Bengaluru : ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯ ಚಾಲನೆಗೆ ಕ್ಷಣಗಣನೆ ಆರಂಭವಾಗಿದೆ. ಭಾನುವಾರ ಬೆಳಗ್ಗೆ 11 (inauguration of Shakti scheme) ಗಂಟೆಗೆ ಮುಖ್ಯಮಂತ್ರಿ
ಸಿದ್ದರಾಮಯ್ಯ (Siddaramaiah) ಅವರು ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಕಾಂಗ್ರೆಸ್ (Congress) ಪಕ್ಷದ ಐದು ಖಾತ್ರಿ ಯೋಜನೆಗಳಲ್ಲಿ ಒಂದಾದ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಈ ಯೋಜನೆಯು ಮಹಿಳೆಯರಿಗೆ ಉಚಿತ ಸರ್ಕಾರಿ ಬಸ್ ಸಾರಿಗೆಯನ್ನು ಒದಗಿಸುತ್ತದೆ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಕೇಂದ್ರ ಸಚಿವರನ್ನು ಆಹ್ವಾನಿಸಲಾಗಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.
ಬೆಳಿಗ್ಗೆ 11 ಗಂಟೆಗೆ ಶಕ್ತಿ ಯೋಜನೆ ಕಾರ್ಯಕ್ರಮವು ನಾಡಗೀತೆ ಹಾಡುವ ಮೂಲಕ ಪ್ರಾರಂಭವಾಗಲಿದೆ. ಕಾರ್ಯಕ್ರಮಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalingareddy) ಅತಿಥಿಗಳನ್ನು ಸ್ವಾಗತಿಸಲಿದ್ದು,
ಸಿಎಂ ಸಿದ್ದರಾಮಯ್ಯ ಶಕ್ತಿ ಯೋಜನೆಯ ಲೋಗೋ ಅನಾವರಣಗೊಳಿಸಲಿದ್ದಾರೆ. ಆ ಬಳಿಕ ಸ್ಮಾರ್ಟ್ ಕಾರ್ಡ್ ಮಾದರಿಯನ್ನು (inauguration of Shakti scheme) ಅನಾವರಣಗೊಳಿಸಲಾಗುತ್ತೆ.
ಶಕ್ತಿ ಯೋಜನೆಯ ಕುರಿತು ಸಿಎಂ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಭಾಷಣ ಮಾಡಲಿದ್ದಾರೆ. ಅಂತಿಮವಾಗಿ ಬಿಎಂಟಿಸಿ ಬಸ್‌ನಲ್ಲಿ ಸಿಎಂ ತೆರಳಲಿದ್ದಾರೆ.
ವಿಧಾನಸೌಧದ ಮುಂಭಾಗದಲ್ಲಿ ನಾಲ್ಕು ಬಸ್ ನಿಲ್ಲಿಸಲು ನಿಗಮ ಯೋಜಿಸಿದೆ.
ಇದನ್ನು ಓದಿ: ಅಂಜೂರದ ಹಣ್ಣನ್ನು ಸೇವಿಸಿ: ಅದ್ಭುತ ಆರೋಗ್ಯ ಲಾಭಗಳನ್ನು ಪಡೆದುಕೊಳ್ಳಿ
ಎಲ್ಲಾ ಬಸ್‌ಗಳಲ್ಲಿ “0” ದರದ ಟಿಕೆಟ್‌ಗಳನ್ನು (Ticket) ನೀಡಲು ಸಿದ್ಧವಾಗಿದೆ. ಎಲ್ಲಾ ಸಚಿವರು ಅಥವಾ ಶಾಸಕರು ಈ ನಾಲ್ಕು ಈ ನಾಲ್ಕು ನಿಗಮದ ಬಸ್‌ಗಳಲ್ಲಿ ಯಾವುದಾದರೂ ಒಂದು ಬಸ್‌ನಲ್ಲಿ ಪ್ರಯಾಣಿಸಬಹುದು.
ಕಾರ್ಯಕ್ರಮದ ಅಂಗವಾಗಿ ಸಿಎಂ ಸಿದ್ದರಾಮಯ್ಯ ಬಿಎಸ್-6 ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸಲಿದ್ದಾರೆ. ಮತ್ತು ಅವರು ಕಂಡಕ್ಟರ್‌ನಿಂದ 0 ಶುಲ್ಕದ ಟಿಕೆಟ್ ಪಡೆದು ಬಸ್‌ನಲ್ಲಿರುವ ಮಹಿಳೆಯರಿಗೆ ನೀಡುತ್ತಾರೆ.
ಬಿಎಂಟಿಸಿಯ ಬಿಎಸ್-6 ಬಸ್‌ನಲ್ಲಿ ಸಿಎಂ ಸಿಟಿ ರೌಂಡ್ಸ್ ಹೋಗಲಿದ್ದಾರೆ. ಬಿಎಂಟಿಸಿಯಲ್ಲಿ ವಿಧಾನಸೌಧಕ್ಕೆ ಒಂದು ರೌಂಡ್, ಮೆಜೆಸ್ಟಿಕ್ (Majestic) ಅಥವಾ ಮೈಸೂರು
ಬ್ಯಾಂಕ್ ವೃತ್ತದಲ್ಲಿ ಒಂದು ರೌಂಡ್ ಹೋಗಲಿದ್ದಾರೆ. ಬಸ್ ಗಳಲ್ಲಿ ಅಧಿಕಾರಿಗಳು ಸೇರಿದಂತೆ ಎಲ್ಲ ಮಹಿಳೆಯರಿಗೆ 0 ಚಾರ್ಜ್ ಟಿಕೆಟ್ ನೀಡುವ ವ್ಯವಸ್ಥೆ ಮಾಡಲಾಗಿದೆ.
ವಿಧಾನಸೌಧದಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡುವ ಮೂಲಕ ಶಕ್ತಿ ಯೋಜನೆ ಕಾರ್ಯಕ್ರಮವನ್ನು ಎಲ್ಲಾ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಜಾರಿಗೆ ತರಲಾಗುವುದು. ಶಕ್ತಿ ಯೋಜನೆಗೆ
ಸ್ಥಳೀಯ ಶಾಸಕರು ಅಥವಾ ಅಲ್ಲಿನ ಜನಪ್ರತಿನಿಧಿಗಳು ಚಾಲನೆ ನೀಡುತ್ತಾರೆ. ಮಧ್ಯಾಹ್ನ 1 ಗಂಟೆಯ ನಂತರ ಮಹಿಳೆಯರು ಉಚಿತವಾಗಿ BMTC, KSRTC, NWRTC, KKRTC
ಬಸ್‌ಗಳಲ್ಲಿ ಪ್ರಯಾಣಿಸಬಹುದು. ಮಹಿಳೆಯರು ವಿಳಾಸದ ಪುರಾವೆಯೊಂದಿಗೆ (ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ) ಪ್ರಯಾಣಿಸಬಹುದು.

ನಾಲ್ಕು ನಿಗಮದ ಬಸ್ ಗಳಲ್ಲಿ 0 ಟಿಕೆಟ್ ಪಡೆದು ಉಚಿತವಾಗಿ ಪ್ರಯಾಣಿಸಬಹುದು.ಶಕ್ತಿ ಯೋಜನೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ (Rizwan Arshad) ವಹಿಸಲಿದ್ದಾರೆ.
ಸಾರಿಗೆ ಸಚಿವ ರಾಮಲಿಂಗರೆಡ್ಡಿ ಸೇರಿದಂತೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ (D.K.Shivakumar) , ಸಚಿವರು ಕಾಂಗ್ರೆಸ್ನ ಶಾಸಕರು ಭಾಗಿಯಾಗಲಿದ್ದಾರೆ.
ರಶ್ಮಿತಾ ಅನೀಶ್