New delhi : 200 ಕೋಟಿ ಹಣ ವಂಚನೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸುಕೇಶ್ ಚಂದ್ರಶೇಖರ್(Illegal money transfer) ತಾನು ಆಮ್ ಆದ್ಮಿ ಪಕ್ಷಕ್ಕೆ 60 ಕೋಟಿ ರೂಪಾಯಿ ನೀಡಿರುವುದಾಗಿ ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದಾರೆ.

ದೆಹಲಿಯ(Delhi) ಪಟಿಯಾಲ ಹೌಸ್ ಕೋರ್ಟ್‌ನಲ್ಲಿರುವ ಉನ್ನತಾಧಿಕಾರ ಸಮಿತಿಯು, ಸುಕೇಶ್ ಹೇಳಿಕೆಯನ್ನು ಸ್ವೀಕರಿಸಿ ತನಿಖೆ ನಡೆಸಬೇಕೆಂದು ಅವರ ವಕೀಲರಾದ ಅನಂತ್ ಮಲಿಕ್ ಮಾಧ್ಯಮಗಳಿಗೆ ತಿಳಿಸಿದರು.
ಸುಕೇಶ್ ಚಂದ್ರಶೇಖರ್ ಅವರು ಪ್ರಮುಖ ಆರೋಪಿಯಾಗಿರುವ 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಉನ್ನತ ವ್ಯಕ್ತಿಗಳು ಮತ್ತು ಸೆಲೆಬ್ರಿಟಿಗಳಿಂದ ಹಣ ವಸೂಲಿ ಮಾಡಿದ ಆರೋಪದಲ್ಲಿ (Illegal money transfer) ಅವರು ಪ್ರಸ್ತುತ ದೆಹಲಿಯ ಮಂಡೋಲಿ (Mandoli) ಜೈಲಿನಲ್ಲಿದ್ದಾರೆ.
ಈ ಮೊದಲು ಅವರನ್ನು ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು. ಆದರೆ ಕೊಲೆ ಬೆದರಿಕೆಗಳ ಹಿನ್ನೆಲೆ ಅವರನ್ನು ಅಲ್ಲಿಂದ ಸ್ಥಳಾಂತರಿಸಲಾಯಿತು.
ಇದನ್ನೂ ಓದಿ : https://vijayatimes.com/maheshbabu-okkadu-movie-rerelease/
ಅರವಿಂದ್ ಕೇಜ್ರಿವಾಲ್ (Arvind Kejriwal) ನೇತೃತ್ವದ ಅಮ್ ಆದ್ಮಿ ಪಕ್ಷಕ್ಕೆ ತಾನು 60 ಕೋಟಿ ರೂ.ಗಳನ್ನು ನೀಡಿರುವುದಾಗಿ ಸುಕೇಶ್ ಹೇಳಿಕೊಂಡಿದ್ದಾರೆ. ಇದಕ್ಕೂ ಮುನ್ನ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರಿಗೆ ಬರೆದ ಪತ್ರದಲ್ಲಿ,
ಸೆರೆವಾಸದಲ್ಲಿರುವ ಆಮ್ ಆದ್ಮಿ ಪಕ್ಷದ (ಎಎಪಿ) ಸಚಿವ ಸತ್ಯೇಂದ್ರ ಜೈನ್ (Satyendar Jain) ಅವರಿಗೆ ರಕ್ಷಣಾ ಹಣ ಎಂದು 10 ಕೋಟಿ ರೂಪಾಯಿಗಳನ್ನು ಪಾವತಿಸಿದ್ದೇನೆ ಮತ್ತು,
ಜೈಲಿನಲ್ಲಿ ಕಿರುಕುಳ ಹಾಗೂ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿದ್ದರು. ಇನ್ನು ಎಎಪಿಯ ಅರವಿಂದ್ ಕೇಜ್ರಿವಾಲ್ ಬಗ್ಗೆ ಆರೋಪಿಸಿದ ಸುಕೇಶ್,
ಇದನ್ನೂ ನೋಡಿ : https://fb.watch/hxlS7UCah0/ ಸರ್ಕಾರಿ ವಾಹನ ಹೈಡ್ರಾಮ ! Gate crash of corrupt !
ಅವರ ಕಾರ್ಯಕರ್ತರು ಅವರಿಗೆ ಗಂಭೀರವಾದ ಪಾಠವನ್ನು ಕಲಿಸುತ್ತಾರೆ. ದೆಹಲಿ ಮುಖ್ಯಮಂತ್ರಿ(Delhi CM) ಅರವಿಂದ್ ಕೇಜ್ರಿವಾಲ್ ಮತ್ತು ಅವರ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಅವರಿಗೆ ಇದರ ಬಗ್ಗೆ ತಿಳಿದಿದೆ.
ಎಎಪಿ ನಾಯಕರು ಮಕ್ಕಳ ಶಿಕ್ಷಣದ ಶ್ರೇಯೋಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಲಪಟಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.