New Delhi: ಅನಗತ್ಯವಾಗಿ ರೋಗಿಗಳನ್ನು ತುರ್ತು ನಿಗಾ ಘಟಕಗಳಲ್ಲಿ (Emergency Care Unit) ದಾಖಲಿಸುವ ಮೂಲಕ ರೋಗಿಗಳಿಂದ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ನೂತನ ಆದೇಶ ಹೊರಡಿಸಿರುವ ಕೇಂದ್ರ ಸರ್ಕಾರ, ರೋಗಿ ಅಥವಾ ರೋಗಿಯ ಕುಟುಂಬಸ್ಥರ ಅನುಮತಿ ಇಲ್ಲದೇ ತುರ್ತು ನಿಗಾ ಘಟಕಗಳಲ್ಲಿ(ಐಸಿಯು) ರೋಗಿಯನ್ನು ದಾಖಲಿಸುವಂತಿಲ್ಲ ಎಂದು ಮಾರ್ಗಸೂಚಿ ಹೊರಡಿಸಿದೆ.

‘ಬಿಲ್ ಭಾರ’ವನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರಕಾರ (Central Government) ಈ ಕ್ರಮ ಕೈಗೊಂಡಿದ್ದು, ತುರ್ತು ನಿಗಾ ಘಟಕಗಳಲ್ಲಿ ಚಿಕಿತ್ಸೆಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿ ಹೊರಡಿಸಿದೆ. ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ನಿಯಮಗಳ ಪ್ರಕಾರ, ಗಂಭೀರ ಅನಾರೋಗ್ಯಕ್ಕೆ ತುತ್ತಾಗಿರುವ ಮತ್ತು ಜೀವ ಉಳಿಯುವ ಸಾಧ್ಯತೆ ಕಡಿಮೆ ಇರುವ ರೋಗಿಯನ್ನು ಕುಟುಂಬಸ್ಥರ ವಿರೋಧದ ನಡುವೆಯೂ ಆಸ್ಪತ್ರೆಗಳು ICUನಲ್ಲಿ ಇಟ್ಟುಕೊಳ್ಳುವಂತಿಲ್ಲ.
ರೋಗಿಗಳ (Patients) ಸಂಬಂಧಿಗಳು ಒಪ್ಪದಿದ್ದರೇ ತುರ್ತು ನಿಗಾ ಘಟಕಕ್ಕೆ ರೋಗಿಗಳನ್ನು ದಾಖಲಿಸಿಕೊಳ್ಳುವಂತಿಲ್ಲ. ಇನ್ನು ICU ದಾಖಲಾತಿ ನಿಯಮಗಳ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ, 24 ಪರಿಣಿತ ತಜ್ಞರ ವರದಿ ಆಧರಿಸಿ ಈ ಮಾರ್ಗಸೂಚಿಯಲ್ಲಿ, ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿದೆ.

ಯಾವ ಪರಿಸ್ಥಿತಿಯಲ್ಲಿ ICU ಅಗತ್ಯ?
ಹೆಚ್ಚುವರಿ ಚಿಕಿತ್ಸೆಗೆ ಕೊರತೆ ಎದುರಾದಾಗ ICUನಲ್ಲಿಇರಿಸಬಹುದು.
ಬಹು ಅಂಗಾಂಗ ವೈಫಲ್ಯ ಉಂಟಾದಾಗ ICUನಲ್ಲಿಇರಿಸಬಹುದು.
ಅಂಗಾಂಗ ಕಸಿ ಚಿಕಿತ್ಸೆ ಪಡೆದಾಗ
ದೇಹಸ್ಥಿತಿ ಕ್ಷೀಣಿಸುವ ಸಾಧ್ಯತೆ ಇದ್ದಲ್ಲಿ
ತೀವ್ರತರದ ಉಸಿರಾಟ ಸಮಸ್ಯೆ,
ಹೃದಯ ಸಂಬಂಧಿ ಕಾಯಿಲೆಗಳು
ಮೇಜರ್ ಆಪರೇಷನ್ಗೆ ಒಳಗಾಗಿದ್ದರೆ ಐಸಿಯು ಅಗತ್ಯವಿರುತ್ತದೆ.
ಪರೀಕ್ಷೆ ಕಡ್ಡಾಯ:
ರೋಗಿಯು ICU ಚಿಕಿತ್ಸೆಯ ನಿರೀಕ್ಷೆಯಲ್ಲಿದ್ದರೆ ರೋಗಿಯ ರಕ್ತದೊತ್ತಡ, ನಾಡಿ ಮಿಡಿತ, ಆಮ್ಲಜನಕದ ಪ್ರಮಾಣ, ಉಸಿರಾಟ, ಹೃದಯದ ಆರೋಗ್ಯ (Heart Problem), ಮೂತ್ರ ವಿಸರ್ಜನೆ ಪ್ರಮಾಣ ಮತ್ತು ನರವ್ಯೂಹದ ಸ್ಥಿತಿಗತಿಯ ಆಧರಿಸಿ ಐಸಿಯುಗೆ ದಾಖಲಿಸಿಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ.