New Delhi : ನಾನು ಮಹಾಭಾರತದಲ್ಲಿ (Mahabharata) ನಟಿಸಲು ಇಷ್ಟಪಡುತ್ತೇನೆ, ಯಾರಾದರೂ ಅದನ್ನು ಲಾರ್ಡ್ ಆಫ್ ದಿ ರಿಂಗ್ಸ್ (Lord Of The Rings) ಚಿತ್ರದಂತೆ ಮಾಡಿದರೆ,
ಅಂತಹ ಚಿತ್ರದಲ್ಲಿ ಯಾವುದಾದರೂ ಒಂದು ಪಾತ್ರದಲ್ಲಿ ನಟಿಸುವ ಆಸೆ ನನಗಿದೆ ಎಂದು ಬಾಲಿವುಡ್ ನಟ (Bollywood Actor) ಸೈಫ್ ಅಲಿ ಖಾನ್ (Saif Ali Khan) ತಿಳಿಸಿದ್ದಾರೆ.

ಬಾಲಿವುಡ್ ಬಬಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸೈಫ್ ಅಲಿಖಾನ್, “ನಾನು ಮಹಾಭಾರತದಲ್ಲಿ (I like to act in mahabharata says saif) ನಟಿಸಲು ಇಷ್ಟಪಡುತ್ತೇನೆ,
ಯಾರಾದರೂ ಅದನ್ನು ಲಾರ್ಡ್ ಆಫ್ ದಿ ರಿಂಗ್ಸ್ನಂತೆ ಮಾಡಿದರೆ, ನಾನು ಈ ಕುರಿತು ಅಜಯ್ ದೇವಗನ್(Ajay Devgn) ಅವರೊಂದಿಗೆ ಮಾತನಾಡುತ್ತಿದ್ದೇನೆ.
ನಮ್ಮ ಪೀಳಿಗೆಗೆ ಇದು ಕನಸಿನ ವಿಷಯ. ಪ್ರತಿಯೊಬ್ಬರೂ ಮಹಾಭಾರತದಲ್ಲಿ ನಟಿಸಲು (I like to act in mahabharata says saif) ಬಯಸುತ್ತಾರೆ.
ನಾವು ಬಾಂಬೆ ಚಲನಚಿತ್ರೋದ್ಯಮವನ್ನು ದಕ್ಷಿಣದೊಂದಿಗೆ ಒಟ್ಟುಗೂಡಿಸಿ, ಈ ಭವ್ಯವಾದ ಚಲನಚಿತ್ರವನ್ನು ಮಾಡುತ್ತೇವೆ.” ಎಂದು ಹೇಳಿದ್ದಾರೆ.
ಇದನ್ನೂ ಓದಿ : https://vijayatimes.com/kamal-hassan-controversial-statement/
ಸದ್ಯ ಓಂ ರಾವುತ್ ಅವರ ಆದಿಪುರುಷ ಚಿತ್ರದಲ್ಲಿ ಲಂಕೇಶ್ (ರಾವಣ) ಪಾತ್ರದಲ್ಲಿ ನಟಿಸಿರುವ ಸೈಫ್ ಅಲಿ ಖಾನ್, ಮಹಾಕಾವ್ಯ ಮಹಾಭಾರತದಲ್ಲಿ ನಟಿಸಲು ಬಯಸುವುದಾಗಿ ಬಹಿರಂಗಪಡಿಸಿದ್ದಾರೆ. ಇನ್ನು ಸೈಫ್ ಅಲಿ ಖಾನ್ ಮತ್ತು ಹೃತಿಕ್ ರೋಷನ್ ಅಭಿನಯದ ವಿಕ್ರಮ್ ವೇದಾ(Vikram Vedha) ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.

ಸೆಪ್ಟೆಂಬರ್ 30 ರಂದು ಬಿಡುಗಡೆಯಾದ ಚಲನಚಿತ್ರವು ಸಕಾರಾತ್ಮಕ ವಿಮರ್ಶೆಗಳಿಗೆ ಒಳಗಾಗಿದೆ. ಈ ಚಿತ್ರದಲ್ಲಿ ಸೈಫ್ ಅಲಿ ಖಾನ್‌ಪೊಲೀಸ್ ಪಾತ್ರವನ್ನು ನಿರ್ವಹಿಸಿದರೆ, ಹೃತಿಕ್ ರೋಷನ್ ದರೋಡೆಕೋರನಾಗಿ ನಟಿಸಿದ್ದಾರೆ. ಪುಷ್ಕರ್ ಮತ್ತು ಗಾಯತ್ರಿ ನಿರ್ದೇಶನದ ಈ ಚಿತ್ರದಲ್ಲಿ ರಾಧಿಕಾ ಆಪ್ಟೆ, ರೋಹಿತ್ ಸರಾಫ್ ಮತ್ತು ಯೋಗಿತಾ ಬಿಹಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
https://youtu.be/BXpX_LomwnY ಹೆಚ್ಚುವರಿ ಕಡಲೆ ಬೀಜವನ್ನು ಸಂದಾಯ ಮಾಡಲು ರೈತರ ಆಗ್ರಹ
ಈ ಚಿತ್ರವು 2017 ರ ತಮಿಳು ಚಿತ್ರದ ಅಧಿಕೃತ ಹಿಂದಿ ರಿಮೇಕ್ ಆಗಿದ್ದು, ಆರ್ ಮಾಧವನ್ ಮತ್ತು ವಿಜಯ್ ಸೇತುಪತಿ(Vijay Sethpathi) ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಮೂಲ ಚಿತ್ರವನ್ನು ಕೂಡಾ ಪುಷ್ಕರ್ ಮತ್ತು ಗಾಯತ್ರಿ ನಿರ್ದೇಶಿಸಿದ್ದರು.
- ಮಹೇಶ್.ಪಿ.ಎಚ್