Bengaluru: ಕರ್ನಾಟಕ (Karnataka) ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾದ ಶಾಂತ್ ಎ ತಿಮ್ಮಯ್ಯ (illegal fraud on timmaiah) ಅವರ ಹುದ್ದೆಗೆ ಕಂಟಕ ಶುರುವಾಗಿದೆ.
ಯಾಕೆಂದರೆ ವಿವಿಧ ಏಜೆನ್ಸಿಗಳಿಗೆ (Agency) ನಿಯಮ ಬಾಹಿರವಾಗಿ 14 ಕೋಟಿ ಮೊತ್ತದಷ್ಟು ಹಣ ನೀಡುವುದಕ್ಕೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಮೂಲಕ ಜಾಗೃತಿ ಕಾರ್ಯಕ್ರಮಗಳಿಗೆ ಅಧ್ಯಕ್ಷರು
ಮುಂದಾಗಿದ್ದರು ಎನ್ನುವ ಬಗ್ಗೆ ಮಂಡಳಿಯ ನಿಕಟಪೂರ್ವ ಸದಸ್ಯ ಕಾರ್ಯದರ್ಶಿಯಾದ ಸುರೇಶ್ ಪಾಯಲ್ (Suresh Payal) ಅವರು ನೀಡಿರುವ ದೂರಿನ ಆಧಾರದ ಮೇಲೆ ಸರ್ಕಾರ ತನಿಖೆಗೆಂದು
ನೇಮಿಸಿದ್ದ ಅಧಿಕಾರಿ ನೀಡಿರುವ ವರದಿಯಲ್ಲಿ ಬಹುತೇಕ ಅಕ್ರಮ (illegal fraud on timmaiah) ಸಾಬೀತಾಗಿದ್ದು, ಸ್ಪೋಟಕ ಮಾಹಿತಿ ದೊರಕಿದೆ.

ಅಧ್ಯಕ್ಷ ಶಾಂತ್ ಎ ತಿಮ್ಮಯ್ಯ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವುದು ಸರ್ಕಾರದ ಮಟ್ಟದಲ್ಲಿ ನಡೆದ ತನಿಖೆಯಲ್ಲಿ ಲಭ್ಯವಾಗಿರುವುದಲ್ಲದೆ, ನಿಯಮ ಬಾಹಿರವಾಗಿ ಮಂಡಳಿಯ
ಹಣವನ್ನು ಮಂಜೂರು ಮಾಡುವುದಕ್ಕೆ ಏಕಪಕ್ಷೀಯ ನಿರ್ಣಯ ಕೈಗೊಂಡಿದ್ದರು ಎಂದು ಪ್ರೂವ್ ಆಗಿದೆ ಅನ್ನುವ ಮಾಹಿತಿ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ (Flash News) ಲಭ್ಯವಾಗಿದೆ.
ಜೊತೆಗೆ ಸರ್ಕಾರಕ್ಕೆ ಸಲ್ಲಿಸಲಾಗಿರುವ ವರದಿಯ ವಿಶೇಷ ಪ್ರತಿಗಳು ದೊರೆತಿದ್ದು, ಸುರೇಶ್ ಪಾಯಲ್ (Suresh Payal) ಅವರು ಈ ವಿಷಯಕ್ಕೆ ಸಂಬಂಧಪಟ್ಟಂತೆ ಅಂದರೆ ಜಾಗೃತಿ ಮೂಡಿಸಲು
ಮಂಡಳಿಯಿಂದ ಹಮ್ಮಿಕೊಳ್ಳಲಾಗಿದ್ದ ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣದ ಕುರಿತು ಕಾರ್ಯಕ್ರಮಗಳ ಮಂಜೂರಾತಿಯಲ್ಲಿ ಕರ್ನಾಟಕ (Karnataka) ಸಾರ್ವಜನಿಕ ಸಂಗ್ರಹಣೆಯಲ್ಲಿ
ಪಾರದರ್ಶಕತೆ ಅಧಿನಿಯಮ-1999ರ ಉಪಬಂಧಗಳನ್ನು ಉಲ್ಲಂಘಿಸಿರುವುದಾಗಿ ಆಪಾದಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದರು.
ಸಮಗ್ರವಾಗಿ ತನಿಖೆ ನಡೆಸಿ ವರದಿ ಸಲ್ಲಿಸಲು 26-07-2023 ರಂದು ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಅಪರ ನಿರ್ದೆಶಕ ಮಹಾದೇವ್ (Mahadev) ಅವರನ್ನು ಮಂಜೂರಾತಿಯಲ್ಲಿ
ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಉಪಬಂಧಗಳು ಉಲ್ಲಂಘನೆಯಾಗಿರುವುದನ್ನು ಪತ್ತೆ ಮಾಡಲು ಅರಣ್ಯ-ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಯ
ಸರ್ಕಾರದ ಅಧೀನ ಕಾರ್ಯದರ್ಶಿ ಕಚೇರಿಯಿಂದ ನೇಮಕಗೊಳಿಸಿ ಆದೇಶ ಹೊರಡಿಸಲಾಗಿತ್ತು.
ಕೇರಳಾದ ಶೌಚಾಲಯದ ತ್ಯಾಜ್ಯ ವಿಟ್ಲದಲ್ಲಿ ವಿಲೇವಾರಿ: ಸಾರ್ವಜನಿಕರ ದೂರಿಗೂ ಕಿವಿಕೊಡದ ಪೊಲೀಸ್ !
ಅಲ್ಲದೆ ತನಿಖೆಯಾ ವೇಳೆ ಯಾವುದೇ ಮಾಹಿತಿ ಕೇಳಿದರೂ ಅದನ್ನು ಬಚ್ಚಿಡದೆ ಪ್ರಾಮಾಣಿಕವಾಗಿ ಕೋಡಬೇಕು ಹಾಗೂ ದಾಖಲೆಗಳನ್ನು ಸಲ್ಲಿಸಬೇಕು. ಮತ್ತು ತನಿಖೆಗೆ ಯಾವುದೇ ರೀತಿಯ ಅಸಹಕಾರ
ನೀಡಬಾರದೆನ್ನುವ ಷರತ್ತುಗಳನ್ನು ಕೂಡ ಹಾಕಿತ್ತು. ಇವರನ್ನು ನೇಮಿಸಿದ ತಿಂಗಳೊಳಗೆ ಮಹಾದೇವ್ ಅವರು ವರದಿ ಸಲ್ಲಿಸಿದ್ದಾರೆ ಎನ್ನಲಾಗಿದ್ದು, ಈ ವರದಿಯಲ್ಲಿ ಏಜೆನ್ಸಿಗಳಿಗೆ ಮಂಜೂರಾತಿಯಲ್ಲಿ
ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಉಪನಿಬಂಧನೆ ಮೀರಿ ಗುತ್ತಿಗೆ ನೀಡಲು ಯತ್ನಿಸಿದ ಅಕ್ರಮಗಳು ರುಜುವತ್ತಾಗಿದೆ ಎಂದು ಹೇಳಲಾಗಿದೆ.

ಸರ್ಕಾರ ಗಂಭೀರವಾಗಿ ಮಹಾದೇವ್ ಅವರು ಸಲ್ಲಿಸಿರುವ ವರದಿಯಲ್ಲಿನ ಅಂಶಗಳನ್ನು ಪರಿಗಣಿಸುವ ಸಾಧ್ಯತೆಗಳಿದ್ದು, ಎಲ್ಲಾ ನಿರೀಕ್ಷೆಯಂತಾದರೆ ಶಾಂತ್ ಎ ತಿಮ್ಮಯ್ಯ ಅವರ ಅಧ್ಯಕ್ಷ ಸ್ಥಾನಕ್ಕೆ
ತೊಂದರೆಯಾಗುವ ಸಾಧ್ಯತೆಗಳಿವೆ. ಅಧ್ಯಕ್ಷರು ಈ ಬಗ್ಗೆ ಮಾದ್ಯಮಗಳಿಗೂ ಪ್ರತಿಕ್ರಿಯೆ ಮಾಡಿದ್ದಾರೆ ಅಂತ ತಿಳಿಸಲಾಗಿದೆ. ಈ ವರದಿಯಲ್ಲಿ ಏನೇನಿದೆ ಎನ್ನುವುದು ನನಗಿನ್ನೂ ಗೊತ್ತಿಲ್ಲ. ನಾನು ಯಾವುದೇ
ತಪ್ಪು ಮಾಡಿಲ್ಲ, ನಿಯಮಗಳನ್ನೂ ಉಲ್ಲಂಘಿಸಿಲ್ಲ, ನಾನು ಪಾರದರ್ಶಕವಾಗಿಯೇ ಕೆಲಸ ಮಾಡಿದ್ದೇನೆ. ನನಗೆ ಅನ್ಯಾಯವಾದರೆ ಕಾನೂನಾತ್ಮಕ ಹೋರಾಟ ಮಾಡಲು ಸಿದ್ದನಾಗಿದ್ದೇನೆ ಎಂದು ಹೇಳಿದ್ದಾರೆ.
ಹಿರಿಯ ಅಧಿಕಾರಿ ಸೂರಿ ಪಯಾಲ್ (Suri Payala) ಅವರನ್ನು ಮಂಡಳಿಯ ಸದಸ್ಯ ಕಾರ್ಯದರ್ಶಿಯಾಗಿದ್ದ ಗಿರೀಶ್ (Girish) ಅವರನ್ನು ವರ್ಗಾವಣೆ ಮಾಡಿದ ಮೇಲೆ ಅವರ ಸ್ಥಾನಕ್ಕೆ ಪ್ರತಿಭಾರಿಯಾಗಿ
ಆಯೋಜಿಸಲಾಗಿತ್ತು. ಆದರೆ ಅಧಿಕಾರ ವಹಿಸಿಕೊಂಡ ಮೇಲೆ ಸೂರಿ ಪಯಾಲ್ ಅವರು ಮಂಡಳಿಯಲ್ಲಿ ನಡೆಯುತ್ತಿದ್ದ ಕೆಲ ಬೆಳವಣಿಗೆ ಗಮನಿಸಿದಾಗ 14 ಕೋಟಿಯದು ಎನ್ನಲಾಗುತ್ತಿರುವ ಅವ್ಯವಹಾರ ಬೆಳಕಿಗೆ
ಬಂದಿದ್ದು, ಇದರ ಬಗ್ಗೆ ಸತ್ಯ ಅಸತ್ಯ ಕುರಿತು ಪರಿಶೀಲಿಸಿದಾಗ ಅದರಲ್ಲಿ ಅಧ್ಯಕ್ಷರ ಕೈವಾಡ ಶಂಕೆ ಕಂಡು ಬಂದಿದ್ದು, ಈ ಬಗ್ಗೆ ಸೂರಿ ಪಯಾಲ್ ಸರ್ಕಾರದ ಗಮನ ಸೆಳೆದರೆನ್ನಲಾಗಿದೆ.
ಶಾಂತ್ ಎ ತಿಮ್ಮಯ್ಯ ಅವರು ಈ ವಿಷಯದ ಬಗ್ಗೆ ಗೊತ್ತಾಗುತ್ತಿದ್ದಂತೆ ಸದಸ್ಯ ಕಾರ್ಯದರ್ಶಿ ಸ್ಥಾನದಿಂದ ಸೂರಿ ಪಯಾಲ್ ಅವರನ್ನೇ ತೆಗೆದರು. ಇದು ಮತ್ತಷ್ಟು ಸಂಕೀರ್ಣವಾಯಿತು. ಸೂರಿ ಪಯಾಲ್ ಅವರು
ಇದೆಲ್ಲದರ ನಡುವೆ ಸರ್ಕಾರಕ್ಕೆ ಬರೆದ ಪತ್ರದ ಹಿನ್ನಲೆಯಲ್ಲಿ ಸರ್ಕಾರ ಮಹಾದೇವ್ ಅವರನ್ನು ತನಿಖೆಗೆ ನೇಮಿಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದು, ಸರ್ಕಾರದ ಸೂಚನೆ ಮೇರೆಗೆ ಮಹಾದೇವ್ ವರದಿ ಸಲ್ಲಿಸಿದ್ದಾರೆನ್ನಲಾಗಿದೆ.
ಶಾಂತ್ ಎ ತಿಮ್ಮಯ್ಯ (Shanth A Timmaiah) ಅವರು ವರದಿಯಲ್ಲಿ ನಡೆಸಿದ್ದಾರೆನ್ನಲಾಗುತ್ತಿರುವ ಅಕ್ರಮ ಸಾಬೀತಾಗಿದೆ ಎನ್ನಲಾಗಿದ್ದು, ಸೂರಿ ಪಯಾಲ್ ಹಾಗೂ ಶಾಂತ್ ಎ ತಿಮ್ಮಯ್ಯ ಅವರ ಸೆಣೆಸಾಟದಲ್ಲಿ
ಅಂತಿಮವಾಗಿ ಸೂರಿ ಪಯಾಲ್ ಅವರು ಗೆದ್ದಂತಾಗಿದೆ. ಶಾಂತ್ ಎ ತಿಮ್ಮಯ್ಯನವರ ಮುಂದಿನ ದಾಳ ಯಾವುದಾಗಿರುತ್ತದೆ ಎಂಬುವುದು ಎಲ್ಲರಲ್ಲೂ ಕುತೂಹಲ ಉಂಟುಮಾಡಿದೆ.
ಭವ್ಯಶ್ರೀ ಆರ್.ಜೆ