ನಟ ಅಲ್ಲು ಅರ್ಜುನ್ (Actor Allu Arjun) ಇಂದು ಬೆಳಿಗ್ಗೆ ಜೈಲಿನಿಂದ ರಿಲೀಸ್ (Release) ಆಗಿದ್ದಾರೆ.ಪುಷ್ಪ 2 ಚಿತ್ರಕ್ಕೆ ಯಶಸ್ಸು (Success) ಸಿಕ್ಕ ಬೆನ್ನಲೇ ಐಕಾನ್ ಸ್ಟಾರ್ (Icon Star) ಅಲ್ಲು ಅರ್ಜುನ್ ಅವರನ್ನು ಸಂದ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಬಂಧಿಸಲಾಗಿತ್ತು.ಅಲ್ಲು ಅರ್ಜುನ್ ಬಿಡುಗಡೆಯಾಗುದ್ದಂತೆ ಅಭಿಮಾನಿಗಳು ಹಾಗೂ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.ಪೋಲೀಸರ ಭದ್ರತೆಯೊಂದಿಗೆ (With police security) ಚಂಚಲಗೂಡ ಸೆಂಟ್ರಲ್ ಜೈಲಿನಿಂದ (Central Jail) ರಿಲೀಸ್ ಮಾಡಲಾಗಿದೆ.
ಅಲ್ಲು ಅರ್ಜುನ್ ಅವರನ್ನು ಶುಕ್ರವಾರ ಸಂದ್ಯಾ ಥಿಯೇಟರ್ (Sandya Theatre) ಕಾಲ್ತುಳಿತದಲ್ಲಿ ಮಹಿಳೆ ಸಾವನ್ನಪ್ಪಿದ ಪ್ರಕರಣದಲ್ಲಿ ಬಂಧಿಸಲಾಗಿತ್ತು.ಮೃತ ಮಹಿಳೆಯ ಗಂಡ ನೀಡಿದ ದೂರಿನ (Complaint) ಮೇರೆಗೆ ಬಂಧಿಸಲಾಗಿತ್ತು.ಪುಷ್ಪಾ 2: ದಿ ರೂಲ್ನ ಪ್ರಥಮ ಪ್ರದರ್ಶನದ (Premiere) ವೇಳೆ ಕಾಲ್ತುಳಿತ ಸಂಭವಿಸಿದ್ದು,35 ವರ್ಷದ ರೇವತಿ ಎಂಬ ಮಹಿಳೆ ಸಾವನ್ನಪ್ಪಿದ್ದರು ಮತ್ತು ಆಕೆಯ ಇಬ್ಬರು ಮಕ್ಕಳು ಗಾಯಗೊಂಡಿದ್ದರು.
ಅಲ್ಲು ಅರ್ಜುನ್ರನ್ನ ನಾಂಪಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ (Nampally Magistrate Court) ಮುಂದೆ ಹಾಜರುಪಡಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ (Court) ಅಲ್ಲು ಅರ್ಜುನ್ಗೆ 14 ದಿನಗಳ ನ್ಯಾಯಾಂಗ ಬಂಧನವನ್ನು (Judicial custody) ನೀಡಿತ್ತು ಆದರೆ ಪ್ರಕರಣ ರದ್ದು ಮಾಡುವಂತೆ (Cancel the case) ಹೈ ಕೋರ್ಟ್ (High Court) ಮೊರೆ ಹೋಗಿದ್ದು ತೆಲಂಗಾಣ ಹೈ ಕೋರ್ಟ್ (Telangana High Court) ಅಲ್ಲು ಅರ್ಜುನ್ ಗೆ ಮಧ್ಯಂತರ ಜಾಮೀನು (Interim bail) ನೀಡಿದೆ. ಜಾಮೀನು ಸಿಕ್ಕರೂ ಕೂಡ ನಟ ರಾತ್ರಿಯೆಲ್ಲಾ ಜೈಲಿನಲ್ಲಿದ್ದು ಇಂದು ಬೆಳಿಗ್ಗೆ ಜೈಲಿನಿಂದ ರಿಲೀಸ್ ಆಗಿದ್ದಾರೆ.