ಬೆಂಗಳೂರು, ಜು. 12: ಸಿಲಿಕಾನ್ ಸಿಟಿ ಮಂದಿಗೆ ವಿದ್ಯುತ್ ಸರಬರಾಜು ಬಗ್ಗೆ ಬೆಸ್ಕಾಂ ಮಹತ್ತರ ಆದೇಶವನ್ನು ಹೊರಡಿಸಿದೆ. ರಾಜಧಾನಿಯ ಆಯ್ದೆ ಭಾಗಗಳಲ್ಲಿ ಇಂದಿನಿಂದ ಶುಕ್ರವಾರ (ಜು.17) ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಇಂದಿನಿಂದ ಶುಕ್ರವಾರದವಗೆರೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಜಯನಗರ ಉಪ ವಿಭಾಗ, ನಂಜಪ್ಪ ಲೇಔಟ್, ವಿನಾಯಕ ನಗರ, ಎಲೆಕ್ಟ್ರಾನಿಕ್ ಸಿಟಿ, ಎಚ್ಎಸ್ಆರ್ ಲೇಔಟ್, ಮೈಲ್ಸಂದ್ರ ಸೇರಿದಂತೆ ಹಲವು ಕಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ತಾಂತ್ರಿಕ ಕಾರಣಗಳಿಂದ ಪವರ್ ಕಿಟ್ ಪ್ರಾಬ್ಲಂ ಇರಲಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಬೆಸ್ಕಾಂ ಮನವಿ ಮಾಡಿಕೊಂಡಿದೆ. ಈ ಭಾಗದ ಜನ ವಿದ್ಯುತ್ ಸಂಬಂಧಿತ ನಿತ್ಯದ ಚಟುವಟಿಗಳನ್ನು ಬೆಳಗ್ಗೆ 10 ಗಂಟೆ ಒಳಗೆ ಹಾಗೂ ಸಂಜೆ 5 ಗಂಟೆ ಮೇಲೆ ಮಾಡಿಕೊಳ್ಳುವುದು ಒಳಿತು. ಈ ವಾರ ಪವರ್ ಕಟ್ ಸಮಸ್ಯೆಗೆ ತಕ್ಕಂತೆ ಕೆಲಸಗಳನ್ನು ಮಾಡಿಕೊಳ್ಳುವುದು ಉತ್ತಮ. ಬೆಸ್ಕಾಂ ಮನವಿಗೆ ಸಹಕರಿಸಬೇಕು ಎಂದು ನಿಗಮ ಕೇಳಿಕೊಂಡಿದೆ.