• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಬೆಂಗಳೂರು ವಾಹನ ಸವಾರರಿಗೆ ಶಾಕ್: ಟೋಯಿಂಗ್ ದರ 116% ಏರಿಕೆ

Teju Srinivas by Teju Srinivas
in ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ಬೆಂಗಳೂರು ವಾಹನ ಸವಾರರಿಗೆ ಶಾಕ್: ಟೋಯಿಂಗ್ ದರ 116% ಏರಿಕೆ
0
SHARES
8
VIEWS
Share on FacebookShare on Twitter

ಬೆಂಗಳೂರು ಟೋಯಿಂಗ್ ದರ ಭಾರೀ ಏರಿಕೆ ,ನಿಯಮ (increase in towing rates ) ಉಲ್ಲಂಘಿಸಿದರೆ ದುಬಾರಿ ದಂಡ

ದ್ವಿಚಕ್ರಕ್ಕೆ ₹650, ಕಾರಿಗೆ ₹1000 – ಹೊಸ ಟೋಯಿಂಗ್ ದರ ಜಾರಿ

ಹಳೆಯ ದರಕ್ಕೆ ಹೋಲಿಸಿದರೆ ಭಾರೀ ಹೆಚ್ಚಳ, ನಿಯಮ ಪಾಲನೆ ಕಡ್ಡಾಯ

Bengaluru: ಬೆಂಗಳೂರು ನಗರದಲ್ಲಿ ವಾಹನ ಸವಾರರಿಗೆ ಹೊಸ (increase in towing rates) ನಿಯಮಗಳು ತಲೆನೋವಾಗುವ ಸಾಧ್ಯತೆ ಇದೆ.

ಎಲ್ಲೆಂದರಲ್ಲಿ ವಾಹನ ನಿಲ್ಲಿಸುವವರ ವಿರುದ್ಧ ಈಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ.

ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಹೊಸ ಟೋಯಿಂಗ್ ದರಗಳನ್ನು ಅಧಿಕೃತವಾಗಿ ಜಾರಿಗೆ ತಂದಿದ್ದು, ಹಿಂದಿನ ದರಗಳಿಗೆ ಹೋಲಿಸಿದರೆ ಈಗ ದಂಡದ ಮೊತ್ತದಲ್ಲಿ ಭಾರೀ

ಏರಿಕೆ ಕಂಡುಬಂದಿದೆ. ಇದರಿಂದ ನಗರದಲ್ಲಿ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರು ಹೆಚ್ಚಿನ ಹಣವನ್ನು ದಂಡವಾಗಿ ಪಾವತಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಹೊಸ ನಿಯಮದ ಪ್ರಕಾರ, ನೋ ಪಾರ್ಕಿಂಗ್ ಪ್ರದೇಶದಲ್ಲಿ ದ್ವಿಚಕ್ರ ವಾಹನವನ್ನು ನಿಲ್ಲಿಸಿದರೆ ₹650 ಟೋಯಿಂಗ್ ದರ ಪಾವತಿಸಬೇಕು. ಇದೇ ವೇಳೆ ಕಾರುಗಳನ್ನು ನೋ ಪಾರ್ಕಿಂಗ್

ಪ್ರದೇಶದಲ್ಲಿ ನಿಲ್ಲಿಸಿದರೆ ₹1000 ದಂಡ ವಿಧಿಸಲಾಗುತ್ತದೆ. ಮುಖ್ಯವಾಗಿ ಈ ಟೋಯಿಂಗ್ ದರವು ಸಂಚಾರಿ ಪೊಲೀಸರು ವಿಧಿಸುವ ಪಾರ್ಕಿಂಗ್ ದಂಡದ ಹೊರತಾಗಿ ಇರಲಿದೆ.

increase in towing rates

ಅಂದರೆ ನಿಯಮ ಉಲ್ಲಂಘಿಸಿದರೆ ವಾಹನ ಮಾಲೀಕರು ಎರಡು ವಿಧದ (increase in towing rates) ದಂಡವನ್ನು ಪಾವತಿಸಬೇಕಾಗುತ್ತದೆ.

ಇದು ವಾಹನ ಸವಾರರ ಮೇಲೆ ಆರ್ಥಿಕ ಭಾರವನ್ನು ಹೆಚ್ಚಿಸುವ ಸಾಧ್ಯತೆ ಇದೆ.

ಹಿಂದಿನ ಟೋಯಿಂಗ್ ವ್ಯವಸ್ಥೆಯಲ್ಲಿ ಖಾಸಗಿ ಏಜೆನ್ಸಿಗಳ ವಿರುದ್ಧ ಹಲವು ದೂರುಗಳು ಬಂದಿದ್ದವು. ಅನಗತ್ಯವಾಗಿ ವಾಹನಗಳನ್ನು ಎತ್ತುವುದು, ಹೆಚ್ಚು ಹಣ ಕೇಳುವುದು,

ಕಿರುಕುಳ ನೀಡುವುದು ಮೊದಲಾದ ಸಮಸ್ಯೆಗಳು ಹೆಚ್ಚಾಗಿದ್ದವು. ಈ ಹಿನ್ನೆಲೆ ಸರ್ಕಾರ ಟೋಯಿಂಗ್ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು.

ಈಗ ಹೊಸ ನಿಯಮದ ಪ್ರಕಾರ ಖಾಸಗಿ ಏಜೆನ್ಸಿಗಳಿಗೆ ಪ್ರತಿ ವಾಹನದ ಮೇಲೆ ಕಮಿಷನ್ ನೀಡುವುದನ್ನು ನಿಲ್ಲಿಸಿ, ಮಾಸಿಕ ವೇತನ ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ.

ಇದರಿಂದ ಅನಗತ್ಯವಾಗಿ ವಾಹನಗಳನ್ನು ಟೋಯಿಂಗ್ ಮಾಡುವ ಪ್ರಕರಣಗಳು ಕಡಿಮೆಯಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಗರದ ವಿವಿಧ ಪ್ರದೇಶಗಳಲ್ಲಿ ಟೋಯಿಂಗ್ ಕಾರ್ಯಾಚರಣೆ ಆರಂಭಿಸಲು ಸಿದ್ಧತೆ ನಡೆಯುತ್ತಿದೆ. ಪ್ರತಿ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ಟೋಯಿಂಗ್

ವಾಹನಗಳನ್ನು ನಿಯೋಜಿಸಲಾಗಿದ್ದು, ರಸ್ತೆ ಬದಿ ಅಡ್ಡಾದಿಡ್ಡಿಯಾಗಿ ನಿಲ್ಲಿಸಿರುವ ವಾಹನಗಳನ್ನು ತೆರವುಗೊಳಿಸಲಾಗುತ್ತದೆ.

ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡಲು ಹಾಗೂ ರಸ್ತೆ ಸಂಚಾರ ಸುಗಮವಾಗಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದ್ದರಿಂದ ವಾಹನ ಸವಾರರು ಪಾರ್ಕಿಂಗ್ ಮಾಡುವ ಮೊದಲು ನಿಯಮಗಳನ್ನು ಪರಿಶೀಲಿಸಿ, ಸರಿಯಾದ ಸ್ಥಳದಲ್ಲೇ ವಾಹನ ನಿಲ್ಲಿಸುವುದು ಅತ್ಯಂತ ಮುಖ್ಯವಾಗಿದೆ.

ಇದಕ್ಕೂ ಮೊದಲು ದ್ವಿಚಕ್ರ ವಾಹನ ಟೋಯಿಂಗ್ ದರ ₹300 ಇದ್ದು, ಈಗ ₹650ಕ್ಕೆ ಏರಿಕೆಯಾಗಿದೆ.

ಅಂದರೆ ಸುಮಾರು 116 ಶೇಕಡಾ ಹೆಚ್ಚಳವಾಗಿದೆ. ಕಾರುಗಳ ಟೋಯಿಂಗ್ ದರವೂ ₹500 ರಿಂದ ₹1000ಕ್ಕೆ ಏರಿಕೆಯಾಗಿದೆ.

ಈ ದರ ಏರಿಕೆ ವಾಹನ ಸವಾರರಿಗೆ ದೊಡ್ಡ ಆರ್ಥಿಕ ಹೊರೆ ತರಬಹುದು. ಆದ್ದರಿಂದ ಬೆಂಗಳೂರು ನಗರದಲ್ಲಿ ವಾಹನ ನಿಲ್ಲಿಸುವಾಗ ಹೆಚ್ಚು ಜಾಗರೂಕರಾಗಿರಬೇಕು.

ನಿಯಮ ಉಲ್ಲಂಘಿಸಿದರೆ ದುಬಾರಿ ದಂಡ ಕಟ್ಟಬೇಕಾದ ಪರಿಸ್ಥಿತಿ ಎದುರಾಗಬಹುದು ಎಂಬ ಎಚ್ಚರಿಕೆಯನ್ನು ಅಧಿಕಾರಿಗಳು ನೀಡಿದ್ದಾರೆ.

ಇದನ್ನು ಓದಿ : https://vijayatimes.com/relief-for-taxpayers/

Tags: bengaluruGBATowingvehical

Related News

ಹಣ ಹೂಡಿಕೆ ಮಾಡುವ ಮುನ್ನ ಗಮನಿಸಿ: ಎಫ್‌ಡಿ vs ಸಣ್ಣ ಉಳಿತಾಯ ಯೋಜನೆಗಳು,NSC ಯಾವುದು ಬೆಸ್ಟ್
ಪ್ರಮುಖ ಸುದ್ದಿ

ಹಣ ಹೂಡಿಕೆ ಮಾಡುವ ಮುನ್ನ ಗಮನಿಸಿ: ಎಫ್‌ಡಿ vs ಸಣ್ಣ ಉಳಿತಾಯ ಯೋಜನೆಗಳು,NSC ಯಾವುದು ಬೆಸ್ಟ್

April 16, 2026
ಇರಾನ್ ವಿರುದ್ಧ ಕಠಿಣ ನಿಲುವು: ರಷ್ಯಾ ತೈಲ ವಿನಾಯಿತಿ ವಿಸ್ತರಣೆ ಇಲ್ಲ ಎಂದ ಅಮೆರಿಕಾ
ದೇಶ-ವಿದೇಶ

ಇರಾನ್ ವಿರುದ್ಧ ಕಠಿಣ ನಿಲುವು: ರಷ್ಯಾ ತೈಲ ವಿನಾಯಿತಿ ವಿಸ್ತರಣೆ ಇಲ್ಲ ಎಂದ ಅಮೆರಿಕಾ

April 16, 2026
ಸ್ವಯಂ ಗಣತಿ ಅಂತ್ಯ; ಇಂದಿನಿಂದ ಮನೆಗಣತಿ ಆರಂಭ – 33 ಪ್ರಶ್ನೆಗಳ ಮೂಲಕ ಮಾಹಿತಿ ಸಂಗ್ರಹ
ಪ್ರಮುಖ ಸುದ್ದಿ

ಸ್ವಯಂ ಗಣತಿ ಅಂತ್ಯ; ಇಂದಿನಿಂದ ಮನೆಗಣತಿ ಆರಂಭ – 33 ಪ್ರಶ್ನೆಗಳ ಮೂಲಕ ಮಾಹಿತಿ ಸಂಗ್ರಹ

April 16, 2026
ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂಗೆ ಬದಲು ಬ್ಯಾಲೆಟ್ ಪೇಪರ್: ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ
ಪ್ರಮುಖ ಸುದ್ದಿ

ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂಗೆ ಬದಲು ಬ್ಯಾಲೆಟ್ ಪೇಪರ್: ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ

April 16, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.