Visit Channel

ನಿಮ್ಮ ಹೆಂಡತಿಯಲ್ಲಿ ಈ ಗುಣಗಳಿದ್ದರೆ, ನಿಮಗಿಂತ ಅದೃಷ್ಟವಂತರು ಬೇರೊಬ್ಬರಿಲ್ಲ

2-1621247752

ಈ ಜಗತ್ತಿನಲ್ಲಿ ಹೆಣ್ಣಿಗೆ ಮಹತ್ತರ ಸ್ಥಾನವಿದೆ. ತಾಯಾಗಿ, ಹೆಂಡತಿಯಾಗಿ, ಮಗಳಾಗಿ, ಸಹೋದರಿಯಾಗಿ ಹೀಗೆ ಒಂದಲ್ಲ ಒಂದು ಪಾತ್ರದಲ್ಲಿ ಗಂಡಿನ ಜೀವನದ ಅವಿಭಾಜ್ಯ ಅಂಗವಾಗಿರುತ್ತಾಳೆ. ಆದರೆ ಆಕೆ ಯಾವುದೇ ಪಾತ್ರದಲ್ಲಿದ್ದರೂ ಉತ್ತಮ ಗುಣಗಳನ್ನು ಹೊಂದುವುದು ತುಂಬಾ ಮುಖ್ಯ. ಅದರಲ್ಲೂ ಮುಖ್ಯವಾಗಿ ಪತ್ನಿಯ ಪಾತ್ರದಲ್ಲಿ. ಗಂಡನ ಏಳು-ಬೀಳು ನಿಂತಿರುವುದೇ ಆಕೆಯ ಕೈಯಲ್ಲಿ.
ಒಳ್ಳೆಯ ಗುಣಗಳನ್ನು ಹೊಂದಿರುವ ಹೆಣ್ಣನ್ನು ವಿವಾಹವಾದರೆ ಮನೆ ಸ್ವರ್ಗ, ಇಲ್ಲ ಅದೇ ಮನೆ ನಿಮಗೆ ನರಕವಾಗಿ ಕಾಡಿಬಿಡುತ್ತದೆ ಎಂಬ ಮಾತಿದೆ. ಚಾಣಕ್ಯನ ಪ್ರಕಾರ, ಮಹಿಳೆಯರು ಈ ಕೆಳಗಿನ ಗುಣಗಳನ್ನು ಹೊಂದಿದ್ದರೆ, ಅವರನ್ನು ಪಡೆದ ಗಂಡಂದಿರು ತುಂಬಾ ಅದೃಷ್ಠವಂತರಂತೆ. ಆ ಪುರುಷರ ಜೀವನ ಸಂತೋಷದಿಂದ ಕೂಡಿರುತ್ತದೆ. ಹಾಗಾದ್ರೆ ಆ ಗುಣಗಳಾವುವು ನೋಡೋಣ.

ಉತ್ತಮ ದಾಂಪತ್ಯಕ್ಕಾಗಿ ಮಹಿಳೆಯರಲ್ಲಿ ಇರಬೇಕಾದ ಗುಣಗಳನ್ನು ಈ ಕೆಳಗೆ ನೀಡಲಾಗಿದೆ:

ದಯೆ ಮತ್ತು ಕರುಣೆ:
ಚಾಣಕ್ಯನ ಪ್ರಕಾರ, ಮಹಿಳೆಯು ಕಠೋರ ಮನಸ್ಥಿತಿಯನ್ನು ಹೊಂದಿರಬಾರದು. ಅದರ ಬದಲಿಗೆ ಇತರರ ಬಗ್ಗೆ ಕರುಣೆ ಮತ್ತು ನಮ್ರತೆಯ ಗುಣಗಳನ್ನು ಹೊಂದಿರಬೇಕು. ಯಾವಾಗಲೂ ಕುಟುಂಬ ಮತ್ತು ಸಂಬಂಧಗಳನ್ನು ಪ್ರೀತಿಸುತ್ತಾಳೆ. ಜೊತೆಗೆ ಯಾವಾಗಲೂ ಇತರರ ಯೋಗಕ್ಷೇಮದ ಬಗ್ಗೆ ಯೋಚಿಸುತ್ತಾಳೆ. ಅಂತಹ ಕುಟುಂಬದಲ್ಲಿ ಯಾವಾಗಲೂ ಸಂತೋಷ ಮತ್ತು ಶಾಂತಿ ನೆಲೆಸಿರುತ್ತದೆ. ಹೆಂಡತಿಯಲ್ಲಿ ಈ ಗುಣಗಳನ್ನು ಹೊಂದಿರುವ ವ್ಯಕ್ತಿಯ ಕುಟುಂಬವು ಸಂತೋಷವಾಗಿರತ್ತದೆ. ಅವನ ಜೀವನವೂ ಸಂತೋಷದಾಯಕವಾಗಿರುತ್ತದೆ.

ಧರ್ಮ ಪಾಲನೆ:
ಮಹಿಳೆಯಾಗಲಿ ಅಥವಾ ಪುರುಷರಾಗಲಿ ಧರ್ಮವನ್ನು ಅನುಸರಿಸಬೇಕು ಎಂಬುದು ಚಾಣಕ್ಯನ ಮಾತು. ಧರ್ಮವನ್ನು ಅನುಸರಿಸುವ ಮಹಿಳೆ, ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸವನ್ನು ಸರಿಯಾಗಿ ಅರ್ಥಮಾಡಿಕೊಳ್ಳುತ್ತಾಳೆ. ಧರ್ಮವನ್ನು ಅನುಸರಿಸುವ ಮಹಿಳೆ ಯಾವಾಗಲೂ ಸತ್ಯ ಧರ್ಮದ ಹಾದಿಯಲ್ಲಿ ಸಾಗುತ್ತಾಳೆ. ಅವರು ತಮ್ಮ ಸಂತತಿಯನ್ನು ಸುಸಂಸ್ಕೃತಗೊಳಿಸುತ್ತಾರೆ. ಅಂತಹ ಮಹಿಳೆ ಯಾವಾಗಲೂ ತನ್ನ ಕರ್ತವ್ಯಗಳನ್ನು ನಿರ್ವಹಿಸುತ್ತಾಳೆ. ತನ್ನ ಕುಟುಂಬವನ್ನು ಮಾತ್ರವಲ್ಲದೆ ತನ್ನ ಸುತ್ತಮುತ್ತಲಿರುವ ಜನರನ್ನು ಒಳ್ಳೆಯದನ್ನೇ ಹೇಳಿಕೊಡುತ್ತಾರೆ. ಧರ್ಮದ ಹಾದಿಯಲ್ಲಿ ನಡೆಯುವ ಮಹಿಳೆ ಸ್ವಾಭಿಮಾನದಿಂದ ಇರುವುದಲ್ಲದೇ, ಇಡೀ ಕುಟುಂಬದ ಮೌಲ್ಯವನ್ನು ಹೆಚ್ಚಿಸುತ್ತಾಳೆ.

ಹಣ ಉಳಿತಾಯ:
ಹಣವು ವ್ಯಕ್ತಿಯ ಕೆಟ್ಟ ಕಾಲದಲ್ಲಿ ಸಹಾಯ ಮಾಡುತ್ತದೆ ಮತ್ತು ಕೆಟ್ಟ ಸಂದರ್ಭಗಳಿಂದ ಹೊರಬರಲು ಸಹಾಯ ಮಾಡುತ್ತದೆ ಎಂದು ಚಾಣಕ್ಯ ಹೇಳುತ್ತಾರೆ. ಸಂಪತ್ತನ್ನು ಸಂಗ್ರಹಿಸುವ ಅಭ್ಯಾಸವನ್ನು ಹೊಂದಿರುವ ವ್ಯಕ್ತಿಯು ಕೆಟ್ಟ ಸಮಯವನ್ನು ಸುಲಭವಾಗಿ ಜಯಿಸುತ್ತಾನೆ. ಆದ್ದರಿಂದ ಹೆಂಡತಿ ದುಂದು ವೆಚ್ಚ ಮಾಡದೇ, ಅಗತ್ಯದಷ್ಟೇ ಖರ್ಚು ಮಾಡಿಕೊಂಡು ಮನೆಯ ವೆಚ್ಚಗಳ್ನೆಲ್ಲಾ ಭರಿಸಿ, ಸ್ವಲ್ಪ ಮಟ್ಟದ ಉಳಿತಾಯ ಮಾಡುತ್ತಾಳೆಂದರೆ ನೀವೇ ಅದೃಷ್ಠವಂತರು. ಅವರಿಗೆ ಮನೆ ಹೇಗೆ ನಿರ್ವಹಿಸುವುದೆಂದು ಚೆನ್ನಾಗಿ ತಿಳಿದಿರುತ್ತದೆ.

ಗೌರವ:
ಗೌರವ ಎಂದಾಕ್ಷಣ ಕೇವಲ ತಗ್ಗಿ ನಿಲ್ಲುವುದು, ಆಡಿದ ಮಾತುಗಳನ್ನೆಲ್ಲಾ ಸಹಿಸಿಕೊಳ್ಳುವುದು ಎಂದಲ್ಲ. ತಮ್ಮ ಹಿರಿಯರಿಗೆ ಗೌರವ ನೀಡುವುದು, ನಿಮ್ಮ ಮಾತುಗಳಿಗೆ ಗೌರವ ನಿಡುವುದರ ಜೊತೆಗೆ ಅವರ ಅಭಿಪ್ರಾಯಕ್ಕೂ ಮಹತ್ವ ನೀಡುದುದಾಗಿದೆ. ಗೌರವ ಕೊಟ್ಟು ಗೌರವ ಸಂಪಾದಿಸುವ ವ್ಯಕ್ತಿತ್ವ ನಿಮ್ ಪತ್ನಿಯದ್ದಾಗಿದ್ದರೆ, ನೀವು ಅದೃಷ್ಟವಂತರು. ಅವರು ಎಲ್ಲಿಯೂ ನಿಮ್ಮ ಗೌರವಕ್ಕೆ ಧಕ್ಕ ಬರುವಂತೆ ನಡೆದುಕೊಳ್ಳುವುದಿಲ್ಲ, ನಿಮ್ಮ ಗೌರವ ಕಮ್ಮಿಯಾಗುವುದನ್ನೂ ಸಹಿಸುವುದಿಲ್ಲ.

Latest News

bsy
ರಾಜಕೀಯ

ಬಿಜೆಪಿಯ ಸಂಸದೀಯ ಮಂಡಳಿಗೆ ಯಡಿಯೂರಪ್ಪ ; ರಾಜಕೀಯವಾಗಿ ಮತ್ತಷ್ಟು ಬಲಗೊಂಡ ಬಿಎಸ್‌ವೈ

ಇನ್ನು ಸಂಸದೀಯ ಮಂಡಳಿಯಲ್ಲಿ ಉತ್ತರಪ್ರದೇಶ(UttarPradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌(Yogi Adityanath) ಅವರಿಗೆ ಸ್ಥಾನ ನೀಡಲಾಗುತ್ತದೆ ಎನ್ನಲಾಗಿತ್ತು. ಆದರೆ ಅವರಿಗೆ ಸ್ಥಾನ ಲಭಿಸಿಲ್ಲ.

bjp
ರಾಜಕೀಯ

ಡಿಕೆಶಿ ಸ್ವಾತಂತ್ರ್ಯದ ನಡಿಗೆಯ ಉದ್ದೇಶ, ಸಿದ್ದರಾಮಯ್ಯ ಕಿರುಕುಳದಿಂದ ಸ್ವಾತಂತ್ರ್ಯ ಪಡೆಯುವುದೋ? : ಬಿಜೆಪಿ

ಸಿದ್ದರಾಮಯ್ಯ(Siddaramaiah) ಕಿರುಕುಳದಿಂದ ಸ್ವಾತಂತ್ರ್ಯ ಪಡೆಯುವುದೋ ಅಥವಾ ಕಾಂಗ್ರೆಸ್(Congress) ಹಿರಿಯ ನಾಯಕರು ಡಿಕೆಶಿ(DKS) ಸುತ್ತ ಹೆಣೆದಿರುವ ಜಾಲದಿಂದ ಸ್ವಾತಂತ್ರ್ಯ ಪಡೆಯುವುದೋ?

Ghee
ಆರೋಗ್ಯ

ತುಪ್ಪದ ಬಗ್ಗೆ ತಪ್ಪು ಕಲ್ಪನೆ ಬೇಡ! ; ತಪ್ಪದೇ ತುಪ್ಪ ಸೇವಿಸಿ, ಈ ಆರು ಪ್ರಯೋಜನಗಳನ್ನು ಪಡೆದುಕೊಳ್ಳಿ

ತುಪ್ಪವು ರೋಗನಿರೋಧಕ ಶಕ್ತಿಯನ್ನು ವೃದ್ದಿಸುತ್ತದೆ, ಮೂಳೆಯ ಆರೋಗ್ಯವನ್ನು ಉತ್ತೇಜಿಸುತ್ತದೆ, ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.

Assam
ದೇಶ-ವಿದೇಶ

500 ರೂ. ಬೆಟ್ಟಿಂಗ್ ಸೋಲಿಗೆ ಸ್ನೇಹಿತನ ಶಿರಚ್ಛೇದ ; 25 ಕಿ.ಮೀ ದೂರದ ಪೊಲೀಸ್ ಠಾಣೆಗೆ ಹೋಗಿ ಶರಣು!

ಆತನ ತಲೆಯನ್ನು ಹಿಡಿದುಕೊಂಡು ರಾತ್ರಿಯ ವೇಳೆ 25 ಕಿ.ಮೀ ದೂರವಿರುವ ಪೊಲೀಸ್ ಠಾಣೆಗೆ(Police Station) ನಡೆದು ಶರಣಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.