Karnataka : ಬಿಜೆಪಿ ಸಂಸದ ತೇಜಸ್ವಿ ಸೂರ್ಯ(Tejasvi Surya) ಅವರಿಗೆ ಬೆಂಗಳೂರಿನ (Bengaluru)
ಪ್ರಮುಖ ಹೋಟೆಲ್‌ಗಳಿಂದ 10 ವಿವಿಧ ದೋಸೆಗಳನ್ನು ಕಳುಹಿಸಿದ್ದೇವೆ ಎಂದ ಕಾಂಗ್ರೆಸ್ ಕಾರ್ಯಕರ್ತರ (Congress Workers) ಮಾತನ್ನು ಸಂಸದ ತೇಜಸ್ವಿ ಸೂರ್ಯ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರು ಹೇಳಿದ ಒಂದು ದಿನದ ನಂತರ, ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಕಾಂಗ್ರೆಸ್ಸಿಗರು ಕಳುಹಿಸಿದ ದೋಸೆ ಇನ್ನೂ ನನಗೆ ಸಿಕ್ಕಿಲ್ಲ ಎಂದು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು ನಗರವು ಪ್ರವಾಹದಲ್ಲಿ ಮುಳುಗಿರುವಾಗ ಮಸಾಲೆ ದೋಸೆಯನ್ನು ಸೇವಿಸಿದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿತ್ತು.
ನಗರದ ಹಲವು ಭಾಗಗಳು ಧಾರಾಕಾರ ಮಳೆ (Rain) ಮತ್ತು ಪ್ರವಾಹದಿಂದ ತತ್ತರಿಸಿರುತ್ತಿರುವಾಗ, ತಮ್ಮ ಕ್ಷೇತ್ರದಲ್ಲಿ ದೋಸೆಯನ್ನು ಸವಿಯುತ್ತಿದ್ದಾರೆ ಮತ್ತು ಉಪಾಹಾರ ಗೃಹವನ್ನು ಪ್ರಚಾರ ಮಾಡಿದ್ದಾರೆ
ಎಂದು ಆರೋಪಿಸಿ ತೇಜಸ್ವಿ ಸೂರ್ಯ ಅವರನ್ನು ಸಾಮಾಜಿಕ ಮಾಧ್ಯಮದಲ್ಲು ತರಾಟೆಗೆ ತೆಗೆದುಕೊಂಡಿತ್ತು.
ಇದನ್ನೂ ಓದಿ : https://vijayatimes.com/bengaluru-doctor-ran-3-km-to-save-life/
ಸಂಸದ ತೇಜಸ್ವಿ ಸೂರ್ಯ ಅವರನ್ನು ಈ ವಿಚಾರಕ್ಕಾಗಿ ಟ್ರೋಲ್ ಕೂಡ ಮಾಡಲಾಯಿತು. ಕಾಂಗ್ರೆಸ್ ಪಕ್ಷವು ದೋಸೆ ತಿಂದ ಅವರನ್ನು ಗುರಿಯಾಗಿಸಿ, ನಗರ ಮುಳುಗಿದಾಗ ದೋಸೆ ಸವಿದಿದ್ದಕ್ಕಾಗಿ ಅವರನ್ನು ‘ಬೇಜವಾಬ್ದಾರಿ’ ಸಂಸದ ಎಂದು ಕರೆಯಿತು.
ದೋಸೆಯನ್ನು ಸವಿದಿದ್ದಕ್ಕಾಗಿ ಕಾಂಗ್ರೆಸ್‌ನಿಂದ ಟೀಕೆಗೊಳಗಾದ ನಂತರ, ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕಾಂಗ್ರೆಸ್ಸಿಗರು ಹೇಳಿದಂತೆ ತಾವು 10 ವಿವಿಧ ದೋಸೆಯನ್ನು ನನಗೆ ಕಳಿಸಿದ್ದೇವೆ ಎಂದು ಹೇಳಿದರು.
ಆದ್ರೆ, ಇನ್ನೂ ‘ಮಸಾಲಾ ದೋಸೆ’ಯ ಪಾರ್ಸೆಲ್ ಅನ್ನು ನಾನು ಸ್ವೀಕರಿಸಿಲ್ಲ. ಕಾಂಗ್ರೆಸ್ ಪಕ್ಷವು ಇಲ್ಲಿಯೂ ಮೋಸ ಮಾಡಿದೆ ಎಂದು ತಿರುಗೇಟು ನೀಡಿದರು.
https://twitter.com/Tejaskc1/status/1568513511868997633?s=20&t=GezUcTlvYbmCHkSdiiDy9A
ತಮ್ಮ ಟ್ವಿಟ್ಟರ್ (Tweeter) ಖಾತೆಯಲ್ಲಿ ಅವರು ಈ ರೀತಿ ಬರೆದುಕೊಂಡಿದ್ದಾರೆ, “ಕಾಂಗ್ರೆಸ್ ನಿನ್ನೆ ಪತ್ರಿಕಾಗೋಷ್ಠಿಯನ್ನು ನಡೆಸಿ, ನನ್ನ ಮನೆಗೆ ಮಸಾಲೆ ದೋಸೆ ಪಾರ್ಸೆಲ್ ಕಳುಹಿಸಿದ್ದೇವೆ ಎಂದು ಘೋಷಿಸಿದರು.
ಕಾಂಗ್ರೆಸ್ ಈ ಹೇಳಿಕೆ ಕೊಟ್ಟು 24 ಗಂಟೆಗಳಿಗಿಂತ ಹೆಚ್ಚು ಸಮಯ ಕಳೆದಿದೆ. ಆದ್ರೂ ನನಗೆ ಇನ್ನೂ ದೊಸೆ ತಲುಪಿಲ್ಲ!
ಅವರು ಇಲ್ಲಿಯೂ ಮೋಸ ಮಾಡಿದ್ದಾರೆ. ದೋಸೆಯನ್ನು ಸರಿಯಾಗಿ ವಿತರಿಸಲು ಸಾಧ್ಯವಿಲ್ಲ ಮತ್ತು ಅವರು ಉತ್ತಮ ಆಡಳಿತವನ್ನು ನೀಡುವ ಕನಸು ಕಾಣುತ್ತಿದ್ದಾರೆ.
ಕಾಂಗ್ರೆಸ್ ವಕ್ತಾರೆ ಲಾವಣ್ಯ ಬಲ್ಲಾಳ್ (Lavanya Ballal) ಅವರು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮಸಾಲೆ ದೋಸೆ ತಿನ್ನುತ್ತಿರುವ ವೀಡಿಯೊವನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸೆಪ್ಟೆಂಬರ್ 5 ರಂದು ಬೆಂಗಳೂರು ನಗರದ ಬಹುತೇಕ ಭಾಗಗಳು ಪ್ರವಾಹದಲ್ಲಿ ಮುಳುಗುತ್ತಿದ್ದಾಗ ಈ ವೀಡಿಯೊವನ್ನು ಚಿತ್ರೀಕರಿಸಲಾಗಿದೆ ಎಂದು ಲಾವಣ್ಯ ಬಲ್ಲಾಳ್ ಹೇಳಿಕೊಂಡಿದ್ದಾರೆ.
40 ಸೆಕೆಂಡುಗಳ ವಿಡಿಯೋ ವೈರಲ್ (Viral) ಆಗಿದ್ದು, ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ
ಪದ್ಮನಾಭನಗರದ ಉಪಾಹಾರ ಗೃಹದಲ್ಲಿ ಬೆಣ್ಣೆ (Butter) ಮಸಾಲೆ ದೋಸೆ ಮತ್ತು ಉಪ್ಪಿಟ್ಟು ತಿಂದು ಅದರ ಗುಣಮಟ್ಟ ಮತ್ತು ರುಚಿಯನ್ನು ಶ್ಲಾಘಿಸುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ : https://vijayatimes.com/simple-beauty-tips-are-here/
ಸಂಸದರು ಜನರು ಬಂದು ಅಲ್ಲಿನ ಆಹಾರವನ್ನು ರುಚಿ ನೋಡುವಂತೆ ಸಲಹೆ ನೀಡಿದರು ಎಂದು ಪಿಟಿಐ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಸಂಸದ ತೇಜಸ್ವಿ ಸೂರ್ಯ ದೋಸೆ ಬಗ್ಗೆ ಈ ರೀತಿ ಹೇಳಿಕೊಂಡಿದ್ದಾರೆ.
ಇನ್ಸಾಟ್ಗ್ರಾಂನಲ್ಲಿ ನಾನು ಈ ದೋಸೆ ಮಳಿಗೆ ನೋಡಿದ ನಂತರ, ನಾನು ಪದ್ಮನಾಭನಗರದಲ್ಲಿ ಈ ‘ಬೆಣ್ಣೆ ಮಸಾಲೆ ದೋಸೆ’ ಪ್ರಯತ್ನಿಸಲು ಬಂದಿದ್ದೇನೆ.
ಈ ದೋಸೆಯನ್ನು ಇಷ್ಟಪಟ್ಟಿದ್ದೇನೆ ಮತ್ತು ನೀವೆಲ್ಲರೂ ಅವರ ಉಪ್ಪಿಟ್ಟನ್ನು ಸಹ ಪ್ರಯತ್ನಿಸಿ ಎಂದು ನಾನು ಸಲಹೆ ನೀಡುತ್ತೇನೆ. ಖಂಡಿತ ನೀವೆಲ್ಲರೂ ಇದನ್ನು ಇಷ್ಟಪಡುತ್ತೀರಿ ಎಂದು ನನಗೆ ಖಾತ್ರಿಯಿದೆ.”
ಎಂದು ಹೇಳಿದ್ದರು. ಈ ಹೇಳಿಕೆಯ ವೀಡಿಯೋ (Video) ವೈರಲ್ ಆಗುತ್ತಿದ್ದಂತೆ,
https://twitter.com/LavanyaBallal/status/1567002657348534273?s=20&t=Zksbama_CxP33VwmjESw_w