• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ನಿಲ್ಲದ ಬಿಜೆಪಿ-ಕಾಂಗ್ರೆಸ್ ಟ್ವೀಟ್ ವಾರ್: ಡಿಕೆಶಿ ಕಾಲೆಳೆದ ಬಿಜೆಪಿಗೆ ಕಾಂಗ್ರೆಸ್‌ ತಿರುಗೇಟು

Sharadhi by Sharadhi
in ಪ್ರಮುಖ ಸುದ್ದಿ, ರಾಜಕೀಯ, ರಾಜ್ಯ
ನಿಲ್ಲದ ಬಿಜೆಪಿ-ಕಾಂಗ್ರೆಸ್ ಟ್ವೀಟ್ ವಾರ್: ಡಿಕೆಶಿ ಕಾಲೆಳೆದ ಬಿಜೆಪಿಗೆ ಕಾಂಗ್ರೆಸ್‌ ತಿರುಗೇಟು
0
SHARES
0
VIEWS
Share on FacebookShare on Twitter

ಬೆಂಗಳೂರು, ಮಾ. 17: ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಟ್ವೀಟ್ ವಾರ್ ಮುಂದುವರಿದಿದ್ದು, “ಹೆಗಲು ಮುಟ್ಟಿ ನೋಡಿಕೊಂಡಿದ್ದಕ್ಕೂ ಈ ಚಿತ್ರಕ್ಕೂ ಸಂಬಂಧವಿರಬಹುದೇ?” ಎಂದು ಬಿಜೆಪಿ ಮಾಡಿದ ಟ್ವೀಟ್‌ಗೆ ಕಾಂಗ್ರೆಸ್‌‌ ಟಾಂಗ್‌ ನೀಡಿದೆ.

ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಒಳಪಟ್ಟ ಮಾಜಿ ಪತ್ರಕರ್ತ ಭವಿತ್‌‌ ಹಾಗೂ ಮೈಸೂರಿನ ಸಂಸದ ಪ್ರತಾಪ್‌‌ ಸಿಂಹ ಅವರ ಫೋಟೋವನ್ನು ಕಾಂಗ್ರೆಸ್‌ ಟ್ವೀಟ್‌ ಮಾಡಿ ತಿರುಗೇಟು ನೀಡಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, “ಹೆಣ್ಣು ಮಕ್ಕಳ ದುರ್ಬಳಕೆಯನ್ನು ಸಮರ್ಥಿಸುತ್ತಿರುವ ಬಿಜೆಪಿ, ದೇಶದ್ರೋಹಿ ಹಾಗೂ ಅತ್ಯಾಚಾರಿಯೊಂದಿಗೆ ನರೇಂದ್ರ ಮೋದಿ ಅವರಿಗೆ ಏನು ಸಂಬಂಧ?, ತೇಜಸ್ವಿ ಸೂರ್ಯ ಅವರಿಗೂ ಡ್ರಗ್ ಡೀಲರ್‌ಗೂ ಏನು ಸಂಬಂಧ?, ಪ್ರತಾಪ್‌ ಸಿಂಹ ಹಾಗೂ ಈ ಆರೋಪಿಗೂ ಏನು ಸಂಬಂಧ?, ಲಕ್ಷ್ಮಣ್‌ ಸವದಿ ಹಾಗೂ ಯುವರಾಜನಿಗೂ ಏನು ಸಂಬಂಧ?, ಹೆಗಲು ಮುಟ್ಟಿಕೊಂಡು ತಡೆಯಾಜ್ಞೆ ತಂದಿದ್ಯಾರು?” ಎಂದು ತಿರುಗೇಟು ನೀಡಿದೆ.

ಇದಕ್ಕೂ ಮುನ್ನ ಟ್ವೀಟ್‌ ಮಾಡಿದ್ದ ಕಾಂಗ್ರೆಸ್‌, ಬಿಜೆಪಿಗೆ ಟಾಂಗ್‌ ನೀಡುವ ಭರದಲ್ಲಿ ವಿಚಾರಣೆಗೆ ಒಳಪಡಿಸಿದ ವ್ಯಕ್ತಿಯನ್ನು ಬಂಧಿತ ಎಂದು ಹೇಳುವ ಮುಖೇನ ಎಡವಟ್ಟು ಮಾಡಿಕೊಂಡಿತ್ತು. ಬಳಿಕ ಆ ಟ್ವೀಟ್‌ ಅನ್ನು ಡಿಲೀಟ್‌ ಮಾಡಿದ ಕಾಂಗ್ರೆಸ್‌‌ ಮತ್ತೆ ಟ್ವೀಟ್‌‌ ಮಾಡುವ ಮೂಲಕ ಟಾಂಗ್‌ ನೀಡಿದೆ. ಹೊಸ ಟ್ವೀಟ್‌ನಲ್ಲಿ ಲಕ್ಷ್ಮಣ ಸವದಿ ಹಾಗೂ ಯುವರಾಜ ಸ್ವಾಮಿಯೊಂದಿಗೆ ಇರುವ ಫೋಟೋವನ್ನು ಸೇರಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹಾಗೂ ಸಿಡಿ ಪ್ರಕರಣದ ಮಾಸ್ಟರ್​ ಮೈಂಡ್​ ಎನ್ನಲಾದ ನರೇಶ್​ ಇಬ್ಬರೂ ಜೊತೆಗೆ ನಿಂತಿರುವ ಫೋಟೋವನ್ನು ಬಿಜೆಪಿ ಟ್ವೀಟ್ ಮಾಡಿತ್ತು.

“ಹೆಗಲು ಮುಟ್ಟಿ ನೋಡಿಕೊಂಡಿದ್ದಕ್ಕೂ ಈ ಚಿತ್ರಕ್ಕೂ ಸಂಬಂಧವಿರಬಹುದೇ? ಮಾಸ್ಟರ್‌ ಮೈಂಡ್ ಮತ್ತು ರಿಂಗ್‌ ಮಾಸ್ಟರ್ ಒಂದೇ ಫ್ರೇಮ್‌ನಲ್ಲಿ ಸಿಲುಕಿಕೊಂಡಿರುವುದಕ್ಕೂ, ನನ್ನನ್ನು ಸಿಲುಕಿಸುವ ಕುತಂತ್ರ ಎನ್ನುವ ಸ್ವ-ರಕ್ಷಣಾ ಆಟ ಆಡಿರುವುದಕ್ಕೂ ಸಂಬಂಧವಿರಬಹುದೇ?” ಎನ್ನುವ ಬರಹದೊಂದಿಗೆ ಬಿಜೆಪಿ ಟ್ವೀಟ್‌ ಮಾಡಿತ್ತು.

ಹೆಣ್ಣು ಮಕ್ಕಳ ದುರ್ಬಳಕೆಯನ್ನು ಸಮರ್ಥಿಸುತ್ತಿರುವ @BJP4Karnataka

ದೇಶದ್ರೋಹಿ & ಅತ್ಯಾಚಾರಿಯೊಂದಿಗೆ @narendramodi ಅವರಿಗೆ ಏನು ಸಂಬಂಧ?@Tejasvi_Surya ಡ್ರಗ್ ಡೀಲರ್‌ಗೂ ಏನು ಸಂಬಂಧ?@mepratap ಹಾಗೂ ಈ ಆರೋಪಿಗೂ ಏನು ಸಂಬಂಧ?@LaxmanSavadi & ಯುವರಾಜನಿಗೂ ಏನು ಸಂಬಂಧ?

ಹೆಗಲು ಮುಟ್ಟಿಕೊಂಡು ತಡೆಯಾಜ್ಞೆ ತಂದಿದ್ಯಾರು? https://t.co/OjOlKk4kHu pic.twitter.com/70voo4asIF

— Karnataka Congress (@INCKarnataka) March 17, 2021

Related News

ಇನ್ಮುಂದೆ ಹೋಟೆಲ್‌ನಲ್ಲಿ ಕೂತು ಗಂಟೆಗಟ್ಟಲೆ ಮಾತಾಡಿದ್ರೆ ಎಕ್ಸ್ಟ್ರಾಚಾರ್ಜ್: ಹೋಟೆಲ್ ಮಾಲೀಕರಿಂದ ಅಸೋಸಿಯೇಷನ್‌ಗೆ ಮನವಿ
ಪ್ರಮುಖ ಸುದ್ದಿ

ಇನ್ಮುಂದೆ ಹೋಟೆಲ್‌ನಲ್ಲಿ ಕೂತು ಗಂಟೆಗಟ್ಟಲೆ ಮಾತಾಡಿದ್ರೆ ಎಕ್ಸ್ಟ್ರಾಚಾರ್ಜ್: ಹೋಟೆಲ್ ಮಾಲೀಕರಿಂದ ಅಸೋಸಿಯೇಷನ್‌ಗೆ ಮನವಿ

February 9, 2026
ಏಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ನಿಯಮಗಳು ಜಾರಿ: ಸಂಬಳದಿಂದ ಷೇರು ಹೂಡಿಕೆವರೆಗೂ ಎಲ್ಲದರ ಮೇಲೂ ಸರ್ಕಾರದ ಕಣ್ಣು
ದೇಶ-ವಿದೇಶ

ಏಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ನಿಯಮಗಳು ಜಾರಿ: ಸಂಬಳದಿಂದ ಷೇರು ಹೂಡಿಕೆವರೆಗೂ ಎಲ್ಲದರ ಮೇಲೂ ಸರ್ಕಾರದ ಕಣ್ಣು

February 9, 2026
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ದರ ಏರಿಕೆ ನಿರ್ಧಾರ ಹಿಂಪಡೆದ BMRCL
ಪ್ರಮುಖ ಸುದ್ದಿ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ದರ ಏರಿಕೆ ನಿರ್ಧಾರ ಹಿಂಪಡೆದ BMRCL

February 9, 2026
ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕಳ್ಳರ ಕೈಚಳಕ:ಫ್ಲಿಪ್‌ಕಾರ್ಟ್ ಕಂಪನಿಗೆ ಸೇರಿದ 24 ಲಕ್ಷದ ಮೊಬೈಲ್ ಸೇರಿ, ಇತರೆ ಗೂಡ್ಸ್‌ ಕಳವು
ಪ್ರಮುಖ ಸುದ್ದಿ

ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕಳ್ಳರ ಕೈಚಳಕ:ಫ್ಲಿಪ್‌ಕಾರ್ಟ್ ಕಂಪನಿಗೆ ಸೇರಿದ 24 ಲಕ್ಷದ ಮೊಬೈಲ್ ಸೇರಿ, ಇತರೆ ಗೂಡ್ಸ್‌ ಕಳವು

February 7, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.