೆ ಮಾತ್ರ ಸೀಮಿತವಾಗದೇ, ಸಂಪತ್ತು ಮತ್ತು ಉದ್ಯಮಗಳ ಕೇಂದ್ರವಾಗಿಯೂ ಗುರುತಿಸಿಕೊಂಡಿದೆ.

ಈ ವೆಲ್ತ್ ರಿಪೋರ್ಟ್‌ನಲ್ಲಿ 2000ನೇ ವರ್ಷದ ನಂತರ ಸ್ಥಾಪನೆಯಾದ, ಅತ್ಯಧಿಕ ಮೌಲ್ಯ ಹೊಂದಿರುವ ಭಾರತದ ಟಾಪ್-200 ಕಂಪನಿಗಳು ಹಾಗೂ ಅವುಗಳ ಸ್ಥಾಪಕರಾದ ಸೆಲ್ಫ್-ಮೇಡ್ ಉದ್ಯಮಿಗಳ ಪಟ್ಟಿ ನೀಡಲಾಗಿದೆ. ಸರ್ಕಾರದ ಸ್ವಾಮ್ಯದ ಸಂಸ್ಥೆಗಳು, ವಿದೇಶಿ ಕಂಪನಿಗಳ ಅಂಗಸಂಸ್ಥೆಗಳು ಮತ್ತು ಪಾರಂಪರಿಕ ಕುಟುಂಬ ಉದ್ಯಮಗಳನ್ನು ಈ ಪಟ್ಟಿಯಿಂದ ಹೊರಗಿಡಲಾಗಿದೆ.

ಸ್ವಂತ ಬಲ, ಹೊಸ ಆಲೋಚನೆ, ನವೀನತೆ ಮತ್ತು ಅಪಾರ ಪರಿಶ್ರಮದ ಮೂಲಕ ಉದ್ಯಮ ಸ್ಥಾಪಿಸಿದವರನ್ನೇ ಈ ಅಧ್ಯಯನ ಒಳಗೊಂಡಿದೆ.

ಈ ಮಾನದಂಡಗಳ ಆಧಾರದಲ್ಲಿ ನೋಡಿದಾಗ, ಬೆಂಗಳೂರಿನಲ್ಲಿ ಹುಟ್ಟಿಕೊಂಡಿರುವ ಉದ್ಯಮಗಳ ಸಂಖ್ಯೆಯೇ ಅತ್ಯಧಿಕವಾಗಿದ್ದು, ದೇಶದ ಉದ್ಯಮಶೀಲ ವಾತಾವರಣದಲ್ಲಿ ನಗರದ ಪ್ರಭಾವ ಎಷ್ಟರ ಮಟ್ಟಿಗೆ ವಿಸ್ತರಿಸಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.

ನಗರವಾರು ಅಗ್ರಮಾನ್ಯ ಉದ್ಯಮಿಗಳ ಸಂಖ್ಯೆಯನ್ನು ಗಮನಿಸಿದರೆ, ಬೆಂಗಳೂರು 88 ಸೆಲ್ಫ್-ಮೇಡ್ ಆಂಟ್ರಪ್ರನ್ಯೂರ್‌ಗಳೊಂದಿಗೆ ಅಗ್ರಸ್ಥಾನದಲ್ಲಿದೆ.

83 ಉದ್ಯಮಿಗಳೊಂದಿಗೆ ಮುಂಬೈ ಎರಡನೇ ಸ್ಥಾನಕ್ಕೆ ಕುಸಿದಿದೆ. ರಾಷ್ಟ್ರ ರಾಜಧಾನಿ ನವದೆಹಲಿ 52 ಉದ್ಯಮಿಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದು, ಗುರುಗ್ರಾಮ್‌ನಲ್ಲಿ 32 ಉದ್ಯಮಿಗಳು ಪಟ್ಟಿಗೆ ಸೇರಿದ್ದಾರೆ.

ಚೆನ್ನೈ (15), ಪುಣೆ (13), ಹೈದರಾಬಾದ್ (12), ಕೋಲ್ಕತಾ (10), ಅಹ್ಮದಾಬಾದ್ (9) ಮತ್ತು ಜೈಪುರ್ (7) ನಗರಗಳೂ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಈ ಅಂಕಿಅಂಶಗಳು, ಉದ್ಯಮಶೀಲತೆ ಕೇವಲ ಒಂದು ನಗರಕ್ಕೆ ಸೀಮಿತವಾಗದೇ ದೇಶದ ವಿವಿಧ ಭಾಗಗಳಿಗೆ ಹರಡುತ್ತಿರುವುದನ್ನೂ ಸೂಚಿಸುತ್ತವೆ.

ಆದರೆ, ಹೊಸ ತಂತ್ರಜ್ಞಾನ, ಸ್ಟಾರ್ಟ್-ಅಪ್ ಸಂಸ್ಕೃತಿ ಮತ್ತು ಹೂಡಿಕೆದಾರರ ಬೆಂಬಲದಿಂದ ಬೆಂಗಳೂರು ಇನ್ನೂ ಮುನ್ನಡೆಯಲ್ಲಿದೆ.

ಕೇವಲ ಉದ್ಯಮಿಗಳ ಸಂಖ್ಯೆಯಲ್ಲದೇ, ಅತ್ಯಧಿಕ ಮೌಲ್ಯಯುತ ಕಂಪನಿಗಳ ಹುಟ್ಟಿನಲ್ಲಿಯೂ ಬೆಂಗಳೂರು ಮೊದಲ ಸ್ಥಾನದಲ್ಲಿದೆ.

ಹುರೂನ್ ವರದಿ ಪ್ರಕಾರ, ಬೆಂಗಳೂರಿನಲ್ಲಿ 52 ಬಿಲಿಯನ್-ಡಾಲರ್ ಮೌಲ್ಯದ ಕಂಪನಿಗಳು ಸ್ಥಾಪನೆಯಾಗಿವೆ. ಮುಂಬೈನಲ್ಲಿ 51, ಗುರುಗ್ರಾಮ್‌ನಲ್ಲಿ 36, ಚೆನ್ನೈನಲ್ಲಿ 11 ಮತ್ತು ನವದೆಹಲಿಯಲ್ಲಿ 10 ಕಂಪನಿಗಳು ಹುಟ್ಟಿಕೊಂಡಿವೆ.

ಪುಣೆ ಹಾಗೂ ಹೈದರಾಬಾದ್ ತಲಾ 8 ಕಂಪನಿಗಳನ್ನು ನೀಡಿದ್ದರೆ, ನೋಯ್ಡಾ 7, ಅಹ್ಮದಾಬಾದ್ (Ahmedabad) 5 ಮತ್ತು ಕೋಲ್ಕತಾ ಹಾಗೂ ಜೈಪುರ್ ತಲಾ 4 ಕಂಪನಿಗಳನ್ನು ಈ ಪಟ್ಟಿಗೆ ಕೊಡುಗೆ ನೀಡಿದ್ದಾರೆ.

ಇದು ಬೆಂಗಳೂರು ಕೇವಲ ಐಟಿ ಹಬ್ ಮಾತ್ರವಲ್ಲ, ಫಿನ್‌ಟೆಕ್, ಇ-ಕಾಮರ್ಸ್ (E-Commerce) , ಎಡ್ಟೆಕ್, ಹೆಲ್ತ್‌ಟೆಕ್ ಮತ್ತು ಡೀಪ್ ಟೆಕ್ ಕ್ಷೇತ್ರಗಳಲ್ಲಿಯೂ ಹೊಸ ಉದ್ಯಮಗಳ ಪೋಷಕ ಭೂಮಿಯಾಗಿದೆ ಎಂಬುದನ್ನು ತೋರಿಸುತ್ತದೆ.

ಈ ವರದಿಯ ಮತ್ತೊಂದು ಗಮನಾರ್ಹ ಅಂಶವೆಂದರೆ, ಭಾರತದ ಟಾಪ್-200 ಸೆಲ್ಫ್-ಮೇಡ್ ಉದ್ಯಮಿಗಳ ಒಟ್ಟು ಸಂಪತ್ತು ಸುಮಾರು 42 ಲಕ್ಷ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಈ ಸಂಪತ್ತು ದೇಶದ 51 ನಗರಗಳಲ್ಲಿ ಹಂಚಿಕೊಂಡಿದ್ದು, ಉದ್ಯಮಶೀಲತೆ ಭಾರತದ ಆರ್ಥಿಕ ಬೆಳವಣಿಗೆಯ ಪ್ರಮುಖ ಎಂಜಿನ್ ಆಗಿದೆ ಎಂಬುದನ್ನು ಒತ್ತಿ ಹೇಳುತ್ತದೆ.

ಬೆಂಗಳೂರಿನ ಮುಂಚೂಣಿ ಸ್ಥಾನವು, ಯುವ ಉದ್ಯಮಿಗಳಿಗೆ ಸ್ಫೂರ್ತಿ ನೀಡುವ ಜೊತೆಗೆ, ಭವಿಷ್ಯದಲ್ಲಿಯೂ ನಗರವು ಹೂಡಿಕೆ, ನವೀನತೆ ಮತ್ತು ಸಂಪತ್ತಿನ ಪ್ರಮುಖ ಕೇಂದ್ರವಾಗಿ ಉಳಿಯಲಿದೆ ಎಂಬ ವಿಶ್ವಾಸವನ್ನು ಮೂಡಿಸುತ್ತದೆ.

ಒಟ್ಟಿನಲ್ಲಿ, ಹುರೂನ್ ವೆಲ್ತ್ ರಿಪೋರ್ಟ್ 2025 ಭಾರತದಲ್ಲಿ ಹೊಸ ಉದ್ಯಮಗಳ ಯುಗ ಆರಂಭವಾಗಿದೆ ಎಂಬುದಕ್ಕೆ ಬಲವಾದ ಸಾಕ್ಷಿಯಾಗಿದೆ.

ಇದನ್ನು ಓದಿ : https://vijayatimes.com/ugc-net-published-schedule/

Tags: bengaluruentrepreneurshurunMumbai

Related News

ಭಾರತೀಯ ಮೂಲದ ಅಮೆರಿಕನ್ ಗಗನಯಾತ್ರಿ ಸುನಿತಾ ವಿಲಿಯಮ್ಸ್‌ ನಿವೃತ್ತಿ: 27 ವರ್ಷಗಳ ಬಾಹ್ಯಾಕಾಶ ಪಯಣಕ್ಕೆ ಗುಡ್ ಬೈ
ದೇಶ-ವಿದೇಶ

ಭಾರತೀಯ ಮೂಲದ ಅಮೆರಿಕನ್ ಗಗನಯಾತ್ರಿ ಸುನಿತಾ ವಿಲಿಯಮ್ಸ್‌ ನಿವೃತ್ತಿ: 27 ವರ್ಷಗಳ ಬಾಹ್ಯಾಕಾಶ ಪಯಣಕ್ಕೆ ಗುಡ್ ಬೈ

January 21, 2026
ಡೀಪ್ ಫೇಕ್ ಹಾವಳಿಗೆ ಬ್ರೇಕ್ ಹಾಕಲು ಮುಂದಾದ ಕೇಂದ್ರ ಸರ್ಕಾರ: AI ಫೋಟೋ–ವೀಡಿಯೋಗಳಿಗೆ ಲೇಬಲ್ ಕಡ್ಡಾಯ
ದೇಶ-ವಿದೇಶ

ಡೀಪ್ ಫೇಕ್ ಹಾವಳಿಗೆ ಬ್ರೇಕ್ ಹಾಕಲು ಮುಂದಾದ ಕೇಂದ್ರ ಸರ್ಕಾರ: AI ಫೋಟೋ–ವೀಡಿಯೋಗಳಿಗೆ ಲೇಬಲ್ ಕಡ್ಡಾಯ

January 21, 2026
ಬ್ಯಾನರ್ ಗಲಾಟೆಗಳ ಬಳಿಕ ಎಚ್ಚೆತ್ತ ಜಿಬಿಎ: ಬೆಂಗಳೂರಿನಾದ್ಯಂತ ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು
ಪ್ರಮುಖ ಸುದ್ದಿ

ಬ್ಯಾನರ್ ಗಲಾಟೆಗಳ ಬಳಿಕ ಎಚ್ಚೆತ್ತ ಜಿಬಿಎ: ಬೆಂಗಳೂರಿನಾದ್ಯಂತ ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು

January 21, 2026
ಜಿಬಿಎ ಚುನಾವಣೆಗೆ ಆಯೋಗ ಸಜ್ಜು : ಬ್ಯಾಲೆಟ್ ಪೇಪರ್ ಮೂಲಕ ಮತದಾನ, ಕರಡು ಮತದಾರರ ಪಟ್ಟಿ ಪ್ರಕಟ
ಪ್ರಮುಖ ಸುದ್ದಿ

ಜಿಬಿಎ ಚುನಾವಣೆಗೆ ಆಯೋಗ ಸಜ್ಜು : ಬ್ಯಾಲೆಟ್ ಪೇಪರ್ ಮೂಲಕ ಮತದಾನ, ಕರಡು ಮತದಾರರ ಪಟ್ಟಿ ಪ್ರಕಟ

January 20, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.