ತಾಜ್ ಮಹಲ್ (Tajmahal) ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಆಗ್ರಾದಲ್ಲಿರುವ ಈ ಪ್ರಸಿದ್ಧ ಪ್ರೇಮಸ್ಮಾರಕ ವಿಶ್ವದ ಏಳು ಅದ್ಭುತಗಳಲ್ಲಿ (Ibrahim roja history) ಒಂದು.

ಪ್ರತಿದಿನ ಸಾವಿರಾರು ಪ್ರವಾಸಿಗರು ಭೇಟಿ ನೀಡುವ ಈ ಸ್ಮಾರಕದಿಂದ ಭಾರತದ ಪ್ರವಾಸೋದ್ಯಮಕ್ಕೆ ಗರಿಸಿಕ್ಕಿಸಿದಂತಿದೆ. ನಮ್ಮ ಪ್ರತೀ ಸಾಧನೆಯ ಹಿಂದೆಯೂ ಒಂದು ಸ್ಫೂರ್ತಿ ಇದ್ದಂತೆ,
ತಾಜ್ ಮಹಲ್ ನಂತಹ ಅದ್ಭುತ ಸ್ಮಾರಕಕ್ಕೇ ಸ್ಫೂರ್ತಿ ನೀಡಿದ ಸ್ಮಾರಕ ಯಾವುದು ಗೊತ್ತಾ? ಅದುವೇ ಬಿಜಾಪೂರದ (Bijapur) ‘ಇಬ್ರಾಹಿಂ ರೋಜಾ’ (Ibrahim Roja). ಈ ಪ್ರಸಿದ್ಧ ಸ್ಮಾರಕದ ನಿರ್ಮಾಣ ಎರಡನೇ ಇಬ್ರಾಹಿಂ ಆದಿಲ್ ಷಾ.
ಬಿಜಾಪೂರದ ಆದಿಲ್ ಶಾಹಿಗಳಲ್ಲಿ ಅತ್ಯಂತ ಪ್ರಸಿದ್ಧ ದೊರೆಯಾಗಿದ್ದ ಸುಲ್ತಾನ ಇಬ್ರಾಹಿಂ, ಸರ್ವಧರ್ಮ ಸಹಿಷ್ಣುತೆಗೆ ಹೆಸರಾದವರು. ಹಿಂದು ಮುಸ್ಲಿಂ ಭಾವೈಕ್ಯತೆಗಾಗಿ ಶ್ರಮಿಸಿದ್ದ ಸುಲ್ತಾನ ‘ಜಗದ್ಗುರು ಬಾದ್ಶಾ’ ಎಂದೇ ಪ್ರಖ್ಯಾತನಾಗಿದ್ದ.
ತನ್ನ ಪ್ರೀತಿಯ ಮಡದಿ ತಾಜ್ ಸುಲ್ತಾನಳಿಗಾಗಿ ಇಬ್ರಾಹಿಂ ಆದಿಲ್ ಷಾ ಒಂದು ವಿಶಿಷ್ಟ ಸ್ಮಾರಕ ನಿರ್ಮಾಣಕ್ಕೆ ಮುಂದಾಗುತ್ತಾನೆ. ಅಂದಿನ ಪ್ರಸಿದ್ಧ ವಾಸ್ತುಶಿಲ್ಪಿ ಮಲಿಕ್ ಸಂದಲ್ ಸ್ಮಾರಕದ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತಾನೆ.

ದುರಾದೃಷ್ಠವಶಾತ್, ಸ್ಮಾರಕ ಪೂರ್ಣಗೊಳ್ಳುವ ಮುನ್ನವೇ ಸುಲ್ತಾನರು ದೈವಾಧೀನರಾಗುತ್ತಾರೆ. ಆಗ ಪತಿಯ ಮೇಲಿನ ಪ್ರೀತಿಯಿಂದ ತಾಜ್ ಸುಲ್ತಾನಳು ತಾನೇ ಮುತುವರ್ಜಿ ವಹಿಸಿ ಸ್ಮಾರಕದ ನಿರ್ಮಾಣವನ್ನು ಪೂರ್ಣಗೊಳಿಸುತ್ತಾಳೆ.
ಇಲ್ಲಿಯೇ ಎರಡನೇ ಇಬ್ರಾಹಿಂ ಆದಿಲ್ ಷಾ ದೊರೆಯ ಸಮಾಧಿ ಮಾಡಲಾಗುತ್ತದೆ. ಹೀಗೆ ತಾಜ್ ರೋಜಾ ಎಂದು ಕರೆಸಿಕೊಳ್ಳಬೇಕಿದ್ದ ಸ್ಮಾರಕ ಸುಲ್ತಾನನ ನೆನಪಿನಲ್ಲಿ ‘ಇಬ್ರಾಹಿಂ ರೋಜಾ’ ಎಂದು ಪ್ರಸಿದ್ಧವಾಗುತ್ತದೆ.
ಇಲ್ಲಿರುವ ಪರ್ಶಿಯನ್ ಭಾಷೆಯಲ್ಲಿರುವ (Ibrahim roja history) ಶಾಸನವು ಈ ಸ್ಮಾರಕ ಕ್ರಿ.ಶ. 1626 ರಲ್ಲಿ ನಿರ್ಮಾಣಗೊಂಡಿದೆ ಎಂಬ ಮಾಹಿತಿಯನ್ನು ನೀಡುತ್ತದೆ.
ಇಬ್ರಾಹಿಂ ರೋಜಾ ಪ್ರಮುಖವಾಗಿ ಎರಡು ಕಟ್ಟಡಗಳನ್ನು ಹೊಂದಿದೆ. ಒಂದು ಸುಲ್ತಾನ ಇಬ್ರಾಹಿಂ ಆದಿಲ್ ಷಾ ಮತ್ತು ಅವನ ಕುಟುಂಬದವರ ಗೋರಿಗಳನ್ನು ಹೊಂದಿರುವ ಸ್ಮಾರಕವಾದರೆ, ಮತ್ತೊಂದು ಪ್ರಾರ್ಥನೆಗಾಗಿ ನಿರ್ಮಿಸಿರುವ ಮಸೀದಿ. https://youtu.be/lfVMzmNJZ4A
ಇಬ್ರಾಹಿಂ ರೋಜಾದ ವಾಸ್ತುಶಿಲ್ಪದ ವೈಭವವನ್ನು ಪದಗಳಲ್ಲಿ ಹೇಳುವುದು ಅಸಾಧ್ಯ. ಇಲ್ಲಿನ ಗೋಡೆಗಳ ಮೇಲೆ ಪರ್ಶೀಯನ್ ಭಾಷೆಯಲ್ಲಿ ಕುರಾನ್ ನ ಪ್ರಮುಖ ಶ್ಲೋಕಗಳನ್ನು ಬರೆಯಲಾಗಿದೆ. ಇಬ್ರಾಹಿಂ ರೋಜಾದ ಪ್ರವೇಶದ್ವಾರದ ಎರಡು ಬದಿಗಳಲ್ಲಿ ಸಾಲುಸಾಲಾಗಿ ಕಟ್ಟಿರುವ ಕೊಠಡಿಗಳನ್ನು ಕಾಣಬಹುದು.
https://vijayatimes.com/dolo-650-tab-allegation-are-false/

ಇವುಗಳಲ್ಲಿ ಸೈನಿಕರು ವಾಸಮಾಡುತ್ತಿದ್ದರಂತೆ. ಪ್ರಸಿದ್ಧ ಇತಿಹಾಸಕಾರ ಕಸಿನ್ಸ್, ಇಬ್ರಾಹಿಂ ರೋಜಾವನ್ನು “ದಕ್ಷಿಣ ಭಾರತದ ತಾಜ್ ಮಹಲ್” ಎಂದು ವರ್ಣಿಸಿದ್ದಾರೆ.
ಮಹಾರಾಷ್ಟ್ರದ ಔರಾಂಗ್ ಬಾದ್ ನಲ್ಲಿ ನಿರ್ಮಾಣಗೊಂಡ ಬೀಬಿ ಕಮಕ ಬಾರಾ ಸ್ಮಾರಕಕ್ಕೂ ಇಬ್ರಾಹಿಂ ರೋಜಾ ಪ್ರೇರಣೆಯಾಗಿತ್ತಂತೆ.
ಈ ಸ್ಮಾರಕವು ಈಗ ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆಗೆ ಸೇರಿದೆ. ಇಲ್ಲಿ 15 ರೂಪಾಯಿ ಪ್ರವೇಶ ದರವಿದ್ದು, ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಪ್ರವಾಸಿಗರ ವೀಕ್ಷಣೆಗೆ ತೆರೆದಿರುತ್ತದೆ.