Bengaluru : ರಾಹುಲ್ ಗಾಂಧಿಯವರ(Rahul Gandhi) ಆರೋಗ್ಯದ ಗುಟ್ಟು, ಅವರ ಆರೋಗ್ಯಕರ ಮನಸ್ಸು. ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕುತ್ತಾ ನಾನೂ ಯುವಕನಾದೆ ಎಂದು ವಿಪಕ್ಷ ನಾಯಕ(Opposition Leader) ಸಿದ್ದರಾಮಯ್ಯ(Siddaramaiah) ಬರೆದುಕೊಂಡಿದ್ದಾರೆ.

ಈ ಕುರಿತು ಟ್ವೀಟ್(Tweet) ಮಾಡಿರುವ ಅವರು, ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕುತ್ತಾ ನಾನೂ ಯುವಕನಾದೆ. ಭರವಸೆಯ ಕೈಗಳು ಹೀಗೆಯೇ ಕೈ ಹಿಡಿದರೆ ದಾರಿ ಎಷ್ಟೇ ದುರ್ಗಮವಾಗಿದ್ದರೂ ಗುರಿ ಮುಟ್ಟುವುದು ಖಚಿತ. ನಮ್ಮ ನಾಯಕ ನಮ್ಮ ಹೆಮ್ಮೆ ಎಂದಿದ್ದಾರೆ.
ಇದನ್ನೂ ಓದಿ : https://vijayatimes.com/health-facts-of-winter-melon/
ಮಂಡ್ಯ (Mandya) ಜಿಲ್ಲೆಯಲ್ಲಿ ಸಾಗುತ್ತಿರುವ ಭಾರತ್ ಜೋಡೋ ಯಾತ್ರೆಯ (Bharat Jodo Yatra) ವೇಳೆ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಅವರು ಒಟ್ಟಿಗೆ ಕೈಹಿಡಿದು ಓಡಿರುವ ವಿಡಿಯೋ ಎಲ್ಲೆಡೆ ವೈರಲ್(Viral) ಆಗಿದೆ.
ಇಳಿವಯಸ್ಸಿನಲ್ಲೂ ಸಿದ್ದರಾಮಯ್ಯನವರು (I became youth being with rahul gandhi) ಹುಮ್ಮಸ್ಸಿನಿಂದ ರಾಹುಲ್ ಗಾಂಧಿಯೊಂದಿಗೆ ಓಟಕ್ಕಿಳಿದಿದ್ದು, ಎಲ್ಲರ ಗಮನ ಸೆಳೆಯಿತು.

ಇದೇ ವೇಳೆ ಬಿಜೆಪಿ ಸರ್ಕಾರವನ್ನು (BJP Government) ಟೀಕಿಸಿರುವ ಸಿದ್ದರಾಮಯ್ಯ ಅವರು,
ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ವಚನ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ರಸಗೊಬ್ಬರ, ಕೀಟನಾಶಕಗಳ ಬೆಲೆ ದುಪ್ಪಟ್ಟುಮಾಡಿ ಅನ್ನದಾತನ ಬದುಕು ಕಸಿದಿದೆ.
ಇದನ್ನೂ ಓದಿ : https://vijayatimes.com/hdk-allegation-over-central-government/
ಬೆಂಬಲ ಬೆಲೆಯಲ್ಲಿ ಅನ್ಯಾಯ, ಬೆಳೆನಷ್ಟ ಪರಿಹಾರದಲ್ಲಿ ಮೋಸ ಇವು ಗಾಯದ ಮೇಲೆ ಎಳೆದ ಬರೆಗಳು. ಅನ್ನದಾತರ ಕಣ್ಣೀರ ಶಾಪ ಬಿಜೆಪಿಗೆ ತಟ್ಟದೆ ಇರದು.
ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ರೈತವಿರೋಧಿ ನೀತಿಗಳಿಂದಾಗಿ ಸಂಕಷ್ಟದಲ್ಲಿರುವ ನಾಡಿನ ರೈತರೊಂದಿಗೆ (I became youth being with rahul gandhi) ಇಂದು
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಕರಡ್ಯ ವಿಶ್ರಾಂತಿ ತಾಣದಲ್ಲಿ ರಾಹುಲ್ಗಾಂಧಿ ಅವರು ನಡೆಸಿದ ಸಂವಾದದಲ್ಲಿ ಪಾಲ್ಗೊಂಡು,

ರೈತರ ಸಮಸ್ಯೆಗಳು ಮತ್ತು ಪರಿಹಾರಗಳ ಬಗ್ಗೆ ಚರ್ಚಿಸಿದೆ.ಸಹಸ್ರಾರು ಕಾರ್ಯಕರ್ತರ ಹರ್ಷೋದ್ಘಾರದ ನಡುವೆ ಮಂಡ್ಯ ಜಿಲ್ಲೆಯ ಪಾಂಡವಪುರದ ಬೆಳ್ಳಾಲೆಯಿಂದ,
ಬ್ರಹ್ಮದೇವರ ಹಳ್ಳಿವರೆಗೆ ಭಾರತ ಐಕ್ಯತಾ ಯಾತ್ರೆಯಲ್ಲಿ ಕಾಂಗ್ರೆಸ್ ವರಿಷ್ಠರಾದ ಶ್ರೀಮತಿ ಸೋನಿಯಾ ಗಾಂಧಿ(Sonia Gandhi) ಹಾಗೂ ನಮ್ಮ ನಾಯಕರಾದ ರಾಹುಲ್ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದೆ ಎಂದಿದ್ದಾರೆ.
- ಮಹೇಶ್.ಪಿ.ಎಚ್