Bihar : ಆದಾಯ ತೆರಿಗೆ ಇಲಾಖೆಯು (Income Tax Department Notice) ಬಿಹಾರ ರಾಜ್ಯದ ರೋಹ್ತಾಸ್ ಜಿಲ್ಲೆಯಲ್ಲಿ ವಾಸಿಸುವ ದಿನಗೂಲಿ ಕಾರ್ಮಿಕನಿಗೆ ಬರೋಬ್ಬರಿ 14 ಕೋಟಿ ರೂ. ರಿಟರ್ನ್ಸ್ ಪಾವತಿಸುವಂತೆ ನೋಟಿಸ್ ನೀಡಿದೆ.
ಶನಿವಾರ ಆದಾಯ ತೆರಿಗೆ ಇಲಾಖೆಯ ತಂಡವು ಕಾರ್ಗಹಾರ್ ಗ್ರಾಮದ ಕಾರ್ಮಿಕ, ನಿವಾಸಿ ಮನೋಜ್ ಯಾದವ್ (Manoj Yadav) ಅವರ ಮನೆಗೆ ತೆರಳಿ 14 ಕೋಟಿ ರೂ.
ಆದಾಯ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳ ನೀಡಿರುವ ಮಾಹಿತಿ ಪ್ರಕಾರ, ಮನೋಜ್ ಯಾದವ್ ಎಂಬ ಕಾರ್ಮಿಕನ ಬ್ಯಾಂಕ್ ದಾಖಲೆಗಳು ಕೋಟ್ಯಂತರ ರೂಪಾಯಿ ವಹಿವಾಟುಗಳನ್ನು ಮಾಡಿರುವುದನ್ನು ನಮಗೆ ತೋರಿಸಿದೆ.
ಇದರಿಂದಾಗಿ ಅವರು ಆದಾಯ ತೆರಿಗೆ ಪಾವತಿಸಲು ನೇರ ಹೊಣೆಗಾರರಾಗಿದ್ದಾರೆ (Income Tax Department Notice) ಎಂದು ಇಲಾಖೆ ಹೇಳಿದೆ.
ಇನ್ನು ನೋಟಿಸ್ ಬಂದಿರುವ ಮಾಹಿತಿ ತಿಳಿದ ಯಾದವ್ ಮತ್ತು ಅವರ ಕುಟುಂಬದವರು ಆಘಾತಕ್ಕೊಳಗಾಗಿದ್ದು, ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.
ತಾನೊಬ್ಬ ದಿನಗೂಲಿ ಕಾರ್ಮಿಕನಾಗಿದ್ದು, ತನ್ನ ಸಂಪೂರ್ಣ ಆಸ್ತಿಯನ್ನು ಹತ್ತು ಬಾರಿ ಮಾರಾಟ ಮಾಡಿದರೂ, ನೀವು ಹೇಳಿದ ಮೊತ್ತವನ್ನು ಪಾವತಿಸಲು ನನ್ನಿಂದ ಅಸಾಧ್ಯ! ಹೀಗಿದ್ದ ಮೇಲೆ ಹೇಗೆ ನನ್ನ ಮೇಲೆ ಈ ತೆರಿಗೆ ಹೊರಿಸಿದ್ದೀರಿ ಎಂದು ಯಾದವ್ ಅಧಿಕಾರಿಗಳಿಗೆ ಪ್ರಶ್ನಿಸಿದ್ದಾರೆ.
ಇದನ್ನೂ ನೋಡಿ : https://fb.watch/hyGZOtPOcj/ ಚಿಪ್ಸ್ ರಹಸ್ಯ! No more chips, no more diseases ! DANGEROUS FOODS
ಯಾದವ್ ಅವರು ಈ ಹಿಂದೆ ದೆಹಲಿ (Delhi), ಹರಿಯಾಣ ಮತ್ತು ಪಂಜಾಬ್ ಸೇರಿದಂತೆ ಹಲವು ಸ್ಥಳಗಳಲ್ಲಿ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿದ್ದರು.
ಆದರೆ 2020 ರಲ್ಲಿ ಕೋವಿಡ್ (Covid) ಲಾಕ್‌ಡೌನ್ ಆದ ಕಾರಣ, ಕೆಲಸ ತ್ಯಜಿಸಿ ಬಿಹಾರದಲ್ಲಿರುವ ತಮ್ಮ ಮನೆಗೆ ಹಿಂದಿರುಗಿದ್ದಾರೆ.
ಯಾದವ್ ಅವರು ಖಾಸಗಿ ಕಂಪನಿಗಳಲ್ಲಿ ಉದ್ಯೋಗದ ಸಮಯದಲ್ಲಿ ತಮ್ಮ ಮೂಲ ದಾಖಲಾತಿಗಳಾದ ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗಳನ್ನು ತಾವು ಕೆಲಸ ಮಾಡಿದ ಕಛೇರಿಗೆ ಕೊಟ್ಟಿದ್ದರು ಎಂದು ಹೇಳಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿದ ಕಾರ್ಮಿಕ ಯಾದವ್,
ತಮ್ಮ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆಯಲು ಮತ್ತು ಆದಾಯ ತೆರಿಗೆಯಿಂದ ತಪ್ಪಿಸಿಕೊಳ್ಳಲು ವಹಿವಾಟು ನಡೆಸಲು ತಮ್ಮ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ನೋಟಿಸ್ ನೀಡಲು ಯಾದವ್ ಮನೆಗೆ ಭೇಟಿ ನೀಡಿದ ತೆರಿಗೆ ಅಧಿಕಾರಿಗಳು ಕುಟುಂಬದ ಆರ್ಥಿಕ ಸ್ಥಿತಿಯನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ.
ಪ್ರಧಾನ ಕಚೇರಿಯಿಂದ ಐಟಿ ನೋಟಿಸ್ ಕಳುಹಿಸಲಾಗಿದೆ ಎಂದು ಸಸಾರಾಮ್ ಆದಾಯ ತೆರಿಗೆ ಅಧಿಕಾರಿ (Sasaram Income Tax Officer) (ಐಟಿಒ) ಸತ್ಯಭೂಷಣ್ ಪ್ರಸಾದ್ ಸುದ್ದಿಪತ್ರಿಕೆಯೊಂದಕ್ಕೆ ಮಾಹಿತಿ ನೀಡಿದ್ದಾರೆ. ಈ ನಡುವೆ ಸ್ಥಳೀಯರ ಪ್ರಕಾರ,
ಇದನ್ನೂ ಓದಿ : https://vijayatimes.com/javed-statement-on-journalism/