ದುಬೈ, ಡಿ. 28: ಭಾರತ ಕ್ರಿಕೆಟ್ ತಂಡದ ಯಶಸ್ವಿ ನಾಯಕ ಹಾಗೂ ವಿಶ್ವ ಕ್ರಿಕೆಟ್‌ನ ಸರ್ವಶ್ರೇಷ್ಠ ಆಟಗಾರ ಎನಿಸಿರುವ ಮಹೇಂದ್ರ ಸಿಂಗ್ ಧೋನಿ, “ಐಸಿಸಿ ದಶಕದ ಕ್ರಿಕೆಟ್ ಸ್ಪೂರ್ತಿ” ಪ್ರಶಸ್ತಿ ಪಡೆದಿದ್ದಾರೆ.
2011ರಲ್ಲಿ ಇಂಗ್ಲೆಂಡ್‌ನ ನಾಟಿಂಗ್ಯಾಮ್ ನಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ಅಚ್ಚರಿಯ ರೀತಿಯಲ್ಲಿ ರನ್ಔಟ್ ಆಗಿದ್ದ ಇಂಗ್ಲೆಂಡ್ ಆಟಗಾರ ಇಯಾನ್ ಬೆಲ್ ಅವರಿಗೆ ಮತ್ತೊಮ್ಮೆ ಬ್ಯಾಟಿಂಗ್ ಮಾಡಲು ಅವಕಾಶ ಕಲ್ಪಿಸಿಕೊಡುವ ಮೂಲಕ ಕ್ರೀಡಾ ಸ್ಪೂರ್ತಿ ಮರೆದಿದ್ದರು. ಧೋನಿ ಅವರ ಈ ಕ್ರೀಡಾ ಸ್ಪೂರ್ತಿಗೆ 2011ರಲ್ಲಿ “ಸ್ಪಿರಿಟ್ ಆಫ್ ದಿ ಕ್ರಿಕೆಟ್” ಪ್ರಶಸ್ತಿ ಪಡೆದರು. ಇದೀಗ ಇದೇ ಕಾರಣಕ್ಕೆ ಧೋನಿ ಅವರಿಗೆ ಕಳೆದ 10 ವರ್ಷಗಳಲ್ಲಿ ಕ್ರಿಕೆಟ್ ಮೈದಾನದಲ್ಲಿ ತೋರಿದ ಹೃತ್ಪೂರ್ವಕ ಕ್ರೀಡಾ ಸ್ಪೂರ್ತಿಯ ಸನ್ನಿವೇಶ ಎನ್ನಿಸಿದ್ದು, ಧೋನಿ ಅವರಿಗೆ ದಶಕದ ಕ್ರಿಕೆಟ್ ಸ್ಪೂರ್ತಿ ಪ್ರಶಸ್ತಿ ತಂದುಕೊಟ್ಟಿದೆ. ಧೋನಿಯ ಕ್ರೀಡಾ ಸ್ಪೂರ್ತಿಗೆ ತಲೆಬಾಗಿದ ವಿಶ್ವ ಕ್ರಿಕೆಟ್‌ನ ಅಭಿಮಾನಿಗಳು ಧೋನಿ ಅವರನ್ನು ಈ ಪ್ರಶಸ್ತಿಗೆ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.