• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ತೆರಿಗೆ ಪಾವತಿದಾರರಿಗೆ ಮಹತ್ವದ ಅಲರ್ಟ್: ಏಪ್ರಿಲ್ 1ರಿಂದ ಜಾರಿಗೆ ಬರುವ 7 ಪ್ರಮುಖ ಆದಾಯ ತೆರಿಗೆ ಬದಲಾವಣೆಗಳು

Teju Srinivas by Teju Srinivas
in ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ತೆರಿಗೆ ಪಾವತಿದಾರರಿಗೆ ಮಹತ್ವದ ಅಲರ್ಟ್: ಏಪ್ರಿಲ್ 1ರಿಂದ ಜಾರಿಗೆ ಬರುವ 7 ಪ್ರಮುಖ ಆದಾಯ ತೆರಿಗೆ ಬದಲಾವಣೆಗಳು
0
SHARES
8
VIEWS
Share on FacebookShare on Twitter
  • ಏಪ್ರಿಲ್ 1ರಿಂದ ತೆರಿಗೆ ವ್ಯವಸ್ಥೆಯಲ್ಲಿ (income tax new rules) ದೊಡ್ಡ ಬದಲಾವಣೆ: ಸರ್ಕಾರದ ಹೊಸ ನಿಯಮಗಳು ಜಾರಿ
  • ITR ಸಲ್ಲಿಕೆ, ಡಿವಿಡೆಂಡ್ ಆದಾಯ ಮತ್ತು TCS ದರಗಳಲ್ಲಿ ಮಹತ್ವದ ಬದಲಾವಣೆ
  • ಫ್ಯೂಚರ್ಸ್–ಆಪ್ಷನ್ಸ್ STT ಏರಿಕೆ, ಬೈಬ್ಯಾಕ್ ತೆರಿಗೆ ಸೇರಿದಂತೆ ಹಲವು ಹೊಸ ನಿಯಮಗಳು

ಭಾರತದಲ್ಲಿ ಹೊಸ ಹಣಕಾಸು ವರ್ಷ 2026–27 ಏಪ್ರಿಲ್ 1ರಿಂದ ಆರಂಭವಾಗಲಿದ್ದು, ಇದರೊಂದಿಗೆ ಆದಾಯ (income tax new rules) ತೆರಿಗೆ ವ್ಯವಸ್ಥೆಯಲ್ಲಿ ಹಲವು ಪ್ರಮುಖ ಬದಲಾವಣೆಗಳು ಜಾರಿಗೆ ಬರಲಿವೆ. ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ಕೆಲವು ಮಹತ್ವದ ನಿಯಮಗಳು ಇದೇ ದಿನಾಂಕದಿಂದ ಅನ್ವಯವಾಗಲಿವೆ.

ತೆರಿಗೆ ಪ್ರಕ್ರಿಯೆಯನ್ನು ಸುಲಭಗೊಳಿಸುವುದು ಹಾಗೂ ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕವಾಗಿಸಲು ಸರ್ಕಾರ ಈ ಕ್ರಮಗಳನ್ನು ಕೈಗೊಂಡಿದೆ. ವಿಶೇಷವಾಗಿ ಐಟಿಆರ್ (ITR) ಸಲ್ಲಿಕೆ ಗಡುವು, ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ (STT) ದರ, ಟಿಸಿಎಸ್ (TCS) ನಿಯಮಗಳು ಸೇರಿದಂತೆ ಹಲವಾರು ವಿಷಯಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.

income tax new rules

ಆದ್ದರಿಂದ ತೆರಿಗೆ ಪಾವತಿದಾರರು ಈ ಹೊಸ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ.

ಮೊದಲನೆಯದಾಗಿ, ಹಳೆಯ 1961ರ ಆದಾಯ ತೆರಿಗೆ ಕಾಯ್ದೆಯ ಬದಲಿಗೆ ‘ಹೊಸ ಆದಾಯ ತೆರಿಗೆ ಕಾಯ್ದೆ–2025’ ಜಾರಿಗೆ ಬರುತ್ತಿದೆ.

ಇದರ ಉದ್ದೇಶ ತೆರಿಗೆ ನಿಯಮಗಳನ್ನು ಸರಳಗೊಳಿಸುವುದು ಮತ್ತು ತೆರಿಗೆ ವ್ಯವಸ್ಥೆಯನ್ನು ಹೆಚ್ಚು (income tax new rules) ಸುಗಮಗೊಳಿಸುವುದಾಗಿದೆ. ಆದರೆ ತೆರಿಗೆ ಸ್ಲ್ಯಾಬ್‌ಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಈಗಿನಂತೆಯೇ ಹಳೆಯ ಸ್ಲ್ಯಾಬ್ ವ್ಯವಸ್ಥೆಯೇ ಮುಂದುವರಿಯಲಿದೆ.

ಇದರಿಂದ ಸಾಮಾನ್ಯ ತೆರಿಗೆ ಪಾವತಿದಾರರಿಗೆ ಹೆಚ್ಚುವರಿ ಹೊರೆ ಬರುವ ಸಾಧ್ಯತೆ ಇಲ್ಲ, ಆದರೆ ಹೊಸ ಕಾಯ್ದೆಯಿಂದ ತೆರಿಗೆ ನಿಯಮಗಳು ಹೆಚ್ಚು ಸ್ಪಷ್ಟವಾಗಲಿವೆ ಎಂದು ತಜ್ಞರು ಹೇಳುತ್ತಿದ್ದಾರೆ.

ಇನ್ನು ಐಟಿಆರ್ ಸಲ್ಲಿಕೆಗೆ ಸಂಬಂಧಿಸಿದಂತೆ ಪ್ರಮುಖ ಬದಲಾವಣೆ ಮಾಡಲಾಗಿದೆ. ನಾನ್-ಆಡಿಟ್ ತೆರಿಗೆ ಪಾವತಿದಾರರು ITR-3 ಮತ್ತು ITR-4 ಸಲ್ಲಿಸಲು ಇದ್ದ ಗಡುವನ್ನು ಜುಲೈ 31ರಿಂದ ಆಗಸ್ಟ್ 31ಕ್ಕೆ ವಿಸ್ತರಿಸಲಾಗಿದೆ. ಇದರಿಂದ ತೆರಿಗೆದಾರರಿಗೆ ದಾಖಲೆಗಳನ್ನು ಸಿದ್ಧಪಡಿಸಲು ಹೆಚ್ಚು ಸಮಯ ಸಿಗಲಿದೆ.

ಆದರೆ ITR-1 ಮತ್ತು ITR-2 ಸಲ್ಲಿಸುವವರಿಗೆ ಹಿಂದಿನಂತೆ ಜುಲೈ 31ರ ಗಡುವೇ ಮುಂದುವರಿಯಲಿದೆ. ಜೊತೆಗೆ ಪರಿಷ್ಕೃತ (Revised) ಐಟಿಆರ್ ಸಲ್ಲಿಸಲು ಇದ್ದ ಗಡುವನ್ನು ಡಿಸೆಂಬರ್ 31ರಿಂದ ಮಾರ್ಚ್ 31ಕ್ಕೆ ವಿಸ್ತರಿಸಲಾಗಿದೆ.

ಆದರೆ ಡಿಸೆಂಬರ್ 31 ನಂತರ ರಿಟರ್ನ್ ಸಲ್ಲಿಸಿದರೆ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಟಿಸಿಎಸ್ (Tax Collected at Source) ದರಗಳಲ್ಲಿ ಸಹ ಬದಲಾವಣೆ ಮಾಡಲಾಗಿದೆ. ಕೆಲವು ವಹಿವಾಟುಗಳ ಮೇಲೆ ದರವನ್ನು ಸರಳಗೊಳಿಸಿ ಶೇ.2 ಕ್ಕೆ ನಿಗದಿಪಡಿಸಲಾಗಿದೆ.

ಉದಾಹರಣೆಗೆ ಮದ್ಯ ಮಾರಾಟದ ಮೇಲೆ ಟಿಸಿಎಸ್ ಶೇ.1ರಿಂದ ಶೇ.2ಕ್ಕೆ ಏರಿಸಲಾಗಿದೆ. ಬೀಡಿ ಎಲೆಗಳ ಮೇಲೆ ಟಿಸಿಎಸ್ ಶೇ.5ರಿಂದ ಶೇ.2ಕ್ಕೆ ಇಳಿಸಲಾಗಿದೆ. ಸ್ಕ್ರ್ಯಾಪ್ ವಹಿವಾಟಿನ ಮೇಲೆ ಶೇ.1ರಿಂದ ಶೇ.2ಕ್ಕೆ ಹೆಚ್ಚಳವಾಗಿದೆ.

ವಿದೇಶಿ ಪ್ರವಾಸ ಪ್ಯಾಕೇಜ್‌ಗಳ ಮೇಲಿನ ಟಿಸಿಎಸ್ ದರವನ್ನು ಫ್ಲಾಟ್ ಶೇ.2ಕ್ಕೆ ಇಳಿಸಲಾಗಿದೆ. ಅದೇ ರೀತಿ ವಿದೇಶದಲ್ಲಿ ಶಿಕ್ಷಣ ಅಥವಾ ವೈದ್ಯಕೀಯ ಚಿಕಿತ್ಸೆಗಾಗಿ ಕಳುಹಿಸುವ ಹಣದ ಮೇಲಿನ ಟಿಸಿಎಸ್ ಶೇ.5ರಿಂದ ಶೇ.2ಕ್ಕೆ ಇಳಿಕೆ ಮಾಡಲಾಗಿದೆ. ಇದರಿಂದ ಕೆಲವು ವಹಿವಾಟುಗಳಲ್ಲಿ ತೆರಿಗೆ ಭಾರ ಕಡಿಮೆಯಾಗುವ ನಿರೀಕ್ಷೆಯಿದೆ.

ಮತ್ತೊಂದೆಡೆ ಷೇರು ಮಾರುಕಟ್ಟೆಗೆ ಸಂಬಂಧಿಸಿದಂತೆ ಪ್ರಮುಖ ಬದಲಾವಣೆ ಮಾಡಲಾಗಿದೆ. ಫ್ಯೂಚರ್ಸ್ ಮತ್ತು ಆಪ್ಷನ್ಸ್ (F&O) ವ್ಯಾಪಾರಿಗಳಿಗಾಗಿ ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ (STT) ದರ ಹೆಚ್ಚಿಸಲಾಗಿದೆ. ಫ್ಯೂಚರ್ಸ್ ವಹಿವಾಟಿನ ಮೇಲೆ STT ಅನ್ನು ಶೇ.0.02ರಿಂದ ಶೇ.0.05ಕ್ಕೆ ಹೆಚ್ಚಿಸಲಾಗಿದೆ.

ಅದೇ ರೀತಿ ಆಪ್ಷನ್ಸ್ ಪ್ರೀಮಿಯಂ ಮೇಲಿನ ತೆರಿಗೆಯನ್ನು ಶೇ.0.1ರಿಂದ ಶೇ.0.15ಕ್ಕೆ ಏರಿಸಲಾಗಿದೆ. ಊಹಾಪೋಹದ ವ್ಯಾಪಾರವನ್ನು ಕಡಿಮೆ ಮಾಡಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗಿದೆ.

ಜೊತೆಗೆ ಕಂಪನಿಗಳು ಮಾಡುವ ಷೇರು ಬೈಬ್ಯಾಕ್ ಮೂಲಕ ದೊರೆಯುವ ಆದಾಯವನ್ನು ಇನ್ನುಮುಂದೆ ಕ್ಯಾಪಿಟಲ್ ಗೇನ್ಸ್ ಎಂದು ಪರಿಗಣಿಸಿ ತೆರಿಗೆ ವಿಧಿಸಲಾಗುತ್ತದೆ.

ಅದಲ್ಲದೆ ಲಾಭಾಂಶ (Dividend) ಅಥವಾ ಮ್ಯೂಚುವಲ್ ಫಂಡ್ ಯುನಿಟ್ ಮಾರಾಟದಿಂದ ಆದಾಯ ಗಳಿಸಲು ತೆಗೆದುಕೊಂಡ ಸಾಲದ ಮೇಲಿನ ಬಡ್ಡಿಯನ್ನು ಕಡಿತವಾಗಿ ತೋರಿಸಲು ಅವಕಾಶ ಇನ್ನು ಇರದು.

ಇದರಿಂದ ತೆರಿಗೆ ಪಾವತಿದಾರರು ತಮ್ಮ ಹೂಡಿಕೆ ಹಾಗೂ ಹಣಕಾಸು ಯೋಜನೆಯನ್ನು ಹೊಸ ನಿಯಮಗಳಿಗೆ ಅನುಗುಣವಾಗಿ ಪರಿಷ್ಕರಿಸಬೇಕಾಗಿದೆ.

ಇದನ್ನು ಓದಿ : https://vijayatimes.com/gas-shortage-in-granite-industry/

Tags: Income TaxtaxtaxpayersTCS

Related News

ಹಣ ಹೂಡಿಕೆ ಮಾಡುವ ಮುನ್ನ ಗಮನಿಸಿ: ಎಫ್‌ಡಿ vs ಸಣ್ಣ ಉಳಿತಾಯ ಯೋಜನೆಗಳು,NSC ಯಾವುದು ಬೆಸ್ಟ್
ಪ್ರಮುಖ ಸುದ್ದಿ

ಹಣ ಹೂಡಿಕೆ ಮಾಡುವ ಮುನ್ನ ಗಮನಿಸಿ: ಎಫ್‌ಡಿ vs ಸಣ್ಣ ಉಳಿತಾಯ ಯೋಜನೆಗಳು,NSC ಯಾವುದು ಬೆಸ್ಟ್

April 16, 2026
ಇರಾನ್ ವಿರುದ್ಧ ಕಠಿಣ ನಿಲುವು: ರಷ್ಯಾ ತೈಲ ವಿನಾಯಿತಿ ವಿಸ್ತರಣೆ ಇಲ್ಲ ಎಂದ ಅಮೆರಿಕಾ
ದೇಶ-ವಿದೇಶ

ಇರಾನ್ ವಿರುದ್ಧ ಕಠಿಣ ನಿಲುವು: ರಷ್ಯಾ ತೈಲ ವಿನಾಯಿತಿ ವಿಸ್ತರಣೆ ಇಲ್ಲ ಎಂದ ಅಮೆರಿಕಾ

April 16, 2026
ಸ್ವಯಂ ಗಣತಿ ಅಂತ್ಯ; ಇಂದಿನಿಂದ ಮನೆಗಣತಿ ಆರಂಭ – 33 ಪ್ರಶ್ನೆಗಳ ಮೂಲಕ ಮಾಹಿತಿ ಸಂಗ್ರಹ
ಪ್ರಮುಖ ಸುದ್ದಿ

ಸ್ವಯಂ ಗಣತಿ ಅಂತ್ಯ; ಇಂದಿನಿಂದ ಮನೆಗಣತಿ ಆರಂಭ – 33 ಪ್ರಶ್ನೆಗಳ ಮೂಲಕ ಮಾಹಿತಿ ಸಂಗ್ರಹ

April 16, 2026
ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂಗೆ ಬದಲು ಬ್ಯಾಲೆಟ್ ಪೇಪರ್: ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ
ಪ್ರಮುಖ ಸುದ್ದಿ

ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂಗೆ ಬದಲು ಬ್ಯಾಲೆಟ್ ಪೇಪರ್: ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ

April 16, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.