• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಕೋಗಿಲು ಬಡಾವಣೆಯಲ್ಲಿ ಸೂರು ಕಳೆದುಕೊಂಡವರಿಗೆ ಬೈಯ್ಯಪ್ಪನಹಳ್ಳಿಯಲ್ಲಿ ಪರ್ಯಾಯ ಮನೆ: ಸಿಎಂ ಸಿದ್ದರಾಮಯ್ಯ ಘೋಷಣೆ

Teju Srinivas by Teju Srinivas
in ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ಕೋಗಿಲು ಬಡಾವಣೆಯಲ್ಲಿ ಸೂರು ಕಳೆದುಕೊಂಡವರಿಗೆ ಬೈಯ್ಯಪ್ಪನಹಳ್ಳಿಯಲ್ಲಿ ಪರ್ಯಾಯ ಮನೆ: ಸಿಎಂ ಸಿದ್ದರಾಮಯ್ಯ ಘೋಷಣೆ
0
SHARES
13
VIEWS
Share on FacebookShare on Twitter
  • ಕೋಗಿಲು ಬಡಾವಣೆಯ ಸಂತ್ರಸ್ತರಿಗೆ (illegal shed clearance Kogilu Layout) ಹೊಸ ಸೂರು: ಬೈಯ್ಯಪ್ಪನಹಳ್ಳಿಯಲ್ಲಿ ಮನೆ ಹಂಚಿಕೆ
  • ಅಕ್ರಮ ಶೆಡ್ ತೆರವು ಬಳಿಕ ಅರ್ಹರಿಗೆ ₹11.20 ಲಕ್ಷ ವೆಚ್ಚದ ಮನೆ ಒದಗಿಸುವ ಭರವಸೆ ನೀಡಿದ ಸಿಎಂ ಸಿದ್ದರಾಮಯ್ಯ
  • ಜನವರಿ 1ರಂದೇ ವಸತಿ ಒದಗಿಸಲು ವಸತಿ ಸಚಿವ ಜಮೀರ್ ಅಹ್ಮದ್ ಖಾನ್‌ಗೆ ಜವಾಬ್ದಾರಿ

Bengaluru: ಬೆಂಗಳೂರು ನಗರದ ಕೋಗಿಲು ಬಡಾವಣೆಯಲ್ಲಿ (illegal shed clearance Kogilu Layout) ಇತ್ತೀಚೆಗೆ ನಡೆದ ಅಕ್ರಮ ಶೆಡ್ (Shed) ತೆರವು ಕಾರ್ಯಾಚರಣೆ ದೊಡ್ಡ ಚರ್ಚೆಗೆ ಕಾರಣವಾಗಿತ್ತು.

ಸರ್ಕಾರಿ ಜಾಗದಲ್ಲಿ ನಿರ್ಮಿಸಿದ್ದ ಅನಧಿಕೃತ ಶೆಡ್‌ಗಳನ್ನು ತೆರವುಗೊಳಿಸಿದ ಬಳಿಕ ನೂರಾರು ಕುಟುಂಬಗಳು ಸೂರು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದವು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಮಾನವೀಯ ನೆಲೆಯಲ್ಲಿ ಮಹತ್ವದ ತೀರ್ಮಾನ ಪ್ರಕಟಿಸಿದ್ದಾರೆ.

illegal shed clearance Kogilu Layout

ಕೋಗಿಲು ಬಡಾವಣೆಯಲ್ಲಿ ಸೂರು ಕಳೆದುಕೊಂಡ ಅರ್ಹರಿಗೆ ಬೈಯ್ಯಪ್ಪನಹಳ್ಳಿಯಲ್ಲಿ (Baiyyappanahalli) ಪರ್ಯಾಯ ಮನೆ ಒದಗಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.

ಪ್ರತಿ ಮನೆಗೆ ಸುಮಾರು ₹11.20 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಬಹುಮಹಡಿ (illegal shed clearance Kogilu Layout) ಕಟ್ಟಡಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.

ಡಿಸೆಂಬರ್ 20ರಂದು ಕೋಗಿಲು ಬಡಾವಣೆಯಲ್ಲಿ ಸರ್ಕಾರಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದ ಸುಮಾರು 167 ಶೆಡ್‌ಗಳನ್ನು ತೆರವುಗೊಳಿಸಲಾಗಿತ್ತು. ಈ ಶೆಡ್‌ಗಳಲ್ಲಿ ವಾಸಿಸುತ್ತಿದ್ದವರಿಗೆ ಈಗಾಗಲೇ ನೋಟಿಸ್ ನೀಡಿ ಜಾಗ ಖಾಲಿ ಮಾಡುವಂತೆ ಸೂಚಿಸಲಾಗಿತ್ತು.

ಆದರೂ ಅವರು ತೆರವುಗೊಳಿಸದೇ ಇದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದರು. ಈ ಘಟನೆಗೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉನ್ನತ ಮಟ್ಟದ ಸಭೆ ನಡೆಸಿ, ನಂತರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.

ವಸತಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) , ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ (Naseer Ahmed) ಸೇರಿದಂತೆ ಹಿರಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಲಾಗಿತ್ತು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D.K.Shivakumar) ಕೂಡ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ್ದಾರೆ ಎಂದು ಸಿಎಂ ಮಾಹಿತಿ ನೀಡಿದರು.

ಕೋಗಿಲು ಬಡಾವಣೆಯಲ್ಲಿರುವ ಸುಮಾರು 15 ಎಕರೆ ಸರ್ಕಾರಿ ಜಮೀನನ್ನು ನಗರ ಪಾಲಿಕೆಗೆ ಕಸ ವಿಲೇವಾರಿ ಉದ್ದೇಶಕ್ಕಾಗಿ ಹಸ್ತಾಂತರಿಸಲಾಗಿತ್ತು.

ಈ ಜಾಗದಲ್ಲಿ ಬಂಡೆ ಕ್ವಾರಿಯೂ ಇರುವುದರಿಂದ ಸಾರ್ವಜನಿಕ ಉದ್ದೇಶಕ್ಕೆ ಮೀಸಲಾಗಿತ್ತು. ಆದರೆ 2020–21ರ ಅವಧಿಯಿಂದಲೇ ಇಲ್ಲಿ ಅಕ್ರಮವಾಗಿ ಶೆಡ್‌ಗಳನ್ನು ನಿರ್ಮಿಸಿ ವಾಸ ಮಾಡಲಾಗುತ್ತಿತ್ತು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.

ಈ ರೀತಿಯ ಅಕ್ರಮ ಒತ್ತುವರಿಗಳಿಗೆ ಸಂಬಂಧಪಟ್ಟ ಕಂದಾಯ ಇಲಾಖೆ ಹಾಗೂ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಹಶೀಲ್ದಾರ್‌ಗಳು ಹಾಗೂ ಶಿರಸ್ತೆದಾರರಿಗೆ ಗೊತ್ತಿಲ್ಲದೆ ಇಂತಹ ಅಕ್ರಮ ನಡೆಯಲು ಸಾಧ್ಯವಿಲ್ಲ ಎಂದು ಹೇಳಿದ ಅವರು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಇನ್ನು ಮುಂದೆ ಯಾವುದೇ ಸರ್ಕಾರಿ ಜಮೀನಿನ ಅಕ್ರಮ ಒತ್ತುವರಿ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮಾನವೀಯ ದೃಷ್ಟಿಯಿಂದ ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆ ಮಾಡುವುದು ಸರ್ಕಾರದ ಹೊಣೆ ಎಂದು ತಿಳಿಸಿದ ಸಿದ್ದರಾಮಯ್ಯ, ಅಕ್ರಮವಾಗಿ ಶೆಡ್‌ನಲ್ಲಿ ವಾಸಿಸಿದ್ದವರಲ್ಲಿ ಅರ್ಹರನ್ನು ಗುರುತಿಸಿ ಎರಡು ದಿನಗಳಲ್ಲಿ ಪಟ್ಟಿ ಸಲ್ಲಿಸಲು ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅರ್ಹರ ಪಟ್ಟಿಯ ಆಧಾರದಲ್ಲಿ ಬೈಯ್ಯಪ್ಪನಹಳ್ಳಿಯ ಸರ್ವೇ ನಂ.23ರಲ್ಲಿ ಇರುವ ಸುಮಾರು 1087 ಮನೆಗಳ ಬಹುಮಹಡಿ ಕಟ್ಟಡಗಳಲ್ಲಿ ವಸತಿ ಹಂಚಿಕೆ ಮಾಡಲಾಗುತ್ತದೆ.

ಈ ಪ್ರದೇಶ ಕೋಗಿಲು ಬಡಾವಣೆಯಿಂದ ಕೇವಲ 7 ಕಿ.ಮೀ ದೂರದಲ್ಲಿದ್ದು, ಸ್ಥಳಾಂತರವಾದರೂ ಜೀವನೋಪಾಯಕ್ಕೆ ಹೆಚ್ಚಿನ

ತೊಂದರೆ ಆಗದಂತೆ ನೋಡಿಕೊಳ್ಳಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

ಜನವರಿ 1ರ ಹೊಸ ವರ್ಷದಂದೇ ಸಂತ್ರಸ್ತರಿಗೆ ಹೊಸ ಮನೆಗಳಲ್ಲಿ ವಾಸಕ್ಕೆ ಅವಕಾಶ ಕಲ್ಪಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ಮನೆ ನಿರ್ಮಾಣಕ್ಕೆ ಸಂಬಂಧಿಸಿದ ಹಣಕಾಸು ವ್ಯವಸ್ಥೆಯ ವಿವರಗಳನ್ನೂ ಸಿಎಂ ಬಹಿರಂಗಪಡಿಸಿದ್ದಾರೆ. ಸಾಮಾನ್ಯ ವರ್ಗ,

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿವಿಧ ಸಬ್ಸಿಡಿಗಳು ಲಭ್ಯವಾಗಲಿವೆ.

ಜೊತೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಪ್ರತಿ ಮನೆಗೆ ₹5 ಲಕ್ಷ ನೆರವು ನೀಡಲಾಗುತ್ತದೆ. ಸಾಮಾನ್ಯ ವರ್ಗದವರಿಗೆ

ಒಟ್ಟು ಸುಮಾರು ₹8.70 ಲಕ್ಷ ಸಬ್ಸಿಡಿ ಲಭ್ಯವಾಗಿದ್ದು, ಉಳಿದ ₹2.5 ಲಕ್ಷವನ್ನು ಸಾಲದ ರೂಪದಲ್ಲಿ ನೀಡಲಾಗುತ್ತದೆ.

ಎಸ್‌ಸಿ/ಎಸ್‌ಟಿ ವರ್ಗದವರಿಗೆ ಸುಮಾರು ₹9.50 ಲಕ್ಷ ನೆರವು ಸಿಗಲಿದ್ದು, ಕೇವಲ ₹1.70 ಲಕ್ಷ ಸಾಲವಾಗಿ ಪಾವತಿಸಬೇಕಾಗುತ್ತದೆ.

ಈ ಸಾಲ ವ್ಯವಸ್ಥೆಯನ್ನು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ವೆರಿಫೈ ಮಾಡಿಸಿ ಒದಗಿಸುವ ಭರವಸೆ ನೀಡಿದ್ದಾರೆ.

ಅಕ್ರಮ ಮನೆಗಳಿಗೆ ಸರ್ಕಾರದಿಂದ ಮನೆ ನೀಡುವ ಈ ತೀರ್ಮಾನ ಈ ಒಂದು ಪ್ರಕರಣಕ್ಕೆ ಮಾತ್ರ ಸೀಮಿತವಾಗಿದ್ದು,

ಮುಂದಿನ ದಿನಗಳಲ್ಲಿ ಇಂತಹ ಅಕ್ರಮಗಳಿಗೆ ಅವಕಾಶ ನೀಡುವುದಿಲ್ಲ ಎಂದು ಸಿಎಂ ಪುನರುಚ್ಚರಿಸಿದ್ದಾರೆ.

ಇದನ್ನು ಓದಿ : https://vijayatimes.com/new-rule-in-bengaluru-metro/

Tags: HomekogilelayoutSiddaramaiah

Related News

ಪ್ರಪಂಚದಲ್ಲಿ ಸೆಕೆಂಡ್‌, ದೇಶದಲ್ಲಿ ಮೊದಲು: ಅತೀ ಹೆಚ್ಚು ಟ್ರಾಫಿಕ್ ಹೊಂದಿರುವ ನಗರ ಎಂದು ಕುಖ್ಯಾತಿಗೆ ಪಾತ್ರವಾದ ಬೆಂಗಳೂರು
ಪ್ರಮುಖ ಸುದ್ದಿ

ಪ್ರಪಂಚದಲ್ಲಿ ಸೆಕೆಂಡ್‌, ದೇಶದಲ್ಲಿ ಮೊದಲು: ಅತೀ ಹೆಚ್ಚು ಟ್ರಾಫಿಕ್ ಹೊಂದಿರುವ ನಗರ ಎಂದು ಕುಖ್ಯಾತಿಗೆ ಪಾತ್ರವಾದ ಬೆಂಗಳೂರು

January 22, 2026
ಗಣರಾಜೋತ್ಸವ ಹಿನ್ನೆಲೆ ದೆಹಲಿಯಲ್ಲಿ ಹೈಅಲರ್ಟ್‌ : ಅಪರಾಧಿಗಳ ಸುಳಿವು ಪತ್ತೆಗಾಗಿ ಪೊಲೀಸರಿಗೆ ಫೇಶಿಯಲ್ ರೆಕಗ್ನಿಷನ್, AI ಸ್ಮಾರ್ಟ್ ಕನ್ನಡಕ, ಆಂಟಿ-ಡ್ರೋನ್ ಯೂನಿಟ್‌
ದೇಶ-ವಿದೇಶ

ಗಣರಾಜೋತ್ಸವ ಹಿನ್ನೆಲೆ ದೆಹಲಿಯಲ್ಲಿ ಹೈಅಲರ್ಟ್‌ : ಅಪರಾಧಿಗಳ ಸುಳಿವು ಪತ್ತೆಗಾಗಿ ಪೊಲೀಸರಿಗೆ ಫೇಶಿಯಲ್ ರೆಕಗ್ನಿಷನ್, AI ಸ್ಮಾರ್ಟ್ ಕನ್ನಡಕ, ಆಂಟಿ-ಡ್ರೋನ್ ಯೂನಿಟ್‌

January 22, 2026
SBIನಲ್ಲಿ ಉಚಿತ ಸೇವೆ ಬಂದ್: ಫೆಬ್ರವರಿ 15 ರಿಂದ ಹಣ ವರ್ಗಾವಣೆಗೆ ಶುಲ್ಕ ಮತ್ತು ಜಿಎಸ್‌ಟಿ ಅನ್ವಯ
ಪ್ರಮುಖ ಸುದ್ದಿ

SBIನಲ್ಲಿ ಉಚಿತ ಸೇವೆ ಬಂದ್: ಫೆಬ್ರವರಿ 15 ರಿಂದ ಹಣ ವರ್ಗಾವಣೆಗೆ ಶುಲ್ಕ ಮತ್ತು ಜಿಎಸ್‌ಟಿ ಅನ್ವಯ

January 22, 2026
ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಯು – ಟರ್ನ್ ಹೊಡೆದ ಟ್ರಂಪ್: ಯುರೋಪಿನ 8 ರಾಷ್ಟ್ರಗಳ ಮೇಲೆ ಶೇ.10ರಷ್ಟು ಸುಂಕ ಹೇರಿಕೆ ಹಿಂಪಡೆಯಲು ನಿರ್ಧಾರ
ದೇಶ-ವಿದೇಶ

ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಯು – ಟರ್ನ್ ಹೊಡೆದ ಟ್ರಂಪ್: ಯುರೋಪಿನ 8 ರಾಷ್ಟ್ರಗಳ ಮೇಲೆ ಶೇ.10ರಷ್ಟು ಸುಂಕ ಹೇರಿಕೆ ಹಿಂಪಡೆಯಲು ನಿರ್ಧಾರ

January 22, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.