Visit Channel

ಲಸಿಕೆ ಹಾಕಿಕೊಂಡರೂ ಕೊರೊನಾದ ವಿಚಾರದಲ್ಲಿ ಈ ತಪ್ಪುಗಳು ಬೇಡ..

200841-corona-vaccine

ಕೊರೊನಾ ವಿರುದ್ಧ ಸದ್ಯ ಇರುವ ಮಾರ್ಗ ಲಸಿಕೆ ಮಾತ್ರ. ಆದರೆ ಇತ್ತೀಚಿನ ಕೆಲವೊಂದು ಪ್ರಕರಣಗಳಲ್ಲಿ ಒಂದು ಅಥವಾ ಎರಡು ಡೋಸ್ ಲಸಿಕೆ ಹಾಕಿಸಿಕೊಂಡವರೂ ಸಹ ಕೊರೊನಾಗೆ ತುತ್ತಾಗುತ್ತಿದ್ದಾರೆ. ಇದಕ್ಕೆ ಕಾರಣವೇನೆಂದರೆ, ಲಸಿಕೆ ತೆಗೆದುಕೊಂಡ ಬಳಿಕ ನಾವು ಮಾಡುವ ಕೆಲವು ತಪ್ಪುಗಳು. ಇದರಿಂದಲೇ ಅವರು ಕೊರೊನಾಗೆ ತುತ್ತಾಗುವುದು. ಆದ್ದರಿಂದ ಇಲ್ಲಿ ನಾವು ಕೊರೊನಾ ಲಸಿಕೆ ಹಾಕಿಸಿಕೊಂಡ ಮೇಲೂ ಕೊರೊನಾಗೆ ತುತ್ತಾಗಲು ಕಾರಣವಾಗುವ ಕೆಲವೊಂದು ಅಂಶಗಳಾವುವು ಎಂಬುದನ್ನು ವಿವರವಾಗಿ ಹೇಳಿದ್ದೇವೆ.

ಲಸಿಕೆ ಹಾಕಿದ ನಂತರವೂ ಕೋವಿಡ್ ತಗುಲುವ ಅಪಾಯ ಹೆಚ್ಚಿಸುವ ಅಂಶಗಳು:
ನಮ್ಮ ಬಳಿ ಇರುವುದು ಪ್ರಾಯೋಗಿಕ ಕೊರೊನಾ ಲಸಿಕೆಗಳು ಆಗಿರುವುದರಿಂದ, ಅವು ಇನ್ನೂ ಹೆಚ್ಚಿನ ಮಟ್ಟದ ಪರಿಶೀಲನೆ ಮತ್ತು ಸಂಶೋಧನೆಗೆ ಒಳಪಡಬೇಕಾಗಿವೆ ಎಂಬುದನ್ನು ನೆನಪಿನಲ್ಲಿಡಬೇಕು. ನಮ್ಮಲ್ಲಿರುವ ಲಸಿಕೆಗಳು ವೈರಸ್‌ನ ಹರಡುವಿಕೆ ಮತ್ತು ತೀವ್ರತೆಯ ಅಪಾಯವನ್ನು ತಗ್ಗಿಸಲು ಮುಖ್ಯವಾಗಿ ಕಾರ್ಯನಿರ್ವಹಿಸುತ್ತವೆ, ಆದರೆ ಸೋಂಕಿಗೆ ಒಳಗಾಗದಂತೆಯೇ ಸಂಪೂರ್ಣ ತಡೆಯುವುದಿಲ್ಲ, ಬದಲಾಗಿ ಸೋಂಕು ಸಣ್ಣ ಅಥವಾ ಮಧ್ಯಮ ತೀವ್ರತೆಯಲ್ಲಿರುತ್ತದೆ.

ದುರ್ಬಲವಾದ ರೋಗನಿರೋಧಕ ಶಕ್ತಿ ಹೊಂದಿರುವವರು, ಆರೋಗ್ಯ ಪರಿಸ್ಥಿತಿಗಳಿಂದ ಬಳಲುತ್ತಿರುವವರಿಗೆ ಲಸಿಕೆ ಕಡಿಮೆ ಪರಿಣಾಮಕಾರಿಯಾಗುವಂತೆ ಮಾಡುತ್ತದೆ. ಆದ್ದರಿಂದ ಇವರು ಸೋಂಕಿಗೆ ಮರುತುತ್ತಾಗುವುದು ಹೆಚ್ಚು. ಅದಕ್ಕಾಗಿ ಒಬ್ಬ ವ್ಯಕ್ತಿ ಲಸಿಕೆಯ ಎರಡೂ ಡೋಸ್ ಪಡೆದಾಗ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿದ್ದಾಗ ಮಾತ್ರ ಸೋಂಕಿನ ಅಪಾಯವು ಕಡಿಮೆಯಾಗುತ್ತದೆ ಎಂಬುದನ್ನು ನೆನಪಿಡಿ. ಇದಲ್ಲದೆ, ಸೋಂಕಿನ ಅಪಾಯವನ್ನು ತಪ್ಪಿಸಲು ಸಂಪೂರ್ಣವಾಗಿ ಲಸಿಕೆ ಹಾಕಿದ ವ್ಯಕ್ತಿಯು ತಪ್ಪಿಸಬೇಕಾದ ಹಲವಾರು ತಪ್ಪುಗಳಿವೆ. ಅವುಗಳಲ್ಲಿ ಕೆಲವು ಬಗ್ಗೆ ನಾವು ನಿಮಗೆ ಹೇಳುತ್ತೇವೆ:

ಮಾಸ್ಕ್ ಧರಿಸದೇ, ಅಂತರ ಕಾಪಾಡದೇ ಇರುವುದು:
ರೂಪಾಂತರಿತ ವೈರಸ್ ಹೆಚ್ಚು ಹರಡುವಿಕೆ ಶಕ್ತಿಯನ್ನು ಹೊಂದಿರುವುದರಿಂದ ಕೊರೊನಾದ ಯಾವುದೇ ಮಾರ್ಗಸೂಚಿಗಳನ್ನು ಮರೆಯುವಂತಿಲ್ಲ. ಆದ್ದರಿಂದ, ಮಾಸ್ಕ್ ಗಳಂತಹ ಮೂಲಭೂತ ಕ್ರಮಗಳನ್ನು ಅನುಸರಿಸುವುದು ಮತ್ತು ಸಾಮಾಜಿಕ ದೂರವನ್ನು ಅನುಸರಿಸುವುದು ಇನ್ನೂ ಬಹಳ ಅಗತ್ಯವಾಗಿದೆ.
ಲಸಿಕೆ ಪಡೆಯುವುದು ನಿಮಗೆ ಸಂಪೂರ್ಣ ರಕ್ಷಣೆ ನೀಡುವುದು ಎಂಬುದು ಖಾತರಿಯಿಲ್ಲ, ಇದು ನಿಮ್ಮ ಸೋಂಕಿನ ಸಾಧ್ಯತೆಯನ್ನು ಕಡಿಮೆ ಮಾಡುವ ತಡೆಗಟ್ಟುವ ವಿಧಾನ ಮಾತ್ರ. ನೀವು ಮನೆಯಿಂದ ಹೊರಹೋದಾಗ, ಜನರೊಂದಿಗೆ ಸಾರ್ವಜನಿಕ ಸ್ಥಳದಲ್ಲಿದ್ದರೆ, ಮಾಸ್ಕ್ ಹಾಕಿಕೊಳ್ಳುವುದು ಮುಖ್ಯವಾಗಿದೆ. ಇದರ ಜೊತೆಗೆ ಡಬಲ್ ಮಾಸ್ಕಿಂಗ್, ಆಗಾಗ ಕೈ ತೊಳೆಯುವುದು ಸೇರಿದಂತೆ ಇತರ ಕ್ರಮಗಳನ್ನು ಅನುಸರಿಬೇಕು.

ರೋಗನಿರೋಧಕ ಶಕ್ತಿ ಕುಂಠಿತವಾಗಿರುವುದು:
ನೀವು ಆರೋಗ್ಯಕರ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದಾಗ ಲಸಿಕೆಗಳು ಸಾಕಷ್ಟು ಮಟ್ಟದ ರಕ್ಷಣೆಯನ್ನು ನೀಡುತ್ತವೆ. ಆದರೆ ನೀವು ಈ ಮೊದಲೇ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಅಥವಾ ಕಡಿಮೆ ರೋಗನಿರೋಧಕ ಶಕ್ತಿ ಹೊಂದಿದ್ದರೆ ನಿಮಗೆ ಲಸಿಕೆಗಳು ಅಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಮಧುಮೇಹ, ಕ್ಯಾನ್ಸರ್ ನಂತರ ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಹೆಚ್ಚಿನ ಮಟ್ಟದ ಮುನ್ನೆಚ್ಚರಿಕೆಗಳನ್ನು ಅಭ್ಯಾಸ ಮಾಡುವುದನ್ನು ಮುಂದುವರಿಸಬೇಕು.

ಸಭೆ-ಸಮಾರಂಭಗಳಲ್ಲಿ ಹೆಚ್ಚು ಬಾಗವಹಿಸುವುದು:
ಕೊರೊನಾದ ಎರಡನೇ ಅಲೆ ನಿಧಾನವಾಗಿ ಕಡಿಮೆ ಆಗುತ್ತಿರುವುದರಿಂದ ಹೇರಿದ್ದ ನಿರ್ಬಂಧಗಳನ್ನು ತೆಗೆಯಲಾಗುತ್ತಿದೆ. ಆದಾಗ್ಯೂ, ವೈರಸ್ ಇನ್ನೂ ಸಕ್ರಿಯವಾಗಿದೆ ಮತ್ತು ಮುಂಬರುವ ಮೂರನೇ ಅಲೆ ಮತ್ತು ಡೆಲ್ಟಾ ಪ್ಲಸ್ ರೂಪಾಂತರಕ್ಕೆ ಸಂಬಂಧಿಸಿದ ಪ್ರಕರಣಗಳು ದಾಖಲಾಗುತ್ತಿದೆ. ಆದ್ದರಿಂದ ಸಾರ್ವಜನಿಕವಾಗಿ ಹೆಚ್ಚು ಸೇರುವುದು ಸಹ ಲಸಿಕೆ ಹಾಕಿಕೊಂಡರೂ ಸಹ ಕೊರೊನಾಗೆ ತುತ್ತಾಗುವ ಅಪಾಯವನ್ನು ಎದುರಿಸುತ್ತಾರೆ.

ನಿಮಗೆ ಲಸಿಕೆ ನೀಡಿದ್ದರೆ, ಹೊರಹೋಗುವ ನಿರ್ಧಾರ ತೆಗೆದುಕೊಳ್ಳುವ ಮೊದಲು ಭೇಟಿ ನೀಡುವ ಸ್ಥಳವನ್ನು ಪರಿಗಣಿಸಿ. ತಜ್ಞರ ಮಾರ್ಗದರ್ಶನದಂತೆ, ಕಡಿಮೆ ಗಾಳಿ ಇರುವ ಒಳಾಂಗಣ ಸ್ಥಳಗಳಿಗಿಂತ ಹೊರಾಂಗಣ ಕೂಟಗಳು ಇನ್ನೂ ಸುರಕ್ಷಿತವಾಗಿವೆ. ಸಣ್ಣ ಸಮಾರಂಭ, ಮತ್ತು ಲಸಿಕೆ ಹಾಕಿಕೊಂಡ ಜನರ ಸುತ್ತಲೂ ಇರುವುದು ಉತ್ತಮ ಆಯ್ಕೆಯಾಗಿದೆ. ಜೊತೆಗೆ ಪ್ರಯಾಣ ಮಾಡುವಾಗಲೂ ಸಹ ಸುರಕ್ಷಿತ ಕ್ರಮಗಳನ್ನು ಅಭ್ಯಾಸ ಮಾಡುವುದು ತುಂಬಾ ಮುಖ್ಯ. ಸೋಂಕು ಹರಡುವ ಸಾಧ್ಯತೆಯಿರುವ ಸ್ಥಳಗಳಿಗೆ ಪ್ರಯಾಣಿಸುವುದನ್ನು ಅಥವಾ ಭೇಟಿ ನೀಡುವುದನ್ನು ತಪ್ಪಿಸಿ.

ವಯಸ್ಸು ಮತ್ತು ಲಿಂಗ:
ಮೇಲೆ ಪಟ್ಟಿ ಮಾಡಲಾದ ಅಂಶಗಳ ಹೊರತಾಗಿ, ಆರೋಗ್ಯವನ್ನು ಹೊರತುಪಡಿಸಿ ಕೆಲವು ಅಂಶಗಳು ಸಹ ಕೊರೊನಾಗೆ ಮರುತುತ್ತಾಗುವ ಸಾಧ್ಯತೆಯನ್ನು ಹೆಚ್ಚಿಸುವುದು. ಇದು ವ್ಯಾಕ್ಸಿನೇಷನ್ ನಂತರದ ಅನಾರೋಗ್ಯದ ಅಪಾಯವನ್ನುಂಟುಮಾಡುತ್ತದೆ. ಕೆಲವು ಅಧ್ಯಯನಗಳ ಪ್ರಕಾರ, ಮಹಿಳೆಯರು ಮತ್ತು ಹಿರಿಯ ನಾಗರಿಕರು (55 ವರ್ಷಕ್ಕಿಂತ ಮೇಲ್ಪಟ್ಟವರು) ಅನಾರೋಗ್ಯದ ಹೆಚ್ಚಿನ ಅಪಾಯಗಳನ್ನು ಎದುರಿಸುತ್ತಾರೆ ಎಂದು ಸೂಚಿಸಿವೆ. ಆದ್ದರಿಂದ, ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮತ್ತು ನಿಮ್ಮ ಜೀವನಶೈಲಿಯನ್ನು ಚೆನ್ನಾಗಿ ಅನುಸರಿಸಿ. ಕೊರೊನಾದಿಂದ ಪಾರಾಗಿ.

Latest News

Assam
ದೇಶ-ವಿದೇಶ

ತನ್ನ ಪ್ರೀತಿಯನ್ನು ನಿರೂಪಿಸಲು, ಏಡ್ಸ್ ರೋಗವಿರುವ ಪ್ರಿಯಕರನ ರಕ್ತವನ್ನು ತನ್ನ ದೇಹಕ್ಕೆ ಚುಚ್ಚಿಕೊಂಡ 15 ವರ್ಷದ ಹುಡುಗಿ!

ಏಡ್ಸ್ ರೋಗವಿರುವ ತನ್ನ ಹುಡುಗನ ರಕ್ತವನ್ನು ಸೂಜಿಯ ಮೂಲಕ ತನ್ನ ದೇಹಕ್ಕೆ ಚುಚ್ಚಿಕೊಂಡಿದ್ದಾಳಂತೆ! ಇನ್ನೊಂದು ಅಚ್ಚರಿಯ ವಿಷಯ ಎಂದರೆ, ಈಕೆಯ ವಯಸ್ಸು ಕೇವಲ 15 ವರ್ಷ!

Shivamogga
ಪ್ರಮುಖ ಸುದ್ದಿ

ರಾತ್ರಿ ವೇಳೆ ಅನಗತ್ಯ ಬೈಕ್ ಸಂಚಾರ ನಿಷೇಧ ; ಇಬ್ಬರು ಯುವಕರು ಬೈಕ್‍ನಲ್ಲಿ ಸಂಚರಿಸುವಂತಿಲ್ಲ : ಎಡಿಜಿಪಿ

ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಅವರು, ದ್ವಿಚಕ್ರ ವಾಹನ ಸವಾರರು ಹಿಂಬದಿಯಲ್ಲಿ 40 ವರ್ಷಕ್ಕಿಂತ ಕಿರಿಯ ವಯಸ್ಸಿನವರನ್ನು ಕೂರಿಸಿಕೊಂಡು ಸಂಚರಿಸುವುದನ್ನು ನಿಷೇಧಿಸಲಾಗಿದೆ.

Lal singh Chadda
ಮನರಂಜನೆ

`ಲಾಲ್ ಸಿಂಗ್ ಚಡ್ಡಾʼ ಹೊಗಳಿದ ಹೃತಿಕ್ ; `ಕಾಶ್ಮೀರ ಫೈಲ್ಸ್ʼ ಬಗ್ಗೆ ಯಾಕೆ ಮಾತನಾಡಲಿಲ್ಲ? : ಸಿಡಿದೆದ್ದ ನೆಟ್ಟಿಗರು!

ಹೃತಿಕ್ ರೋಷನ್ ʼಲಾಲ್ ಸಿಂಗ್ ಚಡ್ಡಾʼ(Lal Singh Chadda) ಚಿತ್ರವನ್ನು ನೋಡುವಂತೆ ಕರೆ ನೀಡಿರುವುದು ನೆಟ್ಟಿಗರ(Netizens) ಆಕ್ರೋಶಕ್ಕೆ ಕಾರಣವಾಗಿದೆ.

Nithish Kumar
ದೇಶ-ವಿದೇಶ

ಬಿಹಾರ ಸಂಪುಟ ರಚನೆ ; 31 ಸಚಿವರ ಪಟ್ಟಿ ಬಿಡುಗಡೆ, ಆರ್ಜೆಡಿಗೆ ಹೆಚ್ಚು ಸ್ಥಾನ

ತೇಜಸ್ವಿ ಯಾದವ್‌(Tejaswi Yadav) ನೇತೃತ್ವದ ಆರ್ಜೆಡಿ(RJD) 16 ಸಚಿವ ಸ್ಥಾನಗಳನ್ನು ಮತ್ತು ಜೆಡಿಯು(JDU) 11 ಸ್ಥಾನಗಳನ್ನು ಪಡೆಯಲಿದ್ದು, ಕಾಂಗ್ರೆಸ್‌ ಪಕ್ಷಕ್ಕೆ(Congress Party) ಕೇವಲ 2 ಸಚಿವ ಸ್ಥಾನಗಳು ಲಭಿಸುವ ಸಾಧ್ಯತೆ ಇದೆ.