- ಕೆ–ರೈಡ್ ವಿಶೇಷ ಉಪ ಆಯುಕ್ತೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಬಿ.ವಿ. ವಾಸಂತಿ ಅಮರ್
- 8 ಅಧಿಕಾರಿಗಳ ಬಳಿಯೂ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿ ಪತ್ತೆ
- ಎಂಟೂ ಅಧಿಕಾರಿಗಳಲ್ಲಿ ವಾಸಂತಿ ಅವರ ಬಳಿಯೇ ಅತಿ ಹೆಚ್ಚಿನ ಆಸ್ತಿ ಪತ್ತೆ
Bengaluru: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿರುವ ಆರೋಪದಡಿ ವಿವಿಧ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ 8 ಮಂದಿ ಸರ್ಕಾರಿ ಅಧಿಕಾರಿಗಳ ಮನೆ,
ಕಚೇರಿ ಮತ್ತು ಸಂಬಂಧಿಕರ ನಿವಾಸ ಹೀಗೆ ಹಲವಾರು ಕಡೆ ಏಕಕಾಲದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಕೋಟ್ಯಂತರ ರೂಪಾಯಿ ಚರ-ಸ್ಥಿರಾಸ್ತಿಯನ್ನು ಪತ್ತೆ ಹೆಚ್ಚಿದ್ದಾರೆ .
ಅಕ್ರಮ ಮಾರ್ಗದಲ್ಲಿ ಆಸ್ತಿ ಗಳಿಕೆ ಮಾಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಬುಧವಾರ ಮುಂಜಾನೆ ಒಬ್ಬ ಐಎಎಸ್ ಅಧಿಕಾರಿ ಹಾಗೂ 8 ಜನ ಸರ್ಕಾರಿ ಉದ್ಯೋಗಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದಾರೆ.
ಒಬ್ಬ ಐಐಎಸ್ ಮಹಿಳಾ ಅಧಿಕಾರಿ ಸೇರಿದಂತೆ ಎಂಟು ಮಂದಿ ಅಧಿಕಾರಿಗಳ ಮನೆಗಳ ಬೆಳ್ಳಂಬೆಳಿಗ್ಗೆ ದಾಳಿ ನಡೆಸಿದ್ಧಾರೆ.
ಕಲಬುರಗಿ, ಮೈಸೂರು,ಬೆಂಗಳೂರು ನಗರ, ತುಮಕೂರು, ಕೊಪ್ಪಳ ಮತ್ತು ಕೊಡಗು ಜಿಲ್ಲೆಗಳಲ್ಲಿ ವಾಸವಾಗಿದ್ದು ಸರ್ಕಾರಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಅಧಿಕಾರಿಗಳ ನಿವಾಸಗಳ ಮೇಲೆ ದಾಳಿ ಮಾಡಿ ಅವರ ವಿರುದ್ಧ ಅಲ್ಲಿನ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.

ಇನ್ನು ಲೋಕಾಯುಕ್ತ ದಾಳಿಯಲ್ಲಿ ಸರ್ಕಾರಿ ಅಧಿಕಾರಿಗಳ ಮನೆಯಲ್ಲಿ ಅಪಾರ ಪ್ರಮಾಣದ ಆಸ್ತಿ ಹಾಗೂ ಲಕ್ಷಾಂತರ ರೂಪಾಯಿ ನಗದು, ಕೋಟಿ ಬೆಳೆಬಾಳುವ ಚಿನ್ನಾಭರಣ,
ಜಮೀನಿಗೆ ಸೇರಿದ ಪತ್ರಗಳು ಸೇರಿದಂತೆ ಒಟ್ಟು 37.41 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಪತ್ತೆ ಮಾಡಲಾಗಿದೆ ಎಂದು ಅಧಿಕಾರಿಗಳು ಪ್ರಕಟಿಸಿದ್ದಾರೆ. ಸುನೀಲ್ ಕುಮಾರ್ ಕಾರ್ಯಪಾಲಕ ಅಭಿಯಂತರ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರಗಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ಸೇರಿರುವ 4 ಕಡೆಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.
ಆಗ ಲೋಕಾಯುಕ್ತ ಅಧಿಕಾರಿಗಳಿಗೆ ಒಟ್ಟೂ 3 ನಿವೇಶನಗಳು, 1 ವಾಸದ ಮನೆ,15,75 ಲಕ್ಷ ನಗದು, 1.26 ಕೋಟಿ ಬೆಲೆಬಾಳುವ 1.26 ಕೋಟಿ ಚಿನ್ನಾಭರಣ,
12.50 ಲಕ್ಷದ ಮೌಲ್ಯದ ವಾಹನಗಳು, 5.35 ಎಕರೆಯ ಕೃಷಿ ಜಮೀನು ಸೇರಿದಂತೆ 4.34 ಕೋಟಿಯ ಆಸ್ತಿ ಪತ್ತೆಯಾಗಿದೆ.
ಇನ್ನು ಬೆಂಗಳೂರು ಕೆ–ರೈಡ್ ವಿಶೇಷ ಉಪ ಆಯುಕ್ತೆಯಾಗಿ ಕಾರ್ಯ ನಿರ್ವಹಿಸುತ್ತಿರುವ ವಸಂತಿ ಅಮರ್, ಬಿ.ವಿ. ಐಎಎಸ್.
ಅವರಿಗೆ ಸೇರಿರುವ ಐದು ಕಡೆಗಳಲ್ಲಿ ಶೋಧ ಕಾರ್ಯ ನಡೆದಿದ್ದು. ಅದರಲ್ಲಿ , 4 ವಾಸದ ಮನೆಗಳು,3 ನಿವೇಶನಗಳು ಹಾಗೂ 66,390 ನಗದು, 12 ಲಕ್ಷ ಮೌಲ್ಯದ ಚಿನ್ನ, 90 ಲಕ್ಷ ರೂ.
ಬೆಲೆಯ ವಾಹನಗಳು, 3 ಎಕರೆ ಕೃಷಿ ಜಮೀನು ಒಟ್ಟೂ 9.02 ಕೋಟಿಯ ಆಸ್ತಿ ಪತ್ತೆಯಾಗಿರುತ್ತದೆ.
ಇನ್ನು ಎಚ್.ವಿ.ಯರಪ್ಪ ರೆಡ್ಡಿ, ಕಾರ್ಯಪಾಲಕ ಅಭಿಯಂತರ, ಸಿ.ವಿ.ರಾಮನ್ ನಗರ, ಬಿಬಿಎಂಪಿ ಬೆಂಗಳೂರು ಇವರಿಗೆ ಸೇರಿರುವ ಮೂರು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ
1 ವಾಸದ ಮನೆ, 2 ನಿವೇಶನಗಳು, 94 ಲಕ್ಷ ಮೌಲ್ಯದ ಚಿನ್ನಾಭರಣಗಳು, 22 ಲಕ್ಷ ಮೌಲ್ಯದ ವಾಹನಗಳು 93,200 ರೂ ನಗದು ಸೇರಿದಂತೆ ಒಟ್ಟು 2.62 ಕೋಟಿಯ ಆಸ್ತಿ ಪತ್ತೆಯಾಗಿದೆ.
ಮಗ್ಗಿ ಮಾರುತಿ, ಸಹಾಯಕ ನಿರ್ದೇಶಕ, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ, ಎಂ.ಎಸ್.ಬಿಲ್ಡಿಂಗ್, ಬೆಂಗಳೂರು ಇವರಿಗೆ ಸೇರಿದ 10 ಕಡೆಗಳಲ್ಲಿ ಶೋಧ ಕಾರ್ಯ ನಡೆದಿದೆ
ಇದರಲ್ಲಿ 5 ವಾಸದ ಮನೆಗಳು,4.85 ಕೋಟಿ ಬೆಲೆಯ 8 ನಿವೇಶನಗಳು, 1.30 ಲಕ್ಷ ನಗದು, 77.76 ಲಕ್ಷ ಬೆಲೆಯ ಚಿನ್ನ, 42 ಲಕ್ಷ ಮೌಲ್ಯದ ವಾಹನಗಳು,
ಇದನ್ನು ಓದಿ : ಕರ್ನಾಟಕದಲ್ಲಿ VIP ಸಂಚಾರಕ್ಕೆ ಇನ್ಮುಂದೆ ಸೈರನ್ ಬಳಕೆ ಮಾಡುವಂತಿಲ್ಲ : ಪೊಲೀಸ್ ಮಹಾನಿರ್ದೇಶಕರಿಂದ ಮಹತ್ವದ ಆದೇಶ
18.39 ಲಕ್ಷ ಬ್ಯಾಂಕ್ ಬ್ಯಾಲೆನ್ಸ್,1.49 ಕೋಟಿ ಗೃಹೋಪಯೋಗಿ ವಸ್ತುಗಳು, 19 ಎಕರೆ ಕೃಷಿ ಜಮೀನು, ಸೇರಿ ಒಟ್ಟು 6.34 ಕೋಟಿಯ ಅಕ್ರಮ ಆಸ್ತಿ ಪತ್ತೆಯಾಗಿದೆ.