- ಕೇಂದ್ರ ಸರ್ಕಾರದಿಂದ ನಾಲ್ಕು (Implementation of new labour code) ಹೊಸ ಲೇಬರ್ ಕೋಡ್ ಜಾರಿಗೆ
- 29 ಹಳೆಯ ಕಾನೂನುಗಳಿಗೆ ತೆರೆ
- ಕೈಗಾರಿಕಾ ವಿವಾದಗಳಿಗೆ ವೇಗವಾದ ಪರಿಹಾರ
New delhi: ಕೇಂದ್ರ ಸರ್ಕಾರವು ಭಾರತದ ಕಾರ್ಮಿಕ ಕ್ಷೇತ್ರದಲ್ಲಿ ಸ್ವಾತಂತ್ರ್ಯ (Implementation of new labour code) ನಂತರದ ಅತಿ ದೊಡ್ಡ ಸುಧಾರಣೆಯನ್ನು ಜಾರಿಗೆ ತಂದಿದೆ.
21 ನವೆಂಬರ್‌ನಿಂದ 29 ಹಳೆಯ ಕಾರ್ಮಿಕ ಕಾನೂನುಗಳನ್ನು ರದ್ದುಪಡಿಸಿ, ಅವುಗಳ ಬದಲಿಗೆ ನಾಲ್ಕು ಹೊಸ ಲೇಬರ್ ಕೋಡ್‌ಗಳನ್ನು ಜಾರಿಗೆ ತಂದಿದೆ.

1930–1950ರ ಅವಧಿಯಲ್ಲಿ ರಚನೆಯಾದ ಹಳೆಯ ಕಾನೂನುಗಳು ಇಂದಿನ ಆರ್ಥಿಕ ಪರಿಸ್ಥಿತಿಗೆ ಮತ್ತು ಉದ್ಯೋಗ ಮಾದರಿಗಳಿಗೆ ಸರಿಹೊಂದುವುದಿಲ್ಲ ಎಂಬ ಟೀಕೆಗಳ ಹಿನ್ನೆಲೆಯಲ್ಲಿಯೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಗಿಗ್ ವರ್ಕರ್, ಪ್ಲಾಟ್‌ಫಾರ್ಮ್ ವರ್ಕರ್, ವಲಸೆ ಕಾರ್ಮಿಕರು ಹಾಗೂ ಇತರ (Implementation of new labour code) ಅನಿಯಮಿತ ಉದ್ಯೋಗಿಗಳ ಹಕ್ಕುಗಳನ್ನು ಗುರುತಿಸುವ ಹೊಸ ವ್ಯವಸ್ಥೆಯನ್ನು ಸರ್ಕಾರ ತಂದುಕೊಟ್ಟಿದೆ.
ಈ ನಾಲ್ಕು ಲೇಬರ್ ಕೋಡ್‌ಗಳ ಪರಿಣಾಮವಾಗಿ ಸುಮಾರು 40 ಕೋಟಿ ಕಾರ್ಮಿಕರಿಗೆ ಮೊದಲ ಬಾರಿಗೆ ಸಾಮಾಜಿಕ ಭದ್ರತೆಯ ರಕ್ಷಣೆ ಸಿಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಹೊಸ ಲೇಬರ್ ಕೋಡ್ ಪ್ರಕಾರ ದೇಶದ ಪ್ರತಿಯೊಬ್ಬ ನೌಕರಿಗೂ ನೇಮಕ ಪತ್ರ ನೀಡುವುದು ಈಗ ಕಡ್ಡಾಯವಾಗಿದೆ.
ಇದುವರೆಗೆ ಅನೇಕ ಕ್ಷೇತ್ರಗಳಲ್ಲಿ ನೇಮಕ ಪತ್ರ ನೀಡುವ ಪದ್ಧತಿ ಇರದೇ, ಕಾರ್ಮಿಕರು ಹಲವು ಹಕ್ಕುಗಳಿಂದ ವಂಚಿತರಾಗುತ್ತಿದ್ದರು.
ಈಗ ಕನಿಷ್ಠ ವೇತನವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ, ಜೊತೆಗೆ ತಿಂಗಳ ಸಂಬಳವನ್ನು ನಿಗದಿತ ಸಮಯಕ್ಕೆ ನೀಡುವುದು ಉದ್ಯೋಗದಾತನ ಹೊಣೆ.
ಉದ್ಯೋಗದ ಷರತ್ತುಗಳಲ್ಲಿ ಪಾರದರ್ಶಕತೆ ಹೆಚ್ಚುವುದು, ವಿವಾದಗಳ ಪ್ರಮಾಣ ಕಡಿಮೆಯಾಗುವುದು ಸರ್ಕಾರದ ಗುರಿ.
ಫಿಕ್ಸ್ಡ್ ಟರ್ಮ್ ಉದ್ಯೋಗಿಗಳಿಗೆ ಈಗ ಸ್ಥಾಯಿ ನೌಕರರಂತೆಯೇ ರಜೆ, ವೇತನ ಮತ್ತು ಸಾಮಾಜಿಕ ಭದ್ರತಾ ಹಕ್ಕುಗಳು ದೊರೆಯಲಿವೆ.
ವಿಶೇಷವಾಗಿ, ಕೇವಲ ಒಂದು ವರ್ಷದ ಸೇವೆಯ ನಂತರವೇ ಗ್ರಾಚ್ಯೂಟಿ ಪಡೆಯುವ ಅವಕಾಶ ದೊರೆಯುತ್ತಿರುವುದು ದೊಡ್ಡ ಬದಲಾವಣೆಯಾಗಿದೆ.
ಹೊಸ ಲೇಬರ್ ಕೋಡ್‌ನಲ್ಲಿ ಮೊದಲ ಬಾರಿಗೆ ಗಿಗ್ ವರ್ಕ್, ಪ್ಲಾಟ್‌ಫಾರ್ಮ್ ವರ್ಕ್ ಮತ್ತು ಅಗ್ರಿಗೇಟರ್‌ಗಳ ವ್ಯಾಖ್ಯಾನವನ್ನು ಸ್ಪಷ್ಟಪಡಿಸಲಾಗಿದೆ.
ಊಟ ತಲುಪಿಸುವವರು, ಟ್ಯಾಕ್ಸಿ ಅಪ್ ಚಾಲಕರು, ಡೆಲಿವರಿ ಪಾರ್ಟ್ನರ್‌ಗಳು ಮುಂತಾದ ಲಕ್ಷಾಂತರ ಕಾರ್ಮಿಕರು ಗಿಗ್ ವರ್ಕರ್ ವರ್ಗಕ್ಕೆ ಬರುತ್ತಾರೆ.
ಇವರಿಗೆ ಸಮಾಜ ಭದ್ರತಾ ರಕ್ಷಣೆಯನ್ನು ಕಲ್ಪಿಸಲು ಅಗ್ರಿಗೇಟರ್ ಕಂಪನಿಗಳು ತಮ್ಮ ವಾರ್ಷಿಕ ವರಮಾನದಲ್ಲಿ 1–2%ನ್ನು ಸಾಮಾಜಿಕ ಭದ್ರತಾ ನಿಧಿಗೆ ನೀಡಬೇಕಾಗಿದೆ.
ತೋಟಗಾರಿಕೆ, ಆಡಿಯೋ-ವಿಜುವಲ್ ಮೀಡಿಯಾ, ಡಿಜಿಟಲ್ ಮೀಡಿಯಾ, ಸ್ಟಂಟ್ ಮತ್ತು ಡಬ್ಬಿಂಗ್ ಕಲಾವಿದರೂ ಹೊಸ ಕಾಯ್ದೆಯ ವ್ಯಾಪ್ತಿಗೆ ಬರುವುದರಿಂದ ಅವರಿಗೆ ಹೆಚ್ಚಿನ ಸುರಕ್ಷತೆ ಮತ್ತು ಭದ್ರತೆ ದೊರೆಯಲಿದೆ.
ಗಣಿ ಕಾರ್ಮಿಕರು ಮತ್ತು ಅಪಾಯಕರ ಉದ್ಯಮಗಳಲ್ಲಿ ಕೆಲಸ ಮಾಡುವವರಿಗೆ ‘ಆನ್-ಸೈಟ್ ಸೇಫ್ಟಿ’ ಮಾನದಂಡಗಳನ್ನು ನವೀಕರಿಸಿ ಕಡ್ಡಾಯಗೊಳಿಸಲಾಗಿದೆ.
ಹೊಸ ಲೇಬರ್ ಕೋಡ್ ಕೈಗಾರಿಕಾ ವಿವಾದಗಳ ಪರಿಹಾರಕ್ಕೆ ವಿಶೇಷ ಆದ್ಯತೆ ನೀಡುತ್ತದೆ.
ಎರಡು ಸದಸ್ಯರ ಕೈಗಾರಿಕಾ ನ್ಯಾಯಾಧೀಕರಣಗಳನ್ನು ರಚಿಸಲಾಗುತ್ತಿದ್ದು, ವಿವಾದಗಳನ್ನು ನೇರವಾಗಿ ಅವುಗಳ ಮುಂದೆ ಮಂಡಿಸಲು ಅವಕಾಶ ನೀಡಲಾಗಿದೆ.
ಕಂಪನಿಗಳಿಗೆ ಸಿಂಗಲ್ ರಿಜಿಸ್ಟ್ರೇಷನ್, ಸಿಂಗಲ್ ಲೈಸೆನ್ಸ್ ಮತ್ತು ಸಿಂಗಲ್ ರಿಟರ್ನ್ ವ್ಯವಸ್ಥೆಯಿಂದ ಆಡಳಿತಾತ್ಮಕ ಹೊರೆ ಕಡಿಮೆಯಾಗಲಿದ್ದು, ಕಾರ್ಯಕ್ಷಮತೆ ಹೆಚ್ಚುವುದಾಗಿದೆ.
500ಕ್ಕೂ ಹೆಚ್ಚು ನೌಕರರಿರುವ ಸಂಸ್ಥೆಗಳಲ್ಲಿ ಸುರಕ್ಷತಾ ಸಮಿತಿಗಳು ಕಡ್ಡಾಯವಾಗುತ್ತವೆ, ಇದರಿಂದ ಕೆಲಸಗಾರರ ಸುರಕ್ಷತೆ ಮತ್ತು ಜವಾಬ್ದಾರಿತ್ವ ಮತ್ತಷ್ಟು ಹೆಚ್ಚಲಿದೆ.
ಇದನ್ನು ಓದಿ : ಲ್ಯಾಬ್ ಟೆಸ್ಟ್‌ನಲ್ಲಿ 7 ಆಯುರ್ವೇದ ಔಷಧಿಗಳು ಫೇಲ್ : ತಕ್ಷಣವೇ ಮಾರಾಟ, ವಿತರಣೆ ಮತ್ತು ಸಂಗ್ರಹಣೆಯನ್ನು ನಿಷೇಧಿಸಲು ಸೂಚಿಸಿದ ಆಯುಷ್ ಇಲಾಖೆ