- ಪ್ಯಾರಾಸಿಟಮಾಲ್ ಸೇರಿ 15 ಔಷಧಗಳು ಡೇಂಜರ್ (Including-paracetamol 15 medicines ban)
- ಪಟ್ಟಿಯಲ್ಲಿರುವ ಔಷಧಿಗಳ ದಾಸ್ತಾನು ಮಾಡದಂತೆ ಮತ್ತು ಮಾರಾಟ ಮಾಡದಂತೆದಿನೇಶ್ ಗುಂಡೂರಾವ್ ಟ್ವೀಟ್
- ಈ ಉತ್ಪನ್ನಗಳನ್ನು ತಕ್ಷಣವೇ ಮಾರುಕಟ್ಟೆಯಿಂದ ತೆಗೆದುಹಾಕಲು ಸೂಚನೆ
Bengaluru: ವಾತಾವರಣದ ಬದಲಾವಣೆಯಿಂದಾಗಿರಲಿ ಇಲ್ಲವೇ ವೈರಲ್ ಜ್ವರವೇ ಆಗಿರಲಿ ಸಾಮಾನ್ಯವಾಗಿ ಜ್ವರ, ಶೀತ, ಕೆಮ್ಮು, ನೆಗಡಿ (Fever, Cold) ಬಂದಾಗ ಪ್ಯಾರಾಸಿಟಮಾಲ್ (Paracetamol Tablet) ಮಾತ್ರೆಗಳನ್ನು ತೆಗೆದುಕೊಳ್ಳುವುದು ಕಾಮನ್.
ಆದರೆ ಇದು ಸೇಫ್ ಅಲ್ಲ ಎಂದು ಆರೋಗ್ಯ ಇಲಾಖೆ (Health Deaprtment) ಎಚ್ಚರಿಕೆ ನೀಡಿದೆ.
ಕರ್ನಾಟಕ ರಾಜ್ಯದ ಆಹಾರ ಸುರಕ್ಷತೆ (Food Safety) ಮತ್ತು ಔಷಧ ನಿಯಂತ್ರಣ ಇಲಾಖೆ ಜ್ವರ, ಶೀತ, ಕೆಮ್ಮು, ಮತ್ತು ಮೈಕೈ ನೋವಿಗೆ ಸಾಮಾನ್ಯವಾಗಿ ಬಳಸಲಾಗುವ ಪ್ಯಾರಸಿಟಮಾಲ್
ಸೇರಿದಂತೆ 15 ಕಾಂತಿವರ್ಧಕ ಉತ್ಪನ್ನಗಳು ಮತ್ತು ಔಷಧಿಗಳನ್ನು ಅಸುರಕ್ಷಿತ ಎಂದು ಘೋಷಿಸಿದೆ.
ಇತ್ತೀಚಿಗೆ ಒಂದೊಂದೇ ಆಹಾರ ಪದಾರ್ಥಗಳನ್ನು ಟೆಸ್ಟಿಂಗ್ಗೆ ಒಳಪಡಿಸಿ ಸುರಕ್ಷಿತಾ ಗುಣಮಟ್ಟ (Safe quality) ಪರಿಶೀಲನೆ ನಡೆಸುತ್ತಿರುವ ಆರೋಗ್ಯ ಇಲಾಖೆ (Health Department)
ಇದೀಗ ಕಾಂತಿವರ್ಧಕ ಅಂದರೆ ಹೆಣ್ಣಮಕ್ಕಳು ಹಣೆಗೆ ಹಚ್ಚುವ ಕುಂಕುಮ (Saffron) ಸೇರಿ 15 ಔಷಧಗಳು ಅಸುರಕ್ಷಿತ ಎಂದು ಘೋಷಣೆ ಮಾಡಿ,
ಜೊತೆಗೆ ಕುಂಕುಮ ಸೇರಿ ಔಷಧ ಉತ್ಪನ್ನಗಳ (Drug products) ಉತ್ಪಾದನೆ, ಮಾರಾಟ, ಮತ್ತು ಬಳಕೆಯನ್ನು ತಕ್ಷಣವೇ ನಿಷೇಧಿಸಿ, ಆರೋಗ್ಯ ಇಲಾಖೆಯು (Department of Health) ಸುತ್ತೋಲೆ ಹೊರಡಿಸಿದೆ. ಈ ಕ್ರಮವು ಗ್ರಾಹಕರ ಆರೋಗ್ಯ ರಕ್ಷಣೆಗೆ ಒತ್ತು ನೀಡುವ ಗುರಿಯನ್ನು ಹೊಂದಿದ್ದು, ಜನರಲ್ಲಿ ಜಾಗೃತಿಯನ್ನು ಮೂಡಿಸಿದೆ.
2025ರ ಮೇ ತಿಂಗಳಲ್ಲಿ ರಾಜ್ಯ ಆರೋಗ್ಯ ಇಲಾಖೆಯು ವಿವಿಧ ಕಂಪೆನಿಗಳಿಂದ ತಯಾರಾದ ಕಾಂತಿವರ್ಧಕ ಉತ್ಪನ್ನಗಳು (Brightening products) ಮತ್ತು ಔಷಧಿಗಳ ಮಾದರಿಗಳನ್ನು ಸಂಗ್ರಹಿಸಿ, ಗುಣಮಟ್ಟ ತಪಾಸಣೆಗೆ (Quality control) ಒಳಪಡಿಸಿತ್ತು. ಈ ತಪಾಸಣೆಯಲ್ಲಿ, ಈ ಕೆಳಗಿನ 15 ಉತ್ಪನ್ನಗಳು ಗುಣಮಟ್ಟದಲ್ಲಿ ಕಡಿಮೆಯಾಗಿರುವುದು ಕಂಡುಬಂದಿದೆ.
- ಕಂಪೌಂಡ್ ಸೋಡಿಯಂ ಲ್ಯಾಕ್ಟೆಟ್ ಇನ್ಜೆಕ್ಷನ್ ಐಪಿ – ಮೆ. ಅಲ್ಟ್ರಾ ಲ್ಯಾಬೋರೇಟರಿಸ್ ಪ್ರೈ. ಲಿಮಿಟೆಡ್.
- ಕಂಪೌಂಡ್ ಸೋಡಿಯಂ ಲ್ಯಾಕ್ಟೆಟ್ ಇನ್ಜೆಕ್ಷನ್ ಐಪಿ – ಮೇ. ಟಾಮ್ ಬ್ರಾನ್ ಫಾರ್ಮಾಸ್ಯೂಟಿಕಲ್ಸ್ ಪ್ರೈ. ಲಿಮಿಟೆಡ್.
- ಪೋಮೋಲ್-650 (ಪ್ಯಾರಾಸಿಟಮೋಲ್ ಟ್ಯಾಬ್ಲೆಟಸ್ ಐ.ಪಿ 650 ಎಂಜಿ)- ಮೇ. ಅಬಾನ್ ಫಾರ್ಮಾಸ್ಯೂಟಿಕಲ್ಸ್ ಪ್ರೈ. ಲಿಮಿಟೆಡ್
- ಮಿಟು ಕ್ಯೂ7 ಸಿರಪ್ – ಮೆ. ಬಯೋನ್ ಥೆರಾಪ್ಯಾಟಿಕ್ಸ್ ಇಂಡಿಯಾ ಪ್ರೈ. ಲಿಮಿಟೆಡ್.
- ಸ್ಟೈರಲ್ ಡಿಲ್ಯೈಯಂಟ್ ಪಾರ್ ರೆಕಾನೋಸ್ಟಿಟಿಶ್ಯೂನ್ ಆಪ್ ಎನ್ಡಿ, ಐಬಿ, ಐಬಿಡಿ ಆ್ಯಂಡ್ ಕಾಂಬಿನೇಷನ್ ವ್ಯಾಕ್ಸಿನ್ಸ್ ಫಾರ್ ಪೌಲ್ಟ್ರೀ (ವೆಟರ್ನರಿ) ಮಲ್ಟಿ ಡೋಸ್ ವಿಲಾ 200 ಎಂಲ್ – ಮೇ. ಸೇಫ್ ಪೇರೆಂಟರಲ್ಸ್ ಪ್ರೈ. ಲಿಮಿಟೆಡ್.
- ಸ್ಪಾನ್ಪ್ಲಾಕ್ಸ್-ಓಡ್ ಟ್ಯಾಬ್ಲೆಟ್ಸ್ (ಓಪ್ಲಾಕ್ಸಸಿನ್ & ಓರ್ನಿಡಜೋಲ್ ಟ್ಯಾಬ್ಲೆಟ್ಸ್ ಐಪಿ) – ಮೆ. ಇಂಡೋರಾಮ ಹೇಲ್ತ್ ಕೇಸ್ ಪ್ರೈ ಲಿಮಿಟಿಡ್.
- ಪ್ಯಾಂಟೋಕೋಟ್-ಡಿಎಸ್ಆರ್ (ಪ್ಯಾಂಟೋಫ್ರಜೋಲ್ ಗ್ಯಾಸ್ಟ್ರೋ-ರಿಜಿಸ್ಟೆಂಟ್ & ಡೋಮ್ಫೆರಿಡನ್ ಪ್ರೋಕಾಂಗಡ್ ರಿಲಿಸ್ ಕ್ಯಾಪ್ಸೂಲ್ಸ್ ಐಪಿ – ಮೇ. ಸ್ವೆಫ್ನೆ ಫಾರ್ಮಾಸ್ಯೂಟಿಕಲ್ಸ್ ಪ್ರೈ. ಲಿಮಿಟೆಡ್.
- 8.ಸೋಡಿಯಂ ಕ್ಲೋರೈಡ್ ಇನ್ಜೆಕ್ಷನ್ ಐಪಿ 0.9% ಡಬ್ಲ್ಯೂ/ವಿ (ಎನ್ಎಸ್) – ಮೆ. ಪುನಿಷ್ಕ ಇನ್ಜೆಕ್ಟಬಲ್ ಪ್ರೈ. ಲಿಮಿಟೆಡ್.

- ಸೋಡಿಯಂ ಕ್ಲೋರೈಡ್ ಇನ್ಜೆಕ್ಷನ್ ಐಪಿ 0.9% ಡಬ್ಲ್ಯೂ/ವಿ (ಎನ್ಎಸ್) – ಮೆ. ಪುನಿಷ್ಕ ಇನ್ಜೆಕ್ಟಬಲ್ ಪ್ರೈ. ಲಿಮಿಟೆಡ್.
- ಅಲ್ಪಾ ಲಿಪೋಯಿಕ್ ಆಸಿಡ್, ಪೋಲಿಕ್ ಆಸಿಡ್, ಮಿಥೈಲ್ ಕೋಬಾಲಮಿನ್, ವಿಟಮಿನ್ ಬಿ6 & ವಿಟಮಿನ್ ಡಿ3ಟ್ಯಾಬ್ಲೆಟ್ಸ್ – ಮೇ. ಇಸ್ಟ್ ಆಪ್ರಿಕನ್ (ಇಂಡಿಯಾ) ಓವರ್ಸಿಸ್.
- ಓ ಶಾಂತಿ ಗೋಲ್ಡ್ ಕ್ಲಾಸ್ ಕುಂಕುಮ್ – ಮೇ. ಎನ್. ರಂಗರಾವ್ & ಸನ್ಸ್ ಪ್ರೈ ಲಿಮಿಟೆಡ್
- 12.ಪಿರಾಸಿಡ್-ಓ ಸಸ್ಪೆನ್ಶನ್ (ಸಲ್ಕ್ರಾಲ್ಫೇಟ್ & ಆಕ್ಸೆಟಾಕೈನ್ ಸಸ್ಪೆನ್ಶನ್) – ಮೆ. ರೆಡ್ನಕ್ಸ್ ಫಾರ್ಮಾಸ್ಯೂಟಿಕಲ್ಸ್ ಪ್ರೈ ಲಿಮಿಟೆಡ್.
- ಗ್ಲಿಮಿಜ್-2 (ಗ್ಲಿಮಿಫೆರೈಡ್ ಟ್ಯಾಬ್ಲೆಟ್ಸ್ ಐಪಿ 2ಎಂಜಿ) – ಮೆ. ಕೆಎನ್ಎಂ ಫಾರ್ಮಾ ಪ್ರೈ. ಲಿಮಿಟೆಡ್.
- ಐರನ್ ಸುಕ್ರೋಸ್ ಇನ್ಜೆಕ್ಷನ್ ಯುಎಸ್ಪಿ 100ಎಂಜಿ (ಐರೋಗೈನ್) – ಮೆ. ರೀಗೈನ್ ಲ್ಯಾಬೋರೇಟರಿಸ್.
- ಕಂಪೌಂಡ್ ಸೋಡಿಯಂ ಲ್ಯಾಕ್ಟೆಟ್ ಇನ್ಜೆಕ್ಷನ್ ಐಪಿ (ರಿಂರ್ಗ ಲ್ಯಾಕ್ಟೆಟ್ ಸಲೂಷನ್ ಪಾರ್ ಇನ್ಜೆಕ್ಷನ್ ಆರ್ಎಲ್ – ಮೇ. ಒಟ್ಸುಕಾ ಫಾರ್ಮಾಸ್ಯೂಟಿಕಲ್ಸ್ ಇಂಡಿಯಾ
ಕಾಂತಿವರ್ಧಕ ಉತ್ಪನ್ನಗಳಾದ ಕುಂಕುಮವು (Saffron) ಚರ್ಮದ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು.
ಈ ಹಿನ್ನೆಲೆಯಲ್ಲಿ, ಆರೋಗ್ಯ ಇಲಾಖೆಯು ಔಷಧ ವ್ಯಾಪಾರಿಗಳು (Drug dealers) , ಸಗಟು ಮಾರಾಟಗಾರರು, ವೈದ್ಯರು, ಆಸ್ಪತ್ರೆಗಳು, ಮತ್ತು ನರ್ಸಿಂಗ್ ಹೋಮ್‌ಗಳಿಗೆ (Nursing homes) ಈ ಉತ್ಪನ್ನಗಳನ್ನು ದಾಸ್ತಾನು ಮಾಡದಂತೆ ಮತ್ತು ಮಾರಾಟ ಮಾಡದಂತೆ (Not to be sold) ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
ಆರೋಗ್ಯ ಇಲಾಖೆಯ ಉಪ ಔಷಧ ನಿಯಂತ್ರಣಾಧಿಕಾರಿ ಬಿ.ಪಿ. ಅರುಣ್ (B.P. Arun) ಅವರು ಹೊರಡಿಸಿದ ಸುತ್ತೋಲೆಯಲ್ಲಿ, ಈ 15 ಔಷಧಿಗಳನ್ನು ತಕ್ಷಣವೇ ಮಾರುಕಟ್ಟೆಯಿಂದ ತೆಗೆದುಹಾಕಲು ಸೂಚಿಸಿದ್ದಾರೆ.
ಗ್ರಾಹಕರಿಗೆ ಈ ಉತ್ಪನ್ನಗಳನ್ನು ಬಳಸದಂತೆ ಎಚ್ಚರಿಕೆ (Caution not to use) ನೀಡಲಾಗಿದ್ದು, ಖರೀದಿಯ ಮೊದಲು ಗುಣಮಟ್ಟವನ್ನು ಪರಿಶೀಲಿಸುವಂತೆ ಸಲಹೆ ನೀಡಲಾಗಿದೆ.
ಯಾವುದೇ ಶಂಕಾಸ್ಪದ ಔಷಧಿಗಳ ಕುರಿತು ಆರೋಗ್ಯ ಇಲಾಖೆಗೆ ದೂರು ಸಲ್ಲಿಸಲು ಅವಕಾಶವಿದೆ. ಈ ಕ್ರಮವು ಗ್ರಾಹಕರ ಆರೋಗ್ಯ ರಕ್ಷಣೆಗೆ (Healthcare) ಮಹತ್ವದ ಹೆಜ್ಜೆಯಾಗಿದೆ.
ಇದನ್ನು ಓದಿ : ಮಾವು ಬೆಲೆ ತೀವ್ರ ಕುಸಿತ: ರಾಜ್ಯದ ರೈತರ ನೆರವು ನೀಡುವಂತೆ ಪ್ರಧಾನಿಗೆ ಮನವಿ
ಔಷಧ ತಯಾರಕ ಕಂಪೆನಿಗಳಿಗೆ (Pharmaceutical companies) ಗುಣಮಟ್ಟ ನಿಯಂತ್ರಣದ ಕಡೆ (Including-paracetamol 15 medicines ban) ಹೆಚ್ಚಿನ ಗಮನ ಹರಿಸುವಂತೆ ಒತ್ತಾಯಿಸಲಾಗಿದೆ.