New Delhi: ನರೇಂದ್ರ ಮೋದಿ (Inauguration of new Parliament) ಸರ್ಕಾರ ಅಧಿಕಾರಕ್ಕೆ ಬಂದು ಒಂಬತ್ತನೇ ವರ್ಷಾಚರಣೆಯ ಸಂದರ್ಭದಲ್ಲಿ ನೂತನ ಸಂಸತ್ ಭವನ ಉದ್ಘಾಟನಾ ಸಮಾರಂಭವೂ
ನಡೆಯಲಿದೆ. ಈ ತಿಂಗಳ ಅಂತ್ಯದಲ್ಲಿ ಸಂಸತ್ ಭವನ್ ಲೋಕಾರ್ಪಣೆಗೊಳ್ಳಲಿದೆ.

ನೂತನ ಸಂಸತ್ ಭವನ ನಿರ್ಮಾಣವು ಅಂತಿಮ ಹಂತದಲ್ಲಿದ್ದು, ಮೇ (May) ಕೊನೆಯ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಳ್ಳಲಿದೆ. ಈ ಉದ್ಘಾಟನೆಯು ಮೋದಿ ಸರ್ಕಾರದ
9 ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮಗಳ ಆರಂಭವನ್ನು ಸೂಚಿಸುತ್ತದೆ. ಮೇ 26, 2014 ರಂದು ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನ.
ಇತ್ತೀಚೆಗೆ ನಿರ್ಮಿಸಲಾದ ಸಂಸತ್ ಭವನವು ಈಗ ನಾಲ್ಕು ಅಂತಸ್ತಿನ ಎತ್ತರದಲ್ಲಿದೆ ಮತ್ತು 970 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಕಟ್ಟಡವು ಲೋಕಸಭೆಯಲ್ಲಿ 1,224 ಸಂಸದರಿಗೆ ಅವಕಾಶ ಕಲ್ಪಿಸಲು
ಸಾಕಷ್ಟು ಸ್ಥಳಾವಕಾಶವನ್ನು ಹೊಂದಿದೆ.ಇದರ ಜೊತೆಗೆ ವಿಶಾಲವಾದ ಸಂವಿಧಾನ ಭವನವಿದೆ. ಭಾರತೀಯ ಪ್ರಜಾಪ್ರಭುತ್ವದ ವೈಭವದ ಅಪರೂಪದ ಕಲಾಕೃತಿಗಳನ್ನು ಇಲ್ಲಿ ಪ್ರದರ್ಶಿಸಲಾಗುವುದು.
ಇದರ ಜೊತೆಗೆ ಕ್ಯಾಂಟೀನ್(Canteen) ಮತ್ತು ಕಾರ್ ಪಾರ್ಕಿಂಗ್‌ಗೆ (Inauguration of new Parliament) ಸಾಕಷ್ಟು ಜಾಗವನ್ನು ಒದಗಿಸಲಾಗಿದೆ.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ (National Institute of Fashion Technology) ಹೊಸ ಕ್ಯಾಪಿಟಲ್‌ಗೆ ಆಗಮಿಸುವ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರಿಗೆ ಪ್ರತ್ಯೇಕ
ಸಮವಸ್ತ್ರವನ್ನು ಅಭಿವೃದ್ಧಿಪಡಿಸಿದೆ. ಹೊಸ ಕ್ಯಾಪಿಟಲ್ ಒಳಗೆ ಮೂರು ಗೇಟ್‌ಗಳನ್ನು ನಿರ್ಮಿಸಲಾಗಿದೆ. ಜ್ಞಾನ ದ್ವಾರ, ಶಕ್ತಿ ದ್ವಾರ ಮತ್ತು ಕರ್ಮ ದ್ವಾರಗಳನ್ನು ನಿರ್ಮಿಸಲಾಗಿದ್ದು, ಸಂಸದರು, ವಿಐಪಿ ಸಂದರ್ಶಕರು
ಮತ್ತು ಅಧಿಕಾರಿಗಳಿಗೆ ಪ್ರತ್ಯೇಕ ದ್ವಾರಗಳಿವೆ. ಡಿಸೆಂಬರ್ 2020 ರಲ್ಲಿ, ಹೊಸ ಕ್ಯಾಪಿಟಲ್ (Capital) ನಿರ್ಮಾಣಕ್ಕೆ ಪ್ರಧಾನಿ ಮೋದಿ ಅಡಿಗಲ್ಲು ಹಾಕಿದರು.
ಇದನ್ನು ಓದಿ: ಭಾನುವಾರ, ಸೋಮವಾರ ಪ್ರವಾಸಿಗರಿಗೆ ನಂದಿಬೆಟ್ಟ ಮತ್ತು ಸ್ಕಂದಗಿರಿಗೆ 2 ದಿನ ಪ್ರವೇಶ ಇಲ್ಲ
ಪ್ರಧಾನಿ ಮೋದಿಯವರ 9 ವರ್ಷಗಳ ಅಧಿಕಾರದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷವು ದೇಶಾದ್ಯಂತ ಒಂದು ತಿಂಗಳ ವಿಶೇಷ ಅಭಿಯಾನವನ್ನು ಆಯೋಜಿಸಿದೆ. ಈ ಎಲ್ಲಾ ಚಟುವಟಿಕೆಗಳು ಹೊಸ ಕ್ಯಾಪಿಟಲ್
ಉದ್ಘಾಟನೆಯೊಂದಿಗೆ ಪ್ರಾರಂಭವಾಗುತ್ತವೆ. ಮೇ ಕೊನೆಯ ವಾರದಲ್ಲಿ ನೂತನ ಸಂಸತ್ ಭವನ ಉದ್ಘಾಟನೆ ಬಳಿಕ ಮೇ 30ರಂದು ಬಿಜೆಪಿಯ ವಿಶೇಷ ಅಭಿಯಾನ ಆರಂಭವಾಗಲಿದೆ.
ಮೇ 30 ಹಾಗೂ 31 ರಂದು ಪ್ರಧಾನಿ ಮೋದಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಬಿಜೆಪಿ (BJP) ರಾಷ್ಟ್ರೀಯ ನಾಯಕರು,ಶಾಸಕರು,ವಿವಿಧ ರಾಜ್ಯಗಳ ಸಿಎಂಗಳು, ಸೇರಿದಂತೆ
ವಿಧಾನಸಭಾ ಕ್ಷೇತ್ರ ಹಾಗೂ ಲೋಕಸಭಾ ಕ್ಷೇತ್ರಗಳಲ್ಲೂ ಅಭಿಯಾನ ಹಾಗೂ ಪ್ರಚಾರ ನಡೆಯಲಿದೆ.
ರಶ್ಮಿತಾ ಅನೀಶ್