ಬೆಂಗಳೂರು ಅ 02 : ಆಹಾರದಲ್ಲಿ ಬಗೆ ಬಗೆಯ ರೆಸಿಪಿಗಳಲ್ಲಿ ವೈವಿಧ್ಯತೆ ಮತ್ತು ಹೊಸ ಹೊಸ ಪ್ರಯತ್ನಗಳು ನಡೆಯುತ್ತಲೇ ಇರುತ್ತದೆ. ಆದರೆ ಕೆಲವು ಪ್ರಯತ್ನಗಳು ಜನರನ್ನು ಹೆಚ್ಚು ಹಾಗೂ ಬಹುಬೇಗ ಆಕರ್ಷಿಸುತ್ತದೆ. ಬೆಂಗಳೂರಿನ ರೆಸ್ಟೋರೆಂಟ್ ಒಂದರಲ್ಲಿ ಐಸ್ ಕ್ರೀಮ್ ವಿನ್ಯಾಸದ ಇಡ್ಲಿಯನ್ನು ತಯಾರಿಸಿ ವಿಭಿನ್ನತೆ ತೋರಿದೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ.

ಇದು ಬೆಂಗಳೂರಿನ ರೆಸ್ಟೋರೆಂಟ್ ಒಂದರಲ್ಲಿ ಐಸ್ ಕ್ರೀಮ್ ವಿನ್ಯಾಸದ ಇಡ್ಲಿಯನ್ನು ತಯಾರಿಸಿ ವಿಭಿನ್ನತೆ ತೋರಿದೆ ಎಂಥವರಿಗೂ ನೋಡಿದಾಕ್ಷಣ ಇದು ಇಡ್ಲಿ ಅಥವಾ ಐಸ್ ಕ್ರೀಮ್ ಎಂಬ ಸಂಶಯ ಬರುವುದು ಗ್ಯಾರಂಟಿ. ನೀವು ಇದರ ರುಚಿ ನೋಡುವವರೆಗೂ ಇದನ್ನು ಇಡ್ಲಿ ಎಂದು ನಂಬುವುದಕ್ಕೆ ಸಾಧ್ಯವೇ ಇಲ್ಲ
ಗ್ರಾಹಕರನ್ನು ಸೆಳೆಯುವ ದೃಷ್ಟಿಯಿಂದ ಬೆಂಗಳೂರಿನ ರೆಸ್ಟೋರೆಂಟ್ ಒಂದರಲ್ಲಿ ಸೇವರಿ ರೈಸ್ ಕೇಕ್ ರೆಸಿಪಿ ವಿಭಿನ್ನವಾಗಿ ತಯಾರಿಸಿದ್ದಾರೆ. ಚಟ್ಟೆ ಹಾಗೂ ಸಾಂಬಾರ್ ಜೊತೆಗೆ ಐಸ್ಕ್ರೀಮ್ನಂತೆ ಕಾಣುವ ಈ ಇಡ್ಲಿಯನ್ನು ನೋಡಲು ವಿಚಿತ್ರ ಅನಿಸುತ್ತದೆ. ಗ್ರಾಹಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿ ಕೊಂಡಿದ್ದ ಸೇವರಿ ರೈಸ್ ಕೇಕ್ ಭಾರೀ ವೈರಲ್ ಆಗಿದೆ.
ಬಹುತೇಕರಿಗೆ ಈ ವಿಶಿಷ್ಟ ಪ್ರಯೋಗ ಇಷ್ಟವಾದರೆ ಕೆಲವರು ಇಡ್ಲಿ ಇಗಲೇ ಚೆನ್ನಾಗಿದೆ, ವಿಭಿನ್ನತೆ ಎಂದು ಹೇಳಿ ಇದನ್ನು ಹಾಳು ಮಾಡಬೇಡಿ ಎಂದು ಸಹ ತಮ್ಮ ಪ್ರತಿಕ್ರಿಯೆ ಹೇಳಿದ್ದಾರೆ.