• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ದಿಶಾ ರವಿ ಬಂಧನವನ್ನು ಖಂಡಿಸಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್

Sharadhi by Sharadhi
in ದೇಶ-ವಿದೇಶ, ಪ್ರಮುಖ ಸುದ್ದಿ
ದಿಶಾ ರವಿ ಬಂಧನವನ್ನು ಖಂಡಿಸಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್
0
SHARES
0
VIEWS
Share on FacebookShare on Twitter

ನವದೆಹಲಿ, ಫೆ. 15: ರೈತ ಹೋರಾಟಕ್ಕೆ ಬೆಂಬಲ ಸೂಚಿಸುವವರಿಗಾಗಿ ಸಿದ್ಧಪಡಿಸಲಾಗಿದ್ದ ಟೂಲ್‌ಕಿಟ್‌ ಪ್ರಕರಣದಲ್ಲಿ ಬೆಂಗಳೂರಿನ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರನ್ನು ಬಂಧಿಸಿರುವುದನ್ನು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಪಕ್ಷ ‘ಪಾಕಿಸ್ತಾನ್‌ ತೆಹ್ರಿಕ್‌ ಇ ಇನ್ಸಾಫ್‌’ ಸೋಮವಾರ ಖಂಡಿಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ‘ತೆಹ್ರಿಕ್‌ ಇ ಇನ್ಸಾಫ್‌’, ‘ಮೋದಿ ಮತ್ತು ಆರ್‌ಎಸ್‌ಎಸ್ ಆಡಳಿತಕ್ಕೊಳಪಟ್ಟಿರುವ ಭಾರತವು ಜಮ್ಮು ಕಾಶ್ಮೀರದಲ್ಲಿ ಮಾಡಿದಂತೆಯೇ ತನ್ನ ವಿರೋಧಿಗಳ ದನಿ ಅಡಗಿಸುವ ಕೆಲಸದಲ್ಲಿ ನಂಬಿಕೆ ಇಟ್ಟಿದೆ. ಕ್ರಿಕೆಟರ್‌ಗಳನ್ನು ಮತ್ತು ಬಾಲಿವುಡ್‌ ಸೆಲೆಬ್ರೆಟಿಗಳನ್ನು ತನ್ನ ಪರವಾದ ಅಭಿಪ್ರಾಯ ಸೃಷ್ಟಿಗೆ ಬಳಸಿಕೊಳ್ಳುತ್ತಿದೆ. ಈಗ ಟ್ವಿಟರ್‌ ಟೂಲ್‌ಕಿಟ್‌ ಪ್ರಕರಣದಲ್ಲಿ ದಿಶಾ ರವಿ ಅವರನ್ನು ಬಂಧಿಸಿದೆ,’ ಎಂದು ಹೇಳಿದೆ.

ಇನ್ನೊಂದು ಕಡೆ ಜಮ್ಮು ಕಾಶ್ಮೀರವನ್ನು ‘ಭಾರತ ಅಕ್ರಮವಾಗಿ ಆಕ್ರಮಿಸಿದ ಜಮ್ಮು ಕಾಶ್ಮೀರ (ಐಐಒಜೆಕೆ)’ ಎಂದೂ ‘ತೆಹ್ರಿಕ್‌ ಇ ಇನ್ಸಾಫ್‌’ ದಾಖಲಿಸಿದೆ.

ಯಾರು ಈ ದಿಶಾ ರವಿ?

ಜಾಗತಿಕ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್ ಅವರು 2018ರಲ್ಲಿ ಸ್ಥಾಪಿಸಿದ ‘ಫ್ರೈಡೇ ಫಾರ್‌ ಫ್ಯೂಚರ್‌’ ಹೆಸರಿನ ಸಂಘಟನೆಯ ಸಹ ಸಂಸ್ಥಾಪಕಿ ದಿಶಾ ರವಿ. ರವಿ ಅವರು 2019 ರಲ್ಲಿ ‘ಫ್ರೈಡೇ ಫಾರ್ ಫ್ಯೂಚರ್‌’ನ ಭಾರತ ಘಟಕ ಪ್ರಾರಂಭಿಸಿದರು. ನಗರದ ಹೊರವಲಯದಲ್ಲಿರುವ ಚಿಕ್ಕಬಾಣಾವರದಲ್ಲಿ ನೆಲೆಸಿರುವ ಅವರು ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು. ನಗರದ ಖಾಸಗಿ ಕಂಪನಿಯೊಂದರಲ್ಲಿ ವ್ಯವಸ್ಥಾಪಕಿ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇವರು ಹವಾಮಾನ ಸಂಬಂಧಿತ ಸಮಸ್ಯೆಗಳ ವಿರುದ್ಧ ನಿರಂತರವಾಗಿ ಪ್ರತಿ ಶುಕ್ರವಾರವೂ ಹೋರಾಟ ಮಾಡುತ್ತಿದ್ದರು. ಕೆಲವು ಬಾರಿ ಅವರ ಹೋರಾಟಕ್ಕೆ ಯಾರೂ ಬರುತ್ತಿರಲಿಲ್ಲ. ಹೀಗಾಗಿ, ಅವರೊಬ್ಬರೇ ರಸ್ತೆಯಲ್ಲಿ ಘೋಷಣಾ ಫಲಕಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆಗಳ ಪ್ರಚಾರಕ್ಕೆ ಹಾಗೂ ಪ್ರತಿಭಟನೆಗೆ ಜನರನ್ನು ಸೇರಿಸಲು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದರು. ರಾಜ್ಯ, ನಗರ ಹಾಗೂ ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚಿಸಲು ಬೆಂಗಳೂರಿನಲ್ಲಿ ನಡೆಯುತ್ತಿದ್ದ ಸಭೆಗಳಲ್ಲೂ ಇವರು ಪಾಲ್ಗೊಳ್ಳುತ್ತಿದ್ದರು. ದಿಶಾ ಅವರ ತಂದೆ ಕ್ರೀಡಾ ಕೋಚ್‌ ಆಗಿದ್ದು, ತಾಯಿ ಗೃಹಿಣಿ.

ದಿಶಾ ರವಿ ಬಂಧನ ಏಕೆ?

ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಹೇಗೆ ಬೆಂಬಲಿಸಬೇಕು ಎಂಬುದನ್ನು ವಿವರಿಸುವ ‘ಟೂಲ್‌ಕಿಟ್‌’ ಅನ್ನು ಸಿದ್ಧಪಡಿಸಿದ ಆರೋಪವನ್ನು ದಿಶಾ ರವಿ ಅವರ ಮೇಲೆ ಹೊರಿಸಲಾಗಿದೆ. ರೈತರ ಪ್ರತಿಭಟನೆಯನ್ನು ಬೆಂಬಲಿಸಲು ತಾನು ಬಯಸಿದ್ದೆ. ಅದಕ್ಕಾಗಿ ಟೂಲ್‌ಕಿಟ್‌ನ ಎರಡು ಸಾಲನ್ನು ತಿದ್ದಿ ಕೊಟ್ಟಿದ್ದೆ ಎಂದು ದಿಶಾ ನ್ಯಾಯಾಧೀಶರಿಗೆ ತಿಳಿಸಿದ್ದಾರೆ.

ದೇಶದ್ರೋಹ, ಜನರ ನಡುವೆ ದ್ವೇಷಕ್ಕೆ ಕುಮ್ಮಕ್ಕು ಮತ್ತು ಅಪರಾಧ ಒಳಸಂಚಿಗೆ ಸಂಬಂಧಿಸಿ ಫೆ. 4ರಂದು ದೆಹಲಿಯ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದರು. ಅದರ ಆಧಾರದಲ್ಲಿ ದಿಶಾ ಅವರನ್ನು ಬಂಧಿಸಲಾಗಿದೆ.

ಏನಿದು ಟೂಲ್‌ ಕಿಟ್‌?

ಟೂಲ್‌ಕಿಟ್‌ ಎನ್ನುವುದು ಸಾಮಾಜಿಕ ಮಾಧ್ಯಮ ದಾಖಲೆ. ಸಮಸ್ಯೆ ಮತ್ತು ಅದರ ವಿರುದ್ಧದ ಹೋರಾಟದ ಯೋಜನೆ, ರೂಪುರೇಷೆಗಳನ್ನು ವಿವರಿಸುತ್ತದೆ. ದೇಶದಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಸ್ವೀಡನ್‌ನ ಜಾಗತಿಕ ಪರಿಸರ ಹೋರಾಟಗಾರ್ತಿ ಗ್ರೇತಾ ಥನ್‌ಬರ್ಗ್‌ ಬೆಂಬಲ ನೀಡಿದಾಗ ಇಂಥದ್ದೊಂದು ಟೂಲ್‌ ಕಿಟ್‌ ಅನ್ನು ಅವರು ಟ್ವಿಟರ್‌ನಲ್ಲಿ ಬಹಿರಂಗವಾಗಿ ಹಂಚಿಕೊಂಡಿದ್ದರು. ‘ಭಾರತದ ವಿರುದ್ಧ ಬಲವಾದ ಸಾಮಾಜಿಕ ಮಾಧ್ಯಮ ಅಭಿಯಾನವನ್ನು ರೂಪಿಸಲಾಗುತ್ತಿದೆ ಎಂಬುದಕ್ಕೆ ಟೂಲ್‌ಕಿಟ್ ಸಾಕ್ಷಿಯಾಗಿದೆ,’ ಎಂದು ಭಾರತದ ಮಾಹಿತಿ ತಂತ್ರಜ್ಞಾನ ಇಲಾಖೆ ಆರೋಪಿಸಿತ್ತು.

ಈ ಟೂಲ್‌ಕಿಟ್‌ನ ಹಿಂದೆ ಖಲಿಸ್ಥಾನ ಪ್ರತ್ಯೇಕತಾವಾದಿಗಳು ಇದ್ದಾರೆ ಎಂದು ದೆಹಲಿ ಪೊಲೀಸರು ಆರಂಭದಲ್ಲಿ ಹೇಳಿದ್ದರು. ನಂತರ ಖಲಿಸ್ತಾನಿಗಳ ಪರ ಇರುವ “ಪೊಯೆಟಿಕ್ ಜಸ್ಟೀಸ್ ಫೌಂಡೇಶನ್” ಇದೆ ಎಂಬ ಮಾಹಿತಿ ಹೊರಬಿದ್ದಿತ್ತು.

Related News

10 ಗಂಟೆ ನಂತ್ರ ಫ್ಲಾಟ್‌ಗೆ ಪ್ರವೇಶ ಇಲ್ಲ, ಫೋನಲ್ಲಿ ಮಾತಾಡಬಾರದು: ನಿಯಮ ತಪ್ಪಿದ್ರೆ ಬಾಡಿಗೆದಾರರಿಗೆ 1000 ರೂ. ದಂಡ!
ಪ್ರಮುಖ ಸುದ್ದಿ

10 ಗಂಟೆ ನಂತ್ರ ಫ್ಲಾಟ್‌ಗೆ ಪ್ರವೇಶ ಇಲ್ಲ, ಫೋನಲ್ಲಿ ಮಾತಾಡಬಾರದು: ನಿಯಮ ತಪ್ಪಿದ್ರೆ ಬಾಡಿಗೆದಾರರಿಗೆ 1000 ರೂ. ದಂಡ!

March 28, 2023
ಬಿಲ್ಕಿಸ್ ಬಾನೋ ಗ್ಯಾಂಗ್‌ ರೇಪ್‌ ಪ್ರಕರಣದ ಅಪರಾಧಿ ಜೊತೆ ವೇದಿಕೆ ಹಂಚಿಕೊಂಡ ಬಿಜೆಪಿ ಸಂಸದ !
ದೇಶ-ವಿದೇಶ

ಬಿಲ್ಕಿಸ್ ಬಾನೋ ಗ್ಯಾಂಗ್‌ ರೇಪ್‌ ಪ್ರಕರಣದ ಅಪರಾಧಿ ಜೊತೆ ವೇದಿಕೆ ಹಂಚಿಕೊಂಡ ಬಿಜೆಪಿ ಸಂಸದ !

March 28, 2023
ವೈಟ್ ಫೀಲ್ಡ್ ಹೊಸ ಮೆಟ್ರೋ ಮಾರ್ಗದ ಮೊದಲ ದಿನ ಪ್ರಯಾಣಿಸಿದ ಸಂಖ್ಯೆ 16000 ಕ್ಕೂ ಅಧಿಕ! ವರದಿ
ಪ್ರಮುಖ ಸುದ್ದಿ

ವೈಟ್ ಫೀಲ್ಡ್ ಹೊಸ ಮೆಟ್ರೋ ಮಾರ್ಗದ ಮೊದಲ ದಿನ ಪ್ರಯಾಣಿಸಿದ ಸಂಖ್ಯೆ 16000 ಕ್ಕೂ ಅಧಿಕ! ವರದಿ

March 28, 2023
ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ 14 ವಿರೋಧ ಪಕ್ಷಗಳು ; ಕಾರಣ ಏನು ಗೊತ್ತಾ
Vijaya Time

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ 14 ವಿರೋಧ ಪಕ್ಷಗಳು ; ಕಾರಣ ಏನು ಗೊತ್ತಾ

March 24, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.